Mahindra Thar Roxx vs Mahindra Scorpio N ಈ ಎರಡು SUVಗಳಲ್ಲಿ ಯಾವುದು ಬೆಸ್ಟ್‌, ಖರೀದಿಗೆ ಯಾವುದು ಉತ್ತಮ?-automobiles news in kannada mahindra thar roxx vs mahindra scorpio n price features and comparing the 4x4 suvs mnk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Mahindra Thar Roxx Vs Mahindra Scorpio N ಈ ಎರಡು Suvಗಳಲ್ಲಿ ಯಾವುದು ಬೆಸ್ಟ್‌, ಖರೀದಿಗೆ ಯಾವುದು ಉತ್ತಮ?

Mahindra Thar Roxx vs Mahindra Scorpio N ಈ ಎರಡು SUVಗಳಲ್ಲಿ ಯಾವುದು ಬೆಸ್ಟ್‌, ಖರೀದಿಗೆ ಯಾವುದು ಉತ್ತಮ?

Mahindra Thar Roxx vs Mahindra Scorpio N: ಮಹೀಂದ್ರ ಥಾರ್ ರಾಕ್ಸ್ ವರ್ಸಸ್‌ ಮಹೀಂದ್ರ ಸ್ಕಾರ್ಪಿಯೋ ಎನ್.. ಈ ಎರಡು 4x4 ಎಸ್‌ಯುವಿಗಳಲ್ಲಿ ಯಾವುದು ಉತ್ತಮ? ಯಾವುದನ್ನು ಖರೀದಿಸುವುದು ಉತ್ತಮ?

Mahindra Thar Roxx vs Mahindra Scorpio N ಈ ಎರಡು SUVಗಳಲ್ಲಿ ಯಾವುದು ಬೆಸ್ಟ್‌, ಖರೀದಿಗೆ ಯಾವುದು ಉತ್ತಮ?
Mahindra Thar Roxx vs Mahindra Scorpio N ಈ ಎರಡು SUVಗಳಲ್ಲಿ ಯಾವುದು ಬೆಸ್ಟ್‌, ಖರೀದಿಗೆ ಯಾವುದು ಉತ್ತಮ?

Thar Roxx on road price Bangalore: ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ SUV ಕಾರ್‌ಗಳಿಗೆ ದೊಡ್ಡ ಬೇಡಿಕೆ ಇದೆ. ಪ್ರತಿ ಕಂಪನಿಗಳು SUV ರೂಪಾಂತರದಲ್ಲಿ ಹೊಸ ಹೊಸ ಕಾರ್‌ಗಳನ್ನು ಪರಿಚಯಿಸುತ್ತಿವೆ. ಆ ಪೈಕಿ ಮಹೀಂದ್ರಾ ಕಂಪನಿಯ ಎಸ್‌ಯುವಿ ಕಾರ್‌ಗಳಿಗೂ ಒಳ್ಳೆಯ ಬೇಡಿಕೆ ಇದೆ. ಇತ್ತೀಚೆಗಷ್ಟೇ ಮಹೀಂದ್ರಾ ಕಂಪನಿ 5 ಬಾಗಿಲಿನ ಥಾರ್‌ ರಾಕ್ಸ್‌ ಕಾರನ್ನು ಪರಿಚಯಿಸಿತ್ತು. ಇದರ ಜತೆಗೆ ಮಹೀಂದ್ರಾದಲ್ಲಿಯೇ ಅತೀ ಹೆಚ್ಚು ಮಾರಾಟವಾದ ಸಾಲಿನಲ್ಲಿರುವ Mahindra Scorpio N ಸಹ ಅಷ್ಟೇ ಬಲಿಷ್ಠ ಕಾರು. ಇದೀಗ Mahindra Thar Roxx ಮತ್ತು Mahindra Scorpio N ಈ ಎರಡು ಕಾರ್‌ಗಳ ಪೈಕಿ ಯಾವುದು ಬೆಸ್ಟ್‌? ಇಲ್ಲಿದೆ ನೋಡಿ ಮಾಹಿತಿ.

ಈ ಎರಡು ಕಾರ್‌ಗಳ ವಿಡ್ಥ್‌ ಎಷ್ಟು?

ಥಾರ್ ರಾಕ್ಸ್ ಮತ್ತು ಸ್ಕಾರ್ಪಿಯಾ ಎನ್ ಕಾರ್‌ಗಳ ಅಳತೆಗಳ ವಿಷಯದಲ್ಲಿ ಎರಡೂ ಬಹಳ ವಿಭಿನ್ನವಾಗಿವೆ. ಥಾರ್ ರಾಕ್ಸ್ 4,428 ಎಂಎಂ ಉದ್ದ ಮತ್ತು 1,870 ಎಂಎಂ ಅಗಲ ಹೊಂದಿದೆ. ಥಾರ್‌ಗೆ ಹೋಲಿಕೆ ಮಾಡಿದರೆ ಅಳತೆ ವಿಚಾರದಲ್ಲಿ ಸ್ಕಾರ್ಪಿಯೋ ಎನ್ ದೊಡ್ಡದು. ಸ್ಕಾರ್ಪಿಯೋ ಕಾರಿನ ಉದ್ದ 4662 ಮಿಮೀ, ಅಗಲ 1917 ಮಿಮೀ ಇದೆ. ಆದರೆ ಎತ್ತರದ ವಿಚಾರದಲ್ಲಿ ಸ್ಕಾರ್ಪಿಯೋ Nಗೆ ಹೋಲಿಸಿದರೆ ರಾಕ್ಸ್ ಸ್ವಲ್ಪ ಹೆಚ್ಚು . ಸ್ಕಾರ್ಪಿಯೋ Nನ ಎತ್ತರವು 1857 ಮಿಮೀ ಆಗಿದ್ದರೆ ಥಾರ್ ರಾಕ್ಸ್‌ನ ಎತ್ತರವು 1917 ಮಿಮೀ ಆಗಿದೆ.

ಎರಡರ ವಿಶೇಷತೆಗಳೇನು?

ಥಾರ್ ರಾಕ್ಸ್ ಎಸ್‌ಯುವಿಯ ಡ್ಯಾಶ್‌ಬೋರ್ಡ್ ಡ್ಯುಯಲ್-ಟೋನ್ ಕಪ್ಪು, ಬೀಜ್ ಟ್ರೀಟ್‌ಮೆಂಟ್, ವೈರ್‌ಲೆಸ್ ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ ಜೊತೆಗೆ ಎರಡು 10.25-ಇಂಚಿನ ಡಿಸ್ಪ್ಲೇಗಳನ್ನು ಹೊಂದಿದೆ. ವೈಶಿಷ್ಟ್ಯಗಳಲ್ಲಿ ಆಟೋಮ್ಯಾಟಿಕ್‌ ಎರ್‌ ಕಂಡಿಷನ್‌, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಸಿಂಗಲ್-ಪೇನ್ ಅಥವಾ ಸನ್‌ರೂಫ್ ಹೊಂದಿವೆ.

ಸ್ಕಾರ್ಪಿಯೊ ಎನ್ ಡ್ಯುಯಲ್-ಟೋನ್ ಕಪ್ಪು ಮತ್ತು ಕಂದು ಒಳಾಂಗಣ, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ವೈರ್‌ಲೆಸ್ ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋದೊಂದಿಗೆ 8-ಇಂಚಿನ ಟಚ್‌ಸ್ಕ್ರೀನ್, 12-ಸ್ಪೀಕರ್ ಸೆಟಪ್, 7-ಇಂಚಿನ ಬಣ್ಣದ ಎಂಐಡಿ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಕ್ರೂಸ್ ಕಂಟ್ರೋಲ್, ಪುಶ್-ಬಟನ್ ಸ್ಟಾರ್ಟ್ ಮತ್ತು ಸ್ಟಾಪ್, ಆಟೋಮೆಟಿಕ್‌- ಫೋಲ್ಡ್ OR ವರ್ಷುವಲ್‌ ಮಷಿನ್‌ಗಳು, ಸಿಕ್ಸ್‌-ವೇ ಚಾಲಿತ ಡ್ರೈವರ್ ಸೀಟ್, USB ಚಾರ್ಜರ್‌ಗಳು, ವೈರ್‌ಲೆಸ್ ಚಾರ್ಜರ್, ಸೀಟ್‌ಗಳಿಗೆ ಟೈಪ್-ಸಿ ಚಾರ್ಜರ್ ವ್ಯವಸ್ಥೆಗಳಿವೆ.

ಇಂಜಿನ್ ಪರ್ಫಾರ್ಮೆನ್ಸ್..

ಈ ಎರಡೂ ಮಹೀಂದ್ರಾ SUVಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ವೇರಿಯೆಂಟ್‌ಗಳಲ್ಲಿ ಲಭ್ಯವಿವೆ. RWD (4×4) ಡ್ರೈವ್‌ಟ್ರೇನ್ ವೇರಿಯೆಂಟ್‌ನಲ್ಲಿ ಈ ಕಾರುಗಳಿವೆ. ಥಾರ್ ರಾಕ್ಸ್ 2000 cc ಟರ್ಬೊ- ಪೆಟ್ರೋಲ್ ಎಂಜಿನ್‌ ಹೊಂದಿದೆ. ಈ ಕಾರು 330 Nmನಿಂದ 380 Nm ಟಾರ್ಕ್, 150 BHP, 160 BHP , 174 BHP (brake horsepower) ಶಕ್ತಿಯನ್ನು ಉತ್ಪಾದಿಸುತ್ತದೆ. ಆದರೆ ಪೆಟ್ರೋಲ್‌ನಲ್ಲಿರುವ ಥಾರ್ ರಾಕ್ಸ್ RWD (rear wheel drive) ಸೆಟಪ್‌ ಸಹಿತ ಬರುತ್ತದೆ. ಸ್ಕಾರ್ಪಿಯೊ N 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 197 bhp ಮತ್ತು 370 Nm ಟಾರ್ಕ್ ಅನ್ನು ಮತ್ತು ಆಟೋಮ್ಯಾಟಿಕ್‌ 380 Nm ಟಾರ್ಕ್ ಉತ್ಪಾದಿಸುತ್ತದೆ.

ಥಾರ್ ರಾಕ್ಸ್ ಡೀಸೆಲ್ ಎಂಜಿನ್‌ನಿಂದ ನಡೆಸಲ್ಪಡುವ, RWD ರೂಪಾಂತರವು 150bhp ಪವರ್ ಮತ್ತು 330Nm ಟಾರ್ಕ್ ಉತ್ಪಾದಿಸುತ್ತದೆ. ಇದು 4×4 ವರ್ಷನ್‌ಗಳಲ್ಲಿ 173bhp ಪವರ್ ಮತ್ತು 370Nm ಟಾರ್ಕ್ ಉತ್ಪಾದಿಸುತ್ತದೆ. ಸ್ಕಾರ್ಪಿಯೊ N ಡೀಸೆಲ್ ವರ್ಷನ್‌ 130bhp ಪವರ್ ಜತೆಗೆ RWD ವರ್ಷನ್‌ಗಳಿಗೆ 300Nm ಟಾರ್ಕ್ ಉತ್ಪಾದಿಸುತ್ತದೆ.

ಬೆಲೆ ಎಷ್ಟು?

ಥಾರ್ ರಾಕ್ಸ್ ರೂ 12.99 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ ಮತ್ತು ಸ್ಕಾರ್ಪಿಯೋ ಎನ್ ರೂ 13.85 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.

mysore-dasara_Entry_Point