Kerala wage model: ವೇತನಕ್ಕೆ ಕೇರಳ ಮಾದರಿಯಾಗಲಿ; ಗ್ರಾಮ ಪಂಚಾಯಿತಿ ಸದಸ್ಯರ ಆಗ್ರಹ - ಬೃಹತ್ ಪ್ರತಿಭಟನೆ- ಸಚಿತ್ರ ವರದಿ ಇಲ್ಲಿದೆ
Kerala wage model: ಪಂಚಾಯತ್ ರಾಜ್ ವ್ಯವಸ್ಥೆಯ ಭಾಗವಾಗಿರುವ ಗ್ರಾಮ ಪಂಚಾಯಿತಿಯನ್ನು ಸರ್ಕಾರ ಕಡೆಗಣಿಸಬಾರದು. ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಇಂದು ಬೆಂಗಳೂರಿನ ಫ್ರೀಂ ಪಾರ್ಕ್‌ನಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಅವರ ಬೇಡಿಕೆ ಮತ್ತು ಪ್ರತಿಭಟನೆ ಕುರಿತ ವರದಿ ಇಲ್ಲಿದೆ.
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗಾಮ ಪಂಚಾಯತಿ ಸದಸ್ಯರು ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಸುರಿಯುವ ಮಳೆಯ ನಡುವೆಯೇ ಈ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಗಮನಸೆಳೆದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಗ್ರಾಮ ಪಂಚಾಯಿತಿ ಸದಸ್ಯರು ಮನವಿ ಪತ್ರ ಸಲ್ಲಿಸಿದರು. ಸಂವಿಧಾನದ ಆಶಯದಂತೆ ಗ್ರಾಮ ಪಂಚಾಯತಿಗಳು ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕಾರ್ಯ ನಿರ್ವಹಿಸುವಂತಾಗಲು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟ ಮನವಿ ಪತ್ರದಲ್ಲಿ ಆಗ್ರಹಿಸಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಗ್ರಾಮ ಪಂಚಾಯತಿ ಸದಸ್ಯರ ಬೇಡಿಕೆಗಳು ನ್ಯಾಯಯುತವಾದುದು. ಮುಖ್ಯಮಂತ್ರಿಗಳು ಗುಜರಾತ್ ಪ್ರವಾಸದಲ್ಲಿದ್ದಾರೆ. ಅವರು ಅಲ್ಲಿಂದ ಬಂದ ಬಳಿಕ ತಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸುವ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗುವುದು.ಇವುಗಳ ಅನುಷ್ಠಾನಕ್ಕಾಗಿ ಸರ್ಕಾರದ ಗಮನಸೆಳೆಯಲಾಗುವುದು ಎಂದು ಭರವಸೆ ನೀಡಿದರು.
ಸಹಕಾರ ಸಚಿವರ ಜತೆ ವಿಧಾನ ಪರಿಷತ್ ಸದಸ್ಯ ರವಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತಿತರರು ಹಾಜರಿದ್ದರು.
ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಾಶೆಟ್ಟಿ ಹಳ್ಳಿ ಸತೀಶ್, ಪ್ರಧಾನ ಕಾರ್ಯದರ್ಶಿ ಛಲಪತಿ ಸೇರಿದಂತೆ ಸಾವಿರಾರು ವಿವಿಧಡೆಯ ಗ್ರಾಮ ಪಂಚಾಯತಿ ಸದಸ್ಯರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.
ಗ್ರಾಮ ಪಂಚಾಯಿತಿ ಸದಸ್ಯರ ಬೇಡಿಕೆಗಳು ಏನೇನು?
- ಕೇರಳ ಸರ್ಕಾರದ ಮಾದರಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ವೇತನವನ್ನು 15 ಸಾವಿರ ರೂಪಾಯಿ, ಉಪಾಧ್ಯಕ್ಷರ ವೇತನ 12ಸಾವಿರ ಸದಸ್ಯರ ವೇತನವನ್ನು 10ಸಾವಿರ ರೂಪಾಯಿವರೆಗೆ ಹೆಚ್ಚಿಸಬೇಕು.
- ಗ್ರಾಮ ಪಂಚಾಯಿತಿ ಸದಸ್ಯರಿಗೆ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಜನರ ಕೆಲಸಕ್ಕೆ ಒಡಾಡಲು ಅನುಕೂಲವಾಗುವಂತೆ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಬೇಕು.
- ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಅನುಷ್ಠಾನದಲ್ಲಿ ಕೇಂದ್ರ ಸರ್ಕಾರದ ಜಲಶಕ್ತಿ ಇಲಾಖೆಯ ಮಾರ್ಗಸೂಚಿ ಅನ್ವಯ ಕೇಂದ್ರ ಸರ್ಕಾರದ ಪಾಲು ಶೇ45, ರಾಜ್ಯ ಸರ್ಕಾರದ ಪಾಲು ಶೇ45 ಹಾಗೂ ಫಲಾನುಭವಿಯ ಪಾಲು ಶೇ 10ರಷ್ಟಿದೆ. ರಾಜ್ಯ ಸರ್ಕಾರ ಹದಿನೈದನೆ ಹಣಕಾಸು ಆಯೋಗದ ಅನುದಾನದಲ್ಲಿ ಗ್ರಾಮ ಪಂಚಾಯತಿಗಳ ಹಣವನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ವಿರುದ್ದವಾಗಿ ಬಳಸಿಕೊಂಡಿದೆ.ಕೂಡಲೇ ಈ ಹಣವನ್ನು ಗ್ರಾಮ ಪಂಚಾಯಿತಿಗಳಿಗೆ ವಾಪಸ್ಸು ನೀಡಬೇಕು.
ಗಮನಿಸಬಹುದಾದ ಇತರೆ ವಿಚಾರಗಳು
Winter Special Tea: ಫುಲ್ ಚಳಿ ಅಲ್ವಾ? ಈ ಚಳಿಗೊಂದು ಚಹಾ ಸಿಕ್ಕರೆ!; ಈ ಚಳಿಗಾಲದಲ್ಲಿ ಈ 8 ಸ್ಪೆಷಲ್ ಟೀ ಟ್ರೈ ಮಾಡಿ!
Winter Special Tea: ಚಳಿಗಾಲ ಶುರುವಾಗಿದೆ. ಈಗ ಮುಂಜಾನೆ ಎದ್ದು ಹೊರಗೆ ಬಂದರೆ ಫುಲ್ ಚಳಿ ಅಲ್ವ? ಈ ಚಳಿಯಲ್ಲಿ ಒಂದು ಕಪ್ ಚಹಾ ಬೇಕು ಅಂತ ಅನ್ನಿಸೋದು ಸಹಜ. ಅಂದ ಹಾಗೆ ಈ ಸಲ ಚಳಿಗಾಲದಲ್ಲಿ ನೀವು ಈ 8 ಸ್ಪೆಷಲ್ ಚಹಾಗಳ ಸ್ವಾದ ಸ್ವವಿಯಲು ಪ್ರಯತ್ನಿಸಿ! ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ.
Re-KYC RBI rule and process: ಮರು ಕೆವೈಸಿ ಮಾಡಿಸಲು ಬ್ಯಾಂಕ್‌ಗೆ ಹೋಗಬೇಕಾಗಿಲ್ಲ; ಆರ್‌ಬಿಐ ನಿಯಮ ಏನು ಹೇಳುತ್ತೆ ಚೆಕ್ ಮಾಡಿ
Re-KYC RBI rule and process: ಮರು-ಕೆವೈಸಿ ಮಾಡಲು (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಮಾಡಲು ಬ್ಯಾಂಕ್‌ಗೆ ಭೇಟಿ ನೀಡುವ ಅಗತ್ಯವಿಲ್ಲ. ವಿಳಾಸ ಬದಲಾವಣೆಯ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಪ್ರಕ್ರಿಯೆಗಳನ್ನು ಆನ್‌ಲೈನ್‌ನಲ್ಲಿ ಇದನ್ನು ಮಾಡಬಹುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದರು. ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ.