2024 ಕಿಯಾ ಕಾರ್ನಿವಲ್‌ ಬುಕ್ಕಿಂಗ್‌ ಆರಂಭವಾದ 24 ಗಂಟೆಯಲ್ಲಿ ಖರೀದಿಗೆ ಮುಗಿಬಿದ್ದ ಗ್ರಾಹಕರು; ಈ ಕಾರ್ನಿವಲ್‌ನಲ್ಲಿ ಹೊಸದೇನಿದೆ?-automobile news 2024 kia carnival bookings open 24 hours 1 822 bookings check what has changed over older model pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  2024 ಕಿಯಾ ಕಾರ್ನಿವಲ್‌ ಬುಕ್ಕಿಂಗ್‌ ಆರಂಭವಾದ 24 ಗಂಟೆಯಲ್ಲಿ ಖರೀದಿಗೆ ಮುಗಿಬಿದ್ದ ಗ್ರಾಹಕರು; ಈ ಕಾರ್ನಿವಲ್‌ನಲ್ಲಿ ಹೊಸದೇನಿದೆ?

2024 ಕಿಯಾ ಕಾರ್ನಿವಲ್‌ ಬುಕ್ಕಿಂಗ್‌ ಆರಂಭವಾದ 24 ಗಂಟೆಯಲ್ಲಿ ಖರೀದಿಗೆ ಮುಗಿಬಿದ್ದ ಗ್ರಾಹಕರು; ಈ ಕಾರ್ನಿವಲ್‌ನಲ್ಲಿ ಹೊಸದೇನಿದೆ?

2024 ಕಿಯಾ ಕಾರ್ನಿವಲ್‌: 2023ರಲ್ಲಿ ಈ ಹಿಂದಿನ ತಲೆಮಾರಿನ ಕಾರ್ನಿವಲ್‌ ಕಾರನ್ನು ಮಾರುಕಟ್ಟೆಯಿಂದ ಹಿಂದಕ್ಕೆ ತೆಗೆದುಕೊಳ್ಳಲಾಗಿತ್ತು. ಇದೀಗ ಕಂಪನಿಯು ಹಲವು ಅದ್ಭುತ ಫೀಚರ್‌ಗಳು ಮತ್ತು ಅಪ್‌ಗ್ರೇಡ್‌ಗಳೊಂದಿಗೆ ಹೊಸ ಕಾರ್ನಿವಲ್‌ ಅನ್ನು ಪರಿಚಯಿಸುತ್ತಿದೆ. ಈ ಎಂಪಿವಿಯ ಬುಕ್ಕಿಂಗ್‌ ಅಧಿಕೃತವಾಗಿ ಆರಂಭವಾಗಿದೆ.

 ಈ ಕಾರು ಅಕ್ಟೋಬರ್‌ 3, 2024ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಕೇವಲ 24 ಗಂಟೆಯಲ್ಲಿ ಭಾರತದಲ್ಲಿ 1,822 ಗ್ರಾಹಕರು ನೂತನ ಎಂಪಿವಿಯನ್ನು ಬುಕ್ಕಿಂಗ್‌ ಮಾಡಿದ್ದಾರೆ
ಈ ಕಾರು ಅಕ್ಟೋಬರ್‌ 3, 2024ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಕೇವಲ 24 ಗಂಟೆಯಲ್ಲಿ ಭಾರತದಲ್ಲಿ 1,822 ಗ್ರಾಹಕರು ನೂತನ ಎಂಪಿವಿಯನ್ನು ಬುಕ್ಕಿಂಗ್‌ ಮಾಡಿದ್ದಾರೆ

2024 ಕಿಯಾ ಕಾರ್ನಿವಲ್‌: ಕಿಯಾ ಕಂಪನಿಯ ಮುಂಬರುವ ಎಂಪಿವಿ ಕಾರ್ನಿವಲ್‌ 2024ರ ಬುಕ್ಕಿಂಗ್‌ ಸೆಪ್ಟೆಂಬರ್‌ 16ರಿಂದ ಅಧಿಕೃತವಾಗಿ ಆರಂಭವಾಗಿದೆ. ಆಸಕ್ತರು 2 ಲಕ್ಷ ರೂಪಾಯಿ ಮುಂಗಡ ನೀಡಿ ಕಾರ್ನಿವಲ್‌ ಕಾರನ್ನು ಬುಕ್ಕಿಂಗ್‌ ಮಾಡಬಹುದು. ಈ ಕಾರು ಅಕ್ಟೋಬರ್‌ 3, 2024ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಕೇವಲ 24 ಗಂಟೆಯಲ್ಲಿ ಭಾರತದಲ್ಲಿ 1,822 ಗ್ರಾಹಕರು ನೂತನ ಎಂಪಿವಿಯನ್ನು ಬುಕ್ಕಿಂಗ್‌ ಮಾಡಿದ್ದಾರೆ ಎಂದು ಕಂಪನಿ ತಿಳಿಸಿದೆ.

2023ರಲ್ಲಿ ಈ ಹಿಂದಿನ ತಲೆಮಾರಿನ ಕಾರ್ನಿವಲ್‌ ಕಾರನ್ನು ಮಾರುಕಟ್ಟೆಯಿಂದ ಹಿಂದಕ್ಕೆ ತೆಗೆದುಕೊಳ್ಳಲಾಗಿತ್ತು. ಭಾರತದ ಹೊಗೆನೀತಿಗೆ ತಕ್ಕಂತೆ ಆ ಕಾರು ಇಲ್ಲದೆ ಇರುವ ಕಾರಣ ಕಂಪನಿಯು ಕಾರ್ನಿವಲ್‌ ಕಾರಿನ ಮಾರಾಟ ನಿಲ್ಲಿಸಿತ್ತು. ಇದೀಗ ಕಾರ್ನಿವಲ್‌ ಹಲವು ಫೀಚರ್‌ಗಳನ್ನು ಅಳವಡಿಸಿಕೊಂಡು, ವಿನ್ಯಾಸದಲ್ಲೂ ಮಾರ್ಪಾಡು ಮಾಡಿಕೊಂಡು ಭಾರತಕ್ಕೆ ಆಗಮಿಸಲು ಸಜ್ಜಾಗಿದೆ. ಅಕ್ಟೋಬರ್‌ 3ರಂದು ಕಿಯಾ ಕಾರ್ನಿವಲ್‌ ಮಾತ್ರವಲ್ಲದೆ ಕಂಪನಿಯು ಕಿಯಾ ಇವಿ9 ಎಂಬ ಎಲೆಕ್ಟ್ರಿಕ್‌ ಎಸ್‌ಯುವಿಯನ್ನೂ ಬಿಡುಗಡೆ ಮಾಡಲಿದೆ.

ಕಿಯಾ ಕಂಪನಿಯು ಆಟೋ ಎಕ್ಸ್‌ಪೋ 2023ರಲ್ಲಿ ಕಿಯಾ ಕಾರ್ನಿವಲ್‌ ಅನ್ನು ಪ್ರದರ್ಶಿಸಿತ್ತು. ಆದರೆ, ನಾಡಿದ್ದು ಬಿಡುಗಡೆಯಾಗುವ ಕಿಯಾ ಇನ್ನಷ್ಟು ಅಂದ ಇರಲಿದೆ. ಹಳೆಯ ಕಿಯಾ ಕಾರು 2020--23ರ ನಡುವೆ 14,500 ಯೂನಿಟ್‌ ಸೇಲ್‌ ಆಗಿತ್ತು.

ಹಳೆಯ ಕಾರ್ನಿವಲ್‌ಗೂ ಹೊಸತಕ್ಕೂ ಏನು ವ್ಯತ್ಯಾಸ?

ವಿನ್ಯಾಸದ ದೃಷ್ಟಿಯಿಂದ ನೋಡುವುದಾದರೆ ಹೊಸ ಕಾರ್ನಿವಲ್‌ ಲುಕ್‌ ಸಾಕಷ್ಟು ಬದಲಾಗಿದೆ. ಕಂಪನಿಯು ಕಳೆದ ನವೆಂಬರ್‌ ತಿಂಗಳಲ್ಲಿ ಕಾರ್ನಿವಲ್‌ ಫೇಸ್‌ಲಿಫ್ಟ್‌ ಅನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿತ್ತು. ಇದೀಗ ಭಾರತಕ್ಕೂ ಈ ಆವೃತ್ತಿ ಆಗಮಿಸುತ್ತಿದೆ. ಮೂರನೇ ತಲೆಮಾರಿನ ಮಾಡೆಲ್‌ಗೆ ಹೋಲಿಸಿದರೆ ನೂತನ ಕಾರ್ನಿವಲ್‌ ಹೆಚ್ಚು ಬಾಕ್ಸಿ ವಿನ್ಯಾಸ ಹೊಂದಿದೆ. ಅಂದರೆ, ತನ್ನ ಗಾತ್ರವನ್ನು ಹೆಚ್ಚಿಸಿಕೊಂಡಿದೆ. ಮುಂಭಾಗದಲ್ಲಿ ಆಕರ್ಷಕ ಟೈಗರ್‌ ನೋಸ್‌ ಗ್ರಿಲ್‌ ಇದೆ. ವರ್ಟಿಕಲ್‌ ಆಗಿ ಜೋಡಿಸಿರುವ ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್‌ ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು ಇವೆ. ಹೊಸ ಕಾರ್ನಿವಲ್‌ 18 ಇಂಚಿನ ಅಲಾಯ್‌ ವೀಲ್‌ ಹೊಂದಿರಲಿದೆ. ಕಾರಿನ ಹಿಂಭಾಗದಲ್ಲೂ ಎಲ್‌ ಆಕಾರದ ಎಲ್‌ಇಡಿ ಟೇಲ್‌ ಲ್ಯಾಂಪ್‌ಗಳು ಇವೆ.

7 ಸೀಟಿನ (2+2+3) ಈ ಎಂಪಿವಿಯಲ್ಲಿ 4 ಸ್ಪೋಕ್‌ ಸ್ಟಿಯರಿಂಗ್‌ ವೀಲ್‌, ಡ್ಯೂಯೆಲ್‌ ಎಲೆಕ್ಟ್ರಿಕ್‌ ಸನ್‌ರೂಫ್‌, 3 ಝೋನ್‌ ಕ್ಲೈಮೇಟ್‌ ಕಂಟ್ರೋಲ್‌, ಹೆಡ್‌ಅಪ್‌ ಡಿಸ್‌ಪ್ಲೇ, 12 ಸ್ಪೀಕರ್‌ನ ಬಾಷ್‌ ಸೌಂಡ್‌ ಸಿಸ್ಟಮ್‌ಗಳು ಇವೆ.
7 ಸೀಟಿನ (2+2+3) ಈ ಎಂಪಿವಿಯಲ್ಲಿ 4 ಸ್ಪೋಕ್‌ ಸ್ಟಿಯರಿಂಗ್‌ ವೀಲ್‌, ಡ್ಯೂಯೆಲ್‌ ಎಲೆಕ್ಟ್ರಿಕ್‌ ಸನ್‌ರೂಫ್‌, 3 ಝೋನ್‌ ಕ್ಲೈಮೇಟ್‌ ಕಂಟ್ರೋಲ್‌, ಹೆಡ್‌ಅಪ್‌ ಡಿಸ್‌ಪ್ಲೇ, 12 ಸ್ಪೀಕರ್‌ನ ಬಾಷ್‌ ಸೌಂಡ್‌ ಸಿಸ್ಟಮ್‌ಗಳು ಇವೆ. (Kia )

ಫೀಚರ್‌ ವ್ಯತ್ಯಾಸ

ನೂತನ ಕಿಯಾ ಕಾರ್ನಿವಲ್‌ನಲ್ಲಿ ಎರಡು 12.3 ಇಂಚಿನ ಕರ್ವಡ್‌ ಸ್ಕ್ರೀನ್‌ಗಳು ಇರಲಿವೆ. 7 ಸೀಟಿನ (2+2+3) ಈ ಎಂಪಿವಿಯಲ್ಲಿ 4 ಸ್ಪೋಕ್‌ ಸ್ಟಿಯರಿಂಗ್‌ ವೀಲ್‌, ಡ್ಯೂಯೆಲ್‌ ಎಲೆಕ್ಟ್ರಿಕ್‌ ಸನ್‌ರೂಫ್‌, 3 ಝೋನ್‌ ಕ್ಲೈಮೇಟ್‌ ಕಂಟ್ರೋಲ್‌, ಹೆಡ್‌ಅಪ್‌ ಡಿಸ್‌ಪ್ಲೇ, 12 ಸ್ಪೀಕರ್‌ನ ಬಾಷ್‌ ಸೌಂಡ್‌ ಸಿಸ್ಟಮ್‌ಗಳು ಇರಲಿವೆ. ಎರಡನೇ ಸಾಲಿನ ಸೀಟುಗಳಿಗೂ ಸಾಕಷ್ಟು ಫೀಚರ್‌ಗಳು ಇರಲಿವೆ.

ಸುರಕ್ಷತೆಯ ಫೀಚರ್‌ಗಳು ಸಾಕಷ್ಟಿವೆ. ಎಂಟು ಏರ್‌ಬ್ಯಾಗ್‌ಗಳು, ನಾಲ್ಕು ಡಿಸ್ಕ್‌ ಬ್ರೇಕ್‌ಗಳು, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌, ಹಿಲ್‌ ಅಸಿಸ್ಟ್‌ ಕಂಟ್ರೋಲ್‌, ಟೈರ್‌ ಪ್ರೆಸರ್‌ ಮಾನಿಟರಿಂಗ್‌ ಸಿಸ್ಟಮ್‌, ವಿಎಸ್‌ಎಂ, ಪಾರ್ಕಿಂಗ್‌ ಸೆನ್ಸಾರ್‌ (ಮುಂಭಾಗ, ಹಿಂಭಾಗ, ಬದಿಗಳಿಗೆ) ಇತ್ಯಾದಿ ಸುರಕ್ಷತೆಯ ಫೀಚರ್‌ಗಳು ಇರಲಿವೆ. ಲೆವೆಲ್‌ 2 ಅಡ್ವಾನ್ಸಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಮ್‌ ಕೂಡ ಹೊಂದಿರಲಿದೆ. ಲೇನ್‌ ಕೀಪ್‌ ಅಸಿಸ್ಟ್‌, ಲೇನ್‌ ಡಿಪಾರ್ಚರ್‌ ವಾರ್ನಿಂಗ್‌, ಫಾರ್ವರ್ಡ್‌ ಕೊಲಿಸನ್‌ ವಾರ್ನಿಂಗ್‌, ಹೈ ಬೀಮ್‌ ಅಸಿಸ್ಟ್‌, ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌ ಇತ್ಯಾದಿ ಫೀಚರ್‌ಗಳು ಇವೆ.

ನೂತನ ಎಂಪಿವಿಯಲ್ಲಿ 2.2 ಲೀಟರ್‌ನ ನಾಲ್ಕು ಸಿಲಿಂಡರ್‌ನ ಡೀಸೆಲ್‌ ಎಂಜಿನ್‌ ಇರಲಿದೆ. ಇದು 8 ಸ್ಪೀಡ್‌ನ ಟಾರ್ಕ್‌ ಕನ್ವರ್ಟರ್‌ ಆಟೋಮ್ಯಾಟಿಕ್‌ ಗಿಯರ್‌ಬಾಕ್ಸ್‌ ಹೊಂದಿರಲಿದೆ. ಇದು 196 ಬಿಎಚ್‌ಪಿ ಮತ್ತು 441 ಎನ್‌ಎಂ ಟಾರ್ಕ್‌ ಒದಗಿಸಲಿದೆ.

mysore-dasara_Entry_Point