2024ರ ಕಿಯಾ ಕಾರ್ನಿವಲ್‌ ಅಕ್ಟೋಬರ್‌ 3ರಂದು ಬಿಡುಗಡೆ; ದರ ಎಷ್ಟಿರಬಹುದು, ಹೇಗಿರಲಿದೆ? ಇಲ್ಲಿದೆ ವಿವರ-automobile news 2024 kia carnival set for launch tomorrow october 3 price expectation features specifications pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  2024ರ ಕಿಯಾ ಕಾರ್ನಿವಲ್‌ ಅಕ್ಟೋಬರ್‌ 3ರಂದು ಬಿಡುಗಡೆ; ದರ ಎಷ್ಟಿರಬಹುದು, ಹೇಗಿರಲಿದೆ? ಇಲ್ಲಿದೆ ವಿವರ

2024ರ ಕಿಯಾ ಕಾರ್ನಿವಲ್‌ ಅಕ್ಟೋಬರ್‌ 3ರಂದು ಬಿಡುಗಡೆ; ದರ ಎಷ್ಟಿರಬಹುದು, ಹೇಗಿರಲಿದೆ? ಇಲ್ಲಿದೆ ವಿವರ

ಬಹುನಿರೀಕ್ಷಿತ 2024ರ ಕಿಯಾ ಕಾರ್ನಿವಲ್‌ ಅಕ್ಟೋಬರ್‌ 3ರಂದು ಅಂದರೆ ನಾಳೆ ಬಿಡುಗಡೆಯಾಗಲಿದೆ. ಈ ಹೊಸ ಕಿಯಾ ಕಾರ್ನಿವಲ್‌ ಕುರಿತು ಕಿಯಾ ಕಾರು ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳಿವೆ. ಈ ಕಾರಿನ ಕುರಿತು ಹೆಚ್ಚಿನ ವಿವರ ತಿಳಿಯೋಣ ಬನ್ನಿ.

2024ರ ಕಿಯಾ ಕಾರ್ನಿವಲ್‌ ಅಕ್ಟೋಬರ್‌ 3ರಂದು ಬಿಡುಗಡೆ
2024ರ ಕಿಯಾ ಕಾರ್ನಿವಲ್‌ ಅಕ್ಟೋಬರ್‌ 3ರಂದು ಬಿಡುಗಡೆ

ಬೆಂಗಳೂರು: ಕಿಯಾ ಇಂಡಿಯಾವು ಬಹುನಿರೀಕ್ಷಿತ 024ರ ಕಿಯಾ ಕಾರ್ನಿವಲ್‌ ಅಕ್ಟೋಬರ್‌ 3ರಂದು ಅಂದರೆ ನಾಳೆ ಬಿಡುಗಡೆ ಮಾಡಲಿದೆ. ಸೆಪ್ಟೆಂಬರ್‌ 16ರಿಂದಲೇ ಈ ಕಾರಿನ ಬುಕ್ಕಿಂಗ್‌ ಆರಂಭವಾಗಿತ್ತು. ಸಾಕಷ್ಟು ಜನರು 2 ಲಕ್ಷ ರೂಪಾಯಿ ನೀಡಿ ಕಾರ್ನಿವಲ್‌ ಕಾರನ್ನು ಬುಕ್ಕಿಂಗ್‌ ಮಾಡಿದ್ದರು. ಹಿಂದಿನ ತಲೆಮಾರಿನ ಕಾರ್ನಿವಲ್‌ ಅನ್ನು 2023ರಲ್ಲಿ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಾಗಿತ್ತು. ಇದೀಗ ಹೊಸ ಕಾರ್ನಿವಲ್‌ ಕಾರು ಸಾಕಷ್ಟು ಅಪ್‌ಗ್ರೇಡ್‌ ಆಗಿ ಆಗಮಿಸಿದೆ. ಇದರ ಫೀಚರ್‌ಗಳು ಮಾತ್ರವಲ್ಲದೆ ಗಾತ್ರದಲ್ಲಿಯೂ ಬದಲಾವಣೆಯಾಗಿರಲಿದೆ. ಈ ಲಗ್ಷುರಿ ಎಂಪಿವಿಯ ಜತೆ ನಾಳೆ ಕಿಯಾ ಇವಿ9 ಎಂಬ ಎಲೆಕ್ಟ್ರಿಕ್‌ ಎಸ್‌ಯುವಿಯನ್ನೂ ಕಂಪನಿ ಭಾರತದಲ್ಲಿ ಬಿಡುಗಡೆ ಮಾಡಲಿದೆ.

ಈ ಕಿಯಾ ಕಾರಿನ ಸ್ಪೈ ವಿಡಿಯೊವೊಂದು ಇತ್ತೀಚೆಗೆ ವೈರಲ್‌ ಆಗಿತ್ತು. ಅಂದ್ರೆ, ಬಿಡುಗಡೆ ಪೂರ್ವ ಉದ್ದೇಶಕ್ಕಾಗಿ ಈ ಕಾರಿನ ಮಾಡೆಲ್‌ ಅನ್ನು ವಿದೇಶದಿಂದ ವಿಮಾನದ ಮೂಲಕ ತರಿಸಲಾಗಿತ್ತು. ವಿಮಾನದ ಕಾರ್ಗೊದಲ್ಲಿ ಈ ಕಾರನ್ನು ಇಳಿಸುವ ಸಮಯದಲ್ಲಿ ಯಾರೋ ಇದನ್ನು ಶೂಟಿಂಗ್‌ ಮಾಡಿದ್ದರು. ಬಿಳಿ ಬಣ್ಣದ ನಾಲ್ಕನೇ ತಲೆಮಾರಿನ ಈ ಕಾರ್ನಿವಲ್‌ ಕಾರನ್ನು ವಿಮಾನದ ಕಾರ್ಗೊದಿಂದ ಇಳಿಸುವ ಸಂದರ್ಭದಲ್ಲಿ ಫೋಟೋ ತೆಗೆಯಲಾಗಿತ್ತು. ಈ ಸ್ಪೈ ಚಿತ್ರ ನೋಡಿದಾಗಲೇ ಕಾರಿನಲ್ಲಿ ಸಾಕಷ್ಟು ಅಪ್‌ಡೇಟ್‌ ಆಗಿರುವುದು ಗೋಚರಿಸಿತ್ತು. ಪರಿಷ್ಕೃತ ಮುಂಭಾಗದ ಗ್ರಿಲ್‌ಗಳು, ತೆಳುವಾದ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಲೈಟ್‌ಗಳು, ಡೇಟೈಮ್‌ ರನ್ನಿಂಗ್‌ ಎಲ್‌ಇಡಿ ಲೈಟ್‌ ಸೇರಿದಂತೆ ಹಲವು ಫೀಚರ್‌ಗಳು, ಬದಲಾವಣೆಗಳನ್ನು ವಾಹನ ವಿಶ್ಲೇಷಕರು ಗುರುತಿಸಿದ್ದರು.

ಈಗಾಗಲೇ ಕಂಪನಿಯು ಇದೇ ಕಾರನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಆದರೆ, ಭಾರತದ ಆವೃತ್ತಿ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ನಾಲ್ಕನೇ ತಲೆಮಾರಿನ ಕಿಯಾ ಕಾರ್ನಿವಲ್‌ ಎಂಪಿವಿ ಉತ್ತಮ ಬೇಡಿಕೆ ಪಡೆದುಕೊಂಡಿದೆ. ನೂತನ ಕಾರಿಗೆ ದೇಶದಲ್ಲಿಯೂ ಬೇಡಿಕೆ ಹೆಚ್ಚಾಗುವ ಸೂಚನೆ ಇದೆ. ಕಂಪನಿಯು ಇದೇ ಕಾರನ್ನು ಕೆಎ4 ಎಂಬ ಹೆಸರಿನಲ್ಲಿ ಆಟೋ ಶೋನಲ್ಲಿ ಪ್ರದರ್ಶನ ಮಾಡಿತ್ತು. ನೂತನ ತಲೆಮಾರಿನ ಕಿಯಾ ಕಾರ್ನಿವಲ್‌ ನೋಡಲು ಕೆಎ4 ಅನ್ನು ಹೋಲುತ್ತದೆ.

ದರ ಎಷ್ಟಿರಬಹುದು?

ಈಗಾಗಲೇ ನೂತನ ಕಿಯಾ ಕಾರಿನ ದರ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ನಮಗೆ ಬಂದ ಮಾಹಿತಿ ಪ್ರಕಾರ ಇದರ ದರ ಸುಮಾರು 50 ಲಕ್ಷ ರೂಪಾಯಿ ಆಸುಪಾಸಿನಲ್ಲಿ ಇರಲಿದೆ. ನಿರ್ದಿಷ್ಟ ದರ ನಾಳೆ ಕಾರ್ನಿವಲ್‌ ಕಾರು ಬಿಡುಗಡೆಯಾದ ಬಳಿಕವಷ್ಟೇ ತಿಳಿಯಲಿದೆ. ಭಾರತದಲ್ಲಿ ಕಂಪ್ಲಿಟ್ಲಿ ಬಿಲ್ಡ್‌ ಯೂನಿಟ್‌ (ಸಿಬಿಯು) ಮಾದರಿಯಲ್ಲಿ ಈ ಕಾರನ್ನು ಜೋಡಿಸಿ ಮಾರಾಟ ಮಾಡಲಾಗುತ್ತದೆ. ಇದರಲ್ಲಿ 2.2 ಲೀಟರ್‌ನ ಡೀಸೆಲ್‌ ಎಂಜಿನ್‌ ಮತ್ತು 8 ಸ್ಪೀಡ್‌ನ ಆಟೋಮ್ಯಾಟಿಕ್‌ ಗಿಯರ್‌ ಬಾಕ್ಸ್‌ ಇರುವ ಸೂಚನೆಯಿದ್ದು, ಇದು 191 ಬಿಎಚ್‌ಪಿ ಮತ್ತು 441ಎನ್‌ಎಂ ಟಾರ್ಕ್‌ ನೀಡುವ ಸಾಧ್ಯತೆ ಇದೆ.

ಸದ್ಯ ಈ ಸೆಗ್ಮೆಂಟಿನಲ್ಲಿ ಕಾರ್ನಿವಲ್‌ ಕಾರಿಗೆ ಪೈಪೋಟಿ ನೀಡಲು ಕೆಲವೇ ಕಾರುಗಳಿವೆ. ಟೊಯೊಟಾ ವೆಲ್‌ಫೈರ್‌ಗೆ ಇದು ಡೈರೆಕ್ಟ್‌ ಕಾಂಪಿಟೇಟರ್‌. ಟೊಯೊಟಾ ಇನ್ನೋವಾ ಹೈಕ್ರಾಸ್‌ ಜತೆಗೂ ಪೈಪೋಟಿ ನಡೆಸಬಹುದು.

mysore-dasara_Entry_Point