ರೈಲು ಹತ್ತೋಕೆ ಮೊದಲು ಟಿಕೆಟ್ ರೇಟ್ ತಿಳ್ಕೊಳಿ: 70 ಕಿಮೀ ದೂರಕ್ಕೆ 440 ರೂಪಾಯಿ ದರ ನಿಗದಿ, ಯಪ್ಪಾ ಶಿವನೇ ಎಂದ ಪ್ರಯಾಣಿಕರು-tumakuru news vande bharat express to stop in tumkur railway station minister v sommanna inaguarates esp ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ರೈಲು ಹತ್ತೋಕೆ ಮೊದಲು ಟಿಕೆಟ್ ರೇಟ್ ತಿಳ್ಕೊಳಿ: 70 ಕಿಮೀ ದೂರಕ್ಕೆ 440 ರೂಪಾಯಿ ದರ ನಿಗದಿ, ಯಪ್ಪಾ ಶಿವನೇ ಎಂದ ಪ್ರಯಾಣಿಕರು

ರೈಲು ಹತ್ತೋಕೆ ಮೊದಲು ಟಿಕೆಟ್ ರೇಟ್ ತಿಳ್ಕೊಳಿ: 70 ಕಿಮೀ ದೂರಕ್ಕೆ 440 ರೂಪಾಯಿ ದರ ನಿಗದಿ, ಯಪ್ಪಾ ಶಿವನೇ ಎಂದ ಪ್ರಯಾಣಿಕರು

ಬೆಂಗಳೂರನ್ನು ಪ್ರತಿದಿನ ಬೆಳಿಗ್ಗೆ 5:45 ಕ್ಕೆ ಬಿಡಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ತುಮಕೂರಿಗೆ 6:32 ಕ್ಕೆ ಬರಲಿದೆ. ಧಾರವಾಡವನ್ನು ಮಧ್ಯಾಹ್ನ 1:15 ಕ್ಕೆ ಬಿಡಲಿರುವ ರೈಲು ಸಂಜೆ 6:18 ಕ್ಕೆ ತುಮಕೂರಿಗೆ ಬರಲಿದೆ. ಬೆಂಗಳೂರನ್ನು ರಾತ್ರಿ 7:45 ಕ್ಕೆ ಸೇರಲಿದೆ.

ಧಾರವಾಡದಿಂದ ಬೆಂಗಳೂರಿಗೆ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಇನ್ನು ಮುಂದೆ ತುಮಕೂರಿನಲ್ಲಿಯೂ ನಿಲ್ಲಲಿದೆ.
ಧಾರವಾಡದಿಂದ ಬೆಂಗಳೂರಿಗೆ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಇನ್ನು ಮುಂದೆ ತುಮಕೂರಿನಲ್ಲಿಯೂ ನಿಲ್ಲಲಿದೆ.

ತುಮಕೂರು: ಇನ್ನು ಮುಂದೆ ತುಮಕೂರಿನಲ್ಲೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಯಾಗಲಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ವಂದೇ ಭಾರತ್ ರೈಲಿನ ಅಧಿಕೃತ ನಿಲುಗಡೆಗೆ ಹಸಿರು ನಿಶಾನೆ ತೋರಿದರು. ತುಮಕೂರು ರೈಲು ನಿಲ್ದಾಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಚಿವರು ಗ್ರೀನ್ ಸಿಗ್ನಲ್ ನೀಡಿದರು. ಇನ್ನು ಮುಂದೆ ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ತುಮಕೂರಿನಲ್ಲಿ 2 ರಿಂದ 3 ನಿಮಿಷಗಳ ಕಾಲ ವಂದೇ ಭಾರತ್ ರೈಲು ನಿಲ್ಲಲಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎಂದು ಸಚಿವರು ಹೇಳಿದರು.

ಬೆಂಗಳೂರು-ತುಮಕೂರು-ಧಾರವಾಡ: ವಂದೇ ಭಾರತ್ ವೇಳಾಪಟ್ಟಿ, ದರ ವಿವರ

ಬೆಂಗಳೂರನ್ನು ಪ್ರತಿದಿನ ಬೆಳಿಗ್ಗೆ 5:45 ಕ್ಕೆ ಬಿಡಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ತುಮಕೂರಿಗೆ 6:32 ಕ್ಕೆ ಬರಲಿದೆ. ಧಾರವಾಡವನ್ನು ಮಧ್ಯಾಹ್ನ 1:15 ಕ್ಕೆ ಬಿಡಲಿರುವ ರೈಲು ಸಂಜೆ 6:18 ಕ್ಕೆ ತುಮಕೂರಿಗೆ ಬರಲಿದೆ. ಬೆಂಗಳೂರನ್ನು ರಾತ್ರಿ 7:45 ಕ್ಕೆ ಸೇರಲಿದೆ. ತುಮಕೂರು-ಬೆಂಗಳೂರು ಟಿಕೆಟ್ ದರವು ಎಸಿ ಚೇರ್ ಕ್ಲಾಸ್‌ಗೆ ರೂ 440, ಎಕ್ಸಿಕ್ಯೂಟಿವ್ ಕ್ಲಾಸ್‌ಗೆ ರೂ 825 ಇದೆ. ತುಮಕೂರು-ಧಾರವಾಡ ಮಾರ್ಗದ ಟಿಕೆಟ್ ದರವು ಎಸಿ ಚೇರ್ ಕ್ಲಾಸ್‌ಗೆ ರೂ 1075, ಎಕ್ಸಿಕ್ಯುಟಿವ್ ಕ್ಲಾಸ್‌ಗೆ ರೂ 2045 ಇದೆ. ಈ ಮಾರ್ಗದಲ್ಲಿ ಸಂಚರಿಸುವ ದುಬಾರಿ ರೈಲು ಇದು. ವಂದೇ ಭಾರತ್ ನಿಲುಗಡೆ ನಿರ್ಧಾರಕ್ಕೆ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಆಧಿನಿಕ ಸೌಲಭ್ಯ ಒಳಗೊಂಡಿರುವ ಒಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಚರಿಸುವುದೇ ಆನಂದ ಎನಿಸಲಿದೆ, ಪ್ರಯಾಣಿಕರು ಹೊಸ ಅನುಭವ ಪಡೆಯಬಹುದು, ನಿಖರ ವೇಗ, ನಿಗದಿತ ಸಮಯಕ್ಕೆ ಪ್ರಯಾಣಕರು ತಮ್ಮ ಪ್ರಯಾಣ ಜಾಗ ತಲುಪಲು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹೆಚ್ಚು ಸಹಕಾರಿಯಾಗಿದೆ, ಹಸಿರು ನಿಶಾನೆ ತೋರಿದ ಸಚಿವ ವಿ.ಸೋಮಣ್ಣ ಹೇಳಿದರು. ನಂತರ ಅವರು ಇದೇ ವಂದೇ ಭಾರತ್ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಧಾರವಾಡದಿಂದ ತುಮಕೂರಿಗೆ ಬಂದ ರೈಲಿಗೆ ಸಚಿವ ವಿ.ಸೋಮಣ್ಣ ಶುಕ್ರವಾರ (ಆಗಸ್ಟ್ 23) ಹಸಿರು ನಿಶಾನೆ ತೋರಿದರು. ಶಾಸಕರಾದ ಜ್ಯೋತಿ ಗಣೇಶ್, ಗ್ರಾಮಾಂತರ ಶಾಸಕ ಸುರೇಶ್ ಗೌಡ, ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ರೈಲ್ವೆ ಅಧಿಕಾರಿಗಳ ಉಪಸ್ಥಿತರಿದ್ದರು.

'ಬೆಂಗಳೂರಿಗೆ ಹೋಗುವವರಿಗೆ ಮತ್ತು ಬೆಂಗಳೂರಿನಿಂದ ಬರುವವರಿಗೆ ಈ ರೈಲಿನಿಂದ ಹೆಚ್ಚೇನೂ ಪ್ರಯೋಜನವಾಗಲಾರದು. ಇಷ್ಟು ದುಬಾರಿ ಹಣ ತೆತ್ತು ಓಡಾಡುವವರು ಕಡಿಮೆ' ಎಂದು ನಿತ್ಯ ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕ ಮಹೇಂದ್ರ ಹೇಳಿದರು.