ಸೆಪ್ಟೆಂಬರ್‌ ತಿಂಗಳಲ್ಲಿ ಟೊಯೊಟಾ ಕಾರುಗಳ ಮಾರಾಟದಲ್ಲಿ ಜಿಗಿತ; ಕಂಪನಿಯ ಈ ಕಾರುಗಳಿಗೆ ಡಿಮ್ಯಾಂಡ್‌ ಜಾಸ್ತಿ-automobile news toyota posts healthy jump in sales in september fortuner and innova drive the growth pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸೆಪ್ಟೆಂಬರ್‌ ತಿಂಗಳಲ್ಲಿ ಟೊಯೊಟಾ ಕಾರುಗಳ ಮಾರಾಟದಲ್ಲಿ ಜಿಗಿತ; ಕಂಪನಿಯ ಈ ಕಾರುಗಳಿಗೆ ಡಿಮ್ಯಾಂಡ್‌ ಜಾಸ್ತಿ

ಸೆಪ್ಟೆಂಬರ್‌ ತಿಂಗಳಲ್ಲಿ ಟೊಯೊಟಾ ಕಾರುಗಳ ಮಾರಾಟದಲ್ಲಿ ಜಿಗಿತ; ಕಂಪನಿಯ ಈ ಕಾರುಗಳಿಗೆ ಡಿಮ್ಯಾಂಡ್‌ ಜಾಸ್ತಿ

ಟೊಯೊಟಾ ಕಂಪನಿಯ ಸೆಪ್ಟೆಂಬರ್‌ ತಿಂಗಳ ವಾಹನ ಮಾರಾಟದ ರಿಪೋರ್ಟ್‌ ಕಾರ್ಡ್‌ ಬಂದಿದೆ. ಎಸ್‌ಯುವಿ, ಎಂಪಿವಿ ಮತ್ತು ಸಣ್ಣ ಕಾರು ಮಾರಾಟದಲ್ಲಿ ಕಂಪನಿ ಗಮನಾರ್ಹ ಪ್ರಗತಿ ದಾಖಲಿಸಿದೆ.

ಸೆಪ್ಟೆಂಬರ್‌ ತಿಂಗಳಲ್ಲಿ ಟೊಯೊಟಾ ಕಾರುಗಳ ಮಾರಾಟ ಹೆಚ್ಚಳ. ಚಿತ್ರದಲ್ಲಿರುವುದು ಟೊಯೊಟಾ ಅರ್ಬನ್‌ ಕ್ರುಸರ್‌ ಟೈಸೂರ್‌
ಸೆಪ್ಟೆಂಬರ್‌ ತಿಂಗಳಲ್ಲಿ ಟೊಯೊಟಾ ಕಾರುಗಳ ಮಾರಾಟ ಹೆಚ್ಚಳ. ಚಿತ್ರದಲ್ಲಿರುವುದು ಟೊಯೊಟಾ ಅರ್ಬನ್‌ ಕ್ರುಸರ್‌ ಟೈಸೂರ್‌

ಟೊಯೊಟಾ ಕಿರ್ಲೊಸ್ಕರ್‌ ಮೋಟಾರ್‌ ಕಂಪನಿಯು ಸೆಪ್ಟೆಂಬರ್‌ 2024ರ ಸೇಲ್ಸ್‌ ರಿಪೋರ್ಟ್‌ ಪ್ರಕಟಿಸಿದೆ. ಕಂಪನಿಯು ಕಳೆದ ತಿಂಗಳು ಸಗಟು ಮಾರುಕಟ್ಟೆಯಲ್ಲಿ 26,847 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 23,802 ಯೂನಿಟ್‌ ಆಗಿತ್ತು. ಕಂಪನಿಯು ಕಳೆದ ತಿಂಗಳು 3045 ವಾಹನಗಳನ್ನು ರಫ್ತು ಮಾಡಿದೆ. ಆಸಕ್ತಿದಾಯಕ ಸಂಗತಿಯೆಂದರೆ, ದೇಶದಲ್ಲಿ ಕಂಪನಿಯ ಎಸ್‌ಯುವಿ, ಎಂಪಿವಿ ಮತ್ತು ಸಣ್ಣಕಾರು ವಿಭಾಗದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಮಾರಾಟ ಹೆಚ್ಚಾಗಿದೆ. ಸೆಪ್ಟೆಂಬರ್‌ ತಿಂಗಳ ಮಾರಾಟದಲ್ಲಿ ಶೇಕಡ 90ರಷ್ಟು ವಾಹನ ಮಾರಾಟವು ಎಸ್‌ಯುವಿ, ಎಂಪಿವಿ, ಸಣ್ಣಕಾರು ವಿಭಾಗದ್ದೇ ಆಗಿತ್ತು.

ಕಂಪನಿಯು 2024-25ರ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ 1,62,623 ವಾಹನಗಳನ್ನು ಮಾರಾಟ ಮಾಡಿದೆ. ಇದು ಕಂಪನಿಯ ಇಲ್ಲಿವರೆಗಿನ ಸ್ಟ್ರಾಂಗೆಸ್ಟ್‌ ಫರ್ಮಾಮೆನ್ಸ್‌ ಆಗಿದೆ. ಕಂಪನಿಯು ಇದಕ್ಕೂ ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 1,23,939 ಕಾರುಗಳನ್ನು ಮಾರಾಟ ಮಾಡಿತ್ತು.

ಟೊಯೊಟಾ ಕಂಪನಿಯ ಫಾರ್ಚ್ಯುನರ್‌ ಮತ್ತು ಟೊಯೊಟಾ ಕಾರುಗಳ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಂಡಿದೆ.

ಟಿಕೇರ್‌ ಸರ್ವೀಸ್‌ ಆರಂಭಿಸಿದ ಟೊಯೊಟಾ

ಸೆಪ್ಟೆಂಬರ್‌ ತಿಂಗಳ ಆರಂಭದಲ್ಲಿ ಕಂಪನಿಯು ಟಿ ಕೇರ್‌ ಎಂಬ ಸೇವೆಯನ್ನು ಹೊಸ ಗ್ರಾಹಕರಿಗೆ ಆರಂಭಿಸಿತ್ತು. ಈ ಕಾರ್ಯತಂತ್ರದಲ್ಲಿ ಖರೀದಿ ಪೂರ್ವ ಮತ್ತು ಖರೀದಿ ನಂತರದ ಅನೇಕ ಸೇವೆಗಳು ಇದ್ದವು. ಇದರಿಂದ ಗ್ರಾಹಕರಿಗೆ ಸಾಕಷ್ಟು ಲಾಭವಾಗುತ್ತಿದೆ.

ಟಿಕೇರ್‌ನಡಿ ಕಂಪನಿಯು ಹಲವು ಸೇವೆಗಳನ್ನು ನೀಡುತ್ತದೆ. ಟಿ ಡೆಲಿವರ್‌ ಎಂಬ ಸೇವೆ ಮೂಲಕ ಹೊಸ ಕಾರನ್ನು ಮನೆಗೆ ತಲುಪಿಸುವ ಕೆಲಸ ಮಾಡುತ್ತದೆ. ಟಿ ಗ್ಲೋಸ್‌ ಮೂಲಕ ಇನ್‌ ಔಸ್‌ ವೆಹಿಕಲ್‌ ಸರ್ವೀಸ್‌ ಮಾಡುತ್ತದೆ. ಟಿ ವೆಬ್‌ ಫೀಚರ್‌ ಮೂಲಕ ಗ್ರಾಹಕರು ಆನ್‌ಲೈನ್‌ನಲ್ಲಿ ಟೊಯೊಟಾ ಕಾರು ಖರೀದಿಸಬಹುದು.

ಟಿ ಕೇರ್‌ ಕಾರ್ಯತಂತ್ರದಡಿ ಕಂಪನಿಯು ಗ್ರಾಹಕರಿಗೆ 24x7 ರೋಡ್‌ಸೈಡ್‌ ಅಸಿಸ್ಟೆನ್ಸ್‌ ಅನ್ನು ಐದು ವರ್ಷಗಳ ಕಾಲ ನೀಡುತ್ತದೆ. ಹೆಚ್ಚುವರಿ ವಿಸ್ತರಿತ ವಾರೆಂಟಿ ಮೂಲಕ ಇನ್ನೂ ಎರಡು ವರ್ಷಗಳ ಕಾಲ ಈ ಸೇವೆಯನ್ನು ಪಡೆಯಬಹುದು. ಇದಕ್ಕಾಗಿ ಗ್ರಾಹಕರು ಟಿ ಸ್ಮೈಲ್‌ ಫೀಚರ್‌ ಮೂಲಕ ಪ್ರಿಪೇಯ್ಡ್‌ ಮೇಂಟೆನ್ಸ್‌ ಪ್ಯಾಕೇಜ್‌ ಅನ್ನು ಗ್ರಾಹಕರು ಖರೀದಿಸಬೇಕು. ಟಿ ಸಾಥ್‌ ಮೂಲಕ ಗ್ರಾಹಕರಿಗೆ ಸೂಕ್ತ ಸಮಯದಲ್ಲಿ ವಾಹನ ಡೆಲಿವರಿ ಮಾಡುತ್ತದೆ. ಟಿ ಚಾಯ್ಸ್‌ ಮೂಲಕ ಗ್ರಾಹಕರಿಗೆ ಹಲವು ಸರ್ವೀಸ್‌ ಪಾರ್ಟ್‌ಗಳನ್ನು ಒದಗಿಸುತ್ತದೆ.

ಮಾರಾಟ ನಂತರ ಟಿ ಇನ್‌ಸ್ಪೆಕ್ಟ್‌ ಎಂಬ ಸೇವೆಯನ್ನೂ ಟೊಯೊಟಾ ನೀಡುತ್ತದೆ. ಖರೀದಿ ಅಥವಾ ಬಳಸಿದ ಕಾರಿನ ಮಾರಾಟದ ಸಂದರ್ಭದಲ್ಲಿ ಕಂಪನಿಯು ವಾಹನದ ಪರಿಶೀಲನೆ ಮಾಡುತ್ತದೆ. ಈ ಫೀಚರ್‌ನಡಿ ಯೂಸ್ಡ್‌ ಕಾರಿನ ಹಣಕಾಸು, ವಿಮೆ ರಿನ್ಯೂವಲ್‌ ಇತ್ಯಾದಿ ಹಲವು ಕಾರ್ಯಗಳನ್ನು ಮಾಡಲಿದೆ. ಗ್ರಾಮೀಣ ಪ್ರದೇಶದ ಗ್ರಾಹಕರಿಗಾಗಿ ಟಿ ಸ್ಪರ್ಶ್‌ ಎಂಬ ಫೀಚರ್‌ ಅನ್ನು ನೀಡಿದೆ. ಟಿ ಸರ್ವ್‌ ಮೂಲಕ ಹಲವು ಬ್ರಾಂಡ್‌ಗಳ ಕಾರು ಸರ್ವೀಸ್‌ ನೆಟ್‌ವರ್ಕ್‌ ಹೊಂದಿದೆ.

 

mysore-dasara_Entry_Point