ಕೆಆರ್‌ಎಸ್ ಹಿನ್ನೀರಿನಲ್ಲಿ ಇದೇ ಮೊದಲ ಬಾರಿಗೆ ಸೀಪ್ಲೇನ್ ಪ್ರದರ್ಶನ; ಭಾರತದ 4 ನಗರಗಳಲ್ಲಿ ಟ್ರಯಲ್‌ ರನ್
ಕನ್ನಡ ಸುದ್ದಿ  /  ಕರ್ನಾಟಕ  /  ಕೆಆರ್‌ಎಸ್ ಹಿನ್ನೀರಿನಲ್ಲಿ ಇದೇ ಮೊದಲ ಬಾರಿಗೆ ಸೀಪ್ಲೇನ್ ಪ್ರದರ್ಶನ; ಭಾರತದ 4 ನಗರಗಳಲ್ಲಿ ಟ್ರಯಲ್‌ ರನ್

ಕೆಆರ್‌ಎಸ್ ಹಿನ್ನೀರಿನಲ್ಲಿ ಇದೇ ಮೊದಲ ಬಾರಿಗೆ ಸೀಪ್ಲೇನ್ ಪ್ರದರ್ಶನ; ಭಾರತದ 4 ನಗರಗಳಲ್ಲಿ ಟ್ರಯಲ್‌ ರನ್

ಕೆಆರ್‌ಎಸ್ ಅಣೆಕಟ್ಟಿನಿಂದ ಸುಮಾರು 2 ಕಿಮೀ ದೂರದಲ್ಲಿ ಹಿನ್ನೀರಿನಲ್ಲಿ ಸೀಪ್ಲೇನ್ ಪ್ರದರ್ಶನ ನಡೆಯಲಿದೆ. ನೀರಿನ ಲಭ್ಯತೆ ಆಧಾರದ ಮೇಲೆ ಸ್ಥಳವನ್ನು ಅಂತಿಮಗೊಳಿಸಲಾಗಿದೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸೀಪ್ಲೇನ್ ಪ್ರದರ್ಶನ ನಡೆಯುತ್ತಿದ್ದು, ವಿಜಯವಾಡದಿಂದ ಮೈಸೂರಿನತ್ತ ಸೀಪ್ಲೇನ್‌ ಬರಲಿದೆ.

ಕೆಆರ್‌ಎಸ್ ಹಿನ್ನೀರಿನಲ್ಲಿ ಇದೇ ಮೊದಲ ಬಾರಿಗೆ ಸೀಪ್ಲೇನ್ ಪ್ರದರ್ಶನ
ಕೆಆರ್‌ಎಸ್ ಹಿನ್ನೀರಿನಲ್ಲಿ ಇದೇ ಮೊದಲ ಬಾರಿಗೆ ಸೀಪ್ಲೇನ್ ಪ್ರದರ್ಶನ

ಮೈಸೂರು: ಕೆಆರ್‌ಎಸ್ ಹಿನ್ನೀರಿನಲ್ಲಿ ಐತಿಹಾಸಿಕ ಸೀಪ್ಲೇನ್ ಪ್ರದರ್ಶನ ನಡೆಯಲಿದೆ. ಭಾರತದಲ್ಲಿ ಒಟ್ಟು ನಾಲ್ಕು ಸ್ಥಳಗಳಲ್ಲಿ ಈ ಪ್ರಾಯೋಗಿಕ ಓಡಾಟ ನಡೆಯುತ್ತಿದೆ. ವಿಜಯವಾಡ, ಮೈಸೂರು, ಲಕ್ಷದ್ವೀಪ ಮತ್ತು ಶಿಲ್ಲಾಂಗ್‌ನಲ್ಲಿ ಸೀಪ್ಲೇನ್ ಪ್ರದರ್ಶನ ನಡೆಯುತ್ತಿದ್ದು, ಇದಕ್ಕಾಗಿ ಕೆನಡಾದ ಡಿ ಹ್ಯಾವಿಲ್ಯಾಂಡ್ ಟ್ವಿನ್ ಅಟರ್ ಕ್ಲಾಸಿಕ್ 300 ವಿಮಾನ ಭಾರತಕ್ಕೆ ಆಗಮಿಸಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಅವರು, ಭಾರತದಲ್ಲಿ ಸೀಪ್ಲೇನ್ ಕಾರ್ಯಾಚರಣೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ, ಸುಮಾರು ಎರಡೂವರೆ ತಿಂಗಳ ನಂತರ, ಕರ್ನಾಟಕದಲ್ಲೂ ಸೀಪ್ಲೇನ್ ಪ್ರದರ್ಶನ ನಡೆಯಲಿದೆ. ನವೆಂಬರ್‌ 10ರ ಭಾನುವಾರ ಪ್ರದರ್ಶನ ನಡೆಯಲಿದೆ.

ಮೂಲಗಳ ಪ್ರಕಾರ, ಈ ಪ್ರದರ್ಶನ ಸ್ಥಳವು ಕೆಆರ್‌ಎಸ್ ಅಣೆಕಟ್ಟಿನಿಂದ ಸುಮಾರು 2 ಕಿಮೀ ದೂರದಲ್ಲಿದೆ. ಸೀಪ್ಲೇನ್ ಕಾರ್ಯಾಚರಣೆಗೆ ಸೂಕ್ತ ಸ್ಥಳ ಎಂದು ಪರಿಗಣಿಸಲಾಗಿದೆ. ಇಲ್ಲಿ ವರ್ಷವಿಡೀ ನೀರಿನ ಲಭ್ಯತೆ, ನೀರಿನ ಆಳ ಮತ್ತು ಅಲೆಗಳ ಆಧಾರದ ಮೇಲೆ ಸ್ಥಳವನ್ನು ಅಂತಿಮಗೊಳಿಸಲಾಗಿದೆ. ಅಣೆಕಟ್ಟಿನ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸ್ಥಳವನ್ನು ಅಂತಿಮಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸೀಪ್ಲೇನ್ ಪ್ರದರ್ಶನ ನಡೆಯುತ್ತಿದೆ. ತೇಲುವ ಸೇತುವೆಗಳು ಮತ್ತು ಪಾರ್ಕಿಂಗ್ ಸ್ಥಳ ಸೇರಿದಂತೆ ಮೂಲ ಸೌಕರ್ಯಗಳು ಸಿದ್ಧವಾದ ನಂತರ ಇಲ್ಲಿ ಈ ಚಟುವಟಿಕೆಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಈ ಕುರಿತು ಅಧಿಕಾರಿಗಳು ತಿಳಿಸಿದ್ದಾರೆ. ಮೈಸೂರು ಸಮೀಪದ ಹಿನ್ನೀರಿನ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಬಳಿ ಸೀಪ್ಲೇನ್‌ ಕಾರ್ಯಾಚರಣೆಗಾಗಿ ಗುರುತಿಸಲಾಗಿದೆ.

ವಿಜಯವಾಡಕ್ಕೆ ಮೈಸೂರಿಗೆ ಬರಲಿದೆ ಸೀಪ್ಲೇನ್

ಮೂಲಗಳ ಪ್ರಕಾರ, ಮಂಡ್ಯ ಜಿಲ್ಲೆಯ ವಿವಿಧ ಸರ್ಕಾರಿ ಸಂಸ್ಥೆಗಳು ಸೀಪ್ಲೇನ್‌ ಪ್ರದರ್ಶನದ ಯಶಸ್ಸಿಗೆ ಕಾರ್ಯನಿರ್ವಹಿಸುತ್ತಿವೆ. ಒಂದೇ ವಿಮಾನದಲ್ಲಿ ಪ್ರದರ್ಶನ ನಡೆಯಲಿದೆ. ತೆಲಂಗಾಣದ ವಿಜಯವಾಡದಿಂದ ಆಗಮಿಸಲಿರುವ ಜಲವಿಮಾನವನ್ನು ಸ್ವಾಗತಿಸಲು ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿದೆ. ದೇಶದಲ್ಲಿ ಸೀಪ್ಲೇನ್ ಸೇವೆಗಳು ಪ್ರಾರಂಭವಾಗುವ ನಗರಗಳಿಗೆ ಅಹಮದಾಬಾದ್‌ನಿಂದ ಆಗಮಿಸಲಿವೆ. ಮೊದಲು ವಿಜಯವಾಡಕ್ಕೆ ಬಂದು ಅಲ್ಲಿಂದ ಮೈಸೂರಿಗೆ ಬರಲಿದೆ. ಇಲ್ಲಿಂದ ಲಕ್ಷದ್ವೀಪಕ್ಕೆ ಪ್ರಯಾಣಿಸುತ್ತದೆ. ನಂತರ ಶಿಲ್ಲಾಂಗ್‌ಗೆ ಹೋಗಲಿದೆ.

ಭರದ ಸಿದ್ಧತೆ

ಪ್ರದರ್ಶನಕ್ಕೆ ಸಿದ್ಧತೆಯಾಗಿ ಮೂರು ಬೋಟ್‌ಗಳು ಮತ್ತು 15 ಲೈಫ್ ಜಾಕೆಟ್‌ಗಳನ್ನು ಸಿದ್ಧಪಡಿಸಲಾಗಿದೆ. ಸೀಪ್ಲೇನ್ ಚಟುವಟಿಕೆ ಆರಂಭಿಸಿದರೆ, ಮೇಲುಕೋಟೆ, ಶ್ರೀರಂಗಪಟ್ಟಣ ಮತ್ತು ಕೆಆರ್‌ಎಸ್ ಅಣೆಕಟ್ಟು ಸೇರಿದಂತೆ ಹತ್ತಿರದ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ಸಿಗಬಹುದು ಎಂದು ಪಾಂಡವಪುರ ತಹಶೀಲ್ದಾರ್ ಎಸ್.ಸಂತೋಷ್ ತಿಳಿಸಿದ್ದಾರೆ.

ಈ ಹಿಂದೆ ವಿ ಸೋಮಣ್ಣ ಅವರು ಮೂಲಸೌಕರ್ಯ ಸಚಿವರಾಗಿದ್ದಾಗ 2022ರಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸಲು ಕೆಆರ್‌ಎಸ್ ಅಣೆಕಟ್ಟು ಆವರಣದಲ್ಲಿ ನೀರಿನ ಏರೋಡ್ರೋಮ್ ಅನ್ನು ಯೋಜಿಸಲಾಗಿತ್ತು.

Whats_app_banner