Karnataka News Live December 19, 2024 : ಡಿ 31 ರಿಂದ ಸರ್ಕಾರಿ ಬಸ್‌ ಸೇವೆ ಇರಲ್ಲ, ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ 5 ಮುಖ್ಯ ಬೇಡಿಕೆಗಳಿವು
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live December 19, 2024 : ಡಿ 31 ರಿಂದ ಸರ್ಕಾರಿ ಬಸ್‌ ಸೇವೆ ಇರಲ್ಲ, ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ 5 ಮುಖ್ಯ ಬೇಡಿಕೆಗಳಿವು

ಡಿ 31 ರಿಂದ ಸರ್ಕಾರಿ ಬಸ್‌ ಸೇವೆ ಇರಲ್ಲ, ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ 5 ಮುಖ್ಯ ಬೇಡಿಕೆಗಳಿವು

Karnataka News Live December 19, 2024 : ಡಿ 31 ರಿಂದ ಸರ್ಕಾರಿ ಬಸ್‌ ಸೇವೆ ಇರಲ್ಲ, ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ 5 ಮುಖ್ಯ ಬೇಡಿಕೆಗಳಿವು

04:15 PM ISTDec 19, 2024 09:45 PM HT Kannada Desk
  • twitter
  • Share on Facebook
04:15 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Thu, 19 Dec 202404:15 PM IST

ಕರ್ನಾಟಕ News Live: ಡಿ 31 ರಿಂದ ಸರ್ಕಾರಿ ಬಸ್‌ ಸೇವೆ ಇರಲ್ಲ, ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ 5 ಮುಖ್ಯ ಬೇಡಿಕೆಗಳಿವು

  • KSRTC Strike: ಕರ್ನಾಕಟದಲ್ಲಿ ಡಿ 31 ರಿಂದ ಸರ್ಕಾರಿ ಬಸ್‌ ಸೇವೆ ಇರಲ್ಲ. ಕೆಎಸ್‌ಆರ್‌ಟಿಸಿ ಮುಷ್ಕರ ನಡೆಯಲಿದೆ. ಸರಳವಾಗಿ ಹೇಳಬೇಕು ಎಂದರೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಅವರ 5 ಮುಖ್ಯ ಬೇಡಿಕೆಗಳ ವಿವರ ಇಲ್ಲಿದೆ.

Read the full story here

Thu, 19 Dec 202401:44 PM IST

ಕರ್ನಾಟಕ News Live: ಆಕ್ಷೇಪಾರ್ಹ ಪದ ಬಳಕೆ ಆರೋಪ; ಎಫ್‌ಐಆರ್‌ ದಾಖಲು ಬೆನ್ನಲೇ ಎಂಎಲ್‌ಸಿ ಸಿಟಿ ರವಿ ಪೊಲೀಶ್‌ ವಶಕ್ಕೆ

  • ಬಿಜೆಪಿ ಎಂಎಲ್‌ಸಿ ಸಿಟಿ ರವಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಧಾನ ಪರಿಷತ್‌ನಲ್ಲಿ ಆಕ್ಷೇಪಾರ್ಹ ಪದ ಬಳಕೆ ಆರೋಪಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಹೀರೇಬಾಗೇವಾಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಸಿಟಿ ರವಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Read the full story here

Thu, 19 Dec 202412:50 PM IST

ಕರ್ನಾಟಕ News Live: ಅವಾಚ್ಯ ಪದ ಬಳಕೆ ಆರೋಪ: ಗದ್ದಲ ಬೆನ್ನಲ್ಲೇ ಸುವರ್ಣ ಸೌಧದ ಗೇಟ್‌ಗಳು ಕ್ಲೋಸ್‌; ಸಿಟಿ ರವಿ ವಿರುದ್ಧ ಪ್ರತಿಭಟನೆ, ಪೊಲೀಸ್‌ ದೂರು

  • ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಗದ್ದಲ, ಹೈಡ್ರಾಮಾ ಬೆನ್ನಲ್ಲೇ ಸುವರ್ಣ ಸೌಧದ ಎಲ್ಲಾ ಗೇಟ್‌ಗಳನ್ನು ಬಂದ್‌ ಮಾಡಿ ಭಾರಿ ಭದ್ರತೆ ನೀಡಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಅವಾಚ್ಯ ಪದ ಬಳಕೆ ಮಾಡಿದ ಆರೋಪದ ಮೇಲೆ ಎಂಎಲ್‌ಸಿ ಸಿಟಿ ರವಿ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ನಡೆದಿದೆ. ಸಚಿವೆ ಪೊಲೀಸ್‌ ದೂರನ್ನೂ ನೀಡಿದ್ದಾರೆ.
Read the full story here

Thu, 19 Dec 202412:34 PM IST

ಕರ್ನಾಟಕ News Live: ಶಿಕ್ಷಕರೇ ಗಮನಿಸಿ, ಪ್ರಬಂಧ ಬರೆದು 1.5 ಲಕ್ಷ ರೂಗೂ ಹೆಚ್ಚು ಬಹುಮಾನ ಗೆಲ್ಲುವ ಅವಕಾಶ ನೀಡಿದೆ ಸದಾತನ ಟ್ರಸ್ಟ್‌, ನೋಂದಣಿಗೆ ಡಿ 31 ಕೊನೇ ದಿನ

  • Essay Contest: ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಖುಷಿ ಸುದ್ದಿ ನೀಡಿದೆ ಸದಾತನ ಟ್ರಸ್ಟ್‌. ಪ್ರಬಂಧ ಬರೆದು ಕಳುಹಿಸಿ ಒಟ್ಟು 1.5 ಲಕ್ಷ ರೂಪಾಯಿಗೂ ಹೆಚ್ಚು ಬಹುಮಾನಗಳನ್ನು ಗೆಲ್ಲುವ ಅವಕಾಶ ಇದು. ನೋಂದಣಿಗೆ ಡಿ.31 ಕೊನೇ ದಿನ, ಪ್ರಬಂಧ ಕಳುಹಿಸಲು ಜನವರಿ 14 ಕೊನೇ ದಿನ. ಸ್ಪರ್ಧಾ ನಿಯಮ ಮತ್ತು ವಿವರ ಇಲ್ಲಿದೆ. 

Read the full story here

Thu, 19 Dec 202412:30 PM IST

ಕರ್ನಾಟಕ News Live: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅವಾಚ್ಯ ಪದ ಬಳಕೆ ಕ್ರಿಮಿನಲ್ ಅಪರಾಧ ಎಂದ ಸಿಎಂ ಸಿದ್ದರಾಮಯ್ಯ; ಯಾರು ಏನು ಹೇಳಿದರು

  • CT Ravi: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶದ ನಡುವೆ, ವಿಧಾನ ಪರಿಷತ್ ಕಲಾಪ ಮುಂದೂಡಲ್ಪಟ್ಟ ಸಮಯದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅವಾಚ್ಯ ಪದ ಬಳಕೆ ಮಾಡಿದ್ದು ಕ್ರಿಮಿನಲ್ ಅಪರಾಧ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಪ್ರಕರಣ ಸಂಬಂಧ ಯಾರು ಏನು ಹೇಳಿದರು ಎಂಬ ವಿವರ ಇಲ್ಲಿದೆ.

Read the full story here

Thu, 19 Dec 202411:57 AM IST

ಕರ್ನಾಟಕ News Live: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪ; ಎಂಎಲ್‌ಸಿ ಸಿಟಿ ರವಿ ಮೊದಲ ಪ್ರತಿಕ್ರಿಯೆ ಹೀಗಿತ್ತು- 6 ಮುಖ್ಯ ಅಂಶಗಳು

  • CT Ravi: ಸುವರ್ಣ ಸೌಧದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪಕ್ಕೆ ಸಂಬಂಧಿಸಿ ಎಂಎಲ್‌ಸಿ ಸಿಟಿ ರವಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಅವರು ಆರು ಅಂಶಗಳನ್ನು ವಿವರಿಸಿದ್ದಾರೆ. ಆ ವಿವರ ಇಲ್ಲಿದೆ.

Read the full story here

Thu, 19 Dec 202411:50 AM IST

ಕರ್ನಾಟಕ News Live: ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರಿಂದ ಹಲ್ಲೆ; ಕೊಲೆ ಯತ್ನ ಆರೋಪಿಸಿ ಸಿಟಿ ರವಿ ಧರಣಿ, ಯಾವುದಕ್ಕೂ ಹೆದರಲ್ಲ ಎಂದ ಎಂಎಲ್‌ಸಿ

  • ‌ನನ್ನ ಮೇಲೆ ಕೊಲೆ ಯತ್ನ ನಡೆದಿದೆ. ಒಬ್ಬ ಶಾಸಕನಿಗೆ ರಕ್ಷಣೆ ಇಲ್ಲ ಎಂದಾದರೆ, ರಾಜ್ಯದ ಇತರ ಜನರ ಪರಿಸ್ಥಿತಿ ಏನು? ಸುವರ್ಣ ಸೌಧದ ಮೊಗಸಾಲೆಯಲ್ಲಿ ಹೋಗುತ್ತಿದ್ದಾಗ ನನ್ನ ಮೇಲೆ ಹಲ್ಲೆ ಮಾಡಲು ಬಂದಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್‌ ಹೆಸರು ಹೇಳಿಕೊಂಡು ದಾಳಿ ನಡೆಸಿದ್ದಾರೆ ಎಂದು ಸಿಟಿ ರವಿ ಹೇಳಿದ್ದಾರೆ.
Read the full story here

Thu, 19 Dec 202410:17 AM IST

ಕರ್ನಾಟಕ News Live: ಅಂಬೇಡ್ಕರ್ ವಿವಾದ; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ನಾಯಕ ಸಿಟಿ ರವಿ ಅವಾಚ್ಯ ಪದ ಬಳಸಿದ ಆರೋಪ

  • Ambedkar Row: ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನೆ ವ್ಯಕ್ತವಾದ ಬಳಿಕ ವಿಧಾನ ಪರಿಷತ್ ಕಲಾಪ ಮುಂದೂಡಲ್ಪಟ್ಟ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ನಾಯಕ ಸಿಟಿ ರವಿ ಅವಾಚ್ಯ ಪದ ಬಳಸಿದ ಆರೋಪ ವ್ಯಕ್ತವಾಗಿದೆ. ಅಂಬೇಡ್ಕರ್ ವಿವಾದ ನಡುವೆ ಈಗ ಸಿಟಿ ರವಿ ಆಡಿದ್ದರೆನ್ನಲಾದ ಹಗುರ ಮಾತು ಬಿಜೆಪಿ ನಾಯಕರಿಗೆ ಮತ್ತೊಂದು ತಲೆನೋವಾಗಿದೆ.

Read the full story here

Thu, 19 Dec 202409:55 AM IST

ಕರ್ನಾಟಕ News Live: ಸಾಹಿತ್ಯ ಸಮ್ಮೇಳನಕ್ಕೆ ಬೆಂಗಳೂರು-ಮೈಸೂರಿಂದ ವಿಶೇಷ ಬಸ್ ವ್ಯವಸ್ಥೆ; ಸಂಚಾರಿ ಮಾರ್ಗ ಬದಲಾವಣೆ, ಮಂಡ್ಯಕ್ಕೆ ಹೀಗೆ ಬನ್ನಿ

  • ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಿಂದ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಇದೇ ವೇಳೆ ಬೆಂಗಳೂರು ಹಾಗೂ ಮೈಸೂರಿನಿಂದಲೂ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಇರಲಿದೆ. ಕನ್ನಡ ಹಬ್ಬಕ್ಕೆ ಬರುವವರಿಗಾಗಿ ಸಂಚಾರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಯೋಜಿಸಲಾಗಿದೆ.
Read the full story here

Thu, 19 Dec 202405:38 AM IST

ಕರ್ನಾಟಕ News Live: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ, ಆತಿಥ್ಯಕ್ಕೆ ಮಂಡ್ಯ ನಗರ ಸಜ್ಜು, ಇತಿಹಾಸ ಸೃಷ್ಟಿಸಲಿರುವ ಕಾರ್ಯಕ್ರಮದ 5 ಮುಖ್ಯ ಅಂಶ

  • Kannada Sahitya Sammelana: ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆಯಿಂದ ಮೂರು ದಿನ ಸಾಹಿತ್ಯ ಕಂಪು ಸಕ್ಕರೆ ನಾಡನ್ನು ಆವರಿಸಲಿದ್ದು, ಕನ್ನಡಿಗರು ಮಂಡ್ಯ ನಗರ ಆತಿಥ್ಯಕ್ಕೆ ತಲೆದೂಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದ 5 ಮುಖ್ಯ ಅಂಶಗಳು ಇಲ್ಲಿವೆ. 

Read the full story here

Thu, 19 Dec 202403:11 AM IST

ಕರ್ನಾಟಕ News Live: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ; ಜನಪ್ರತಿನಿಧಿನಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ಅರ್ಜಿ ವಿಚಾರಣೆ ಮುಂದುವರಿಕೆ

  • ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಡಿಸೆಂಬರ್ 18ರ ಬುಧವಾರ ನಡೆಯಿತು. ವಾದ, ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಲಯ ವಿಚಾರಣೆಯನ್ನು ಡಿಸೆಂಬರ್ 19ರ ಗುರುವಾರಕ್ಕೆ ಮುಂದೂಡಿದೆ.
Read the full story here

Thu, 19 Dec 202402:30 AM IST

ಕರ್ನಾಟಕ News Live: ಮೈಸೂರು ಮುಡಾದಲ್ಲೂ ಇನ್ನು ಬಿಡಿಎ ಮಾದರಿ ಆಡಳಿತ; ಐಎಎಸ್‌ ಅಧಿಕಾರಿಯೇ ಆಯುಕ್ತ, ಸರ್ಕಾರದಿಂದಲೇ ಸದಸ್ಯರ ನೇಮಕ ವಿಧೇಯಕ ಅಂಗೀಕಾರ

  • ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಡಳಿತದಲ್ಲಿ ಆಮೂಲಾಗ್ರ ಬದಲಾವಣೆ ತರಲು ಕರ್ನಾಟಕ ಸರ್ಕಾರವು ಹೊಸ ವಿಧೇಯಕವನ್ನು ಮಂಡಿಸಿ ಒಪ್ಪಿಗೆ ಪಡೆದುಕೊಂಡಿದೆ.

Read the full story here

Thu, 19 Dec 202402:28 AM IST

ಕರ್ನಾಟಕ News Live: ಕುಡಿದ ಮತ್ತಿನಲ್ಲಿ ವ್ಯಕ್ತಿಯಿಂದ ಅಡ್ಡಾದಿಡ್ಡಿ ಕಾರು ಚಾಲನೆ; ರಾಮನಗರ ಸರಣಿ ಅಪಘಾತದಲ್ಲಿ ಪ್ರಥಮ ದರ್ಜೆ ಸಹಾಯಕಿ ಸಾವು, ಹಲವರಿಗೆ ಗಂಭೀರ ಗಾಯ

  • ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ಪರಿಣಾಮವಾಗಿ ಪ್ರಥಮ ದರ್ಜೆ ಸಹಾಯಕಿ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ಸರಕು ವಾಹನಗಳನ್ನು ನಿಷೇಧಿಸಿರುವ ವರದಿಯೂ ಇಲ್ಲಿದೆ.
Read the full story here

Thu, 19 Dec 202401:40 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ: ಬೀದರ್, ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ತೀವ್ರ ಚಳಿ; ಬೆಂಗಳೂರಿನಲ್ಲಿ ಬೆಳಗಿನ ಜಾವ ದಟ್ಟ ಮಂಜಿನ ವಾತಾವರಣ

  • ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಚಳಿ ತೀವ್ರಗೊಳ್ಳುತ್ತಿದ್ದು, ಜನರು ಮನೆಯಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಡಿಸೆಂಬರ್ 19ರ ಗುರುವಾರವೂ ಬೀದರ್, ವಿಜಯಪುರ ಹಾಗೂ ಕಲಬುರಗಿಯಲ್ಲಿ ಚಳಿ ಮುಂದುವರಿದೆ. ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಮಂಜಿನ ವಾತಾವರಣ ಮುಂದುವರಿದಿದೆ.
Read the full story here

Thu, 19 Dec 202401:30 AM IST

ಕರ್ನಾಟಕ News Live: Millets Food Competition: ಸಿರಿಧಾನ್ಯದಿಂದ ಅಡುಗೆ ತಯಾರಿಸುತ್ತೀರಾ, ಕರ್ನಾಟಕ ಕೃಷಿ ಇಲಾಖೆಯಿಂದ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ನಾಳೆ

  • ಸಿರಿಧಾನ್ಯವನ್ನು ಉತ್ತೇಜಿಸುವ ಜತೆಗೆ ಅಡುಗೆ ಮಾಡುವವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ಕೃಷಿ ಇಲಾಖೆ "ಸಿರಿಧಾನ್ಯ" ಮತ್ತು "ಮರೆತು ಹೋದ ಖಾದ್ಯಗಳ’ ಪಾಕ ಸ್ಪರ್ಧೆಯನ್ನು ಆಯೋಜಿಸಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter