ಮೈಸೂರು ದಸರಾದಲ್ಲಿ ಜಂಬೂ ಸವಾರಿ ಸಾಗುವ ಮಾರ್ಗ ಯಾವುದು? ಅರಮನೆಯಿಂದ ಬನ್ನಿ ಮಂಟಪದವರೆಗಿನ ಚಿತ್ರಣ ಇಲ್ಲಿದೆ
ಮೈಸೂರು ದಸರಾ ಜಂಬೂ ಸವಾರಿಗೆ ಪುಷ್ಪಾರ್ಚನೆ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಚಾಲನೆ ನೀಡಿದ್ದಾರೆ. ಜಂಬೂ ಸವಾರಿ ಮೈಸೂರು ಅರಮನೆಯಿಂದ ಎಲ್ಲಿಯವರಿಗೆ ಸಾಗುತ್ತೆ, ಪ್ರಮುಖ ವೃತ್ತಗಳು ಹಾಗೂ ಇತರೆ ಮಾಹಿತಿ ಇಲ್ಲಿದೆ.
ಮೈಸೂರು ದಸರಾ: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ನಾಡ ದೊರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಂಜೂಸವಾರಿಗೆ ಪುರ್ಷಾರ್ಚನೆ ಮೂಲಕ ಇಂದು (ಅಕ್ಟೋಬರ್ 12, ಶನಿವಾರ) ಸಂಜೆ ಚಾಲನೆ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಮೈಸೂರು ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಹಾಗೂ ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಸಿಎಂ, ಡಿಸಿಎಂಗೆ ಸಾಥ್ ನೀಡಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಿದರು.
ಮೈಸೂರರು ಅರಮನೆ ಆವರಣದಲ್ಲಿ ನೆರೆದಿದ್ದ ಸಾವಿರಾರು ಜನರ ಹರ್ಷೋದ್ಘಾರಗಳ ನಡುವೆ ಚಾಮುಂಡೇಶ್ವರಿ ಉತ್ಸವ ಮೂರ್ತಿ ಇರುವ ಅಂಬಾರಿಯನ್ನು ಹೊತ್ತ ಕ್ಯಾಪ್ಟನ್ ಅಭಿಮನ್ಯು ಅರಮನೆಯಿಂದ ಹೊರಟು ಸುಮಾರು 5 ಕಿಲೋ ಮೀಟರ್ ವರೆಗೆ ಸಾಗಿ ಬನ್ನಿ ಮಂಟಪವನ್ನು ತಲುಪಲಿದ್ದಾನೆ. ಈ ಮಾರ್ಗದ ಚಿತ್ರಣವನ್ನು ನೋಡುವುದಾದರೆ ಅರಮನೆಯಿಂದ ಹೊರಟು ಜಯಚಾಮರಾಜ ವೃತ್ತ, ಕೆಆರ್ ವೃತ್ತ, ಸಯ್ಯಾಜಿರಾವ್ ರಸ್ತೆ, ಆರ್ಯುವೇದ ಆಸ್ಪತ್ರೆ ವೃತ್ತ, ತಿಲಕ್ ನಗರ, ಆರ್‌ಎಂಸಿ ವೃತ್ತ, ಜಂಬೂ ಬಜಾರ್, ಹೈವೇ ರೋಡ್, ಬನ್ನಿ ಮಂಟಪ ಹಾಗೂ ಅಂತಿಮವಾಗಿ ಬನ್ನಿ ಮಂಟಪ ಮೈದಾನವನ್ನು ಜಂಬೂ ಸವಾರಿ ತಲುಪಲಿದೆ.
ಬನ್ನಿ ಮಂಟಪ ಮೈದಾನದಲ್ಲಿ ಚಾಮುಂಡಿ ಉತ್ಸವ ಮೂರ್ತಿಯನ್ನು ಇಳಿಸಲಾಗುತ್ತದೆ. ಪ್ರತ್ಯೇಕ ವಾಹನದಲ್ಲಿ ಚಾಮುಂಡೇಶ್ವರಿ ದೇವಾಲಯಕ್ಕೆ ತಲುಪಿಸಲಾಗುತ್ತದೆ. ಬನ್ನಿ ಮಂಟಪ ಮೈದಾನದಿಂದಲೇ ಅಂಬಾರಿಯನ್ನು ಅರಮನೆಗೆ ಬಿಗಿ ಭದ್ರತೆಯಲ್ಲಿ ವಾಪಸ್ ತರಲಾಗುತ್ತದೆ.