ಕನ್ನಡ ಸುದ್ದಿ  /  Karnataka  /  Mango And Jackfruit Mela At Hopcoms Bengaluru From 26th May On The Back Of Low Yield Woes For Farmers Rmy

Mango Mela: ರೈತರಿಗೆ ಕಡಿಮೆ ಇಳುವರಿ ಸಂಕಷ್ಟದ ಬೆನ್ನಲೇ ಇಂದಿನಿಂದ ಹಾಪ್‌ಕಾಮ್ಸ್‌ನಲ್ಲಿ ಮಾವು ಮತ್ತು ಹಲಸು ಮೇಳ

ಬೆಂಗಳೂರಿನ ಹಾಪ್‌ಕಾಮ್ಸ್‌ನಲ್ಲಿ ಇಂದಿನಿಂದ ಅಧಿಕೃತವಾಗಿ ಮಾವು ಮತ್ತು ಹಲಸು ಮೇಳ ಆರಂಭವಾಗಿದೆ. ವಿವಿಧ ಬಗೆಯ ರುಚಿಕರವಾದ ರಾಸಾಯನಿಕ ಮುಕ್ತ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ.

ಹಾಪ್‌ಕಾಮ್ಸ್‌ನಲ್ಲಿ ಮೇ 26 ರಿಂದ ಮಾವು ಮತ್ತು ಹಲಸು ಮೇಳ ಆರಂಭವಾಗಿದೆ.
ಹಾಪ್‌ಕಾಮ್ಸ್‌ನಲ್ಲಿ ಮೇ 26 ರಿಂದ ಮಾವು ಮತ್ತು ಹಲಸು ಮೇಳ ಆರಂಭವಾಗಿದೆ.

ಬೆಂಗಳೂರು: ಹಣ್ಣುಗಳ ರಾಜ ಮಾವು (Mango) ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಎಲ್ಲೆಲ್ಲೂ ಈಗ ಮಾವಿನ ಹಣ್ಣುಗಳದ್ದೇ ಕಾರು ಬಾರು. ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ (Bengaluru) ವೆರೈಟಿ ಹಣ್ಣುಗಳು ಬರುತ್ತಿದ್ದು, ಬಾಯಲ್ಲಿ ನೀರೂರಿಸುವಂತಿವೆ.

ರಾಜ್ಯದಲ್ಲಿ ಅಕಾಲಿಕ ಮಳೆ ಹಾಗೂ ಬಿಸಿಗಾಳಿ ಮಾವಿನ ಇಳುವರಿ ಮೇಲೆ ಭಾರಿ ಪರಿಣಾಮ ಬೀರಿದೆ ಎಂಬ ಆತಂಕದ ನಡುವೆಯೇ ಬೆಂಗಳೂರಿನಲ್ಲಿ ಇಂದಿನಿಂದ 10 ದಿನಗಳ ಮಾವು ಮತ್ತು ಹಲಸ ಮೇಳ (Mango and Jackfruit Mela) ಆರಂಭವಾಗಿದೆ.

ಮಾವು ಮತ್ತು ಹಲಸು ಮಾರಾಟ ಈಗಾಗಲೇ ಆರಂಭವಾಗಿದ್ದು, ಇಂದು ಔಪಚಾರಿಕವಾಗಿ ಉದ್ಘಾಟನೆಯಾಗಿದೆ ಎಂದು ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಮಿರ್ಜಿ ಉಮೇಶ್ ಶಂಕರ್ ಅವರು ಮಾಹಿತಿ ನೀಡಿದ್ದಾರೆ.

ಮೇ 26ರ ಬೆಳಗ್ಗೆ ಔಪಚಾರಿಕವಾಗಿ ಮಾವು ಮತ್ತು ಹಲಸು ಮೇಳವನ್ನು ಉದ್ಘಾಟಿಸುತ್ತಿದ್ದು, ಜೂನ್ 4ರ ವರೆಗೆ ಪ್ರತಿದಿನ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ಹಣ್ಣುಗಳನ್ನು ನಗರದ ಪ್ರತಿಯೊಂದು ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ತಿಂಗಳ ಆರಂಭದಲ್ಲಿ ರಾಜ್ಯದಲ್ಲಿ ಇಳುವರಿ ಕಡಿಮೆಯಾಗಿರುವುದರಿಂದ ಮೇಳ ವಿಳಂಬವಾಗಲಿದೆ ಎಂಬ ಆತಂಕ ಮಾವು ಪ್ರಿಯರಿಯನ್ನು ಕಾಡಿತ್ತು ಎಂದು ಹೇಳಿದ್ದಾರೆ.

ಬೆಂಗಳೂರಿನ ಹಾಪ್‌ಕಾಮ್ಸ್ ಅಧ್ಯಕ್ಷ ಎನ್ ದೇವರಾಜ್ ಮಾತನಾಡಿ, ಈ ಋತುವಿನ ಇಳುವರಿಯು ಈಗ ಹೆಚ್ಚಿನ ತಳಿಗಳ ಹಣ್ಣುಗಳು ಮಾರುಕಟ್ಟೆಗೆ ಬರುವುದರೊಂದಿಗೆ ಸ್ಥಿರವಾಗುತ್ತಿದ್ದರೂ, ಬೇಡಿಕೆಯನ್ನು ಪೂರೈಸಲು ಇನ್ನೂ ಸಾಕಾಗುವುದಿಲ್ಲ ಅಂತ ಹೇಳಿದ್ದಾರೆ.

ಮೇ ತಿಂಗಳ ಆರಂಭದಲ್ಲಿ ಹಾಪ್‌ಕಾಮ್ಸ್‌ಗೆ ಪೂರೈಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ರಾಮನಗರದ ಮೊದಲ ಬ್ಯಾಚ್‌ ಆಗ ಬಹುತೇಕ ಮಾರಾಟವಾಗಿದ್ದರೆ, ಎರಡನೇ ಬ್ಯಾಚ್ ಆಗಮನದಲ್ಲಿ ವಿಳಂಬವಾಗಿದೆ ಎಂದು ವಿವರಿಸಿದ್ದಾರೆ.

ರಸ್ಪುರಿ, ಬಾದಾಮಿ ಹಾಗೂ ಅಲ್ಪೋನ್ಸೋ ಮಾವಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಮುಂದುವರಿದಿದೆ ಎಂದಿರುವ ದೇವರಾಜ, ಈ ತಿಂಗಳಲ್ಲಿ ಲಭ್ಯವಿರುವ ಇತರೆ ತಿಳಿಗಳ ಮಾವನ್ನು ಪೂರೈಕೆ ಮಾಡಲಾಗುತ್ತದೆ. ನಾವು ಈಗ ಮಲ್ಲಿಕಾ, ಬಂಗನಪಲ್ಲಿ, ಸಿಂಧೂರ ಮಾವಿನ ನಿರಂತರ ಪೂರೈಕೆಯಾಗುತ್ತಿದೆ. ಇದು ಸ್ವಾಭಾವಿಕವಾಗಿ ಮಾವಿನ ಬೆಲೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.

ಕೋವಿಡ್ ಸಮಯದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಹಣ್ಣುಗಳನ್ನು ಪೂರೈಕಿಸಿದ್ದ ಖಾಸಗಿ ವಿತರಣಾ ಸಂಸ್ಥೆಗಳು ಕಳಪೆ ಗುಣಮಟ್ಟದ ಹಣ್ಣುಗಳನ್ನು ನೀಡಿ ಗ್ರಾಹಕರ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಹೀಗಾಗಿ ಖಾಸಗಿ ವಿತರಣಾ ಸಂಸ್ಥೆಗಳು ತಮ್ಮ ಸೇವೆಗಳನ್ನು ಸ್ಥಗಿತಗೊಳಿಸಿವೆ.

ಹಾಪ್‌ಕಾಮ್ಸ್‌ನಲ್ಲಿ ಲಭ್ಯವಿರುವ ಮಾವಿನ ಹಣ್ಣುಗಳ ದರಗಳು

ರಸಪುರಿ: 125 ರೂಪಾಯಿ

ತೋತಾಪುರಿ: 35 ರೂಪಾಯಿ

ಬಹಾದಾಮಿ: 148 ರೂಪಾಯಿ

ಅಲ್ಪೋನ್ಸೋ: 155 ರೂಪಾಯಿ

ಮಲ್ಲಿಕಾ: 120 ರೂಪಾಯಿ

ಇಮಾಮ್ ಪಸಂದ್:165 ರೂಪಾಯಿ

ಸೇಂದೂರ: 58 ರೂಪಾಯಿ

ಮಲ್ಗೋವಾ: 160 ರೂಪಾಯಿ

ಬಂಗನಪಲ್ಲಿ: 58 ರೂಪಾಯಿ

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರ್ಕೆಂಟಿಂಗ್ ಕಾರ್ಪೊರೇಷನ್ ಲಿಮಿಟೆಡ್ ವೆಬ್‌ಸೈಟ್‌ನಲ್ಲಿನ ಬೆಲೆಗಲು, ಶಿಫ್ಪಿಂಗ್ ಶುಲ್ಕಗಳು ಸೇರಿದಂತೆ ಹಣ್ಣಿನ ಬೆಲೆಗಳು

ಅಲ್ಪೋನ್ಸೋ: 441 ರೂ.- 691 ರೂಪಾಯಿ

ಬಾದಾಮಿ: 441 ರೂ.- 691 ರೂಪಾಯಿ

ಅಪೂಸ್: 441 ರೂ.- 691 ರೂಪಾಯಿ

ಆಮ್ರಪಾಲಿ: 771 ರೂ-781 ರೂಪಾಯಿ

ಬನೇಶನ್ ಬಂಗನಪಲ್ಲಿ: 281 ರೂ.-631 ರೂಪಾಯಿ

ದಶೇರಿ: 861 ರೂಪಪಾಯಿ

ಇಮಾಮ್ ಪಸಂದ್: 602 ರೂ.-891 ರೂಪಾಯಿ

ಕಲಾಪಾಡ್: 781 ರೂ.-831 ರೂಪಾಯಿ

ಕೇಸರ್: 560 ರೂ.-581 ರೂಪಾಯಿ

ಮಲ್ಲಿಕಾ: 331 ರೂ.-631 ರೂಪಾಯಿ

ಕನಿಷ್ಠ 3 ಕೆಜಿಯಿಂದ ಆರ್ಡರ್ ಮಾಡಬಹುದಾಗಿದೆ.