ಇತಿಹಾಸದ ಪುಟ ಸೇರುತ್ತಿರುವ ಮೈಸೂರಿನ ಮತ್ತೊಂದು ಹೆಸರಾಂತ ಚಿತ್ರಮಂದಿರ; ಸರಸ್ವತಿ ಥಿಯೇಟರ್​ ನೆಲಸಮಗೊಳಿಸಲು ಕಾರಣವೇನು?
ಕನ್ನಡ ಸುದ್ದಿ  /  ಕರ್ನಾಟಕ  /  ಇತಿಹಾಸದ ಪುಟ ಸೇರುತ್ತಿರುವ ಮೈಸೂರಿನ ಮತ್ತೊಂದು ಹೆಸರಾಂತ ಚಿತ್ರಮಂದಿರ; ಸರಸ್ವತಿ ಥಿಯೇಟರ್​ ನೆಲಸಮಗೊಳಿಸಲು ಕಾರಣವೇನು?

ಇತಿಹಾಸದ ಪುಟ ಸೇರುತ್ತಿರುವ ಮೈಸೂರಿನ ಮತ್ತೊಂದು ಹೆಸರಾಂತ ಚಿತ್ರಮಂದಿರ; ಸರಸ್ವತಿ ಥಿಯೇಟರ್​ ನೆಲಸಮಗೊಳಿಸಲು ಕಾರಣವೇನು?

Saraswathi Theatre: ಮೈಸೂರಿನ ಮತ್ತೊಂದು ಹೆಸರಾಂತ ಚಿತ್ರಮಂದಿರ ಇತಿಹಾಸದ ಪುಟ ಸೇರುತ್ತಿದೆ. 31 ವರ್ಷಗಳ ಸಿನಿಪ್ರಿಯರನ್ನು ರಂಜಿಸಿದ್ದ ಸರಸ್ವತಿ ಥಿಯೇಟರ್​ ನೆಲಸಮಗೊಳಿಸಲು ಕಾರಣವೇನು? ಇಲ್ಲಿದೆ ವಿವರ.

ಇತಿಹಾಸದ ಪುಟ ಸೇರುತ್ತಿರುವ ಮೈಸೂರಿನ ಮತ್ತೊಂದು ಹೆಸರಾಂತ ಚಿತ್ರಮಂದಿರ; ಸರಸ್ವತಿ ಥಿಯೇಟರ್​ ನೆಲಸಮಗೊಳಿಸಲು ಕಾರಣವೇನು?
ಇತಿಹಾಸದ ಪುಟ ಸೇರುತ್ತಿರುವ ಮೈಸೂರಿನ ಮತ್ತೊಂದು ಹೆಸರಾಂತ ಚಿತ್ರಮಂದಿರ; ಸರಸ್ವತಿ ಥಿಯೇಟರ್​ ನೆಲಸಮಗೊಳಿಸಲು ಕಾರಣವೇನು?

ಮೈಸೂರು: ನಗರದ ಪ್ರಖ್ಯಾತ ಸರಸ್ವತಿ ಚಿತ್ರಮಂದಿರ (Saraswathi Theatre) ಇದೀಗ ನೆಲಸಮಗೊಳ್ಳುತ್ತಿದೆ. ಈಗಾಗಲೇ ಮೈಸೂರಿನ ಹೆಸರಾಂತ ಚಿತ್ರಮಂದಿರಗಳಾಗಿದ್ದ ರಣಜಿತ್, ಅಪೇರಾ, ಲಕ್ಷ್ಮಿ, ಗಣೇಶ, ಒಲಂಪಿಯಾ, ಚಾಮುಂಡೇಶ್ವರಿ, ಶಾಂತಲಾ ಸೇರಿದಂತೆ ಹಲವು ನೆಲಸಮಗೊಂಡು ಇತಿಹಾಸದ ಪುಟ ಸೇರಿವೆ. ಅವುಗಳ ಸಾಲಿಗೆ ಇದೀಗ ಸರಸ್ವತಿ ಚಿತ್ರಮಂದಿರ ಕೂಡ ಸೇರ್ಪಡೆ ಆಗಿರುವುದು ವಿಪರ್ಯಾಸವೆನಿಸಿದೆ. ಹಲವಾರು ಚಿತ್ರಗಳ ಯಶಸ್ವಿ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದ ಸರಸ್ವತಿ ಚಿತ್ರಮಂದಿರ ಇನ್ನು ನೆನಪು ಮಾತ್ರ. ಮೈಸೂರಿಮ ಸರಸ್ವತಿಪುರಂ ಬಡಾವಣೆಯಲ್ಲಿರುವ ಸರಸ್ವತಿ‌ ಚಿತ್ರಮಂದಿರ, ಸಿನಿ ಪ್ರಿಯರ ಹಾಗೂ ನಟರಿಗೆ ಅಚ್ಚುಮೆಚ್ಚಿನದ್ದಾಗಿತ್ತು.

ಕನ್ನಡದ ಮೇರು ನಟರಾದ ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಪುನೀತ್ ರಾಜಕುಮಾರ್, ಶಿವರಾಜ್ ಕುಮಾರ್, ದರ್ಶನ್, ಸುದೀಪ್ ಸೇರಿ ಅನೇಕ ದಿಗ್ಗಜ ನಟರ ಸಿನಿಮಾಗಳು ಇಲ್ಲಿ ಭರ್ಜರಿ ಯಶಸ್ವಿ ಪ್ರದರ್ಶನ‌ ಕಂಡಿದ್ದವು. ಈ ಹಿಂದೆ ದಿಗ್ಗಜ ನಟರು ಭೇಟಿ ನೀಡಿ ಅಭಿಮಾನಿಗಳ ಜತೆ ಕುಳಿತು ತಮ್ಮ ಸಿನಿಮಾ ವೀಕ್ಷಿಸಿದ್ದರು. ಇದೀಗ ಕಳೆದ ಹಲವು ದಿನಗಳಿಂದ ಸರಸ್ವತಿ ಚಿತ್ರಮಂದಿರ ನೆಲಸಮದ ಕಾರ್ಯ ಪ್ರಗತಿಯಲ್ಲಿದೆ. ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ‌ನೆಲಸಮಗೊಳ್ಳಲಿದೆ. ಕುಟುಂಬ ಸಮೇತ ಆಗಮಿಸುತ್ತಿದ್ದ ಸಿನಿ ರಸಿಕರು ತಮ್ಮ ನೆಚ್ಚಿನ ಚಿತ್ರಮಂದಿರ ತಮ್ಮ ಕಣ್ಣೆದುರೇ ನೆಲಸಮವಾಗುತ್ತಿರುವುದಕ್ಕೆ ಬೇಸರಗೊಂಡಿದ್ದಾರೆ.

ಸರಸ್ವತಿ ಥಿಯೇಟರ್​ ನೆಲಸಮಗೊಳಿಸಲು ಕಾರಣವೇನು?

ಮೈಸೂರಿನಲ್ಲಿರುವ ಇನ್ನುಳಿದ ಚಲನಚಿತ್ರ ಮಂದಿರಗಳನ್ನಾದರೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡ ಚಲನಚಿತ್ರರಂಗ ಹಾಗು ನಟ ನಟಿಯರು ಮುಂದಾಗಲಿ ಎಂಬುದು ಸಿನಿ ಪ್ರಿಯರ ನಿರೀಕ್ಷೆಯಾಗಿದೆ. ತೀವ್ರ ಆರ್ಥಿಕ ಸಮಸ್ಯೆ ಉಂಟಾದ ಹಿನ್ನೆಲೆ ಸರಸ್ವತಿ ಥಿಯೇಟರ್​ ಜಾಗವನ್ನು ಬೆಂಗಳೂರಿನ ವ್ಯಕ್ತಿಯೋರ್ವರಿಗೆ ಮಾರಾಟ ಮಾಡಲಾಗಿದೆ. ಈ ಜಾಗ ಖರೀದಿಸಿದ ಬೆಂಗಳೂರಿನ ವ್ಯಕ್ತಿ ಚಿತ್ರಮಂದಿರ ಕೆಡವುತ್ತಿದ್ದಾರೆ. 1990ರಲ್ಲಿ ಉದ್ಘಾಟನೆಗೊಂಡ ಈ ಚಿತ್ರಮಂದಿರ 2021ರವರೆಗೂ ಅಂದರೆ 31 ವರ್ಷಗಳ ಕಾಲ ಯಶಸ್ವಿ ಚಲನಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಸಿನಿಮಾ ರಸಿಕರನ್ನು ರಂಜಿಸಿತ್ತು.

ಇಂತಹ ಪ್ರತಿಷ್ಠಿತ ಚಿತ್ರಮಂದಿರ ಕೋವಿಡ್ ಕಾರಣದಿಂದಾಗಿ ಆರ್ಥಿಕ ಸಮಸ್ಯೆಯ ಸಂಕಷ್ಟದ ಸುಳಿಗೆ ಸಿಲುಕಿತ್ತು. ನಂತರದ ದಿನಗಳಲ್ಲೂ ಚೇತರಿಸಿಕೊಳ್ಳಲಾಗದೆ ಯಾವುದೇ ಸಿನಿಮಾಗಳು ಪ್ರದರ್ಶನ ಕಾಣಲಿಲ್ಲ. ಇದರಿಂದ ಮತ್ತಷ್ಟು ಸಂಕಷ್ಟಕ್ಕೀಡಾದ ಸರಸ್ವತಿ ಚಿತ್ರಮಂದಿರದ ಮಾಲೀಕರು ಬೇರೆ ದಾರಿ ಕಾಣದೇ ಕಡೆಗೆ ಚಿತ್ರಮಂದಿರದ ಜಾಗವನ್ನು ಮಾರಾಟ ಮಾಡಿದ್ದಾರೆ. ಪರಿಣಾಮ ಸರಸ್ವತಿ ಚಲನಚಿತ್ರಮಂದಿರ ನೆಲಸಮಗೊಂಡು ಇತಿಹಾಸದ ಪುಟ ಸೇರುತ್ತಿದೆ.

ವಕ್ಫ್ ಬೋರ್ಡ್ ಪಾಲಾದ ರೈತರ ಜಮೀನು; ಪ್ರತಿಭಟನೆ

ವಕ್ಫ್‌ ಮಂಡಳಿ ರೈತರ ಭೂಮಿ ಕಬಳಿಸುತ್ತಿರುವ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೈಸೂರಿನ ಮೈಮುಲ್ ಕಛೇರಿ ಮುಂಭಾಗ ಬಿಜೆಪಿ ಘಟಕವು ಪ್ರತಿಭಟನೆ ನಡೆಸಿದೆ. ಇಂದು ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಿರುವ ಬಿಜೆಪಿ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದೆ. ಇತ್ತ ಸಿಎಂ ಸಿದ್ದರಾಮಯ್ಯ ತವರಿನಲ್ಲೂ ಪ್ರತಿಭಟನೆ ನಡೆಯುತ್ತಿದ್ದು, ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಲ್ಯಾಂಡ್ ಜಿಹಾದಿ, ಹಿಂದೂ ವಿರೋಧಿ, ಮಂದಿರ ವಿರೋಧಿ, ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದ್ದಾರೆ. ವಕ್ಫ್ ಕಾಯ್ದೆ ತಿದ್ದುಪಡಿಗೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಮೈಸೂರು ನಗರ ಬಿಜೆಪಿ ಅಧ್ಯಕ್ಷ ಎಲ್ ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಎಲ್‌ ಆರ್‌ ಮಹದೇವಸ್ವಾಮಿ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅನಿಲ್ ಥಾಮಸ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.

Whats_app_banner