ಮೈಸೂರು ಅಭಿವೃದ್ದಿಗೆ ವಿಭಿನ್ನ ಸಲಹೆಗಳು: ಮಾದರಿ ನಗರವನ್ನು ಮುಂದಿನ ಪೀಳಿಗೆಗೆ ಗಟ್ಟಿಯಾಗಿ ಕಟ್ಟಿ, ಅಭಿವೃದ್ದಿ ನೀಲನಕ್ಷೆ ಸ್ಪಷ್ಟವಾಗಿರಲಿ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ಅಭಿವೃದ್ದಿಗೆ ವಿಭಿನ್ನ ಸಲಹೆಗಳು: ಮಾದರಿ ನಗರವನ್ನು ಮುಂದಿನ ಪೀಳಿಗೆಗೆ ಗಟ್ಟಿಯಾಗಿ ಕಟ್ಟಿ, ಅಭಿವೃದ್ದಿ ನೀಲನಕ್ಷೆ ಸ್ಪಷ್ಟವಾಗಿರಲಿ

ಮೈಸೂರು ಅಭಿವೃದ್ದಿಗೆ ವಿಭಿನ್ನ ಸಲಹೆಗಳು: ಮಾದರಿ ನಗರವನ್ನು ಮುಂದಿನ ಪೀಳಿಗೆಗೆ ಗಟ್ಟಿಯಾಗಿ ಕಟ್ಟಿ, ಅಭಿವೃದ್ದಿ ನೀಲನಕ್ಷೆ ಸ್ಪಷ್ಟವಾಗಿರಲಿ

Mysore City Development: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೈಸೂರು ಅಭಿವೃದ್ದಿ ನೀಲನಕ್ಷೆ ಸಿದ್ದವಾಗುತ್ತಿದ್ದು, ಇದಕ್ಕಾಗಿ ಹಲವು ಕ್ಷೇತ್ರದವರ ಅಭಿಪ್ರಾಯ ಆಲಿಸಲಾಗಿದೆ. ಅವರು ನೀಡಿದ ಸಲಹೆಗಳು ಹೀಗಿದ್ದವು.

ಮೈಸೂರು ಅಭಿವೃದ್ದಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮೈಸೂರು ಗ್ರಾಹಕರ ಪರಿಷತ್‌ ಸಂಸ್ಥಾಪಕ ಅಧ್ಯಕ್ಷ ಭಾಮೀ ವಿ.ಶೆಣೈ ಮಾತನಾಡಿದರು.
ಮೈಸೂರು ಅಭಿವೃದ್ದಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮೈಸೂರು ಗ್ರಾಹಕರ ಪರಿಷತ್‌ ಸಂಸ್ಥಾಪಕ ಅಧ್ಯಕ್ಷ ಭಾಮೀ ವಿ.ಶೆಣೈ ಮಾತನಾಡಿದರು.

Mysore City Development: ಪಾರಂಪರಿಕ ನಗರಿ ಮೈಸೂರು ಅಭಿವೃದ್ದಿಗೆ ಈಗಿನಿಂದಲೇ ನೀಲನಕ್ಷೆ ತಯಾರಿಸಿ ಅದನ್ನು ಹಂತ ಹಂತವಾಗಿ ಜಾರಿಗೊಳಿಸಿ. ಪಾರಂಪರಿಕ ಕಟ್ಟಡವಾದ ಮಾರುಕಟ್ಟೆ ಶಿಥಿಲ ಆಗುತ್ತಿದೆ. ಅದನ್ನು ಹೊಸದಾಗಿ ಕಟ್ಟಡ ಆಗಿ ಅದು ಸಂರಕ್ಷಣೆ ಆಗಬೇಕು. ಮಾರುಕಟ್ಟೆ ಅಭಿವೃದ್ಧಿ, ಪಾರಂಪರಿಕ ಕಟ್ಟಡಗಳ ಅಭಿವೃದ್ಧಿ, ನೀರಿನ ವ್ಯವಸ್ಥೆ, ಯುಜಿಡಿ ಲೈನ್ ಸಮರ್ಪಕವಾಗಿ ಇರಬೇಕು. ಸಿಟಿ ಬಸ್ ಸ್ಟಾಂಡ್ ಹಾಗೂ ಸಬರ್ಬನ್ ಬಸ್ ಸ್ಟಾಂಡ್ ಜನರಿಗೆ ದೂರ ಇದೆ. ವಯಸ್ಸಾದವರು ಅಲ್ಲಿಗೆ ನಡೆದು ಹೋಗಲು ಸಾಧ್ಯವಿಲ್ಲ. ಮೈಸೂರು ನಗರದ ರಿಂಗ್ ರೋಡ್ ಆಚೆ ಹೆಚ್ಚು ಕಾಳಜಿ ಇಲ್ಲ. ಖಾಸಗಿ ನಿವೇಶನಗಳ ಲೇಹೌಟ್, ಮೈಸೂರು ನಗರದ ನಾಲ್ಕು ದಿಕ್ಕುಗಳಲ್ಲಿ ಬಸ್ ಸ್ಟಾಂಡ್ ಮಾಡಿ, ಇದರಿಂದ ಜನರು ಮೈಸೂರು ಮಧ್ಯೆ ಬರುವ ಒತ್ತಡ ಕಡಿಮೆ ಆಗುತ್ತದೆ. ವಾರ್ಡ್ ಗಳಲ್ಲಿ ಕ್ಲಿನಿಕ್ ಮಾಡಬೇಕು. ಶೈಕ್ಷಣಿಕವಾಗಿ ಪ್ರತಿ ವಾರ್ಡ್ ನಲ್ಲಿ ಶಾಲೆಗಳಲ್ಲಿ ಆಂಗ್ಲ ಭಾಷೆಯ ಬೋಧನೆ ಮೂಲಕ ಮಾಡಬೇಕು. ಪಾದ ಚಾರಿ ಮಾರ್ಗ ಒತ್ತುವರಿ ಆಗಿದೆ. ಅದನ್ನು ತೆರವುಗೊಳಿಸಿ.

ಹೀಗೆ ಹತ್ತು ಹಲವು ಸಲಹೆಗಳು ಮೈಸೂರಿನ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೈಸೂರು ನಗರದ ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸುವ ಸಭೆಯಲ್ಲಿ ವ್ಯಕ್ತವಾದವು.

ವಾರ್ಡ್‌ ಸಮಿತಿ ಬೇಕು

ಮೈಸೂರಿನಲ್ಲಿ ವಾರ್ಡ್ ಸಮಿತಿಗಳನ್ನು ರಚನೆ ಮಾಡಬೇಕು. ಮೈಸೂರು ನಗರ ಬಸ್ ನಿಲ್ದಾಣ ಹಾಗೂ ಗ್ರಾಮಾಂತರ ಬಸ್ ನಿಲ್ದಾಣ ಬೇರೆ ಬೇರೆ ಕಡೆ ಇದ್ದು ಎರಡು ನಿಲ್ದಾಣಗಳನ್ನು ತಲುಪಲು ಹಿರಿಯ ನಾಗರಿಕರಿಗೆ ಸಮಸ್ಯೆ ಆಗುತ್ತಿದೆ. ಇದನ್ನು ಸರಿಪಡಿಸಿ. ಮೈಸೂರಿನಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು. ಅರಮನೆಯನ್ನು ಕೇಂದ್ರ ಬಿಂದುವಾಗಿ ಸುತ್ತಮುತ್ತಲಿನ 5 ಕಿಮೀ ವ್ಯಾಪ್ತಿಯನ್ನು ಹೆಚ್ಚು ಸೌಲಭ್ಯಗಳನ್ನು ಕಲ್ಪಿಸಬೇಕು. ಹಸಿ ಕಸವನ್ನು ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ಗ್ಯಾಸ್ ಉತ್ಪಾದನೆ ಮಾಡಬಹುದಾಗಿದೆ. ವರುಣಾ ಚಾನಲ್ ಸುತ್ತ ಮುತ್ತ ಗ್ರೀನ್ ಬೆಲ್ಟ್ ಅಂತ ಮಾಡಿದ್ದು ಇದನ್ನು ಹಾಗೆ ಉಳಿಸಿಕೊಳ್ಳಬೇಕು. ಬಡ ಜನರ ಮಕ್ಕಳು ಕಂಪ್ಯೂಟರ್ ಶಿಕ್ಷಣ ಪಡೆಯಲು ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರಗಳನ್ನು ತೆರೆಯಬೇಕು. ಮೈಸೂರು ನಗರದ ಹೊರವಲಯದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಬೇಕು. ಗ್ರಂಥಾಲಯಗಳನ್ನು ಹಾಗೂ ವಾಚನಾಲಯಗಳನ್ನು ತೆರೆಯಬೇಕು. ಮೈಸೂರು ಹಳೆಯ ಡಿಸಿ ಕಚೇರಿ ಯನ್ನು ಡಿಜಿಟಲ್ ವಸ್ತು ಸಂಗ್ರಹಾಲಯವಾಗಿ ಮಾಡಬೇಕು ಎನ್ನುವ ಸಲಹೆಗಳೂ ಕೇಳಿ ಬಂದವು.

ಪಾರಂಪರಿಕ ಕಟ್ಟಡ ರಕ್ಷಿಸಿ

ಮೈಸೂರಲ್ಲಿ 18 ಪಾರಂಪರಿಕ ರಸ್ತೆಗಳು ಇವೆ. ಈ ರಸ್ತೆಗಳಲ್ಲಿ ಕಮರ್ಶಿಯಲ್ ಕಟ್ಟಡಗಳು ಬರುತ್ತಿವೆ. ಆದರೆ ಇಲ್ಲಿ ಕಮರ್ಶಿಯಲ್ ಕಟ್ಟಡಗಳು ಕಟ್ಟಲು ಅವಕಾಶ ಇಲ್ಲ ಆದ್ದರಿಂದ ಅವಕಾಶ ನೀಡಬಾರದು. 16 ಕಿಮೀ ರಾಜಕಾಲುವೆಗಳು ಇದ್ದು ಇವುಗಳ ಒತ್ತುವರಿ ಆಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು. ಮೈಸೂರು ನಗರ ಈಗಾಗಲೇ ಹೆಚ್ಚು ಬೆಳವಣಿಗೆ ಆಗಿದೆ. ಎಲ್ಲಾ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ ಆದ್ದರಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು.

ಪೌರಕಾರ್ಮಿಕರನ್ನು ಹೆಚ್ಚಿಸಿ

ಮೈಸೂರು ಸ್ವಚ್ಚ ನಗರಿ ಎಂದು 7 ಬಾರಿ ಪ್ರಶಸ್ತಿ ಪಡೆದು ಈಗ 27 ಸ್ಧಾನ ಬಂದಿದೆ. ಇದರಿಂದ ಹೆಚ್ಚು ಪೌರ ಕಾರ್ಮಿಕರ ನೇಮಕ ಮಾಡಬೇಕು. ಪೌರ ಕಾರ್ಮಿಕರ ಕೆಲಸ ಖಾಯಂ ಮಾಡಲು ಅಗತ್ಯ ಕ್ರಮ ಆಗಬೇಕು. ಪೌರ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಹೆಚ್ಚು ಆದ್ಯತೆ ಇರಬೇಕು. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕಸ ವಿಲೇವಾರಿ ವ್ಯವಸ್ಥೆ ಮಾಡಬೇಕು. ಖಾಸಗಿ ಬಡ ಬಡಾವಣೆಗಳಿಗೆ ರಾಜ ಮಹಾರಾಜರ ಹೆಸರು ಇಡಬೇಕು.ಆಟದ ಮೈದಾನಗಳು ಜಾಸ್ತಿ ಆಗಬೇಕು.. ಪ್ರಾಧಮಿಕ ಆರೋಗ್ಯ ಸೆಂಟರ್ ಗಳು ಜಾಸ್ತಿ ಆಗಬೇಕು. ವಿದ್ಯಾರ್ಧಿಗಳಿಗೆ ಹಾಸ್ಟೇಲ್ ಗಳು ದೊರೆಯುವಂತೆ ಆಗಬೇಕು‌‌. ರಾಜ ಕಾಲುವೆಗಳ ಒತ್ತುವಾರಿ ಆಗಿದೆ. ಅದರ ಬಗ್ಗೆ ಹೆಚ್ಚು ಗಮನ ಹರಿಸಿ. ಪಾರಂಪರಿಕ ನಗರಿ ಮೈಸೂರು ತನ್ನದೇ ಆದ ವೈಶಿಷ್ಟ್ಯತೆ ಇದೆ. ಮೈಸೂರು ನಗರವನ್ನು ಸ್ವಚ್ಛ ಆಗಿ ಇಡಿ.. ಹೆಚ್ಚು ಸಾಂಸ್ಕೃತಿಕ ಅಭಿವೃದ್ಧಿ ಆಗಬೇಕು.

ಚಾಮುಂಡಿ ಬೆಟ್ಟವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು. ಮೈಸೂರಿನ ನಾಲ್ಕು ದಿಕ್ಕುಗಳಲ್ಲಿ ಸಂಪರ್ಕ ಬಸ್ ನಿಲ್ದಾಣಗಳನ್ನು ಸ್ಥಾಪನೆ ಮಾಡಬೇಕು. ಮೈಸೂರು ನಗರಕ್ಕೆ ಮೆಟ್ರೋ ರೈಲು ತರಬೇಕು ಎಂಬ ಸಲಹೆ ನೀಡಲಾಯಿತು.

ಸಚಿವರು ಹೇಳಿದ್ದೇನು?

ಇದುವರೆಗೆ ಸುಮಾರು 28 ಜನ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದ್ದೀರಿ. ಉಳಿದವರು ತಮ್ಮ ಸಲಹೆಗಳನ್ನು ಬರವಣಿಗೆಯಲ್ಲಿ ನೀಡಬಹುದಾಗಿದೆ. ತಾವು ನೀಡಿರುವ ಹಾಗೂ ಮುಂದೆ ನೀಡುವ ಸಲಹೆಗಳನ್ನು ಕ್ರೋಢಿಕರಿಸಿ ಮೈಸೂರು ಅಭಿವೃದ್ಧಿಗೆ ಪೂರಕವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು. ತಮ್ಮ ಅಮೂಲ್ಯ ಸಲಹೆಗಳನ್ನು ಪರಿಗಣಿಸಿ ಮೈಸೂರು ನಗರದ ಅಭಿವೃದ್ಧಿಗೆ ವಿಸ್ಕೃತ ಯೋಜನೆ ರೂಪಿಸಲಾಗುವುದು ಎಂದವರು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ .

 

 

Whats_app_banner