Karnataka Weather: ಚಾಮರಾಜನಗರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆ; 3 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ಚಾಮರಾಜನಗರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆ; 3 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

Karnataka Weather: ಚಾಮರಾಜನಗರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆ; 3 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

Karnataka Weather: ಇಂದು ಚಿಕ್ಕಬಳ್ಳಾಪುರ, ಚಾಮರಾಜನಗರ, ದಾವಣಗೆರೆ, ಕೋಲಾರ ಸೇರಿದಂತೆ ಅನೇಕ ಕಡೆ ಸಾಧಾರಣ/ಗುಡುಗು ಸಹಿತ ಮಳೆ ಆಗಲಿದೆ. ಹವಾಮಾನ ಇಲಾಖೆಯು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.

ಚಾಮರಾಜನಗರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆ; 3 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌
ಚಾಮರಾಜನಗರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆ; 3 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ (PC: Canva)

ಕರ್ನಾಟಕ ಹವಾಮಾನ ಜೂನ್‌ 20: ಇಂದು ಬೆಳಗ್ಗೆ 05:54 ಕ್ಕೆ ಸೂರ್ಯೂದಯವಾಗಿದ್ದು ಸಂಜೆ 6:48 ಕ್ಕೆ ಸೂರ್ಯಾಸ್ತವಾಗಲಿದೆ. 5:25 ಕ್ಕೆ ಚಂದ್ರೋಯವಾಗಲಿದ್ದು 03:16ಕ್ಕೆ ಚಂದ್ರ ಮುಳುಗಲಿದ್ದಾನೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ ಇಂದು ರಾಜ್ಯ ರಾಜಧಾನಿ ಬೆಂಗಳೂರಿನ ವಾತಾವರಣ 23.2 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಸದ್ಯಕ್ಕೆ ರಾಜ್ಯಾದ್ಯಂತ ಮಳೆಯಾಗುತ್ತಿದ್ದು ಇಂದು ರಾಜ್ಯದ ಯಾವ ಯಾವ ಸ್ಥಳಗಳಲ್ಲಿ ಮಳೆ ಆಗಲಿದೆ ನೋಡೋಣ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ನಿನ್ನೆ ಎಲ್ಲೆಲ್ಲಿ, ಎಷ್ಟು ಮಳೆ ಆಯ್ತು?

ನಿನ್ನೆ ದಾವಣಗೆರೆ, ಪರಶುರಾಂಪುರದಲ್ಲಿ ತಲಾ 5ಸೆಮೀ ಮಳೆ ಆಗಿದೆ. ಕುಮಟಾಲ್ಲಿ 4 ಸೆಮೀ, ಹೊನ್ನಾವರ, ಲೋಂಡಾ , ಬೆಳಗಾವಿ, ಕೂಡಲಸಂಗಮ, ಚಿಕ್ಕಬಳ್ಳಾಪುರ, ಹೆಚ್‌ಡಿ ಕೋಟೆ, ಕುಂದಾಪುರದಲ್ಲಿ ತಲಾ 3 ಸೆಮೀ ಮಳೆ ಅಗಿದೆ. ಬೆಳ್ತಂಗಡಿ, ಆಂಕೋಲಾ, ಕೋಟ, ಶಿರಾಲಿ, ಉಡುಪಿ, ಕೊಲ್ಲೂರು, ಕೊಟ್ಟಿಗೆಹಾರ, ಮೂರ್ನಾಡು, ಸಿದ್ದಾಪುರದಲ್ಲಿ ತಲಾ 2 ಸೆಮೀ ಹಾಗೂ ಧರ್ಮಸ್ಥಳ, ಮಣಿ, ಮಂಕಿ, ಗೇರ್ಸೊಪ್ಪ, ಸಿದ್ದಾಪುರ, ಪಣಂಬೂರು, ಗೋಕರ್ಣ, ರಾಯಚೂರು, ಮಹಾಲಿಂಗಪುರ, ಕುಕನೂರು, ಕಮ್ಮರಡಿ , ಗುಬ್ಬಿ, ಆಗುಂಬೆ, ಗೌರಿಬಿದನೂರು, ಭಾಗಮಂಡಲ, ನಾಪೋಕಲು, ವೈಎನ್‌ ಹೊಸಕೋಟೆ, ಕುಡತಿನಿಯಲ್ಲಿ ತಲಾ 1 ಸೆಮೀ ಮಳೆ ಆಗಿದೆ.

ಇಂದು ಎಲ್ಲಿ ಮಳೆ ಆಗಲಿದೆ, ಯಾವ ಸ್ಥಳದಲ್ಲಿ ಎಚ್ಚರಿಕೆ ಅಗತ್ಯ?

ಕರಾವಳಿ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ಜೊತೆಗೆ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗಾ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಸಾಧಾರಣ/ಗುಡುಗು ಸಹಿತ ಮಳೆ ಆಗಲಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.

ಬೆಂಗಳೂರಿನ ವಾತಾವರಣ

ಸಾಮಾನ್ಯವಾಗಿ ಮೋಡ ಕವಿದ ಆಕಾಶ ಹಗುರ/ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ. ಕೆಲವೊಮ್ಮೆ ಮೇಲ್ಮೈ ಗಾಳಿಯು ಪ್ರಬಲವಾಗಿರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ ಮತ್ತು 21 ಡಿಗ್ರಿ ಸೆಲ್ಸಿಯಸ್‌ ಆಗಿರಬಹುದು.

ಪ್ರಮುಖ ನಗರಗಳ ವಾತಾವರಣ ಹೀಗಿದೆ

ಭಾರತೀಯ ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು (ಜೂನ್ 20) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ಹವಾಮಾನ ವಿವರ.

ಬೆಂಗಳೂರು - 22° ಸೆ.

ಮಂಗಳೂರು- 24.8° ಸೆ.

ಚಿತ್ರದುರ್ಗ- 23.4° ಸೆ.

ಗದಗ- 23.4° ಸೆ.

ಹೊನ್ನಾವರ- 24.4° ಸೆ.

ಕಲಬುರ್ಗಿ- 25° ಸೆ.

ಬೆಳಗಾವಿ- 24° ಸೆ.

ಕಾರವಾರ- 27.2° ಸೆ.

Whats_app_banner