ಕನ್ನಡ ಸುದ್ದಿ  /  Lifestyle  /  Business News Stock Market Lok Sabha Elections 2024 Top 10 Stock Picks Offering 10 20 Percent Upside Share Market Bgy

Stock Market: ಲೋಕಸಭೆ ಚುನಾವಣೆ ಸಂದರ್ಭ ಲಾಭ ಗಳಿಸುವ ಸಾಧ್ಯತೆ ಇರುವ 10 ಷೇರುಗಳ ಪಟ್ಟಿ ಇಲ್ಲಿದೆ

ಲೋಕಸಭೆ ಚುನಾವಣೆ ಹತ್ತಿರದಲ್ಲೇ ಇದ್ದು, ಷೇರು ಮಾರುಕಟ್ಟೆಯ ಮೇಲೆ ಭಾರತದ ಹೂಡಿಕೆದಾರರ ದೃಷ್ಟಿ ನೆಟ್ಟಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮ್ ವೇ2ವೆಲ್ತ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯ ಸನ್ನಿವೇಶವನ್ನು ಅವಲೋಕಿಸಿ ಚುನಾವಣೆ ಸಂದರ್ಭ ಲಾಭ ಗಳಿಸಬಹುದಾದದ 10 ಷೇರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಲೋಕಸಭಾ ಚುನಾವಣೆ ಸಂದರ್ಭ ಲಾಭ ಗಳಿಸುವ ಸಾಧ್ಯತೆ ಇರುವ 10 ಷೇರುಗಳ ಪಟ್ಟಿ ಇಲ್ಲಿದೆ
ಲೋಕಸಭಾ ಚುನಾವಣೆ ಸಂದರ್ಭ ಲಾಭ ಗಳಿಸುವ ಸಾಧ್ಯತೆ ಇರುವ 10 ಷೇರುಗಳ ಪಟ್ಟಿ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ಷೇರು ವಹಿವಾಟಿನ ಮೇಲೆ ಜನರ ಒಲವು ಹೆಚ್ಚಿರುವುದು ಗಮನಾರ್ಹ. ಬಹುತೇಕರು ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಾರೆ. ಜೊತೆಗೆ ಇದರಿಂದ ಸಾಕಷ್ಟು ಲಾಭ ಗಳಿಸುತ್ತಲೂ ಇದ್ದಾರೆ. ದೇಶದಲ್ಲಿ ನಡೆಯುವ ಪ್ರಮುಖ ಘಟನೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರುವುದು ಸುಳ್ಳಲ್ಲ. ಸದ್ಯದಲ್ಲೇ ಲೋಕಸಭೆ ಚುನಾವಣೆ ನಡೆಯಲಿದ್ದು, ಹೂಡಿಕೆದಾರರ ದೃಷ್ಟಿ ಚುನಾವಣೆಯ ಮೇಲಿದೆ.

ಲೋಕಸಭೆ ಚುನಾವಣೆಯು ಷೇರು ಮಾರುಕಟ್ಟೆಯ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಪ್ರಧಾನಿ ಮೋದಿ ಅವರು ಸತತ ಮೂರನೇ ಅವಧಿಗೆ ಸರ್ಕಾರ ರಚಿಸುವ ವಿಶ್ವಾಸದಲ್ಲಿರುವ ಕಾರಣ ಈ ವರ್ಷದ ಸಾರ್ವತ್ರಿಕ ಚುನಾವಣೆಗಳು ಬಹಳ ಮಹತ್ವ ಪಡೆದುಕೊಂಡಿವೆ. ಎಕ್ಸಿಟ್‌ ಪೋಲ್‌ ಫಲಿತಾಂಶಗಳು ಕೂಡ ಮಾರುಕಟ್ಟೆಯ ವಹಿವಾಟಿನ ಮೇಲೆ ಪರಿಣಾಮ ಬೀರಬಹುದು.

ಪ್ರಧಾನಿ ಮೋದಿ ಮತ್ತೊಮ್ಮೆ ಸರ್ಕಾರ ರಚಿಸಲಿದ್ದಾರೆ ಎಂಬ ಭಾವನೆಯು ಮಾರುಕಟ್ಟೆ ಧನಾತ್ಮಕವಾಗಿರಲು ಕಾರಣವಾಗಲಿದೆ. ಇದು ಹೂಡಿಕೆದಾರರ ಭಾವನೆಗಳನ್ನು ಬಲಪಡಿಸುತ್ತದೆ ಮತ್ತು ಹಿಂದಿನ ನೀತಿಗಳ ಮುಂದುವರಿಕೆ ಮಾರುಕಟ್ಟೆಯನ್ನು ಬಲಪಡಿಸುತ್ತದೆ ಎಂದು ಬ್ರೋಕರೇಜ್ ಸಂಸ್ಥೆ ಶ್ರೀರಾಮ್ ವೇ2ವೆಲ್ತ್ ಅಭಿಪ್ರಾಯಪಟ್ಟಿದೆ.

ಸರಾಸರಿಗಿಂತ ಕಡಿಮೆ ಮಳೆ ಸೇರಿದಂತೆ ಹಲವು ಕಾರಣಗಳಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಗ್ರಾಮೀಣ ಬಳಕೆಯ ವಸ್ತುಗಳ ಮೇಲಿನ ಬೇಡಿಕೆ ಕಡಿಮೆಯಾಗಿದೆ. ಗ್ರಾಮೀಣ ಗ್ರಾಹಕರ ಬೇಡಿಕೆಯನ್ನು ಉತ್ತೇಜಿಸಲು ಗ್ರಾಮೀಣ ಆರ್ಥಿಕತೆಗಳಿಗೆ ಬಲ ತುಂಬುವ ಅಗತ್ಯವಿದೆ. ಆದ್ದರಿಂದ, ಹೂಡಿಕೆದಾರರು ಎಫ್‌ಎಂಸಿಜಿ, ಟ್ರಾಕ್ಟರ್ ಮತ್ತು ಕೃಷಿ ಉಪಕರಣಗಳ ಷೇರುಗಳನ್ನು ನೋಡುತ್ತಾರೆ ಎಂದು ಶ್ರೀರಾಮ್ ವೇ2ವೆಲ್ತ್ ಸಂಸ್ಥೆ ತಿಳಿಸಿದೆ. ಕೃಷಿ ಮತ್ತು ರಾಸಾಯನಿಕ ಕ್ಷೇತ್ರವು ಮತ್ತೊಂದು ಪ್ರಮುಖ ಕ್ಷೇತ್ರವಾಗಿದ್ದು, ಚುನಾವಣೆಗೆ ಮುನ್ನ ಕೃಷಿ ಆಧಾರಿತ ಮತಬ್ಯಾಂಕ್ ಅನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಭಾರಿ ರಸಗೊಬ್ಬರ ಸಬ್ಸಿಡಿಯನ್ನು ಘೋಷಿಸಿದರೆ ಇದು ಷೇರು ಮಾರುಕಟ್ಟೆಯ ಮೇಲೆ ಧನಾತ್ಮಕ ಪರಿಣಾಮ ಉಂಟು ಮಾಡಲಿದೆ.

ಲೋಕಸಭೆ ಚುನಾವಣೆ ಸಂದರ್ಭ ಭಾರಿ ಲಾಭ ತರಲಿರುವ ಷೇರುಗಳು

ಶ್ರೀರಾಮ್ ವೇ2ವೆಲ್ತ್ ಲೋಕಸಭಾ ಚುನಾವಣೆ ಹಿನ್ನೆಲೆ ಟಾಪ್‌ 10 ಸ್ಟಾಕ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ತಾಂತ್ರಿಕ ಮತ್ತು ಮೂಲಭೂತ ನಿಯತಾಂಕಗಳ ಆಧಾರದ ಮೇಲೆ ಈ ಗುಣಮಟ್ಟದ ಸ್ಟಾಕ್‌ಗಳನ್ನು ಆಯ್ಕೆ ಮಾಡಲಾಗುತ್ತದೆ. ಅಂತಹ 10 ಕಂಪನಿಗಳು ಯಾವುವು ಎಂಬುದನ್ನು ನೀವೂ ತಿಳಿಯಿರಿ.

1.ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬೆಲ್): ಪ್ರಸ್ತುತ ಮಾರುಕಟ್ಟೆ ಬೆಲೆ (CMP): ರೂ.185.90; ಗುರಿ: ರೂ.215; ಬೆಳವಣಿಗೆಯ ಸಾಮರ್ಥ್ಯ: ಶೇ 14

2. ಹೀರೋ ಮೋಟೋಕಾರ್ಪ್: CMP: ರೂ.4,818.55; ಗುರಿ: ರೂ.5,020; ಬೆಳವಣಿಗೆಯ ಸಾಮರ್ಥ್ಯ: ಶೇ 14.

3. ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL): CMP: ರೂ.2,351; ಗುರಿ: ರೂ.2,828; ಬೆಳವಣಿಗೆಯ ಸಾಮರ್ಥ್ಯ: ಶೇ 11

4. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOC): CMP: ರೂ.189.90; ಗುರಿ: ರೂ.210; ಬೆಳವಣಿಗೆಯ ಸಾಮರ್ಥ್ಯ: ಶೇ 11

5. ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC): CMP: ರೂ.951.30; ಗುರಿ: ರೂ.1,080; ಬೆಳವಣಿಗೆಯ ಸಾಮರ್ಥ್ಯ: ಶೇ 16

6. ನವದೆಹಲಿ ಟೆಲಿವಿಷನ್ ಲಿಮಿಟೆಡ್ (NDTV): CMP: ರೂ.261.90; ಗುರಿ: ರೂ.325; ಬೆಳವಣಿಗೆಯ ಸಾಮರ್ಥ್ಯ: ಶೇ 21

7. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI): CMP: ರೂ.634; ಗುರಿ: ರೂ.700; ಬೆಳವಣಿಗೆಯ ಸಾಮರ್ಥ್ಯ: ಶೇ 10

8. ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್: CMP: ರೂ.9,815.35; ಗುರಿ: ರೂ.10,980; ಬೆಳವಣಿಗೆಯ ಸಾಮರ್ಥ್ಯ: ಶೇ 11

9.ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್: CMP: ರೂ.1,069.5; ಗುರಿ: ರೂ.1,192; ಬೆಳವಣಿಗೆಯ ಸಾಮರ್ಥ್ಯ: ಶೇ 12

10. ವರುಣ್ ಬೆವರೇಜಸ್ ಲಿಮಿಟೆಡ್: CMP: ರೂ.1,425.05; ಗುರಿ: ರೂ.1,452; ಬೆಳವಣಿಗೆಯ ಸಾಮರ್ಥ್ಯ: ಶೇ 18

ಗಮನಿಸಿ: ಈ ಲೇಖನವು ತಜ್ಞರು ಮತ್ತು ಬ್ರೋಕರೇಜ್ ಸಂಸ್ಥೆಗಳ ಅಭಿಪ್ರಾಯಗಳನ್ನು ಒಳಗೊಂಡಿದೆ. ಹೂಡಿಕೆದಾರರು ಸ್ವಯಂ ಅಧ್ಯಯನ ಮಾಡಬೇಕು ಮತ್ತು ಸ್ವಯಂ ವಿವೇಚನೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.