AGNIVEER RECRUITMENT RALLY: ನಾಳೆಯಿಂದ ಕೊಪ್ಪಳದಲ್ಲಿ ಉತ್ತರ ಕರ್ನಾಟಕ ಭಾಗದ ಅಗ್ನಿವೀರ್‌ ರ್‍ಯಾಲಿ, ಯಾರೆಲ್ಲಾ ಭಾಗಿಯಾಗಬಹುದು
ಕನ್ನಡ ಸುದ್ದಿ  /  ಕರ್ನಾಟಕ  /  Agniveer Recruitment Rally: ನಾಳೆಯಿಂದ ಕೊಪ್ಪಳದಲ್ಲಿ ಉತ್ತರ ಕರ್ನಾಟಕ ಭಾಗದ ಅಗ್ನಿವೀರ್‌ ರ್‍ಯಾಲಿ, ಯಾರೆಲ್ಲಾ ಭಾಗಿಯಾಗಬಹುದು

AGNIVEER RECRUITMENT RALLY: ನಾಳೆಯಿಂದ ಕೊಪ್ಪಳದಲ್ಲಿ ಉತ್ತರ ಕರ್ನಾಟಕ ಭಾಗದ ಅಗ್ನಿವೀರ್‌ ರ್‍ಯಾಲಿ, ಯಾರೆಲ್ಲಾ ಭಾಗಿಯಾಗಬಹುದು

Koppal Agniveer Rally 2024: ಉತ್ತರ ಕರ್ನಾಟಕದ ಭಾಗದ ಜನರಿಗೆ ಉದ್ಯೋಗಾವಕಾಶ ನೀಡುವ ನಿಟ್ಟಿನಲ್ಲಿ ಕೊಪ್ಪಳದಲ್ಲಿ ನವೆಂಬರ್‌ 26ರಿಂದ ಹದಿಮೂರು ದಿನಗಳ ಕಾಲ ಅಗ್ನಿವೀರ್‌ ನೇಮಕಾತಿ ರ್‍ಯಾಲಿ ನಡೆಯಲಿದೆ.

ಕೊಪ್ಪಳದಲ್ಲಿ ನವೆಂಬರ್‌ 26ರ ಮಂಗಳವಾರದಿಂದ ಅಗ್ನಿವೀರ್‌  ನೇಮಕಾತಿ ರ್‍ಯಾಲಿ ಆಯೋಜನೆ ಮಾಡಲಾಗಿದೆ.
ಕೊಪ್ಪಳದಲ್ಲಿ ನವೆಂಬರ್‌ 26ರ ಮಂಗಳವಾರದಿಂದ ಅಗ್ನಿವೀರ್‌ ನೇಮಕಾತಿ ರ್‍ಯಾಲಿ ಆಯೋಜನೆ ಮಾಡಲಾಗಿದೆ.

Koppal Agniveer Rally 2024: ಉತ್ತರ ಕರ್ನಾಟಕ ಭಾಗದ ಅಗ್ನಿವೀರ್‌ ನೇಮಕಾತಿ ರ್‍ಯಾಲಿ 2024 ಕೊಪ್ಪಳ ನಗರದಲ್ಲಿ ನವೆಂಬರ್‌ 26 ರಿಂದ ಆರಂಭವಾಗಲಿದೆ. ಒಟ್ಟು 13 ದಿನಗಳ ಕಾಲ ಈ ರ್‍ಯಾಲಿಯಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳವರು ಭಾಗವಹಿಸಬಹುದಾಗಿದೆ. ಕೊಪ್ಪಳದಲ್ಲಿ ಅಗ್ನಿವೀರ್‌ ನೇಮಕಾತಿ ರ್‍ಯಾಲಿಯು ಡಿಸೆಂಬರ್ 08 ರವರೆಗೆ ನಡೆಯಲಿದ್ದು, ಇದಕ್ಕಾಗಿ ಸಿದ್ದತೆಗಳನ್ನು ಸೇನಾ ವಲಯದಿಂದ ಮಾಡಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿವೀರ್ ನೇಮಕಾತಿ ರ್‍ಯಾಲಿಯನ್ನು ಬೆಳಗಾವಿಯ ಸೇನಾ ನೇಮಕಾತಿ ಕಛೇರಿ, ಬೆಳಗಾವಿಯ ಪ್ರಧಾನ ನೇಮಕಾತಿ ವಲಯ, ಬೆಂಗಳೂರು ಮತ್ತು ಸಿವಿಲ್ ಅಡ್ಮಿನಿಸ್ಟ್ರೇಷನ್ ಸಮಿತಿಯಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯೋಜಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿ ಸಾಮಾನ್ಯ ಪ್ರವೇಶ ಪರೀಕ್ಷೆ ಎದುರಿಸಿ ಉತ್ತೀರ್ಣರಾದವರು ರ್‍ಯಾಲಿಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಸೇನಾ ನೇಮಕಾತಿ ಕಚೇರಿ ತಿಳಿಸಿದೆ.

ಭಾರತದ ಹಲವು ಭಾಗಗಳಲ್ಲಿ ಅಗ್ನಿವೀರ್‌ ನೇಮಕಾತಿ ರ್‍ಯಾಲಿಗಳನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ಹಲವರು ಅಗ್ನಿವೀರ್‌ನ ನಾನಾ ಹುದ್ದೆಗಳಿಗೆ ಆಯ್ಕೆಯಾಗಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಇನ್ನು ಹಲವರು ವೃತ್ತಿ ಜೀವನವನ್ನು ಆರಂಭಿಸಿದ್ದಾರೆ.

ಇದರ ಮುಂದುವರೆದ ಭಾಗವಾಗಿಯೇ ಕರ್ನಾಟಕದ ಬೆಂಗಳೂರು, ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಅಗ್ನಿವೀರ್‌ ನೇಮಕಾತಿ ರ್‍ಯಾಲಿಗಳು ಆಯೋಜನೆಗೊಂಡಿವೆ. ಈಗ ಕೊಪ್ಪಳದಲ್ಲಿ ರ್‍ಯಾಲಿ ನಡೆಯಲಿದ್ದು, ಹದಿಮೂರು ದಿನಗಳ ಕಾಲ ನಾನಾ ಚಟುವಟಿಕೆಗಳು ಅಗ್ನೀವೀರ್‌ಗಳ ಆಯ್ಕೆ ಅಡಿ ಇರಲಿದೆ.

ಭಾರತ ಸರ್ಕಾರವು 2022 ರಲ್ಲಿ ಸೈನ್ಯಕ್ಕೆ ಹೊಸ ನೇಮಕಾತಿ ಯೋಜನೆಯನ್ನು ಪರಿಚಯಿಸಿತು. ಈ ಯೋಜನೆಯನ್ನು "ಅಗ್ನಿವೀರ್" ಅಥವಾ "ಫೈರ್-ವಾರಿಯರ್" ಎಂದು ಕರೆಯಲಾಗುತ್ತದೆ. ಈ ಯೋಜನೆಯಲ್ಲಿ, ಹದಿನೇಳೂವರೆ ಮತ್ತು ಇಪ್ಪತ್ತೊಂದು ವರ್ಷ ವಯಸ್ಸಿನ ಯುವಕರು ನಾಲ್ಕು ವರ್ಷಗಳ ಅವಧಿಗೆ ಭಾರತೀಯ ಸೇನೆಗೆ ಸೇರಲು ಅರ್ಹರಾಗಿರುತ್ತಾರೆ.

ಯಾವೆಲ್ಲ ಹುದ್ದೆಗೆ ಅವಕಾಶ

ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ 10 ನೇ ತೇರ್ಗಡೆ, ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ 8 ನೇ ತೇರ್ಗಡೆ, ಅಗ್ನಿವೀರ್ ಕ್ಲರ್ಕ್/ ಸ್ಟೋರ್ ಕೀಪರ್ ಟೆಕ್ನಿಕಲ್ ವಿಭಾಗಗಳು/ ಸೇನೆಗೆ ಪ್ರವೇಶಕ್ಕಾಗಿ ರ್‍ಯಾಲಿಯನ್ನು ಆಯೋಜಿಸಲಾಗಿದೆ.

12 ಫೆಬ್ರವರಿ 2024 ರಂದು ಬೆಳಗಾವಿಯ ಸೇನಾ ನೇಮಕಾತಿ ಕಛೇರಿಯು ಪ್ರಕಟಿಸಿದ ರ್‍ಯಾಲಿ ಅಧಿಸೂಚನೆಯ ಪ್ರಕಾರ, ವಯಸ್ಸು, ಶಿಕ್ಷಣ ಅರ್ಹತೆ ಮತ್ತು ಸೇನೆಯಲ್ಲಿ ನಿಗದಿತ ವಿಭಾಗಗಳಲ್ಲಿ ದಾಖಲಾತಿಗಾಗಿ ಇತರ ಮಾನದಂಡಗಳ ವಿವರಗಳನ್ನು ನೀಡಲಾಗಿದೆ.

ಈ ವೆಬ್‌ಸೈಟ್‌ ನೋಡಿ

10 ಅಕ್ಟೋಬರ್ 2024 ರಿಂದ ಜಾರಿಗೆ ಬರುವಂತೆ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಪ್ರವೇಶ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಇದು ಅವರ ವೈಯಕ್ತಿಕ ಖಾತೆ ಮತ್ತು ನೋಂದಾಯಿತ ಇಮೇಲ್ ಐಡಿಗೆ ಲಾಗ್ ಇನ್ ಮಾಡುವ ಮೂಲಕ ಪ್ರವೇಶಿಸುವ ಭಾರತೀಯ ಸೇನೆಯ ಸೇರ್ಪಡೆಯ ವೆಬ್‌ಸೈಟ್‌ನಲ್ಲಿಯೂ ಸಹ ಲಭ್ಯವಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದಲ್ಲೇ ಈಗಾಗಲೇ ನಡೆಸಲಾದ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನುwww.joinindianarmy.nic.in. ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕರ್ನಾಟಕದ ಬೆಳಗಾವಿ, ಬೀದರ್‌, ಕಲಬುರ್ಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಅಭ್ಯರ್ಥಿಗಳು ರ್‍ಯಾಲಿಯಲ್ಲಿ ಭಾಗಿಯಾಗಬಹುದು.

ಸೂಚನೆ ಏನೇನು

ಅಗ್ನೀವೀರ್‌ ನೇಮಕಾತಿ ರ್‍ಯಾಲಿಗೆ ಆಯ್ಕೆಯಾದ ಅಭ್ಯರ್ಥಿಗಳು ಯಾವುದೇ ದುಶ್ಚಟಗಳಿಗೆ ಅಥವಾ ಮಧ್ಯವರ್ತಿಗಳಿಗೆ ಬಲಿಯಾಗದಂತೆ ಸೂಚಿಸಲಾಗಿದೆ. ಆನ್‌ಲೈನ್ ಸಿಇಇ ಸಮಯದಲ್ಲಿ ಅಭ್ಯರ್ಥಿಗಳ ಕಾರ್ಯಕ್ಷಮತೆ, ನೇಮಕಾತಿ ರ್‍ಯಾಲಿಯಲ್ಲಿ ನಡೆಸಿದ ಪರೀಕ್ಷೆಗಳು ಮತ್ತು ಅಂತಿಮ ಅರ್ಹತೆಯ ಮೇಲೆ ಆಯ್ಕೆಯಾಗಿರುವುದರಿಂದ ಯಾವುದೇ ಹಣದ ಆಮಿಷ ಅಥವಾ ಒತ್ತಡಗಳಿಗೆ ಅಭ್ಯರ್ಥಿಗಳು ಬಲಿಯಾಬಾರದು ಎಂದು ಸೂಚಿಸಲಾಗಿದೆ.

Whats_app_banner