ಮಹಾಲಕ್ಷ್ಮೀ ಕೊಲೆ ಪ್ರಕರಣ; ನೇಪಾಳ ಮೂಲದ ಕನ್ನಡತಿ ಕೊಲೆಗೈದು 50 ಪೀಸ್ ಮಾಡಿದ್ದ ಪ್ರಮುಖ ಆರೋಪಿ ಒಡಿಶಾದಲ್ಲಿ ಸೂಸೈಡ್
ಕನ್ನಡ ಸುದ್ದಿ  /  ಕರ್ನಾಟಕ  /  ಮಹಾಲಕ್ಷ್ಮೀ ಕೊಲೆ ಪ್ರಕರಣ; ನೇಪಾಳ ಮೂಲದ ಕನ್ನಡತಿ ಕೊಲೆಗೈದು 50 ಪೀಸ್ ಮಾಡಿದ್ದ ಪ್ರಮುಖ ಆರೋಪಿ ಒಡಿಶಾದಲ್ಲಿ ಸೂಸೈಡ್

ಮಹಾಲಕ್ಷ್ಮೀ ಕೊಲೆ ಪ್ರಕರಣ; ನೇಪಾಳ ಮೂಲದ ಕನ್ನಡತಿ ಕೊಲೆಗೈದು 50 ಪೀಸ್ ಮಾಡಿದ್ದ ಪ್ರಮುಖ ಆರೋಪಿ ಒಡಿಶಾದಲ್ಲಿ ಸೂಸೈಡ್

Mahalaxmi Murder Case: ನೇಪಾಳ ಮೂಲದ ಕನ್ನಡತಿ ಮಹಾಲಕ್ಷ್ಮೀ ಕೊಲೆ ಪ್ರಕರಣದ ಪ್ರಮುಖ ಆರೋಪಿ ಒಡಿಶಾದಲ್ಲಿ ನೇಣಿಗೆ ಶರಣಾಗಿದ್ದಾನೆ. ಪ್ರಕರಣ ತೀವ್ರಗೊಂಡ ಬೆನ್ನಲ್ಲೇ ಇನ್ನೇನು ಬಂಧನಕ್ಕೆ ಒಳಗಾಗುತ್ತೇನೆ ಎಂಬ ಭೀತಿಯಲ್ಲಿ ಆರೋಪಿ ಮುಕ್ತಿ ರಂಜನ್ ರಾಯ್ ಸೂಸೈಡ್ ಮಾಡಿಕೊಂಡಿದ್ದಾನೆ.

ಮಹಾಲಕ್ಷ್ಮೀ ಕೊಲೆ ಪ್ರಕರಣ; ನೇಪಾಳ ಮೂಲದ ಕನ್ನಡತಿ ಕೊಲೆಗೈದು 50 ಪೀಸ್ ಮಾಡಿದ್ದ ಪ್ರಮುಖ ಆರೋಪಿ ಒಡಿಶಾದಲ್ಲಿ ಸೂಸೈಡ್
ಮಹಾಲಕ್ಷ್ಮೀ ಕೊಲೆ ಪ್ರಕರಣ; ನೇಪಾಳ ಮೂಲದ ಕನ್ನಡತಿ ಕೊಲೆಗೈದು 50 ಪೀಸ್ ಮಾಡಿದ್ದ ಪ್ರಮುಖ ಆರೋಪಿ ಒಡಿಶಾದಲ್ಲಿ ಸೂಸೈಡ್

ಬೆಂಗಳೂರು: ನಗರದ ವೈಯಾಲಿಕಾವಲ್​ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಮಹಾಲಕ್ಷ್ಮೀ ಕೊಲೆ ಪ್ರಕರಣ (Mahalaxmi Murder Case) ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನೇಪಾಳ ಮೂಲದ ಕನ್ನಡತಿಯನ್ನು ಹತ್ಯೆಗೈದು 50 ತುಂಡು ಮಾಡಿ ಪ್ರಿಡ್ಜ್​ನಲ್ಲಿಟ್ಟಿದ್ದ ಆರೋಪಿ ಒಡಿಶಾದಲ್ಲಿದ್ದಾನೆ ಎಂಬ ಪೊಲೀಸರಿಗೆ ಗೊತ್ತಾಗಿತ್ತು. ಆದರೆ, ಇನ್ನೇನು ಬಂಧಿಸಬೇಕು ಎನ್ನುವಷ್ಟಲ್ಲಿ ಶಂಕಿತ ಆರೋಪಿ ಸೂಸೈಡ್ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ನೇಣಿಗೆ ಶರಣಾದ ಆರೋಪಿ ಹೆಸರು ಮುಕ್ತಿ ರಂಜನ್ ರಾಯ್ ಎಂದು ಹೇಳಲಾಗಿದೆ.

ಮಹಾಲಕ್ಷ್ಮೀಯನ್ನು ಘನಘೋರವಾಗಿ ಕೊಲೆಗೈದ ಮುಕ್ತಿ ರಂಜನ್ ಬೆಂಗಳೂರಿನಿಂದ ಪರಾರಿಯಾಗಿದ್ದ. ಆರೋಪಿಯನ್ನು ಪತ್ತೆ ಹಚ್ಚಿದ ನಂತರ ಬಂಧಿಸಲು ಬೆಂಗಳೂರು ಒಡಿಶಾಗೆ ತೆರಳಿದ್ದಾರೆ. ಕೊಲೆ ಬಳಿಕ ಪಶ್ಚಿಮ ಬಂಗಾಳಕ್ಕೆ ಹೋಗಿದ್ದಾನೆ ಎಂದು ವರದಿಯಾಗಿತ್ತು. ತದ ನಂತರ ಆರೋಪಿ ಒಡಿಶಾದಲ್ಲಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಬಂದಿತ್ತು. ಪೊಲೀಸರು ಆರೋಪಿಯ ಜಾಡು ಹಿಡಿದು ಒಡಿಶಾಗೆ ಹೋಗಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದರು. ಆದರೀಗಗ ಆರೋಪಿ ಒಡಿಶಾದಲ್ಲಿ ಮರವೊಂದಕ್ಕೆ ನೇಣಿಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.

ಬೆಂಗಳೂರಿನ ಫ್ಯಾಶನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಾಲಕ್ಷ್ಮಿ ಜೊತೆ ಟೀಮ್ ಹೆಡ್ ಮುಕ್ತಿ ರಂಜನ್, ಆಕೆಯನ್ನು ಕೊಂದಿದ್ದಾನೆ ಎಂಬ ಸತ್ಯಾಂಶ ಬೆಳಕಿಗೆ ಬಂದಿತ್ತು. ಸೆಪ್ಟೆಂಬರ್​ 24ರಂದು ಭದ್ರಕ್ ಗ್ರಾಮಕ್ಕೆ ಬಂದಿದ್ದ ರಂಜನ್, ರಾತ್ರಿ ಮನೆಯಿಂದ ಹೊರ ಹೋಗಿದ್ದ. ಆದರೆ ಬೆಳಗ್ಗೆ ನೋಡುವಷ್ಟರಲ್ಲಿ ಸೂಸೈಡ್ ಮಾಡಿಕೊಂಡಿದ್ದಾನೆ. ಕುಳೇಪದ ಸ್ಮಶಾನದ ಬಳಿ ಮರಕ್ಕೆ ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆರ್‌ಡಿ ಫಂಡಿ ಪೊಲೀಸರು ಮೃತದೇಹವನ್ನು ಶವಪರೀಕ್ಷೆಗೆ ಭದ್ರಕ್ ಜನರಲ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಹೆಬ್ಬಗೋಡಿಯಲ್ಲಿ ವಾಸವಿದ್ದ ಆರೋಪಿ

ಮುಕ್ತಿ ರಂಜನ್ ರಾಯ್ ಫ್ಯಾಷನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಫ್ಯಾಕ್ಟರಿಯಲ್ಲಿ ನೇಪಾಳ ಮೂಲದ ಮಹಾಲಕ್ಷ್ಮೀ ಕೂಡ ಕೆಲಸ ಮಾಡುತ್ತಿದ್ದರು. ಈಕೆಯನ್ನು ರಂಜನ್ ಪ್ರೀತಿಸುತ್ತಿದ್ದ. ಆದರೆ ಆತ ಆಕೆಯನ್ನು ಕೊಂದಿದ್ದೇಕೆ ಎಂಬುದು ಇದೀಗ ನಿಗೂಢವಾಗಿಯೇ ಉಳಿದಿದೆ. ಕೊಲೆಗೈದ ನಂತರ ಹೆಬ್ಬಗೋಡಿಯಲ್ಲಿ ತಮ್ಮನೊಂದಿಗೆ ವಾಸವಿದ್ದ ರಂಜನ್ ಪರಾರಿಯಾಗಿದ್ದ. ಈ ವಿಚಾರ ಪ್ರಕರಣ ತಿರುವಿಗೆ ಕಾರಣವಾಯಿತು. ಕೊಲೆ ಮಾಡಿದ ಆರೋಪಿ ಪರಾರಿಯಾದ ನಂತರ ಮೊಬೈಲ್ ಬಳಸುತ್ತಿರಲಿಲ್ಲವಂತೆ. ಹೀಗಾಗಿ, ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು.

ಒಡಿಶಾಗೆ ಹೋಗುವುದಕ್ಕೂ ಮುನ್ನ ಆರೋಪಿ ಪಶ್ಚಿಮ ಬಂಗಾಳಕ್ಕೆ ಹೋಗಿದ್ದ. ಮತ್ತೆ ಅಲ್ಲಿಂದ ಒಡಿಶಾಗೆ ತೆರಳಿದ್ದ ಎಂಬ ಅನಧಿಕೃತ ಮೂಲಗಳು ಲಭ್ಯವಾಗಿದ್ದವು. ಆದರೆ ಈ ತನಿಖೆ ವೇಳೆ ಶಂಕಿತ ಆರೋಪಿ ಮೃತದೇಹ ಪತ್ತೆಯಾಗಿದೆ. ತಾನಿನ್ನು ಜೈಲು ಸೇರುವುದು ಪಕ್ಕಾ ಎಂದು ಖಚಿತ ಆಗುತ್ತಿದ್ದಂತೆ, ವಿಧಿ ಇಲ್ಲದೆ ನೇಣಿಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ. ಸೆಪ್ಟಂಬರ್ ಮೊದಲ ವಾರವೇ ಮಹಾಲಕ್ಷ್ಮೀ ಹತ್ಯೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ.

ಏನಿದು ಪ್ರಕರಣ?

ವೈಯಾಲಿಕಾವಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗಂಡ ಮತ್ತು ಮಗುವನ್ನು ಕೈಬಿಟ್ಟು ಮಹಾಲಕ್ಷ್ಮೀ ಒಬ್ಬಂಟಿಯಾಗಿ ವಾಸವಿದ್ದಳು. ಆದರೆ, ಇತ್ತೀಚೆಗೆ ಆಕೆಯನ್ನು ಕೊಂದು ದೇಹವನ್ನು 50 ಪೀಸ್​ ಮಾಡಿ ಪ್ರೀಡ್ಜ್​ನಲ್ಲಿಟ್ಟ ಪ್ರಕರಣ ಬೆಳಕಿಗೆ ಬಂದಿತ್ತು. ಹಲವು ದಿನಗಳ ನಂತರ ಮಹಾಲಕ್ಷ್ಮೀ ರೂಮ್​ನಿಂದ ದುರ್ವಾಸನೆ ಬೀರುತ್ತಿತ್ತು. ಹೀಗಾಗಿ, ಮನೆ ಮಾಲೀಕ ಆಕೆಯ ಕುಟುಂಬಕ್ಕೆ ವಿಷಯ ಮುಟ್ಟಿಸಿದ್ದ. ಬಳಿಕ ಕುಟುಂಬಸ್ಥರು ಮನೆಯ ಒಳಗೆ ಹೋದಾಗ 50 ಪೀಸ್ ಮಾಡಿ ಫ್ರಿಡ್ಜ್​​ನಲ್ಲಿ ಇಟ್ಟದ್ದು ಗೊತ್ತಾಗಿತ್ತು. ಮನೆಯಲ್ಲಿ ದುರ್ವಾಸನೆ ಬೀರುತ್ತಿತ್ತು.

ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇದರ ನಡುವೆ ಆಕೆಯೊಂದಿಗೆ 9 ತಿಂಗಳ ಹಿಂದೆ ಬೇರ್ಪಟ್ಟಿದ್ದ ಗಂಡ ಹೇಮಂತ್ ದಾಸ್ ಪ್ರತಿಕ್ರಿಯಿಸಿ ಮಹಾಲಕ್ಷ್ಮೀ ಅಕ್ರಮ ಸಂಬಂಧ ಹೊಂದಿದ್ದರು ಎಂದು ಹೇಳಿದ್ದರು. ಅಲ್ಲದೆ, ಆಶ್ರಫ್ ಜೊತೆ ಸಂಬಂಧ ಹೊಂದಿದ್ದಳು ಎಂದು ಹೇಳಿದ್ದರು. ಅಲ್ಲದೆ, ಇನ್ನೂ ಮೂವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಆದರೀಗ ಪ್ರಕರಣದ ಆರೋಪಿ ಸೂಸೈಡ್ ಮಾಡಿಕೊಂಡಿದ್ದು, ಕಾರಣ ಏನೆಂಬುದು ತಿಳಿಯದೆ ಪೊಲೀಸರ ತನಿಖಾ ತಂಡಕ್ಕೆ ಮತ್ತಷ್ಟು ಸವಾಲಾಗಿ ಪರಿಣಮಿಸಿದೆ.

Whats_app_banner