Crime News: ಡೊನಾಲ್ಡ್ ಟ್ರಂಪ್ ಗೆಲುವಿನಿಂದ ಪ್ರಚೋದನೆ, ತಂದೆಯನ್ನೇ ಕೊಡಲಿಯಿಂದ ಕ್ರೂರವಾಗಿ ಕೊಂದ ಮಗಳು
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಗೆಲುವು ಪಡೆದ ರಾತ್ರಿ ಸಿಯಾಟಲ್‌ನಲ್ಲಿ ಯುವತಿಯೊಬ್ಬಳು "ಲಿಬರೇಷನ್" ಹೆಸರಿನಲ್ಲಿ ತನ್ನ ತಂದೆಯನ್ನೇ ಐಸ್ ಕೊಡಲಿಯಿಂದ ಕ್ರೂರವಾಗಿ ಕೊಲೆ ಮಾಡಿದ ಘಟನೆ ಇದೀಗ ವರದಿಯಾಗಿದೆ. ಪೊಲೀಸರು ಬಂದಾಗ ರಕ್ತಸಿಕ್ತ ಐಸ್ ಆಕ್ಸ್ ಹಿಡಿದುಕೊಂಡು ಚಪ್ಪಾಳೆ ತಟ್ಟುತ್ತಿದ್ದಳಂತೆ.
ಬೆಂಗಳೂರು: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಗೆಲುವು ಪಡೆದ ರಾತ್ರಿ ಸಿಯಾಟಲ್‌ನಲ್ಲಿ ಯುವತಿಯೊಬ್ಬಳು "ಲಿಬರೇಷನ್" ಹೆಸರಿನಲ್ಲಿ ತನ್ನ ತಂದೆಯನ್ನೇ ಕ್ರೂರವಾಗಿ ಕೊಲೆ ಮಾಡಿದ ಘಟನೆ ಇದೀಗ ವರದಿಯಾಗಿದೆ. ಪೊಲೀಸರು ಬಂದಾಗ ರಕ್ತಸಿಕ್ತ ಐಸ್ ಆಕ್ಸ್ ಹಿಡಿದುಕೊಂಡು ಚಪ್ಪಾಳೆ ತಟ್ಟುತ್ತಾ ಈಕೆ ನಗುತ್ತಾ ನಿಂತಿದ್ದಳು ಎಂದು ವರದಿಗಳು ತಿಳಿಸಿವೆ. ಈಕೆ ಬಾಹ್ಯಾಕಾಶ ರಾಕೆಟ್ ಪ್ರೋಗ್ರಾಂ ಮ್ಯಾನೇಜರ್ ಆಗಿದ್ದ ತಂದೆಯನ್ನು ಕೊಲೆ ಮಾಡಿದ್ದಾಳೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಸದ್ಯ ಪೊಲೀಸರು ದಾಖಲಿಸಿಕೊಂಡ ಚಾರ್ಜ್‌ಶೀಟ್‌ನಲ್ಲಿ ಇದು "ವಿಮೋಚನೆ/ ಲಿಬರೇಷನ್" ಕೊಲೆ ಎಂದು ಬರೆದಿದ್ದಾರೆ. 67 ವರ್ಷ ವಯಸ್ಸಿನ ತನ್ನ ತಂದೆಯನ್ನು ಬರ್ಕ್ ಹೆಸರಿನ ಈಕೆ ತನ್ನ ಸಿಯಾಟಲ್ ಮನೆಯಲ್ಲಿ ಕತ್ತು ಹಿಸುಕಿ, ಕಚ್ಚಿ, ಐಸ್ ಆಕ್ಸ್‌ನಿಂದ ಕೊಚ್ಚಿ ಕೊಂದ ಆರೋಪವಿದೆ.
ಬರ್ಕ್‌ನ ಲಿಂಕ್ಡ್‌ಇನ್ ಪ್ರಕಾರ ಈಕೆ ಜೆಫ್ ಬೆಜೋಸ್‌ನ ಬಾಹ್ಯಾಕಾಶ ನೌಕೆ ಕಂಪನಿಯಾದ ಬ್ಲೂ ಒರಿಜಿನ್‌ನಲ್ಲಿ ತರಬೇತಿ ನಿರ್ವಾಹಕಿಯಾಗಿದ್ದಾರೆ. ಜನಪ್ರಿಯ ಟ್ರಾನ್ಸ್‌ಜೆಂಡರ್ ಲೇಖಕಿ ಸಮಂತಾ ಲೇಘ್ ಅಲೆನ್‌ರನ್ನು ವಿವಾಹವಾಗಿದ್ದಾರೆ. ಸಮತಾ ಲೇಘ್ ಅಲನ್ ಅವರು ರಿಯಲ್ ಕ್ವೀರ್ ಅಮೇರಿಕಾ: ಎಲ್ಜಿಬಿಟಿ ಸ್ಟೋರೀಸ್ ಫ್ರಮ್ ರೆಡ್ ಸ್ಟೇಟ್ಸ್ ಎಂಬ ಜನಪ್ರಿಯ ಪುಸ್ತಕದದ ಲೇಖಕಿ. ಕಾಂಡೆ ನಾಸ್ಟ್ ಟ್ರಾನ್ಸ್ಜೆಂಡರ್ ಎಂಬ ಸುದ್ದಿ ಪ್ರಕಾಶನದ ಸಂಪಾದಕಿಯಾಗಿದ್ದಾರೆ.
ತಂದೆಯನ್ನು ಕೊಲೆ ಮಾಡಿದ್ಯಾಕೆ?
ಬರ್ಕ್ ಚುನಾವಣೆಯ ಬಗ್ಗೆ ಅಸಮಾಧಾನ ಹೊಂದಿದ್ದರಂತೆ. ಡೊನಾಲ್ಡ್ ಟ್ರಂಪ್ ಅವರು ಕಮಲಾ ಹ್ಯಾರಿಸ್ ಅವರನ್ನು ಸೋಲಿಸುತ್ತಾರೆ ಎಂದು ತಿಳಿದಿದ್ದರು. ಈ ಸಂದರ್ಭದಲ್ಲಿ ಸುದ್ದಿಗಳನ್ನು ನೋಡುತ್ತಿರುವಾಗ ಆಕೆಯ ತಂದೆ ತಿಮೋತಿ ಬರ್ಕ್‌ಗೆ ಲೈಟ್‌ಗಳನ್ನು ಆಫ್ ಮಾಡುವಂತೆ ತಿಳಿಸಿದ್ರಂತೆ. ಈಕೆ ನಿರಾಕರಿಸಿದ್ದಾರೆ. ಬಳಿಕ ರೋಷಗೊಂಡು ಕೊಡಲಿ ತರಲು ಮೇಲಕ್ಕೆ ಹೋಗಿದ್ದಾಳೆ. ಐಸ್ ಪಿಕಾಕ್ಸ್ ತಂದು ತಂದೆಯನ್ನು ಕೆಡವಿ ಕೊಚ್ಚಿದ್ದಾಳೆ. ಬಳಿಕ ಮನೆಯ ಕಿಟಕಿಯ ಗಾಜುಗಳನ್ನು ಹೊಡೆದಿದ್ದಾಳೆ. ತನ್ನ ತಂದೆಯ ಪಕ್ಕದಲ್ಲಿಯೇ ಕುಳಿತು ಐಸ್ ಆಕ್ಸ್‌ನ ಮೊಣಚಾದ ಭಾಗದಿಂದ ಕೊಚ್ಚುತ್ತಾ ಇದ್ದಳೆಂದು ಪೊಲೀಸರು ಹೇಳಿದ್ದಾರೆ. ಇದು ಲಿಬರೇಷನ್‌ಗಾಗಿ ಮಾಡಿದ ಹತ್ಯೆ ಎಂದು ಪೊಲೀಸರಿಗೆ ತಿಳಿಸಿದ್ದಳು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
"ತಂದೆಯೊಂದಿಗಿನ ತನ್ನ ಸಂಬಂಧವು ಹದಗೆಟ್ಟಿದೆ. ನನಗೆ ಆತನ ಬಗ್ಗೆ ಯಾವುದೇ ಒಳ್ಳೆಯ ಭಾವನೆ ಉಳಿದಿಲ್ಲ" ಎಂದು ಬರ್ಕ್ ಪೊಲೀಸರಿಗೆ ತಿಳಿಸಿದ್ದಾರೆ. "ಟ್ರಂಪ್‌ನ ವಿಜಯವೇ ಆಕೆಯನ್ನು ಉದ್ರೇಕಗೊಳಿಸಿ, ಇಂತಹ ಕೃತ್ಯಕ್ಕೆ ಪ್ರೇರೇಪಿಸಿದೆ" ಎಂದು ಪೊಲೀಸರು ಹೇಳಿದ್ದರೆ. ಪೊಲೀಸರು ಘಟನಾ ಸ್ಥಳಕ್ಕೆ ಬಂದಾಗ ಆಕೆ ಕೈಗಳನ್ನು ಮೇಲಕ್ಕೆತ್ತಿ ಹೊರಬಂದಿದ್ದಾಳೆ. ರಕ್ತ ಎಲ್ಲಿಂದ ಬಂತು, ಕಿಟಕಿಗಳನ್ನು ಹೊಡೆದವರು ಯಾರು ಎಂದು ಆಕೆ ಹೇಳಲಿಲ್ಲ. ಬಳಿಕ ಆಕೆಯೇ "ನಾನೇ ಈ ಕೃತ್ಯ ಮಾಡಿದೆ" ಎಂದು ತಿಳಿಸಿದಳು ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಇವಳನ್ನು ಕೊಲೆ ಆರೋಪದ ಮೇಲೆ ವಿಚಾರಣೆ ನಡೆಸಲಾಗುತ್ತಿದೆ.