ಮಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ್ದೀರೆಂದು ನಕಲಿ ಎಪಿಕೆ ಫೈಲ್ ಕಳುಹಿಸಿ 1.31 ಲಕ್ಷ ರೂ ವಂಚನೆ; ದೂರು ದಾಖಲು
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ್ದೀರೆಂದು ನಕಲಿ ಎಪಿಕೆ ಫೈಲ್ ಕಳುಹಿಸಿ 1.31 ಲಕ್ಷ ರೂ ವಂಚನೆ; ದೂರು ದಾಖಲು

ಮಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ್ದೀರೆಂದು ನಕಲಿ ಎಪಿಕೆ ಫೈಲ್ ಕಳುಹಿಸಿ 1.31 ಲಕ್ಷ ರೂ ವಂಚನೆ; ದೂರು ದಾಖಲು

ಮಂಗಳೂರು: ಪರಿವಾಹನ್‌ ಹೆಸರಿನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದೀರಿ ಎಂದು, ನಕಲಿ ಇ ಚಲನ್‌ ಕಳಿಸಿ ವ್ಯಕ್ತಿಯೊಬ್ಬರ ಖಾತೆಯಿಂದ 1 ಲಕ್ಷಕ್ಕೂ ಹೆಚ್ಚು ಹಣ ದೋಚಿರುವ ಘಟನೆ ನಗರದಲ್ಲಿ ನಡೆದಿದೆ. ಹಣ ಕಳೆದುಕೊಂಡವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮಂಗಳೂರು: ಪರಿವಾಹನ್‌ ಹೆಸರಿನಲ್ಲಿ ನಕಲಿ ಎಪಿಕೆ ಫೈಲ್ ಕಳುಹಿಸಿ 1.31 ಲಕ್ಷ ರೂ ವಂಚನೆ
ಮಂಗಳೂರು: ಪರಿವಾಹನ್‌ ಹೆಸರಿನಲ್ಲಿ ನಕಲಿ ಎಪಿಕೆ ಫೈಲ್ ಕಳುಹಿಸಿ 1.31 ಲಕ್ಷ ರೂ ವಂಚನೆ

ಮಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ್ದೀರಿ ಎಂದು ಲಿಂಕ್ ಮೂಲಕ ನಕಲಿ ಇ-ಚಲನ್ ಕಳುಹಿಸಿ ವ್ಯಕ್ತಿಯೋರ್ವರ ಖಾತೆಯಿಂದ 1.31 ಲಕ್ಷ ರೂ ಹಣವನ್ನು ವರ್ಗಾಯಿಸಿಕೊಂಡ ಕುರಿತು ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಂಡ್ರಾಯ್ಡ್ ಪ್ಯಾಕೇಜ್ ಕಿಟ್ ಎಪಿಕೆ ಫೈಲ್‌ಗಳನ್ನು ಇತ್ತೀಚೆಗೆ ನಕಲಿ ಸಂದೇಶ ಕಳುಹಿಸುವವರು ಬಳಕೆ ಮಾಡುತ್ತಿದ್ದಾರೆ. ಮೊಬೈಲ್‌ನಲ್ಲಿರುವ ಗ್ಯಾಲರಿ, ಕ್ಯಾಮರಾ ಮೊದಲಾದವುಗಳ ಪರ್ಮಿಶನ್ ಕೇಳದೆ ಇದನ್ನು ಸುಲಭವಾಗಿ ತಂತಾನೆ ಸೆಟ್ಟಿಂಗ್‌ ಆಗಿಬಿಡುತ್ತದೆ. ನೇರವಾಗಿ ಅವುಗಳ ಆಕ್ಸೆಸ್ ಪಡೆದುಕೊಂಡು ಕಾರ್ಯಾಚರಣೆ ಆರಂಭಿಸುತ್ತೆ. ಆದರೆ ಮೊಬೈಲ್ ಸೆಟ್ಟಿಂಗ್‌ಗಳಲ್ಲಿ ಇನ್‌ಸ್ಟಾಲ್ ಅನ್‌ ನೌನ್‌ ಆಪ್‌ ಇರುವ ಜಾಗದಲ್ಲಿ ಟಿಕ್ ಮಾರ್ಕ್ ಹಾಕದಿರುವಂತೆ ನೋಡಿಕೊಳ್ಳಬೇಕು. ಆದರೆ ಸಾಮಾನ್ಯವಾಗಿ ಇಂಥ ಸುರಕ್ಷತೆಗಳನ್ನು ನಾವು ಅನುಸರಿಸುವುದಿಲ್ಲ. ಮಂಗಳೂರಿನ ವ್ಯಕ್ತಿಯೊಬ್ಬರು ಕೂಡಾ ಇದೇ ರೀತಿ ಹಣ ಕಳೆದುಕೊಂಡಿದ್ದಾರೆ.

ಮೆಸೇಜ್ ಬಂದದ್ದು ಯಾವ ನಂಬರ್‌ನಿಂದ?

ನವೆಂಬರ್‌ 24ರಂದು ರಾತ್ರಿ 8:44 ಗಂಟೆಗೆ ಮಂಗಳೂರು ನಿವಾಸಿಯ ವಾಟ್ಸಾಪ್ ನಂಬರ್‌ಗೆ, 917878422870 ವಾಟ್ಸಾಪ್ ನಂಬರ್‌ನಿಂದ ಮೇಸೆಜ್ ಬಂದಿದೆ. ಮೇಸೆಜ್‌ನಲ್ಲಿ VAHAN PARIVAHAN.apk ಫೈಲ್ ಬಂದಿರುತ್ತದೆ. ಈ ಫೈಲ್ ನಲ್ಲಿ KA 03 MA 0606 ಎಂಬ ವಾಹನ ಸಂಖ್ಯೆ ಮೇಲೆ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಕಂಡು ಬಂದಿತ್ತು. ಇದರಿಂದ ಗಾಬರಿಗೊಂಡ ದೂರುದಾರರು, ಎಪಿಕೆ ಫೈಲ್ ಡೌನ್ ಲೋಡ್ ಮಾಡಿದ್ದಾರೆ. ಕೂಡಲೇ ಅವರ ಮೊಬೈಲ್ ಗೆ 16 ಓಟಿಪಿಗಳು ಬಂದಿವೆ. ಓಟಿಪಿಗಳನ್ನು ಯಾರಿಗೂ ಶೇರ್ ಮಾಡಿಲ್ಲದಿದ್ದರೂ ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್‌ ಕ್ರೆಡಿಟ್ ಕಾರ್ಡ್ ಮುಖಾಂತರ 30,400 ರೂ. ಹಾಗೂ ಡೆಬಿಟ್ ಕಾರ್ಡ್ ಮುಖಾಂತರ 16,700 ರೂ ಹಾಗೂ ಮತ್ತು ಪೇ ಲೇಟರ್‌ನಲ್ಲಿ 71,496 ರೂ. ಹಣ ವರ್ಗಾವಣೆ ಆದ ಬಗ್ಗೆ ಮೊಬೈಲ್‌ಗೆ ಮೇಸೆಜ್ ಬಂದಿರುತ್ತದೆ.

ದೆಹಲಿ ವಿಳಾಸಕ್ಕೆ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಆರ್ಡರ್‌ ಬುಕಿಂಗ್‌

ಹಣ ಡೆಬಿಟ್‌ ಆದ ಮೆಸೇಜ್‌ ಬರುತ್ತಿದ್ದಂತೆ ಆತ, ಮೊಬೈಲ್ ಮೂಲಕವೇ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್‌ ಬ್ಲಾಕ್ ಮಾಡಿದ್ದಾರೆ. ಅಪರಿಚಿತ ವ್ಯಕ್ತಿಯು ಆನ್ ಲೈನ್ ಮೂಲಕ ಆಕ್ಸಿಸ್ ಬ್ಯಾಂಕ್ ಖಾತೆಯಿಂದ ಫ್ಲಿಪ್‌ಕಾರ್ಟ್‌ನಲ್ಲಿ 39,398 ರೂ. ಬೆಲೆಯ ಒನ್‌ ಪ್ಲಸ್‌ ಮೊಬೈಲ್‌ ಫೋನ್, ‌ 32,098/-, Air pod 12,800 ಮೊಟರೋಲಾ ಎಡ್ಜ್‌ ಫೋನ್‌ 14,700 ಹಾಗೂ 29,400 ರೂ ಬೆಲೆಯ ಫ್ಲಿಪ್‌ಕಾರ್ಟ್‌ ಓಚರ್‌ಗಳನ್ನು ಹಾಗೂ ಅಮೆಜಾನ್‌ನಲ್ಲಿ 3000 ರೂ ಬೆಲೆಯ ಗಿಫ್ಟ್ ವೋಚರ್‌ಗಳನ್ನು ಆರ್ಡರ್‌ ಮಾಡಿರುತ್ತಾರೆ. ಆರ್ಡರ್‌ನಲ್ಲಿ ರಾಹುಲ್ ಪಂಚಶೀಲ್, ವಿಹಾರ್ ಆದರ್ಶ್ ಹಾಸ್ಪೆಟಲ್ ಹತ್ತಿರ, ದೆಹಲಿ ಪ್ರೆಸ್ ಎನ್‌ಕ್ಲೇವ್, ಸಾಕೇತ್ ನವ ದೆಹಲಿ- 110017, ಮೊಬೈಲ್ ನಂಬರ್‌ 6232866722 ವಿಳಾಸದಿಂದ ಈ ಆರ್ಡರ್‌ ಆಗಿರುವುದು ಗಮನಕ್ಕೆ ಬಂದಿದೆ. ಆನ್ ಲೈನ್ ಮೂಲಕ ತನ್ನ ಆಕ್ಸಿಸ್ ಬ್ಯಾಂಕ್ ಖಾತೆಯಿಂದ ಒಟ್ಟು ರೂ 1,31,396 ರೂ ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿದ್ದು, ಇದರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಣ ಕಳೆದುಕೊಂಡ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

 

Whats_app_banner