ಕನ್ನಡ ಸುದ್ದಿ  /  ಕರ್ನಾಟಕ  /  Breaking News: ಮಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ, ಒಬ್ಬ ಕಾರ್ಮಿಕ ಸಾವು, ಇನ್ನೊಬ್ಬನ ರಕ್ಷಣೆ

Breaking News: ಮಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ, ಒಬ್ಬ ಕಾರ್ಮಿಕ ಸಾವು, ಇನ್ನೊಬ್ಬನ ರಕ್ಷಣೆ

Mangalore News ಮಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತು ಇಬ್ಬರು ಕಾರ್ಮಿಕರು ಸಿಲುಕಿ ಒಬ್ಬಾತ ಮೃತಪಟ್ಟಿದ್ದಾನೆ.

ಮಂಗಳೂರಿನಲ್ಲಿ ದುರಂತ ನಡೆದ ಕಟ್ಟಡದ ಸ್ಥಳ
ಮಂಗಳೂರಿನಲ್ಲಿ ದುರಂತ ನಡೆದ ಕಟ್ಟಡದ ಸ್ಥಳ

ಮಂಗಳೂರು:ಬಲ್ಮಠದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಭೂಕುಸಿತ ಸಂಭವಿಸಿ, ಮಣ್ಣಿನಡಿ ಸಿಲುಕಿದ್ದ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾರೆ. ಮೃತ ಕಾರ್ಮಿಕನನ್ನು ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್ (30) ಎಂದು ಗುರುತಿಸಲಾಗಿದೆ. ಬಲ್ಮಠ ಬಳಿಯ ಮಂಗಳೂರು ನರ್ಸಿಂಗ್ ಹೋಮ್ ಮುಂಭಾಗದ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದರು. ಇವರಲ್ಲಿ ಓರ್ವ ಬಿಹಾರದ ರಾಜ್ ಕುಮಾರ್ ಎಂಬಾತನನ್ನು ರಕ್ಷಿಸಲಾಗಿದ್ದು, ಉತ್ತರ ಪ್ರದೇಶದ ಚಂದನ್ ಕುಮಾರ್ ನನ್ನು ಮೇಲಕ್ಕೆತ್ತುವ ಕಾರ್ಯ ನಡೆದರೂ ಪ್ರಯೋಜನವಾಗಲಿಲ್ಲ.ಬುಧವಾರ ಮಧ್ಯಾಹ್ನದ ಗಾಳಿ ಮಳೆಗೆ ಈ ದುರ್ಘಟನೆ ನಡೆದಿದೆ.

ಮಧ್ಯಾಹ್ನ ಕಟ್ಟಡದ ಕಾಮಗಾರಿ ನಡೆಯು್ತಿದ್ದ ವೇಳೆ ಭೂಕುಸಿತ ಸಂಭವಿಸಿತ್ತು. ಆ ಸಂದರ್ಭ ಮಳೆಯೊಂದಿಗೆ ಗಾಳಿಯೂ ಇತ್ತು. ಈ ಸಂದರ್ಭ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು. ಘಟನೆ ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ, ಎನ್.ಡಿ.ಆರ್.ಎಫ್., ಎನ್.ಡಿ.ಆರ್.ಎಫ್ ತಂಡ ದೌಡಾಯಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭ ಓರ್ವ ಕಾರ್ಮಿಕನನ್ನು ರಕ್ಷಿಸಲಾಗಿತ್ತು. ಆದರೆ ಮಣ್ಣಿನಡಿ ಸಿಲುಕಿದ್ದ ಚಂದನ್ ಪತ್ತೆ ಕಾರ್ಯಾಚರಣೆ ನಡೆದಿತ್ತು. ರಾತ್ರಿವರೆಗೂ ಅಂದರೆ ಸುಮಾರು ಏಳು ತಾಸುಗಳ ಕಾರ್ಯಾಚರಣೆ ನಡೆಸಿದರೂ ಕಾರ್ಮಿಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಏಳು ಗಂಟೆ ವೇಳೆ ಮೃತದೇಹವನ್ನು ಎನ್.ಡಿ.ಆರ್.ಎಫ್. ತಂಡ ಹೊರತೆಗೆಯಿತು.

ಸ್ಥಳದಲ್ಲಿ ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ ಕಾರ್ಯಾಚರಣೆ ನಡೆಸುತ್ತಿದ್ದು ಕಾರ್ಮಿಕರ ಪ್ರಾಣ ಉಳಿಸಲು ಹರಸಾಹಸ ಪಟ್ಟರು.

ಟ್ರೆಂಡಿಂಗ್​ ಸುದ್ದಿ

ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಡಿಸಿ ಸಂತೋಷ್ ಕುಮಾರ್, ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಡಿಸಿಪಿ ಸಿದ್ದಾರ್ಥ್ ಗೋಯಲ್ ಸ್ಥಳದಲ್ಲಿ ಬೀಡುಬಿಟ್ಟಿದ್ದರು.

ಕಟ್ಟಡಕ್ಕೆ ವಾಟರ್ ಪ್ರೂಫ್ ಮಾಡುತ್ತಿದ್ದ ವೇಳೆ ಕಟ್ಟಡದ ಬದಿಯಲ್ಲಿದ್ದ ಮಣ್ಣು ಏಕಾಏಕಿ ಕುಸಿದಿದೆ. ಆದರೆ ಅಡ್ಡಲಾಗಿ ಸ್ಲ್ಯಾಬ್ ಇದ್ದ ಕಾರಣ ಅವರ ಮೇಲೆ ಮಣ್ಣು ಬಿದ್ದಿಲ್ಲ. ಅವರಿಗೆ ಬಿಲ್ಡಿಂಗ್ ಕೊರೆದು ಆಕ್ಸಿಜನ್ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿ ನೀರು ಆಹಾರ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ‌. ಸ್ಥಳದಲ್ಲಿ ಆರೋಗ್ಯ ಇಲಾಖೆ ಆಗಮಿಸಿದ್ದು, ಕಾರ್ಯಾಚರಣೆ ನಡೆದ ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲು ಆ್ಯಂಬುಲೆನ್ಸ್ ಕೂಡ ತಯಾರು ಮಾಡಲಾಗಲಾಗಿತ್ತು.

ವಿಭಾಗ