KSRTC News: ಗಣೇಶ ಹಬ್ಬ ರಶ್‌, 1,500ಕ್ಕೂ ಅಧಿಕ ವಿಶೇಷ ಬಸ್‌ ಓಡಿಸಲಿದೆ ಕೆಎಸ್‌ಆರ್‌ಟಿಸಿ-ksrtc news ksrtc to run 1500 special buses for gowri ganesha festival extra rush from september 5 kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Ksrtc News: ಗಣೇಶ ಹಬ್ಬ ರಶ್‌, 1,500ಕ್ಕೂ ಅಧಿಕ ವಿಶೇಷ ಬಸ್‌ ಓಡಿಸಲಿದೆ ಕೆಎಸ್‌ಆರ್‌ಟಿಸಿ

KSRTC News: ಗಣೇಶ ಹಬ್ಬ ರಶ್‌, 1,500ಕ್ಕೂ ಅಧಿಕ ವಿಶೇಷ ಬಸ್‌ ಓಡಿಸಲಿದೆ ಕೆಎಸ್‌ಆರ್‌ಟಿಸಿ

Ganesha Chaturthi ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವವರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬಸ್‌ ಗಳನ್ನು ಕೆಎಸ್‌ಆರ್‌ಟಿಸಿ ಓಡಿಸಲಿದೆ.

ಕೆಎಸ್‌ಆರ್‌ಟಿಸಿ ಈ ಬಾರಿಯೂ ಗಣೇಶ ಹಬ್ಬಕ್ಕೆ ಬಸ್‌ ಸೇವೆ ನೀಡಲಿದೆ.
ಕೆಎಸ್‌ಆರ್‌ಟಿಸಿ ಈ ಬಾರಿಯೂ ಗಣೇಶ ಹಬ್ಬಕ್ಕೆ ಬಸ್‌ ಸೇವೆ ನೀಡಲಿದೆ.

ಬೆಂಗಳೂರು: ಇನ್ನೇನು ಗೌರಿ ಗಣೇಶ ಹಬ್ಬಕ್ಕೆ ನಾಲ್ಕು ದಿನ ಬಾಕಿ ಇದೆ. ಬಹುತೇಕರು ಊರುಗಳಿಗೆ ತೆರಳಲು ಸಿದ್ದತೆ ಆರಂಭಿಸಿದ್ದಾರೆ. ಈಗಾಗಲೇ ಕೆಲವರು ಊರಿಗೆ ಹೊರಡಲು ಬಸ್‌ ಇಲ್ಲವೇ ರೈಲಿನ ಟಿಕೆಟ್‌ ಮುಂಗಡ ಬುಕ್ಕಿಂಗ್‌ ಕೂಡ ಮಾಡಿಸಿಕೊಂಡಿರಬಹುದು. ಇನ್ನೂ ಕೆಲವರು ಯೋಜನೆ ಮಾಡುತ್ತಿರಬಹುದು. ಗೌರಿ ಗಣೇಶ ಹಬ್ಬವನ್ನು ಕುಟುಂಬದವರೊಂದಿಗೆ ಸುಸೂತ್ರವಾಗಿ ಆಚರಿಸಲು ಪೂರಕವಾಗುವಂತೆ ಕರ್ನಾಟಕ ರಸ್ತೆ ಸಾರಿಗೆ ನಿಗಮ( ksrtc) ಹಬ್ಬದ ವೇಳೆ 1,500ಕ್ಕೂ ಅಧಿಕ ವಿಶೇಷ ಬಸ್‌ಗಳನ್ನು ಮುಂದಾಗಿದೆ. ಇದರಲ್ಲಿ ಕರ್ನಾಟಕ ಸಾರಿಗೆ, ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಇ.ವಿ. ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, ಅಂಬಾರಿ ಉತ್ಸವ್ ಹಾಗೂ ಪಲ್ಲಕ್ಕಿ ಸಾರಿಗೆ ಸೇವೆಗಳೂ ಇರಲಿವೆ.

ಈಗಾಗಲೇ ಖಾಸಗಿ ಟ್ರಾವೆಲ್ಸ್‌ಗಳು ದರವನ್ನು ಏರಿಸುವುದರಿಂದ ಹೆಚ್ಚು ಬೆಲೆ ತೆತ್ತು ಊರಿಗೆ ಹೋಗುವುದು ಹೇಗೆ ಎಂದು ಯೋಚಿಸುತ್ತಿರುವವರಿಗೆ ಸರ್ಕಾರಿ ಸ್ವಾಮ್ಯದ ಕೆಎಸ್‌ಆರ್‌ಟಿಸಿ ಸೆಪ್ಟೆಂಬರ್‌ 5ರಿಂದ 7ರವರೆಗೆ ಬೆಂಗಳೂರಿನಿಂದ ಬಸ್‌ಗಳು ವಿವಿಧೆಡೆ ಓಡಿಸಲು ನಿರ್ಧರಿಸಿದೆ. ಈ ಕುರಿತು ಅಧಿಕೃತ ಪ್ರಕಟಣೆಯನ್ನೂ ಕೆಎಸ್‌ಆರ್‌ಟಿಸಿ ಬಿಡುಗಡೆ ಮಾಡಿದೆ. ಗೌರಿ ಹಬ್ಬ, ಗಣೇಶ ಚತುರ್ಥಿಗೆ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಳವಾಗುವುದರಿಂದ ವಿಶೇಷ ಬಸ್‌ಗಳನ್ನು ಓಡಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣ ಹಾಗೂ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ವಿಶೇಷ ಬಸ್‌ಗಳು ಸಂಚರಿಸಲಿವೆ.ಮಂಗಳೂರು, ಧಾರವಾಡ,ಶಿವಮೊಗ್ಗ, ಬೆಳಗಾವಿ,ಮಡಿಕೇರಿ, ವಿಜಯಪುರ, ಗೋಕರ್ಣ,ಕಲಬುರಗಿ, ಧರ್ಮಸ್ಥಳ, ರಾಯಚೂರು, ಶೃಂಗೇರಿ, ಬಳ್ಳಾರಿ, ಹೊರನಾಡು, ಹುಬ್ಬಳ್ಳಿ, ಕುಕ್ಕೆ ಸುಬ್ರಹ್ಮಣ್ಯ, ದಾವಣಗೆರೆ, ಕೊಲ್ಲೂರು, ಕಾರವಾರ, ಹೊಸಪೇಟೆ ಸಹಿತ ಪ್ರಮುಖ ಸ್ಥಳಗಳಿಗೆ ಈ ಬಸ್‌ ಸೇವೆ ಒದಗಿಸಲಿವೆ. ಇಲ್ಲದೇ ಪಕ್ಕದ ರಾಜ್ಯದ ಎರ್ನಾಕುಲಂ, ಚೆನ್ನೈ, ಹೈದರಾಬಾದ್, ಊಟಿ, ಪುಣೆ, ಕೊಡೈಕೆನಾಲ್, ಶಿರಡಿ, ಸೇಲಂ, ತಿರುಚಿನಾಪಳ್ಳಿ, ಪಣಜಿ, ಪುದುಕೋಟೆ, ಮಧುರೈ,ಪಾಲ್ಘಾಟ್ ಸಹಿತ ಹಲವು ಕೇಂದ್ರಗಳಿಗೆ ಬಸ್‌ಗಳು ಹೊರಡಲಿವೆ.

ಕರ್ನಾಟಕ ಸಾರಿಗೆ, ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಇ.ವಿ. ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, ಅಂಬಾರಿ ಉತ್ಸವ್ ಹಾಗೂ ಪಲ್ಲಕ್ಕಿ ಸಾರಿಗೆ ಸೇವೆಗಳ ಜೊತೆಗೆ ಹೆಚ್ಚುವರಿ ಬಸ್‌ಗಳ ಸಂಚಾರ ನಾಲ್ಕು ದಿನ ಇರಲಿದ್ದು. ಸೆ.8ರಂದು ವಾಪಸ್ಸಾಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.