500 ರೂ. ಸಾಲ ವಾಪಸ್‌ ಕೇಳಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಐವರನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು
ಕನ್ನಡ ಸುದ್ದಿ  /  ಕರ್ನಾಟಕ  /  500 ರೂ. ಸಾಲ ವಾಪಸ್‌ ಕೇಳಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಐವರನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು

500 ರೂ. ಸಾಲ ವಾಪಸ್‌ ಕೇಳಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಐವರನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು

ಕೊಟ್ಟ ಸಾಲ ವಾಪಸ್‌ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರನ್ನು ಐವರು ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿರುವ ಘಟನೆ ಹಳೆ ಹುಬ್ಬಳ್ಳಿಯಲ್ಲಿ ನಡೆದಿದೆ. ಪೊಲೀಸರು, ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಅಸ್ಲಾಂ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಲ ವಾಪಸ್‌ ಕೇಳಿದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಐವರು ಆರೋಪಿಗಳು
ಸಾಲ ವಾಪಸ್‌ ಕೇಳಿದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಐವರು ಆರೋಪಿಗಳು

ಹುಬ್ಬಳ್ಳಿ: ಹಣದ ವಿಚಾರವಾಗಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಐವರನ್ನು ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಲಾಂ, ಜಮೀರ್, ಸಾಧಿಕ್, ಅಲ್ತಾಫ್ ಮತ್ತು ಇರ್ಫಾನ್ ಎಂಬುವರೇ ಬಂಧಿತರಾಗಿದ್ದಾರೆ. ಹಳೆ ಹುಬ್ಬಳ್ಳಿಯ ಆನಂದ ನಗರದ ಮಹಮ್ಮದ್ ಮೊರಬ ಎಂಬುವರೇ ಈ ಐವರಿಂದ ಹಲ್ಲೆಗೆ ಒಳಗಾದ ವ್ಯಕ್ತಿ

ಹಣದ ವಿಚಾರವಾಗಿ ಕೊಲೆಗೆ ಯತ್ನ

ಈ ಐವರು ಆರೋಪಿಗಳು ಹಾಗೂ ಮಹಮ್ಮದ್‌ ಮೊರಬ ನಡುವೆ ಹಣದ ವಿಚಾರವಾಗಿ ಜಗಳ ನಡೆದಿದೆ ಎನ್ನಲಾಗಿದೆ. ಆರೋಪಿಗಳಲ್ಲಿ ಒಬ್ಬನಾದ ಅಸ್ಲಾಂ, ಮಹಮ್ಮದ್‌ ಮೊರಬ್‌ ಅವರಿಂದ 500 ರೂ ಸಾಲ ಪಡೆದಿದ್ದಾನೆ. ತಾವು ಕೊಟ್ಟ ಹಣವನ್ನು ವಾಪಸ್‌ ನೀಡುವಂತೆ ಮಹಮ್ಮದ್‌, ಅಸ್ಲಾಂ ಬಳಿ ಕೇಳಿದ್ದಾರೆ. ಆದರೆ ಆತ ಇಂದು ನಾಳೆ ಎಂದು ತಪ್ಪಿಸಿಕೊಳ್ಳುತ್ತಲೇ ಇದ್ದ ಕಾರಣಕ್ಕೆ ಬೇಸತ್ತ ಮಹಮ್ಮದ್‌ ಶನಿವಾರ ಹಳೆ ಹುಬ್ಬಳ್ಳಿಯ ರೆಹಮತ್ ನಗರದ ಮೈದಾನಕ್ಕೆ ಕರೆಸಿಕೊಂಡಿದ್ದಾರೆ. ಆ ಸಮಯದಲ್ಲಿ ಮತ್ತೆ ಇಬ್ಬರ ಮಧ್ಯೆ ಜಗಳವಾಗಿದೆ. ಈ ಸಮಯದಲ್ಲಿ ಇಸ್ಲಾಂ ಜೊತೆ ಬಂದಿದ್ದ ಸಾಧಿಕ್, ಅಲ್ತಾಫ್ ಹಾಗೂ ಇರ್ಫಾನ್ ಮಹಮ್ಮದ್ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆಗ ಅಸ್ಲಾಂ, ಮಹಮ್ಮದ್‌ ಅವರ ಬೆನ್ನು, ಎದೆಗೆ ಚಾಕುವಿನಿಂದ ಇರಿದಿದ್ದಾರೆ. ನಂತರ ಜಮೀರ್ ಸಹ ಕಾಲಿಗೆ ಚಾಕು ಇರಿದು ಹಲ್ಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ಅಸ್ಲಾಂ ಅವರನ್ನು ಕೆಎಂಸಿಆರ್‌ಐಗೆ ದಾಖಲಿಸಲಾಗಿದೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪತ್ನಿಯನ್ನು ಕೊಂದು ನೀರಿನ ಸಂಪಿಗೆ ಎಸೆದಿದ್ದಾತ ಅರೆಸ್ಟ್‌

ರಾಜ್ಯದಲ್ಲಿ ಪ್ರತಿದಿನ ಕೊಲೆ ಯತ್ನ, ಕೊಲೆ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಚೌಡಪ್ಪ ಎಂಬಾತ ತನ್ನ ಪತ್ನಿ ಬಸಮ್ಮಣಿಯನ್ನು ಕೊಲೆ ಮಾಡಿ ನೀರಿನ ಸಂಪಿಗೆ ಎಸೆದಿದ್ದ ಘಟನೆ ಮೈಸೂರಿನ ಆಲನಹಳ್ಳಿ ಬಡಾವಣೆಯ 5ನೇ ಕ್ರಾಸ್‌ನಲ್ಲಿ ನಡೆದಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬಹಳ ವರ್ಷಗಳಿಂದ ಗಂಡ ಹೆಂಡತಿಗೆ ನಿರಂತರ ಜಗಳ ನಡೆಯುತ್ತಲೇ ಇತ್ತು. ಅತ್ತೆ ಕೂಡಾ ಸೊಸೆಗೆ ಕಿರುಕುಳ ಕೊಡುತ್ತಲೇ ಇದ್ದಳು ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಸಮ್ಮಣಿ ತವರು ಮನೆಯವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಚೌಡಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಯೋಗ ಶಿಕ್ಷಕಿ ಕೊಲೆ ವಿಫಲ ಯತ್ನ

ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನ ಯೋಗ ಶಿಕ್ಷಕಿಯೊಬ್ಬರನ್ನು ಪಾಪಿಗಳು ಅಪಹರಿಸಿ ಕೊಲೆಗೆ ಯತ್ನಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಪತಿಯೊಂದಿಗೆ ಸಲುಗೆಯಿಂದ ಇದ್ದಾಳೆ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಸುಪಾರಿ ನೋಡಿ ಯೋಗ ಶಿಕ್ಷಕಿಯೊಬ್ಬರನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆಗೆ ಯತ್ನಿಸಿದ್ದಾರೆ. ಗಂಭೀರ ಹಲ್ಲೆ ಮಾಡಿದ್ದರಿಂದ ಯೋಗ ಶಿಕ್ಷಕಿ ಅರ್ಚನಾ ಪ್ರಜ್ಞೆ ತಪ್ಪಿದ್ದಾರೆ. ಕೊನೆಗೆ ಪ್ರಾಣಾಯಾಮ ಅಭ್ಯಾಸ ಮಾಡುತ್ತಿದ್ದರಿಂದ ಸತ್ತಂತೆ ನಟಿಸಿದ್ದಾರೆ. ಅವರು ಸತ್ತಿದ್ದಾರೆ ಎಂದು ತಿಳಿದ ಆರೋಪಿಗಳು ಅರಣ್ಯಪ್ರದೇಶದಲ್ಲಿ ಗುಂಡಿ ತೆಗೆದು ಆಕೆಯನ್ನು ಮುಚ್ಚಿ ಪರಾರಿಯಾಗಿದ್ದಾರೆ. ಕೊನೆಗೆ ಅರ್ಚನಾ ಅಲ್ಲಿಂದ ಹೊರ ಬಂದು ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

Whats_app_banner