Vande Bharat trains: ಶೀಘ್ರವೇ ಬರಲಿದೆ ಮಿನಿ ವಂದೇ ಭಾರತ್; ಟೈರ್ 2 ನಗರಗಳ ನಡುವೆ ಸಂಪರ್ಕಕ್ಕೆ ಭಾರತೀಯ ರೈಲ್ವೆಯ ಹೊಸ ಉಪಕ್ರಮ
Vande Bharat trains: ದೇಶಾದ್ಯಂತ 400 ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಭಾರತೀಯ ರೈಲ್ವೆ ಯೋಜಿಸಿದೆ. ಎರಡನೇ ಸ್ತರದ ನಗರಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ವಂದೇ ಭಾರತ್ 8 ಬೋಗಿ ರೈಲುಗಳಿಗೆ ಬೇಡಿಕೆ ಇದೆ. ಹೀಗಾಗಿ ಭಾರತೀಯ ರೈಲ್ವೆ ವಂದೇ ಭಾರತ್ ಟ್ರೇನ್‌ನ ಸಣ್ಣ ಮಾದರಿಯನ್ನು ಪರಿಚಯಿಸಲು ಕ್ರಮ ತೆಗೆದುಕೊಂಡಿದೆ.
ವಂದೇ ಭಾರತ್ ಟ್ರೇನ್ ಎಂದ ಕೂಡಲೇ 16 ಬೋಗಿಗಳ ಹೊಚ್ಚ ಹೊಸ ರೈಲಿನ ಚಿತ್ರ ಕಣ್ಣಮುಂದೆ ಬರುತ್ತದೆ. ಆದರೆ, ವಂದೇ ಭಾರತ್ ಟ್ರೇನ್‌ನ ಸಣ್ಣ ಮಾದರಿಯನ್ನು ಪರಿಚಯಿಸಲು ಭಾರತೀಯ ರೈಲ್ವೆ ಮುಂದಾಗಿದೆ. ಅಂದರೆ ಮಿನಿ ವಂದೇ ಭಾರತ್ ಟ್ರೇನ್ ಇನ್ನು ಮುಂದೆ ಕಾಣಸಿಗಲಿದೆ. ಸಣ್ಣಮಾದರಿ ಎಂದರೆ 8 ಬೋಗಿಗಳ ರೈಲು ಇದಾಗಿರಲಿದೆ.
ದೇಶಾದ್ಯಂತ 400 ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಭಾರತೀಯ ರೈಲ್ವೆ ಯೋಜಿಸಿದೆ. ಎರಡನೇ ಸ್ತರದ ನಗರಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ವಂದೇ ಭಾರತ್ 8 ಬೋಗಿ ರೈಲುಗಳಿಗೆ ಬೇಡಿಕೆ ಇದೆ. ಹೀಗಾಗಿ ಭಾರತೀಯ ರೈಲ್ವೆ ವಂದೇ ಭಾರತ್ ಟ್ರೇನ್‌ನ ಸಣ್ಣ ಮಾದರಿಯನ್ನು ಪರಿಚಯಿಸಲು ಕ್ರಮ ತೆಗೆದುಕೊಂಡಿದೆ.
ಎಂಟು ಬೋಗಿಗಳ ಆವೃತ್ತಿಯನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ನಲ್ಲಿ ಅಭಿವೃದ್ಧಿಪಡಿಸುತ್ತಿದೆ. ರೈಲ್ವೇ ಮಂಡಳಿಯು ಐಸಿಎಫ್‌ಗೆ ಈ ವರ್ಕ್ ಆರ್ಡರ್ ನೀಡಿದ್ದು, ಕಲ್ಪನೆಯನ್ನು ಸರಿಹೊಂದಿಸಲು ಅಗತ್ಯ ವಿನ್ಯಾಸ ಮತ್ತು ಬದಲಾವಣೆಗಳನ್ನು ಪರಿಕಲ್ಪಿಸುವ ಕೆಲಸ ಮಾಡುತ್ತಿದೆ ಎಂದು ಹಿರಿಯ ಅಧಿಕಾರಿಗಳು ಅನಾಮಧೇಯತೆ ಉಳಿಸಿಕೊಳ್ಳುವಂತೆ ಹೇಳಿ HT ಕನ್ನಡದ ಮಾತೃಸಂಸ್ಥೆ ಹಿಂದುಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ.
ಪ್ರಸ್ತುತ ರೇಕ್ ರಚನೆ ಮತ್ತು ಆಸನ ವ್ಯವಸ್ಥೆಗಳನ್ನು ಪರಿಷ್ಕರಿಸುವ ಕೆಲಸವನ್ನು ಐಸಿಎಫ್ ಮಾಡುತ್ತಿದೆ. ಬೇಡಿಕೆ ಅಥವಾ ಅದರ ಬೆಳವಣಿಗೆಗೆ ಅನುಗುಣವಾಗಿ ಇದನ್ನು ಎಂಟು ಅಥವಾ 12 ಅಥವಾ 16 ಬೋಗಿಗಳ ರೈಲನ್ನಾಗಿ ಮಾಡಬಹುದು ಎಂದು ಹಿರಿಯ ರೈಲ್ವೆ ಅಧಿಕಾರಿ ಹೇಳಿದರು.
ರೈಲ್ವೇ ಅಧಿಕಾರಿಗಳ ಪ್ರಕಾರ, ಈ ಪರಿಕಲ್ಪನೆಯ ಪುರಾವೆಯಾಗಿ ಎಂಟು ಬೋಗಿಗಳ ವಂದೇ ಭಾರತ್ ರೇಕ್ ಅನ್ನು ತಯಾರಿಸಲು ಯೋಜಿಸಲಾಗಿದೆ. ಇದನ್ನು 12/16/20/24 ಬೋಗಿ ರಚನೆಗೆ ಅಪ್ಡೇಟ್ ಮಾಡಬಹುದಾಗಿದೆ. ಬೇಡಿಕೆ ಮತ್ತು ದಟ್ಟಣೆಗೆ ಅನುಗುಣವಾಗಿ ಈ ರೈಲುಗಳ ವಿಸ್ತೃತ ಸಂರಚನೆಯು ಮಾರ್ಗದಿಂದ ಮಾರ್ಗಕ್ಕೆ ಭಿನ್ನವಾಗಿರಲಿದೆ.
ರೈಲ್ವೆ ಸಚಿವಾಲಯದ ಪ್ರಯಾಣಿಕರ ಸೌಕರ್ಯಗಳ ಸಮಿತಿಯ ಸದಸ್ಯ ಕೈಲಾಶ್ ವರ್ಮಾ, "ರೈಲ್ವೆಯು ದೀರ್ಘ ಮಾರ್ಗಗಳಲ್ಲಿ ಚಲಿಸುವ ಸಾಮಾನ್ಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸ್ಲೀಪರ್ ಕೋಚ್‌ಗಳನ್ನು ಕೂಡ ಸೇರಿಸಬಹುದು" ಎಂದು ಹೇಳಿದರು.
ಆಸನ ವ್ಯವಸ್ಥೆಯೊಂದಿಗೆ ಮಿನಿ-ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವಿನ್ಯಾಸವನ್ನು ರೂಪಿಸಲಾಗುತ್ತಿರುವ ಕಾರಣ, ಅಂತಹ ಮೊದಲ ಎಂಟು ಬೋಗಿಗಳ ವಂದೇ ಭಾರತ್‌ನ ಮೂಲಮಾದರಿಯನ್ನು ಐಸಿಎಫ್‌ನಲ್ಲಿ ತಯಾರಿಸಲಾಗುತ್ತಿದೆ. ಸುಮಾರು ಎರಡು ತಿಂಗಳಲ್ಲಿ ಇದು ಸಿದ್ಧವಾಗಲಿದೆ. ಪ್ರಸ್ತುತ, ICF 16 ಬೋಗಿಗಳ ವಂದೇ ಭಾರತ್ ರೈಲುಗಳನ್ನು ತಯಾರಿಸುತ್ತದೆ.
“ಎರಡು ಎಂಟು ಬೋಗಿಗಳ ವಂದೇ ಭಾರತ್ ರೈಲುಗಳನ್ನು ಸಂಯೋಜಿಸುವ ಮೂಲಕ ಈ ರೈಲುಗಳನ್ನು 16 ಬೋಗಿಗಳ ರೈಲುಗಳಾಗಿ ಪರಿವರ್ತಿಸಬಹುದು. ಇದಲ್ಲದೆ, ಎಂಟು ಬೋಗಿಗಳ ವಂದೇ ಭಾರತ್ ಅನ್ನು ನಿರ್ವಹಿಸುವ ಮೂಲಕ, ಎರಡು ರೈಲುಗಳು ಕ್ರಮವಾಗಿ ಕಾರಿಡಾರ್‌ನ ಎರಡೂ ತುದಿಗಳಿಂದ ಚಲಾಯಿಸಬಹುದು. ಇದು ಹೆಚ್ಚಿನ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸಹಾಯ ಮಾಡುತ್ತದೆ”ಎಂದು ಇನ್ನೊಬ್ಬ ರೈಲ್ವೆ ಅಧಿಕಾರಿ ಹೇಳಿದರು.
ಇದಲ್ಲದೆ, ರೈಲ್ವೇಯು ಸಣ್ಣ ಟೈರ್ 2 ನಗರಗಳನ್ನು ಅಂದರೆ ಜಲಂಧರ್ ಜತೆಗೆ ಲುಧಿಯಾನ ಅಥವಾ ಕೊಯಮತ್ತೂರು ಜತೆಗೆ ಮಧುರೈ ಜೋಡಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಮಿನಿ ವಂದೇ ಭಾರತ್ ಹೊಂದಿಕೊಳ್ಳುತ್ತದೆ. ಪ್ರಮುಖ ನಗರಗಳ ನಡುವೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಂಟು ವಂದೇ ಭಾರತ್ ರೈಲುಗಳನ್ನು ಓಡಿಸಲು ವಿನಂತಿಗಳು ಬಂದಿವೆ ಎಂದು ರೈಲ್ವೆ ತಿಳಿಸಿದೆ.