Karnataka News Live December 12, 2024 : ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಸ್ಫೋಟ; ಬಿಗ್ ಬಾಸ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಮಧುಗಿರಿಯಲ್ಲಿ ಬಂಧನ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Thu, 12 Dec 202405:52 PM IST
- Drone Prathap Arrest: ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಬ್ಲಾಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕನ್ನಡ ಬಿಗ್ ಬಾಸ್-10ರ ಸ್ಪರ್ಧಿ ಡ್ರೋನ್ ಪ್ರತಾಪ್ರನ್ನು ತುಮಕೂರಿನ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಬಂಧಿಸಿದ್ದಾರೆ.
Thu, 12 Dec 202405:12 PM IST
- Mangalore Singapore Direct Flight: ಕರಾವಳಿ ಕರ್ನಾಟಕ ಪ್ರದೇಶದ ಪ್ರಯಾಣಿಕರಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಗುಡ್ನ್ಯೂಸ್ ನೀಡಿದೆ. ಮಂಗಳೂರು ಮೂಲಕ ಸಿಂಗಾಪುರಕ್ಕೆ ನೇರ ವಿಮಾನವನ್ನು ಸಂಪರ್ಕ ಕಲ್ಪಿಸಿದೆ.
Thu, 12 Dec 202402:49 PM IST
New year 2025: ಹೊಸ ವರ್ಷದ ಸಂದರ್ಭದಲ್ಲಿ ನಿಮ್ಮ ಬಾಲ್ಯದ ಗೆಳೆಯ, ಸ್ನೇಹಿತರಿಗೆ ಪತ್ರ ಹೇಗೆ ಬರೆಯಬಹುದು. ಅವರೊಂದಿಗಿನ ಒಡನಾಟ, ಈಗಿನ ಸಂದರ್ಭವನ್ನು ಆಧರಿಸಿ ಪತ್ರದಲ್ಲಿ ಒಕ್ಕಣೆ ಹೇಗಿರಬೇಕು. ಇಲ್ಲಿದೆ ಮಾದರಿ
Thu, 12 Dec 202412:25 PM IST
- Sainik School Admission 2025: ಸೈನಿಕ ಶಾಲೆಗಳಿಗೆ ಪ್ರವೇಶ ಪಡೆಯಲು ಪ್ರಯತ್ನಿಸುವವರು "ಸೈನಿಕ್ ಸ್ಕೂಲ್ ಅಡ್ಮಿಷನ್ 2025" ಅಧಿಸೂಚನೆಗೆ ಕಾಯುತ್ತಿರಬಹುದು. ಎನ್‌ಟಿಎ ವೆಬ್‌ಸೈಟ್‌ನಲ್ಲಿ ಸೈನಿಕ ಶಾಲಾ ಪ್ರವೇಶ 2025-26 ಆನ್‌ಲೈನ್ ಅರ್ಜಿ ಆಹ್ವಾನಿಸಲಾಗುತ್ತದೆ. AISSEE 2025 ಪರೀಕ್ಷೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Thu, 12 Dec 202410:34 AM IST
ಕರ್ನಾಟಕದಲ್ಲಿನ ನೋಂದಣಿ ಮುದ್ರಾಂಕ ಇಲಾಖೆಯಲ್ಲಿನ ಉಪ ನೋಂದಣಾಧಿಕಾರಿಗಳ ವರ್ಗಾವಣೆಗೆ ಮೊದಲ ಬಾರಿಗೆ ಕೌನ್ಸಿಲಿಂಗ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.
Thu, 12 Dec 202409:07 AM IST
- ಹುಬ್ಬಳ್ಳಿ ನಗರದಲ್ಲಿ ನಡೆದ ಪ್ರತ್ಯೇಕ ಪ್ರಕರಣದಲ್ಲಿ ತ್ವರಿತವಾಗಿಯೇ ವಿಚಾರಣೆ ನಡೆಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಪ್ರಕರಣಗಳ ವಿವರ ಇಲ್ಲಿದೆ.
Thu, 12 Dec 202408:48 AM IST
- New year 2025: ಹೊಸ ವರ್ಷವನ್ನು ಬರ ಮಾಡಿಕೊಳ್ಳುವ ದಿನಗಳು ಸಮೀಪಿಸುತ್ತಿವೆ. ಇದಕ್ಕಾಗಿ ಈಗಿನಿಂದಲೇ ತಯಾರಿಯೂ ನಡೆದಿದೆ. ಕುಡಿದು, ಕುಣಿದು ಕುಪ್ಪಳಿಸುವ ಖುಷಿಯನ್ನು ಬಿಟ್ಟರೆ ಈ ರೀತಿಯಲ್ಲಿ ಸಂತಸ ಹಂಚಿಕೊಂಡರೆ ಹೇಗಿರುತ್ತದೆ. ಇಲ್ಲಿವೆ ಅಂತಹ 10 ಮಾರ್ಗಗಳು.
Thu, 12 Dec 202406:41 AM IST
- ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಿಂದ ಉಡುಪಿ ಜಿಲ್ಲೆಯ ಕಾರ್ಕಳ ನಗರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಗುರುವಾರ ಮೊದಲ ಸಂಚಾರ ಶುರುವಾಯಿತು.
Thu, 12 Dec 202405:35 AM IST
- ಕೊಡಗಿನ ವೀರ ಸೇನಾನಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವವರ ಗಡಿಪಾರಿಗೆ ಆಗ್ರಹಿಸಿ ಅರ್ಧದಿನದ ಬಂದ್‌ಗೆ ಕೊಡಗು ಜಿಲ್ಲೆಯಾದ್ಯಂತ ಬೆಂಬಲ ವ್ಯಕ್ತವಾಗಿದೆ.
Thu, 12 Dec 202404:28 AM IST
- ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರದ್ದು ಬಂಡಾಯ ಮನೋಭಾವ. ಎಲ್ಲದನ್ನೂ ಪ್ರಶ್ನಿಸುತ್ತಲೇ ರಾಜಕೀಯವಾಗಿ ಬೆಳೆದವರು. ಈಗ ಬಿಜೆಪಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ದವೇ ಗುಡುಗಿದ್ದಾರೆ. ಇದರ ಹಿಂದಿನ ಲೆಕ್ಕಾಚಾರಗಳ ವಿಶ್ಲೇಷಣೆ ಇಲ್ಲಿದೆ
ವರದಿ: ಎಚ್.ಮಾರುತಿ. ಬೆಂಗಳೂರು
Thu, 12 Dec 202401:30 AM IST
Mahesh Poochapatti Interview: ಅಡಿಕೆ ಕ್ಯಾನ್ಸರ್‌ಕಾರಕ ಎನ್ನುವ ವಿಶ್ವಸಂಸ್ಥೆಯ ವರದಿಯನ್ನು ಎದುರಿಸುವುದು ಹೇಗೆ? ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಇಂಥ ಹಲವು ಪ್ರಶ್ನೆಗಳ ಬಗ್ಗೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ‘ಎಚ್‌ಟಿ ಕನ್ನಡ’ಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.
Thu, 12 Dec 202401:23 AM IST
- ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ತಾಪಮಾನ ವಿಪರೀತ ಕುಸಿದಿದೆ. ಈ ನಡುವೆ ಮತ್ತೆ ಮಳೆರಾಯ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾನೆ. ಇಂದು (ಡಿಸೆಂಬರ್ 12) ಹಾಗೂ ನಾಳೆ (ಡಿಸೆಂಬರ್ 13) ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಒಟ್ಟು 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
Thu, 12 Dec 202412:30 AM IST
ಕುಂದೂರು ಉಮೇಶ ಭಟ್ಟ: ಕಾಡಿನ ಅವಿಸ್ಮರಣೀಯ ಕ್ಷಣಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯುವುದು ಕಷ್ಟ. ಅದನ್ನು ವಿಭಿನ್ನವಾಗಿ ದಾಖಲಿಸಿ ವರ್ಷವಿಡೀ ಕಣ್ಣ ಮುಂದೆಯೇ ನೆನಪು ಮಾಡಿಕೊಂಡು ಪುಳಕಿತವಾಗುವಂತೆ ಮಾಡುವುದು ಬಲು ಬದ್ದತೆ ಬೇಡುವ ಕಾರ್ಯ. ಮೈಸೂರಿನ ಲೋಕೇಶ್ ಮೊಸಳೆ ಈ ಪ್ರಯತ್ವನ್ನು ವಿಭಿನ್ನ ಕ್ಯಾಲೆಂಡರ್ ಮೂಲಕ ಎರಡು ದಶಕದಿಂದ ಮಾಡುತ್ತಿದ್ದಾರೆ.