ಮಕ್ಕಳು ಗೋಡೆ ಮೇಲೆ ಬಿಡಿಸಿದ ಚಿತ್ರಗಳನ್ನು ಅಳಿಸಲಾಗದೇ ಕಷ್ಟಪಡುತ್ತಿದ್ದೀರಾ? ಇಲ್ಲಿದೆ ಕಲೆಗಳನ್ನು ತೆಗೆಯುವ ಸುಲಭ ವಿಧಾನ
Cleaning Tips: ಮಕ್ಕಳು ಹೆಚ್ಚಾಗಿ ಕ್ರೇಯಾನ್, ಪೆನ್ಸಿಲ್ ಮತ್ತಿತರ ವಸ್ತುಗಳನ್ನು ತೆಗೆದುಕೊಂಡು ಗೋಡೆಯ ತುಂಬಾ ಚಿತ್ರ ಬಿಡಿಸುತ್ತಾರೆ. ಆದರೆ ಇದನ್ನು ಕ್ಲೀನ್ ಮಾಡಲು ಮಾತ್ರ ಪಾಲಕರು ಹರಸಾಹಸ ಮಾಡುತ್ತಾರೆ. ಸುಲಭವಾಗಿ ಆ ಕಲೆಗಳನ್ನು ತೆಗೆಯಲು ಸಾಧ್ಯವಿಲ್ಲ. ಆದರೆ ಕೆಲವು ವಿಧಾನಗಳನ್ನು ಪಾಲಿಸಿ ಕ್ಲೀನ್ ಮಾಡಬಹುದು.
ಮಕ್ಕಳ ಕೈಯಲ್ಲಿ ಪೆನ್ಸಿಲ್, ಪೆನ್ ಅಥವಾ ಬಣ್ಣ ಸಿಕ್ಕಿದರೆ ಸಾಕು ತಕ್ಷಣ ಏನಾದರೂ ಒಂದು ತರಲೆ ಕೆಲಸ ಮಾಡಿಯೇ ಮಾಡುತ್ತಾರೆ. ತಮ್ಮ ಬಟ್ಟೆಗಳ ಮೇಲೇ ಹಾಗೇ ಮೈತುಂಬಾ ಚಿತ್ರ ಬರೆದುಕೊಳ್ಳುವುದು ಒಂದಾದರೆ ಗೋಡೆ ತುಂಬಾ ಗೀಚುತ್ತಾರೆ. ಇದರಿಂದಾಗಿ ನಿಮ್ಮ ಮನೆಯ ಅಂದಗೆಡುತ್ತದೆ. ಇದನ್ನು ತಪ್ಪಿಸಲು ನೀವು ನಿಮ್ಮ ಮಕ್ಕಳಿಗೆ ಬೈದರೆ ಸರಿಯಾಗುವುದಿಲ್ಲ. ಅವರಿಗೆ ಸುಮ್ಮನೆ ಬೇಸರ ಮಾಡಿದಂತಾಗುತ್ತದೆ. ಅವರ ಹೊಸ ಕಲಿಕೆಗೆ ಅಡ್ಡಿಯಾದಂತಾಗುತ್ತದೆ. ಆದರೆ ಮನೆ ಅಂದ ಹಾಳಾದರೂ ನಿಮಗೆ ತೊಂದರೆ ಆಗುತ್ತದೆ. ಹಾಗಾದರೆ ಇದಕ್ಕೆ ಪರಿಹಾರ ಏನು ಎಂದು ಕೇಳುತ್ತಿದ್ದೀರಾ? ಇಲ್ಲಿದೆ ನೋಡಿ ಉತ್ತರ.
ಗೋಡೆಗಳನ್ನು ಮತ್ತೆ ಸ್ವಚ್ಛವಾಗಿ ಮತ್ತು ಸುಂದರವಾಗಿ ಕಾಣುವಂತೆ ಮಾಡಲು ಬಯಸಿದರೆ, ಇಡೀ ಮನೆಗೆ ಬಣ್ಣ ಹಚ್ಚುವ ಬದಲು, ಈ ರೀತಿಯಲ್ಲಿ ಗೋಡೆಗಳನ್ನು ಸ್ವಚ್ಛಗೊಳಿಸಿ. ಇಡೀ ಮನೆ ಸ್ವಚ್ಛವಾಗಿ ಕಾಣುತ್ತದೆ.
ಪಾತ್ರೆ ತೊಳೆಯುವ ಸೋಪ್ ಬಳಸಿ
ಯಾವುದೇ ಪಾತ್ರೆ ತೊಳೆಯುವ ದ್ರವ ಸಾಬೂನು ಮತ್ತು ಹಸಿರು ಬಣ್ಣದ ಪಾತ್ರೆ ತೊಳೆಯುವ ಸ್ಕ್ರಬ್‌ಗೆ ಜೆಲ್ ಅಥವಾ ಸೋಪಿನ ಪುಡಿ ಹಾಕಿಕೊಳ್ಳಿ. ಇದರ ಸಹಾಯದಿಂದ ಗೋಡೆಗಳ ಮೇಲಿರುವ ಬಣ್ಣ ಮತ್ತು ಪೆನ್ಸಿಲ್ ಕಲೆಗಳನ್ನು ಉಜ್ಜುವ ಮೂಲಕ ಸುಲಭವಾಗಿ ಸ್ವಚ್ಛಗೊಳಿಸಬಹುದು.
ಗ್ಲಾಸ್ ಕ್ಲೀನರ್ ಬಳಸಿ
ಗ್ಲಾಸ್ ಕ್ಲೀನರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಸಹಾಯದಿಂದ, ಗೋಡೆಗಳನ್ನು ಸಹ ಸ್ವಚ್ಛಗೊಳಿಸಬಹುದು. ಗ್ಲಾಸ್ ಕ್ಲೀನರ್ ಅನ್ನು ಸ್ವಲ್ಪ ಸಮಯದವರೆಗೆ ಸಿಂಪಡಿಸಿ ಮತ್ತು ಅದನ್ನು ಹಾಗೇ ಬಿಡಿ. ನಂತರ ಸ್ಪಾಂಜ್ ನಿಂದ ಸ್ಕ್ರಬ್ ಮಾಡಿ ಸ್ವಚ್ಛಗೊಳಿಸಿ. ಗೋಡೆಗಳ ಮೇಲೆ ಪೆನ್ ಮತ್ತು ಕ್ರೇಯಾನ್ ಗುರುತುಗಳನ್ನು ಸ್ವಚ್ಛಗೊಳಿಸಲು, ವಿನೆಗರ್ ಅನ್ನು ಒಂದು ಬಟ್ಟಲಿನಲ್ಲಿ ಇರಿಸಿ ಮತ್ತು ಸ್ಪಾಂಜ್ ಅನ್ನು ಅದ್ದಿ ಉಜ್ಜಿ. ಸ್ವಲ್ಪ ಸಮಯದಲ್ಲಿ ಇಡೀ ಗೋಡೆಯನ್ನು ಸ್ವಚ್ಛವಾಗುತ್ತದೆ.
ಗೋಡೆಗಳಿಂದ ಕ್ರೇಯಾನ್ ಕಲೆಗಳು ಉಳಿದಿದ್ದರೂ, ಪದೇ ಪದೇ ಉಜ್ಜುವುದು ಗೋಡೆಗಳ ಬಣ್ಣವನ್ನು ಹಾಳು ಮಾಡಬಹುದು ಇದನ್ನು ನೆನಪಿನಲ್ಲಿಡಿ.
ಪ್ಲಾಸ್ಟಿಕ್ ಪೇಪರ್ ಅಂಟಿಸಿ
ಮಕ್ಕಳು ಚಿತ್ರ ಬಿಡಿಸುವ ಮುನ್ನ ನೀವು ಮಾಡಬೇಕಾದ ಒಂದು ಮುಖ್ಯ ಕೆಲಸ ಎಂದರೆ ಅದು ಗೋಡೆಗೆ ಟ್ರಾನ್ಸಪರೆಂಟ್ ಪ್ಲಾಸ್ಟಿಕ್ ಹಾಕುವುದು. ಹೀಗೆ ಮಾಡಿದರೆ ಅವರು ಬಿಡಿಸಿದ ಚಿತ್ರ ಗೋಡೆಗೆ ಅಂಟಿಕೊಳ್ಳುವುದಿಲ್ಲ. ಆ ಪ್ಲಾಸ್ಟಿಕ್ ತೆಗೆದರೆ ಮತ್ತೆ ಎಲ್ಲವೂ ಸರಿ ಹೋಗುತ್ತದೆ. ನೀವೂ ಕೂಡ ಇದೇ ರೀತಿ ಮಾಡಬಹುದು.