Investment Tips: ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಹಣಕಾಸು ಹೂಡಿಕೆ ಮಾಡುವ ಮಹಿಳೆಯರಿಗೆ ಇವೆ 10 ಆಯ್ಕೆಗಳು
Investment Options for Women: ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಸಂಪತ್ತು, ಸಮೃದ್ಧಿಗಾಗಿ ಲಕ್ಷ್ಮೀ ದೇವಿಯನ್ನು ಎಲ್ಲರೂ ಪೂಜಿಸುತ್ತಾರೆ. ಈ ಸಮಯದಲ್ಲಿ ಮಹಿಳೆಯರು ಹಣ ಹೂಡಿಕೆ ಮಾಡುವ ಕುರಿತು ಗಂಭೀರವಾಗಿ ಆಲೋಚಿಸಿ ತಮ್ಮ ಸಂಪತ್ತು ಹೆಚ್ಚಿಸಿಕೊಳ್ಳಬಹುದು.
ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಹಣಕಾಸು ಹೂಡಿಕೆಗಳ ಕುರಿತು ಮಹಿಳೆಯರು ಹೆಚ್ಚಿನ ಗಮನ ನೀಡುತ್ತಿದ್ದಾರೆ. ಭವಿಷ್ಯದಲ್ಲಿ ಹೆಚ್ಚು ಲಾಭ ತಂದುಕೊಡುವ ಹೂಡಿಕೆಗಳನ್ನು ಆಯ್ಕೆ ಮಾಡಿಕೊಳ್ಳಲು ವರಮಹಾಲಕ್ಷ್ಮಿ ಹಬ್ಬದ ಸಮಯವು ಸೂಕ್ತವಾಗಿದೆ ಎನ್ನುವುದು ಬಹುತೇಕರ ನಂಬಿಕೆ. ವರಮಹಾಲಕ್ಷ್ಮಿ ಹಬ್ಬದ ದಿನ ಸಂಪತ್ತು, ಸಮೃದ್ಧಿ ಕೊಡುವಂತೆ ದೇವಿಯನ್ನು ಪ್ರಾರ್ಥಿಸಿ ಪ್ರಮುಖ ಹೂಡಿಕೆಗಳಿಗೆ ಮುಂದಾಗುವುದು ಸಾಮಾನ್ಯ. ಈಗ ಹಣಕಾಸು ಹೂಡಿಕೆ ಎನ್ನುವುದು ಕೇವಲ ಪುರುಷರ ಆಯ್ಕೆಯಲ್ಲ. ಮಹಿಳೆಯರೂ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ಹೂಡಿಕೆಗಳತ್ತ ಗಮನ ಹರಿಸುತ್ತಾರೆ ಎಂದು ಹಣಕಾಸು ತಜ್ಞರು ಹೇಳಿದ್ದಾರೆ. ಈ ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಮಹಿಳೆಯರು ಗಮನಿಸಬಹುದಾದ ವಿವಿಧ ಹೂಡಿಕೆ ಆಯ್ಕೆಗಳ ವಿವರ ಇಲ್ಲಿದೆ.
ಎಲ್‌ಐಸಿ: ಈಗಲೂ ಬಹುತೇಕ ಮಹಿಳೆಯರಿಗೆ ಜೀವ ವಿಮಾ ನಿಗಮವು ಪ್ರಮುಖ ಹೂಡಿಕೆ ಆಯ್ಕೆ. ಜೀವ ವಿಮೆ ಮಾತ್ರವಲ್ಲದೆ ಭವಿಷ್ಯದ ಉಳಿತಾಯಕ್ಕೆ ಸಂಬಂಧಪಟ್ಟಂತೆ ವಿವಿಧ ಪ್ಲ್ಯಾನ್‌ಗಳು ಎಲ್‌ಐಸಿಯಲ್ಲಿವೆ.
ಎನ್‌ಪಿಎಸ್: ನ್ಯಾಷನಲ್ ಪೆನ್ಷನ್ ಸ್ಕೀಮ್ ಎಂಬ ರಿಟೈರ್‌ಮೆಂಟ್ ಯೋಜನೆಯಲ್ಲಿಯೂ ಮಹಿಳೆಯರು ಹೂಡಿಕೆ ಮಾಡುತ್ತಿರುವುದು ಹೆಚ್ಚಾಗುತ್ತಿದೆ. ಎನ್‌ಪಿಎಸ್ ಬಡ್ಡಿದರ ಉತ್ತಮವಾಗಿರುವುದರಿಂದ ಮತ್ತು ನಿವೃತ್ತಿ ಸಮಯದಲ್ಲಿ ಹಣಕಾಸು ಅವಶ್ಯಕತೆಗೆ ಇರಲಿ ಎಂದು ಎನ್‌ಪಿಎಸ್ ಹೂಡಿಕೆ ಮಾಡುತ್ತಾರೆ.
ಎಫ್‌ಡಿ: ಈ ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಮಹಿಳೆಯರು ತಮ್ಮ ಉಳಿತಾಯ ಖಾತೆಯಲ್ಲಿರುವ ಒಂದಿಷ್ಟು ಮೊತ್ತವನ್ನು ಸ್ಥಿರ ಠೇವಣಿಗೆ ಹಾಕಬಹುದು. ಕೆಲವು ಬ್ಯಾಂಕ್‌ಗಳು ಮಹಿಳೆಯರಿಗೆ ಹೆಚ್ಚಿನ ಬಡ್ಡಿದರ ನೀಡುತ್ತವೆ. ಇವುಗಳ ಪ್ರಯೋಜನ ಪಡೆಯಬಹುದು.
ಪಿಪಿಎಫ್: ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ತೆರಿಗೆ ಪ್ರಯೋಜನಗಳು ದೊರಕುತ್ತವೆ. ಗ್ಯಾರಂಟಿ ರಿಟರ್ನ್ ಕೂಡ ಇರುತ್ತದೆ. ಪಿಪಿಎಫ್‌ನಲ್ಲಿ 15 ವರ್ಷ ಹೂಡಿಕೆ ಮಾಡಬಹುದು, ಬೇಕಿದ್ದರೆ ಮತ್ತೆ 5 ವರ್ಷ ವಿಸ್ತರಿಸಿಕೊಳ್ಳಬಹುದು.
ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್: ಇಎಲ್‌ಎಸ್‌ಎಸ್ ಕೂಡ ಮಹಿಳೆಯರಿಗೆ ಹೂಡಿಕೆಗೆ ಇರುವ ಉತ್ತಮ ಆಯ್ಕೆಯಾಗಿದೆ. ಈ ಹೂಡಿಕೆಯಿಂದ ಸೆಕ್ಷನ್ 80 ಸಿಸಿಯಡಿ ತೆರಿಗೆ ವಿನಾಯಿತಿ ಪ್ರಯೋಜನ ಪಡೆದುಕೊಳ್ಳಬಹುದು. ಇಎಲ್‌ಎಸ್‌ಎಸ್‌ಗೆ 3 ವರ್ಷದ ಲಾಕ್ ಅವಧಿ ಇರುತ್ತದೆ.
ಚಿನ್ನ: ಮಹಿಳೆಯರಿಗೆ ಚಿನ್ನದ ಮೇಲೆ ಹೂಡಿಕೆ ಎಂದರೆ ಅಚ್ಚುಮೆಚ್ಚು. ಹಣದುಬ್ಬರದ ಸಮಯದಲ್ಲಿ ತಮ್ಮ ಹೂಡಿಕೆಯನ್ನು ರಕ್ಷಿಸಿಕೊಳ್ಳಲು ಇದು ನೆರವಾಗುತ್ತದೆ. ಮಹಿಳೆಯರು ಈ ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಫಿಸಿಕಲ್ ಗೋಲ್ಡ್, ಗೋಲ್ಡ್ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳು, ಗೋಲ್ಡ್ ಮ್ಯೂಚುಯಲ್ ಫಮಡ್‌ಗಳಲ್ಲಿ ಹೂಡಿಕೆ ಮಾಡಬಹುದು.
ರಿಯಲ್ ಎಸ್ಟೇಟ್: ರಿಯಲ್ ಎಸ್ಟೇಟ್ ಕೂಡ ಈಗ ಕೇವಲ ಪುರುಷರ ಹೂಡಿಕೆಯ ಆಯ್ಕೆಯಲ್ಲ. ನಿವೇಶನ, ಮನೆ ಖರೀದಿಗೆ ಮಹಿಳೆಯರು ಹೆಚ್ಚಿನ ಗಮನ ನೀಡುತ್ತಿದ್ದಾರೆ. ಈ ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ರಿಯಲ್ ಎಸ್ಟೇಟ್ ಮೇಲೆಯೂ ಮಹಿಳೆಯರು ಹೂಡಿಕೆ ಮಾಡಬಹುದು.
ಮ್ಯೂಚುಯಲ್ ಫಂಡ್
ಡೆಪ್ಟ್, ಈಕ್ವಿಟಿ, ಹೈಬ್ರಿಡ್ ಫಂಡ್ ಸೇರಿದಂತೆ ಹಲವು ಬಗೆಯ ಹೂಡಿಕೆ ಆಯ್ಕೆಗಳನ್ನು ಮ್ಯೂಚುಯಲ್ ಫಂಡ್‌ಗಳು ನೀಡುತ್ತವೆ. ಅತ್ಯುತ್ತಮ ರಿಟರ್ನ್ ದೊರಕುವ ಈ ಹೂಡಿಕೆ ಆಯ್ಕೆಗಳತ್ತ ಗಮನ ನೀಡಬಹುದು.
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್
ಮಹಿಳೆಯರಿಗಾಗಿ ಕೇಂದ್ರ ಬಜೆಟ್ 2023ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಆರಂಭಿಸಿದ್ದರು. ಎರಡು ವರ್ಷದ ಅವಧಿಗೆ ಶೇಕಡ 7.5 ಬಡ್ಡಿದರವನ್ನು ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ನೀಡುತ್ತದೆ.
ಕಾರ್ಪೊರೇಟ್ ಬಾಂಡ್‌ಗಳು
ಕಂಪನಿಗಳು ಬಂಡವಾಳ ಸಂಗ್ರಹಿಸಲು ಕಾರ್ಪೊರೇಟ್ ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತವೆ. ಈ ವರಮಹಾಲಕ್ಷ್ಮಿ ಸಮಯದಲ್ಲಿ ಮಹಿಳೆಯರು ಇಂತಹ ಬಾಂಡ್‌ಗಳ ಮೇಲೂ ಹೂಡಿಕೆ ಮಾಡಬಹುದು.