BWSSB Water Adalat; ಸೆ12ರಂದು ಯಲಹಂಕ, ಜೆಪಿನಗರ, ನಾಗರಬಾವಿ ಸೇರಿ ವಿವಿಧೆಡೆ ಬೆಂಗಳೂರು ಜಲ ಮಂಡಳಿಯ ನೀರಿನ ಅದಾಲತ್‌-bengaluru news on sept 12 bengaluru jala mandali water adalat at different places including yelahanka jpnagar uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bwssb Water Adalat; ಸೆ12ರಂದು ಯಲಹಂಕ, ಜೆಪಿನಗರ, ನಾಗರಬಾವಿ ಸೇರಿ ವಿವಿಧೆಡೆ ಬೆಂಗಳೂರು ಜಲ ಮಂಡಳಿಯ ನೀರಿನ ಅದಾಲತ್‌

BWSSB Water Adalat; ಸೆ12ರಂದು ಯಲಹಂಕ, ಜೆಪಿನಗರ, ನಾಗರಬಾವಿ ಸೇರಿ ವಿವಿಧೆಡೆ ಬೆಂಗಳೂರು ಜಲ ಮಂಡಳಿಯ ನೀರಿನ ಅದಾಲತ್‌

Water Adalat; ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ನೀರಿನ ಬಿಲ್ ಮತ್ತು ಇತರೆ ಕುಂದುಕೊರತೆಗಳ ಅಹವಾಲು ಸ್ವೀಕರಿಸಿ ಇತ್ಯರ್ಥಗೊಳಿಸಲು ಜಲ ಮಂಡಳಿ ಮುಂದಾಗಿದೆ. ಸೆ12ರಂದು ಯಲಹಂಕ, ಜೆಪಿನಗರ, ನಾಗರಬಾವಿ ಸೇರಿ ವಿವಿಧೆಡೆ ಬೆಂಗಳೂರು ಜಲ ಮಂಡಳಿಯ ನೀರಿನ ಅದಾಲತ್‌ ನಡೆಯಲಿದೆ.

ಬೆಂಗಳೂರು ಜಲ ಮಂಡಳಿ (ಸಾಂಕೇತಿಕ ಚಿತ್ರ)
ಬೆಂಗಳೂರು ಜಲ ಮಂಡಳಿ (ಸಾಂಕೇತಿಕ ಚಿತ್ರ)

ಬೆಂಗಳೂರು: ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ ಸೇರಿ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಇತ್ಯರ್ಥಗೊಳಿಸುವುದಕ್ಕಾಗಿ ಬೆಂಗಳೂರು ಜಲ ಮಂಡಳಿ (Bengaluru Jala Mandali) ಗುರುವಾರ (ಸೆಪ್ಟೆಂಬರ್ 12) ವಾಟರ್ ಅದಾಲತ್ (Water Adalat) ಆಯೋಜಿಸಿದೆ.

ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಲ್ಲಿ ಸೆಪ್ಟೆಂಬರ್ 12 ರಂದು ಬೆಳಿಗ್ಗೆ 9.30 ಗಂಟೆಯಿಂದ 11 ಗಂಟೆಯವರೆಗೆ ನೀರಿನ ಅದಾಲತ್‌ ನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಾದ ಉತ್ತರ-2-1, ದಕ್ಷಿಣ-1-1, ದಕ್ಷಿಣ-1-1, ನೈಋತ್ಯ -1, ನೈಋತ್ಯ - 4, ಪೂರ್ವ-1-2, ಪೂರ್ವ-2-2,ಆಗ್ನೇಯ-2. ಆಗ್ನೇಯ -5, ಪಶ್ಚಿಮ-1-2 ಮತ್ತು ಪಶ್ಚಿಮ-2-2, ಉಪವಿಭಾಗಗಳಲ್ಲಿ ನೀರಿನ ಬಿಲ್ಲು ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನೀರಿನ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿದೆ.

ನೀರಿನ ಅದಾಲತ್ ನಡೆಯುವ ಸ್ಥಳಗಳು

ಯಲಹಂಕ ಓಲ್ಡ್ ಟೌನ್‌, ಯಲಹಂಕ ನ್ಯೂಟೌನ್, ಅಟ್ಟೂರು, ಜೆ.ಪಿ.ನಗರ-2, ಕೊತ್ತನೂರು ದಿಣ್ಣೆ, ವಿಜಯಬ್ಯಾಂಕ್ ಕಾಲೋನಿ, ಅರಕೆರೆ ಮೈಕೋ ಲೇಔಟ್, ಜೆ.ಪಿ.ನಗರ, ಜಯನಗರ 4ನೇ ಟಿ ಬ್ಲಾಕ್, ಜಯನಗರ 4ನೇ ಬ್ಲಾಕ್, ಹೊಂಬೇಗೌಡನಗರ, ಬೈರಸಂದ್ರ, ಎಲ್.ಎಲ್.ಆರ್, ಚಿಕ್ಕಲಾಲ್‌ಬಾಗ್‌, ಬನ್ನಪ್ಪ ಪಾರ್ಕ್‌, ಸುಧಾಮನಗರ -1, ಕತ್ರಿಗುಪ್ಪೆ, ಹೊಸಕೆರೆಹಳ್ಳಿ, ದೇವಗಿರಿ-1, ಇಟ್ಟಮಡು, ಬನಗಿರಿನಗರ, ಎ.ನಾರಾಯಣಪುರ, ದೊಡ್ಡನಕುಂದಿ, ವಿಜ್ಞಾನನಗರ, ಬಾಣಸವಾಡಿ, ಓ.ಎಂ.ಜಿ.ಆರ್.. ಲಿಂಗರಾಜಪುರಂ, ಕಸ್ತೂರಿನಗರ, ಹಲಸೂರು, ದೊಮ್ಮಲೂರು, ಮಾರತ್‌ಹಳ್ಳಿ, ಕೋರಮಂಗಲ - 12, ವಿಜಯನಗರ ಓ.ಎಚ್.ಟಿ, ಮೂಡಲಪಾಳ್ಯ, ನಾಗರಬಾವಿ, ಅನ್ನಪೂರ್ಣೇಶ್ವರಿನಗರ, ಸರ್.ಎಂ.ವಿ ಲೇಔಟ್, ಮೂಡಲಪಾಳ್ಯ ಸೇವಾ ಠಾಣೆಗಳಲ್ಲಿ ಅದಾಲತ್‌ ನಡೆಯಲಿದೆ ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುತ್ತಿಗೆದಾರನ ವಿರುದ್ಧ ಬಿಬಿಎಂಪಿ ಕ್ರಮ

ಕರ್ನಾಟಕ ಸರ್ಕಾರದ ಒಳಾಡಳಿತ ಇಲಾಖೆಗೆ ನಕಲಿ ಪೊಲೀಸ್ ವೆರಿಫಿಕೇಷನ್ ಸರ್ಟಿಫಿಕೇಟ್ ಅನ್ನು ನೀಡಿ ಪ್ರಸಾರ ಪರವಾನಗಿಯನ್ನು ಪಡೆದುಕೊಂಡ ಗುತ್ತಿಗೆದಾರನ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕ್ರಮ ಜರುಗಿಸಿದೆ.

ಶ್ರೀ ಭುವನೇಶ್ವರಿ ಎಂಟರ್ ಪ್ರೈಸಸ್ ಮಾಲೀಕ ಎ.ವಿ.ಗಿರೀಶ್ ಎಂಬ ಗುತ್ತಿಗೆದಾರ ಈ ಕೃತ್ಯವೆಸಗಿದ್ದು, ನಕಲಿ ದಾಖಲೆ ನೀಡಿದ ಪಡೆದ ಪ್ರಸಾರ ಪರವಾನಗಿ ಉಪಯೋಗಿಸಿಕೊಂಡು ಪಾಲಿಕೆಯ ಹಲವು ಟೆಂಡರ್‌ಗಳಲ್ಲಿ ಪಾಲ್ಗೊಂಡು ಕಾರ್ಯಾದೇಶ ಪಡೆದುಕೊಂಡಿದ್ದಲ್ಲದೆ, ಬಿಲ್ ಕೂಡ ಪಡೆದಿರುವುದು ಪರಿಶೋಧನೆ ವೇಳೆ ಬೆಳಕಿಗೆ ಬಂದಿದೆ.

ಪ್ರಸಾರ ಪರವಾನಗಿ ಪಡೆಯಲು ಸಲ್ಲಿಸಿರುವ ಪೊಲೀಸ್ ವೆರಿಫಿಕೇಶನ್ ಸರ್ಟಿಫಿಕೇಟ್ ನಕಲಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ವರದಿ ಪ್ರಕಾರ, ಜೂನ್ 15 ರಂದು ಸರ್ಕಾರದಿಂದ ಮಂಜೂರು ಮಾಡಿರುವ ಪ್ರಸಾರ ಪರವಾನಗಿಯನ್ನು ರದ್ದುಗೊಳಿಸಿ ಆದೇಶಿಸಲಾಗಿರುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.

ಎ.ವಿ.ಗಿರೀಶ್ ಅವರಿಗೆ ಕಾಮಗಾರಿ ನಿರ್ವಹಿಸಲು ನೀಡಲಾಗಿದ್ದ ಕಾರ್ಯಾದೇಶಗಳನ್ನು ಬಿಬಿಎಂಪಿಯ ದಕ್ಷಿಣ ಮತ್ತು ಪಶ್ಚಿಮ ವಲಯದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರದ್ದುಗೊಳಿಸಿದ್ದಾರೆ.

mysore-dasara_Entry_Point