Karnataka Weather: ಇಂದು ಕರಾವಳಿಯ ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಕರ್ನಾಟಕದ ಬಹುತೇಕ ಕಡೆೆಗಳಲ್ಲಿ ಹೆಚ್ಚಿದ ಚಳಿ-karnataka weather today bengaluru forecast update karnataka rains today september 12 rainfall prediction prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ಇಂದು ಕರಾವಳಿಯ ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಕರ್ನಾಟಕದ ಬಹುತೇಕ ಕಡೆೆಗಳಲ್ಲಿ ಹೆಚ್ಚಿದ ಚಳಿ

Karnataka Weather: ಇಂದು ಕರಾವಳಿಯ ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಕರ್ನಾಟಕದ ಬಹುತೇಕ ಕಡೆೆಗಳಲ್ಲಿ ಹೆಚ್ಚಿದ ಚಳಿ

Today Karnataka Weather: ಕರ್ನಾಟಕದ ಬಹುತೇಕ ಕಡೆ ಮಳೆಯ ಪ್ರಮಾಣ ಇಳಿಕೆ ಕಂಡಿದ್ದು, ಚಳಿಯ ಪ್ರಮಾಣ ಹೆಚ್ಚಾಗಿದೆ. ಹಾಗಿದ್ದರೆ ಎಲ್ಲೆಲ್ಲಿ ಮಳೆ ಇದೆ ಎಂಬುದರ ವಿವರ ಇಲ್ಲಿದೆ.

ಇಂದು ಕರಾವಳಿಯ ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಕರ್ನಾಟಕದ ಬಹುತೇಕ ಕಡೆೆಗಳಲ್ಲಿ ಹೆಚ್ಚಿದ ಚಳಿ
ಇಂದು ಕರಾವಳಿಯ ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಕರ್ನಾಟಕದ ಬಹುತೇಕ ಕಡೆೆಗಳಲ್ಲಿ ಹೆಚ್ಚಿದ ಚಳಿ ( The Weather Channel)

ಬೆಂಗಳೂರು: ಕರ್ನಾಟಕದಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಕರಾವಳಿ ಭಾಗದ ಅಲ್ಲಲ್ಲಿ ಹೊರತುಪಡಿಸಿದರೆ ಬಹುತೇಕ ಕಡೆಗಳಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿದೆ. ಆದರೆ ಎಲ್ಲೆಡೆಯೂ ಗಾಳಿಯ ವೇಗ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಮುಂದಿನ ಐದು ದಿನಗಳೂ ಸಹ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆಯ ಸುರಿಯುವ ಸಾಧ್ಯತೆ ಕಡಿಮೆ ಇದ್ದು, ಕರಾವಳಿ ಭಾಗದ ಕೆಲವೆಡೆ ಮಾತ್ರ ಸುರಿಯುವ ನಿರೀಕ್ಷೆ ಇದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಇಂದು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ದೃಢಪಟ್ಟಿದೆ. ಹಗುರ ಮಳೆ ಮತ್ತು ನಿರಂತರ ಗಾಳಿಯ ವೇಗವು ಹೆಚ್ಚಿರಲಿದೆ. ಗಾಳಿಯ ವೇಗ ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಬೀಸಲಿದೆ. ಉತ್ತರ ಒಳನಾಡಿನ ಒಂದೆರಡು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಸಾಧಾರಣ ಮಳೆಯನ್ನು ನಿರೀಕ್ಷಿಸಲಾಗಿದೆ.

ಬೆಂಗಳೂರು ಸುತ್ತಲೂ ಹವಾಮಾನ

ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬಹುತೇಕ ಮೋಡ ಕವಿದ ವಾತಾವರಣದ ಜೊತೆಗೆ ಆಗಾಗ್ಗೆ ಬಿಸಿಲು ಕಾಣಿಸಿಕೊಳ್ಳಲಿದೆ. ಒಣ ಹವಾಮಾನ ಸಾಧ್ಯತೆ ಹೆಚ್ಚಿದೆ. ಮಳೆಯ ಪ್ರಮಾಣ ತೀರಾ ಕಡಿಮೆ ಇರುವುದಾಗಿ ಇಲಾಖೆ ತಿಳಿಸಿದೆ. ಮುಂದಿನ 48 ಗಂಟೆಗಳ ಕಾಲವೂ ಇದೇ ವಾತಾವರಣವನ್ನು ನಿರೀಕ್ಷಿಸಲಾಗಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು 30° C ಮತ್ತು 20° C ಆಗಿರಬಹುದು.

ಮಳೆ ಎಲ್ಲೆಲ್ಲಿ ಉತ್ತಮ ಮಳೆಯಾಗಿತ್ತು (ಸೆಪ್ಟೆಂಬರ್​​ 11)

ನೈರುತ್ಯ ಮಾನ್ಸೂನ್ ಕರಾವಳಿ ಕರ್ನಾಟಕದಲ್ಲಿ ಸಾಧಾರಣವಾಗಿತ್ತು. ಕರಾವಳಿ ಕರ್ನಾಟಕದ ಹೆಚ್ಚಿನ ಸ್ಥಳಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ 4 ಸೆಂಮೀ ಮಳೆ ಸುರಿದಿದೆ. ಇದು ಸೆಪ್ಟೆಂಬರ್​ 11ರಂದು ದಾಖಲಾದ ಗರಿಷ್ಠ ಮಳೆಯ ಪ್ರಮಾಣವಾಗಿದೆ. ಉತ್ತರ ಕನ್ನಡದ ಮಂಕಿಯಲ್ಲಿ 3 ಸೆಂಮೀ ಮಳೆ ಸುರಿದಿದೆ.

ಹೊನ್ನಾವರ, ಗೇರುಸೊಪ್ಪ, ಶಿರಾಲಿ, ಕಾರ್ಕಳ, ಪೊನ್ನಂಪೇಟೆ, ಭಾಗಮಂಡಲ, ನಾಪೊಕ್ಲು ಕಡೆಗಳಲ್ಲಿ ಎರಡು ಸೆಂ.ಮೀಟರ್​ ಮಳೆ ಸುರಿದಿದೆ. ಸುಳ್ಯ, ಸಿದ್ದಾಪುರ, ಪಣಂಬೂರು, ಕೋಟ, ಧರ್ಮಸ್ಥಳ, ಗೋಕರ್ಣ, ಪುತ್ತೂರು, ಉಪ್ಪಿನಂಗಡಿ, ಮೂಲ್ಕಿ, ಮಂಠಾಳ, ಲೋಂಡಾ, ಮೂಡಿಗೆರೆ, ಕೊಪ್ಪ, ಲಿಂಗನಮಕ್ಕಿ, ಹಾಸನ, ಶೃಂಗೇರಿ, ಹುಂಚದ ಕಟ್ಟೆ, ಸೋಮವಾರಪೇಟೆ ಮತ್ತು ಜಯಪುರದಲ್ಲಿ ತಲಾ ಒಂದು ಸೆಂಮೀ ಮಳೆ ಸುರಿದಿದೆ.

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಚಳಿ

ಮಳೆಯ ಪ್ರಮಾಣ ತಗ್ಗಿದ ಬೆನ್ನಲ್ಲೇ ಚಳಿಯ ಪ್ರಮಾಣ ಏರಿಕೆ ಕಾಣುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಇದರ ಪ್ರಮಾಣ ಹೆಚ್ಚೆಂದೇ ಹೇಳಬಹುದು. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲೂ ಚಳಿಯ ಪ್ರಮಾಣ ಅತ್ಯಧಿಕವಾಗಿರಲಿದೆ. ಮಳೆಯಾಗುವ ಸೂಚನೆ ಇದೆ. ಉತ್ತರ ಕರ್ನಾಟಕದ ರಾಯಚೂರು, ಬೀದರ್‌, ಧಾರವಾಡ, ಗದಗ ಸಹಿತ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶದಲ್ಲಿ ಕುಸಿತ ಕಂಡಿದೆ. ಮಳೆಯ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಒಳ ಹರಿವು ಕೂಡ ತಗ್ಗಿದೆ. 

mysore-dasara_Entry_Point