Mangaluru News: ರಸ್ತೆ ಗುಂಡಿ ನೋಡಿ ಬೇಸರಗೊಂಡ ಪೊಲೀಸರು ತಾವೇ ಹಾರೆ, ಗುದ್ದಲಿ ಹಿಡಿದು ಮುಚ್ಚಿದರು-mangaluru news potholes problems in mangaluru police personnel cover nantur junction road potholes news in kannada arc ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mangaluru News: ರಸ್ತೆ ಗುಂಡಿ ನೋಡಿ ಬೇಸರಗೊಂಡ ಪೊಲೀಸರು ತಾವೇ ಹಾರೆ, ಗುದ್ದಲಿ ಹಿಡಿದು ಮುಚ್ಚಿದರು

Mangaluru News: ರಸ್ತೆ ಗುಂಡಿ ನೋಡಿ ಬೇಸರಗೊಂಡ ಪೊಲೀಸರು ತಾವೇ ಹಾರೆ, ಗುದ್ದಲಿ ಹಿಡಿದು ಮುಚ್ಚಿದರು

ಆ್ಯಕ್ಸಿಡೆಂಟ್ ಸ್ಪಾಟ್ ಎಂದೇ ಹೆಸರು ಹೊಂದಿರುವ ನಂತೂರು ಜಂಕ್ಷನ್ ರಸ್ತೆ ಹೊಂಡ ಗುಂಡಿಗಳಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು‌. ಈ ಹಿಂದೆ ಗುಂಡಿಗಳಿಂದಲೇ ಆ್ಯಕ್ಸಿಡೆಂಟ್ ಆಗಿ ಜೀವಗಳು ಬಲಿಯಾಗಿತ್ತು.

ರಸ್ತೆ ಗುಂಡಿ ನೋಡಿ ಬೇಸರಗೊಂಡ ಪೊಲೀಸರು ತಾವೇ ಹಾರೆ, ಗುದ್ದಲಿ ಹಿಡಿದು ಮುಚ್ಚಿದರು
ರಸ್ತೆ ಗುಂಡಿ ನೋಡಿ ಬೇಸರಗೊಂಡ ಪೊಲೀಸರು ತಾವೇ ಹಾರೆ, ಗುದ್ದಲಿ ಹಿಡಿದು ಮುಚ್ಚಿದರು

ಮಂಗಳೂರು: ಇಡೀ ಮಂಗಳೂರು ಮಹಾನಗರದಲ್ಲಿ ಅತಿ ಹೆಚ್ಚು ಅಪಘಾತಗಳು ನಡೆಯುವ ಜಾಗಗಳನ್ನು ಪಟ್ಟಿ ಮಾಡಿ ಎಂದು ಹೊರಟರೆ, ಅಗ್ರಸ್ಥಾನಕ್ಕೆ ಪೈಪೋಟಿ ನಡೆಸಲು ಸಿದ್ಧವಾಗಿರುವ ಜಾಗ ನಂತೂರು. ರಾಷ್ಟ್ರೀಯ ಹೆದ್ದಾರಿಗಳಾದ ಮಂಗಳೂರು ಬೆಂಗಳೂರು ಮತ್ತು ಕೇರಳದಿಂದ ಮುಂಬೈಗೆ ತೆರಳುವ ಹೆದ್ದಾರಿಗಳೆರಡು ಸಂಧಿಸುವ ಜಾಗವಾದ ಈ ಪ್ರದೇಶದಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ಅಂಡರ್ ಪಾಸ್ ಅಥವಾ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂಬ ಬೇಡಿಕೆಯೇ ನೆನೆಗುದಿಗೆ ಬಿದ್ದಿದೆ. ಸರಿಯಾಗಿ ವಾಹನವನ್ನು ಕೊಂಡೊಯ್ಯಲೂ ಅಸಾಧ್ಯವಾದ ಈ ಜಂಕ್ಷನ್ ನಲ್ಲಿ ಹೊಂಡಗುಂಡಿಗಳು ದ್ವಿಚಕ್ರ ವಾಹನ ಸವಾರರ ಧೃತಿಗೆಡಿಸಿದೆ. ಹೊಂಡ ತಪ್ಪಿಸಲು ಹೋಗಿ ಬಿದ್ದ ಉದಾಹರಣೆಗಳೆಷ್ಟೋ. ಇದನ್ನು ದಿನಾ ನೋಡುವ ಪೊಲೀಸರು ಸ್ವತಃ ತಾವೇ ಹಾರೆ, ಗುದ್ದಲಿ ಹಿಡಿದು ಹೊಂಡ ಮುಚ್ಚುವ ಕೆಲಸವನ್ನು ಮಾಡಿದರು. ಇನ್ನು ಸಿಟಿ ಕಾರ್ಪೊರೇಶನ್ ಅಥವಾ ಹೆದ್ದಾರಿ ಇಲಾಖೆಗಳು ಮಾಡುತ್ತವೆ ಎಂದು ಕಾದು ಕುಳಿತರೆ, ಮತ್ತಷ್ಟು ತಿಂಗಳುಗಳು ಕಳೆದು ಪ್ರಾಣಹಾನಿಯಾಗಬಹುದು ಎಂಬ ಕಾಳಜಿಯಲ್ಲಿ ಪೊಲೀಸರು ಮಾಡಿದ ಈ ಕಾರ್ಯ ಸಾರ್ವತ್ರಿಕ ಶ್ಲಾಘನೆಗೊಳಗಾಗಿವೆ.

ಆ್ಯಕ್ಸಿಡೆಂಟ್ ಸ್ಪಾಟ್ ಎಂದು ಹೆಸರು ಹೊಂದಿರುವ ನಂತೂರು ಜಂಕ್ಷನ್ ರಸ್ತೆ ಹೊಂಡ ಗುಂಡಿಗಳಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು‌. ಈ ಹಿಂದೆ ಗುಂಡಿಗಳಿಂದಲೇ ಆ್ಯಕ್ಸಿಡೆಂಟ್ ಆಗಿ ಜೀವಗಳು ಬಲಿಯಾಗಿತ್ತು. ಈ ಸಂಭಾವ್ಯ ಅಪಾಯ ಹಾಗೂ ಸಂಚಾರ ಅಡಚಣೆಯನ್ನು ತಪ್ಪಿಸಲು ನಂತೂರಿನ ರಸ್ತೆ ಗುಂಡಿಗಳನ್ನು ಮಂಗಳೂರು ನಗರ ಪೊಲೀಸ್ ಅಧಿಕಾರಿಗಳೇ ಸ್ವತಃ ಮುಚ್ಚುವ ಕಾರ್ಯ ಮಾಡಿದ ಕೆಲಸಕ್ಕೆ, ನಿತ್ಯಸಂಚಾರಿಗಳಂತೂ ಫುಲ್ ಖುಷ್.

ಮಂಗಳೂರು ದಕ್ಷಿಣ ವಿಭಾಗದ ಸಂಚಾರಿ ಠಾಣೆಯ ಸಬ್ ಇನ್ ಸ್ಪೆಕ್ಟರ್ ಈಶ್ವರ ಸ್ವಾಮಿ, ಎಎಸ್‌ಐ ವಿಶ್ವನಾಥ ರೈ ಹಾರೆ, ಗುದ್ದಲಿ ಹಿಡಿದು ರಸ್ತೆ ಗುಂಡಿಯನ್ನು ಮುಚ್ಚುವ ಕಾರ್ಯವನ್ನು ಮಾಡಿದ್ದಾರೆ. ಒಂದೆರಡು ಬಾರಿ ಇಲ್ಲಿ ರಸ್ತೆ ಗುಂಡಿಯನ್ನು ತೇಪೆ ಹಾಕುವ ಕಾರ್ಯ ನಡೆದಿದೆ. ಸ್ವಲ್ಪ ಸಮಯದ ಬಳಿಕ ಗುಂಡಿ ಯಥಾರೀತಿ ಬಾಯಿತೆರೆದು ನಿಂತಿದೆ. ಇಲ್ಲಿ ವಾಹನ ಸವಾರರು ಅದರಲ್ಲೂ ದ್ವಿಚಕ್ರ ಸವಾರರು ಜೀವ ಕೈಯಲ್ಲಿ ಹಿಡಿದೇ ವಾಹನ ಚಲಾಯಿಸಬೇಕಿತ್ತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುವ ನಂತೂರಿನ ತಿರುವಿನ ರಸ್ತೆ ಕಳೆದ ಕೆಲವು ತಿಂಗಳುಗಳಿಂದ ಹೊಂಡ ಗುಂಡಿಗಳು ಸೃಷ್ಟಿಯಾಗಿತ್ತು. ನಗರದ ರಸ್ತೆಗಳೊಂದಿಗೆ 2 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಕೂಡ ಇಲ್ಲಿ ಹಾದು ಹೋಗುತ್ತದೆ‌. ಇದರಿಂದ ಸಂಚಾರ ವ್ಯವಸ್ಥೆಗೂ ಭಾರಿ ತೊಂದರೆ ಆಗುತ್ತಿತ್ತು. ಇದೀಗ ಪೊಲೀಸ್ ಅಧಿಕಾರಿಗಳೇ ಹೊಂಡ ಗುಂಡಿಗಳನ್ನು ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ‌.

mysore-dasara_Entry_Point