ಕರ್ನಾಟಕದಲ್ಲಿ ಸ್ನಾತಕೋತ್ತರ ವೈದ್ಯ ಪದವಿ ಕೋರ್ಸ್‌ಗಳ ಶುಲ್ಕ ಶೇಕಡ 10 ಹೆಚ್ಚಳ; ಸರ್ಕಾರಿ, ಖಾಸಗಿ ಕೋಟಾದ ಸೀಟುಗಳಿಗೆ ಅನ್ವಯ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಸ್ನಾತಕೋತ್ತರ ವೈದ್ಯ ಪದವಿ ಕೋರ್ಸ್‌ಗಳ ಶುಲ್ಕ ಶೇಕಡ 10 ಹೆಚ್ಚಳ; ಸರ್ಕಾರಿ, ಖಾಸಗಿ ಕೋಟಾದ ಸೀಟುಗಳಿಗೆ ಅನ್ವಯ

ಕರ್ನಾಟಕದಲ್ಲಿ ಸ್ನಾತಕೋತ್ತರ ವೈದ್ಯ ಪದವಿ ಕೋರ್ಸ್‌ಗಳ ಶುಲ್ಕ ಶೇಕಡ 10 ಹೆಚ್ಚಳ; ಸರ್ಕಾರಿ, ಖಾಸಗಿ ಕೋಟಾದ ಸೀಟುಗಳಿಗೆ ಅನ್ವಯ

ಕರ್ನಾಟಕದಲ್ಲಿ ಸ್ನಾತಕೋತ್ತರ ವೈದ್ಯ ಪದವಿ ಕೋರ್ಸ್‌ಗಳ ಶುಲ್ಕ ಶೇಕಡ 10 ಹೆಚ್ಚಳವಾಗಿದ್ದು, ಸರ್ಕಾರಿ, ಖಾಸಗಿ ಕೋಟಾದ ಸೀಟುಗಳಿಗೆ ಅನ್ವಯವಾಗಲಿದೆ. ಅದರ ಪೂರ್ಣ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಸ್ನಾತಕೋತ್ತರ ವೈದ್ಯ ಪದವಿ ಕೋರ್ಸ್‌ಗಳ ಶುಲ್ಕ ಶೇಕಡ 10 ಹೆಚ್ಚಳವಾಗಿದ್ದು, ಸರ್ಕಾರಿ, ಖಾಸಗಿ ಕೋಟಾದ ಸೀಟುಗಳಿಗೆ ಅನ್ವಯವಾಗಲಿದೆ.
ಕರ್ನಾಟಕದಲ್ಲಿ ಸ್ನಾತಕೋತ್ತರ ವೈದ್ಯ ಪದವಿ ಕೋರ್ಸ್‌ಗಳ ಶುಲ್ಕ ಶೇಕಡ 10 ಹೆಚ್ಚಳವಾಗಿದ್ದು, ಸರ್ಕಾರಿ, ಖಾಸಗಿ ಕೋಟಾದ ಸೀಟುಗಳಿಗೆ ಅನ್ವಯವಾಗಲಿದೆ. (Pexels)

ಬೆಂಗಳೂರು: ಕರ್ನಾಟಕದ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಸ್ನಾತಕೋತ್ತರ ಪದವಿ (ಎಂಡಿ/ಎಂಎಸ್) ಕೋರ್ಸ್‌ಗಳ ಶುಲ್ಕವನ್ನು ಶೇಕಡ 10 ಹೆಚ್ಚಳ ಮಾಡಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕಳೆದ ಜೂ. 12 ರಂದು ಉನ್ನತ ಶಿಕ್ಷಣ ಇಲಾಖೆ ನಡೆಸಿದ ಸಭೆಯಲ್ಲಿ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಸಂಘಗಳು ಶುಲ್ಕ ಹೆಚ್ಚಳ ಹಾಗೂ ಇನ್ನಿತರ ಬೇಡಿಕೆಗಳನ್ನು ಸಲ್ಲಿಸಿದ್ದವು. ಅದರಂತೆ, ಈಗ ಸರ್ಕಾರಿ ಮತ್ತು ಖಾಸಗಿ ಕೋಟಾ ಸೀಟುಗಳಿಗೆ ಅನ್ವಯವಾಗುವಂತೆ ಶೇಕಡ 10 ಪ್ರವೇಶ ಶುಲ್ಕ ಹೆಚ್ಚಿಸಿ ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಸ್ನಾತಕೋತ್ತರ ವೈದ್ಯ ಪದವಿ ಕೋರ್ಸ್‌ಗಳ ಶುಲ್ಕ ಶೇಕಡ 10 ಹೆಚ್ಚಳದ ವಿವರ ಹೀಗಿದೆ

ಸರ್ಕಾರ 2024-25ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳಿಗೆ ಸರ್ಕಾರ ಶೇ. 10ರಷ್ಟು ಶುಲ್ಕ ಏರಿಕೆ ಮಾಡಿದೆ. ಕರ್ನಾಟಕದಲ್ಲಿ 2024-25ನೇ ಸಾಲಿನ ಖಾಸಗಿ ಕೋಟಾದಡಿ ಕ್ಲಿನಿಕಲ್‌ಗೆ 13.72 ಲಕ್ಷ ರೂಪಾಯಿ ಇದ್ದು, ಪ್ಯಾರಾ ಕ್ಲಿನಿಕಲ್ 3.42 ಲಕ್ಷ ರೂಪಾಯಿ, ಪ್ರೀಕ್ಲಿನಿಕಲ್‌ಗೆ 1.72 ಲಕ್ಷ ರೂಪಾಯಿ ಇದೆ. ಸರ್ಕಾರಿ ಕೋಟಾದಡಿ ಕ್ಲಿನಿಕಲ್‌ಗೆ 7.68 ಲಕ್ಷ ರೂಪಾಯಿ, ಪ್ಯಾರಾ ಕ್ಲಿನಿಕಲ್ 1.92 ಲಕ್ಷ ರೂಪಾಯಿ ಮತ್ತು ಫ್ರೀ ಕ್ಲಿನಿಕಲ್‌ಗೆ 96,015 ರೂಪಾಯಿಯನ್ನು ಸರ್ಕಾರ ನಿಗದಿ ಮಾಡಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿಯೂ ಶೇ.10 ಶುಲ್ಕ ಹೆಚ್ಚಳ ಮಾಡಲಾಗಿದೆ. ಕ್ಲಿನಿಕಲ್‌ಗೆ 1.10 ಲಕ್ಷ ರೂ. ಪ್ಯಾರಾಕ್ಲಿನಿಕಲ್‌ಗೆ 55 ಸಾವಿರ ರೂ. ಮತ್ತು ಫ್ರೀ ಕ್ಲಿನಿಕಲ್‌ಗೆ 27,500 ರೂಪಾಯಿ ಶುಲ್ಕವನ್ನು ನಿಗದಿ ಮಾಡಿದೆ. ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಸೀಟುಗಳಿಗೆ ಶುಲ್ಕ ಹೆಚ್ಚಳ ಅನ್ವಯವಾಗುತ್ತದೆ. ಶುಲ್ಕ ಹೆಚ್ಚಳ ಮಾಡುವಂತೆ ವೃತ್ತಿಪರ ಕಾಲೇಜುಗಳ ಪ್ರತಿಷ್ಟಾನ, ಕರ್ನಾಟಕ ಅಲ್ಪ ಸಂಖ್ಯಾತರ ವೃತ್ತಿಪರ ಕಾಲೇಜುಗಳ ಸಂಘ ಹಾಗೂ ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪ ಸಂಖ್ಯಾತರ ಕಾಲೇಜುಗಳ ಸಂಘದ ಮನವಿ ಮಾಡಿದ್ದವು. ಮನವಿಯನ್ನು ಪರಿಶೀಲಿಸಿದ ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ಶುಲ್ಕ ಹೆಚ್ಚಳ ಮಾಡಲು ನಿರ್ಧರಿಸಿ. ಶುಲ್ಕ ಪಟ್ಟಿಯನ್ನು ಪ್ರಕಟಿಸಿದೆ. ವಿಜಯವಾಣಿ ವರದಿಯಲ್ಲಿ ಪ್ರಕಟವಾದ ಶುಲ್ಕ ವಿವರ ಹೀಗಿದೆ-

ಸ್ನಾತಕೋತ್ತರ ವೈದ್ಯಕೀಯ ಪದವಿ ಶುಲ್ಕ ಹೆಚ್ಚಳ 

ವಿಷಯಖಾಸಗಿ ಕೋಟಾದ ಶುಲ್ಕ (ರೂಪಾಯಿ)ಸರ್ಕಾರಿ ಕೋಟಾದ ಶುಲ್ಕ (ರೂಪಾಯಿ)
ಕೋರ್ಸ್‌ ವಿವರ2023-2024 2024-252023-20242024-25
ಕ್ಲಿನಿಕಲ್‌12481761372994698280768108
ಪ್ಯಾರಾ ಕ್ಲಿನಿಕಲ್312048343253174570192027
ಪ್ರೀ ಕ್ಲಿನಿಕಲ್‌1569711726688728696015

ಇಂದಿನಿಂದ ಪಿಜಿ ವೈದ್ಯಕೀಯ ಕೋರ್ಸ್‌ ಆಪ್ಶನ್ ಎಂಟ್ರಿ

ಪಿಜಿ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಕರ್ನಾಟಕ ಸರ್ಕಾರವು ನೀಡಿರುವ ಸೀಟ್ ಮ್ಯಾಟಿಕ್ಸ್ ಮತ್ತು ಶುಲ್ಕದ ವಿವರಗಳನ್ನು ಪ್ರಾಧಿಕಾರದ ವೆಬ್ ಸೈಟ್‌ನಲ್ಲಿ ಪ್ರಕಟವಾಗಿದೆ. ಅರ್ಹ ಅಭ್ಯರ್ಥಿಗಳು ನ.19ರ ಮಧ್ಯಾಹ್ನ 2ರಿಂದ ನ.22ರ ಸಂಜೆ 4ರವರೆಗೆ ಆದ್ಯತಾ ಕ್ರಮದಲ್ಲಿ ಆಪ್ಶನ್‌ ಎಂಟ್ರಿ ಪಡೆಯುವುದಕ್ಕೆ ಅವಕಾಶವಿರುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಅಣುಕು ಸೀಟು ಹಂಚಿಕೆಯ ಫಲಿತಾಂಶವು ನ.23ರ ಸಂಜೆ 4ರ ನಂತರ ಪ್ರಕಟವಾಗಲಿದೆ. ಆಪ್ಶನ್ ಎಂಟ್ರಿ ಬದಲಾಯಿಸಲು ನ.23ರ ಸಂಜೆ 4ರಿಂದ ನ.25ರ ಸಂಜೆ 4ರವರೆಗೆ ಅವಕಾಶವಿರುತ್ತದೆ. ಮೊದಲ ಸುತ್ತಿನ ನೈಜ ಸೀಟು ಹಂಚಿಕೆಯ ಫಲಿತಾಂಶ ನ.26ರ ರಾತ್ರಿ 8ರ ನಂತರ ಪ್ರಕಟವಾಗಲಿದೆ. ಒಟ್ಟು 63 ಕಾಲೇಜುಗಳಲ್ಲಿ 6,310 ಸೀಟುಗಳಿವೆ. ಈ ಪೈಕಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ 3,882 ಸೀಟು ಹಂಚಿಕೆಯಾಗಲಿದ್ದು, ಅಖಿಲ ಭಾರತ ಕೋಟಾದಡಿಯ 2,428 ಸೀಟುಗಳನ್ನು ಒಳಗೊಂಡಿರುತ್ತದೆ.

Whats_app_banner