Kia Carnival bookings: ಹೊಸ ಕಿಯಾ ಕಾರ್ನಿವಲ್ ಬುಕ್ಕಿಂಗ್ ಅನಧಿಕೃತವಾಗಿ ಆರಂಭ, ಕಾರುಪ್ರಿಯರು ಗಮನಿಸಬೇಕಾದ ಅಂಶಗಳಿವು
Kia Carnival bookings: ಹೊಸ ಕಿಯಾ ಕಾರ್ನಿವಲ್ ಕಾರಿನ ಬುಕ್ಕಿಂಗ್ (ಅಫಿಶಿಯಲ್ ಆಗಿ ಇನ್ನೂ ಆರಂಭವಾಗಿಲ್ಲ) ಆರಂಭವಾಗಿದೆ. ಡೀಲರ್‌ಶಿಪ್‌ಗಳಲ್ಲಿ ಗ್ರಾಹಕರು ಈ ಕಾರನ್ನು ಬುಕ್ಕಿಂಗ್ ಮಾಡುತ್ತಿದ್ದಾರೆ. ಹಳೆಯ ಕಾರ್ನಿವಲ್‌ಗೆ ಹೋಲಿಸಿದರೆ ನೂತನ ಕಿಯಾದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.
Kia Carnival bookings: ಕಿಯಾ ಕಂಪನಿಯ ಹೊಸ ಕಾರ್ನಿವಲ್ ಕಾರು ಮುಂದಿನ ತಿಂಗಳು ಅಂದ್ರೆ ಅಕ್ಟೋಬರ್ 3ರಂದು ಬಿಡುಗಡೆಯಾಗಲಿದೆ. ಅನ್‌ಅಫಿಶಿಯಲ್ ಆಗಿ ಈ ಕಾರಿನ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಕಿಯಾ ಇವಿ9 ಕೂಡ ಲಾಂಚ್ ಆಗಲಿದೆ. ಕಾರ್ನಿವಲ್ ಎಂಪಿವಿಯು ಮುಂದಿನ ತಿಂಗಳು ಬಿಡುಗಡೆಯಾಗುವುದಿದ್ದರೂ ಗ್ರಾಹಕರು ಈಗಾಗಲೇ ಬುಕ್ಕಿಂಗ್‌ಗೆ ಆಸಕ್ತಿ ತೋರುತ್ತಿದ್ದಾರೆ.
ಕಿಯಾ ಕಾರ್ನಿವಲ್ ಕಾರಿನಲ್ಲ ಸಾಕಷ್ಟು ಹೊಸ ಅಪ್‌ಡೇಟ್‌ಗಳು ಇರಲಿವೆ. ಅಂದರೆ, ಕಾರಿನ ಹೊರವಿನ್ಯಾಸ ಮತ್ತು ಇಂಟೀರಿಯರ್‌ನಲ್ಲಿ ಸಾಕಷ್ಟು ಹೊಸತನ ನೋಡಬಹುದಾಗಿದೆ.
ಹೊಸ ಕಿಯಾ ಕಾರ್ನಿವಲ್: ಪ್ರಮುಖ ನಿರೀಕ್ಷೆಗಳು
ಇತ್ತೀಚೆಗೆ ಕಿಯಾ ಕಾರು ದೆಹಲಿ ಏರ್‌ಪೋರ್ಟ್‌ನಲ್ಲಿ ಕಾಣಿಸಿತ್ತು. ಬಿಳಿ ಬಣ್ಣದ ನಾಲ್ಕನೇ ತಲೆಮಾರಿನ ಈ ಕಾರ್ನಿವಲ್ ಕಾರನ್ನು ವಿಮಾನದ ಕಾರ್ಗೊದಿಂದ ಇಳಿಸುವ ಸಂದರ್ಭದಲ್ಲಿ ಫೋಟೋ ತೆಗೆಯಲಾಗಿತ್ತು. ಈ ಚಿತ್ರ ನೋಡಿದಾಗಲೇ ಕಾರಿನಲ್ಲಿ ಸಾಕಷ್ಟು ಅಪ್‌ಡೇಟ್ ಆಗಿರುವುದು ಗೋಚರಿಸಿತ್ತು. ಪರಿಷ್ಕೃತ ಮುಂಭಾಗದ ಗ್ರಿಲ್‌ಗಳು, ತೆಳುವಾದ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಲೈಟ್‌ಗಳು, ಡೇಟೈಮ್ ರನ್ನಿಂಗ್ ಎಲ್‌ಇಡಿ ಲೈಟ್‌ಗಳು ಕಾಣಸಿದ್ದವು.
ಆಸಕ್ತಿದಾಯಕ ಸಂಗತಿಯೆಂದರೆ ಕಿಯಾ ಕಂಪನಿಯು ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ನಾಲ್ಕನೇ ತಲೆಮಾರಿನ ಕಿಯಾ ಕಾರ್ನಿವಲ್ ಎಂಪಿವಿಯನ್ನು ಮಾರಾಟ ಮಾಡುತ್ತಿದೆ. ಕಳೆದ ವರ್ಷ ಕಂಪನಿಯು ಇದೇ ಕಾರನ್ನು ಕೆಎ4 ಎಂಬ ಹೆಸರಿನಲ್ಲಿ ಆಟೋ ಶೋನಲ್ಲಿ ಪ್ರದರ್ಶನ ಮಾಡಿತ್ತು. ನೂತನ ತಲೆಮಾರಿನ ಕಿಯಾ ಕಾರ್ನಿವಲ್ ನೋಡಲು ಕೆಎ4 ಅನ್ನು ಹೋಲುತ್ತದೆ.
ಕಿಯಾ ಕಾರಿನ ವಿಡಿಯೋ
ನೂತನ ಕಿಯಾ ಕಾರ್ನಿವಲ್ ಎಂಪಿವಿಯ ಎಕ್ಸ್‌ಶೋರೂಂ ದರ ಸುಮಾರು 50 ಲಕ್ಷ ರೂಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಈ ಕಾರು ಭಾರತದಲ್ಲಿ ಕಂಪ್ಲಿಟ್ಲಿ ಬಿಲ್ಡ್ ಯೂನಿಟ್ (ಸಿಬಿಯು) ಮಾದರಿಯಲ್ಲಿ ಮಾರಾಟವಾಗಲಿದೆ. ಈ ಎಂಪಿವಿಯು ಸಂಪೂರ್ಣ ಫೀಚರ್ ಲೋಡ್ ಆಗಿರುವ ಒಂದೇ ಆವೃತ್ತಿಯಲ್ಲಿ ಭಾರತದಲ್ಲಿ ಮಾರಾಟವಾಗಲಿದೆ. ಇದರಲ್ಲಿ 2.2 ಲೀಟರ್‌ನ ಡೀಸೆಲ್ ಎಂಜಿನ್ ಮತ್ತು 8 ಸ್ಪೀಡ್‌ನ ಆಟೋಮ್ಯಾಟಿಕ್ ಗಿಯರ್ ಬಾಕ್ಸ್ ಇರುವ ನಿರೀಕ್ಷೆಯಿದೆ. ಇದರ ಪವರ್ 191 ಬಿಎಚ್‌ಪಿ ಮತ್ತು 441ಎನ್‌ಎಂ ಟಾರ್ಕ್ ಇರುವ ನಿರೀಕ್ಷೆಯಿದೆ.
ಈ ಎಂಪಿವಿಯು ಟೊಯೊಟಾ ವೆಲ್‌ಫೈರ್‌ಗೆ ನೇರ ಸ್ಪರ್ಧೆ ಒಡ್ಡಲಿದೆ. ಕೆಲವರ ಪ್ರಕಾರ ಟೊಯೊಟಾ ಇನ್ನೋವಾ ಹೈಕ್ರಾಸ್‌ಗೂ ಇದು ಪೈಪೋಟಿ ನೀಡಬಹುದು ಎಂದು ಕೆಲವು ವಾಹನ ತಜ್ಞರು ಅಂದಾಜಿಸಿದ್ದಾರೆ. ಒಟ್ಟಾರೆ ಅರ್ಧಕೋಟಿ ದರದ ಕಾರು ಖರೀದಿಸಲು ಯೋಚಿಸುವವರಿಗೆ ಇದು ಸೂಕ್ತ ಆಯ್ಕೆಯಾಗಬಲ್ಲದು.