Chanakya Niti: ಈ 5 ಬುದ್ಧಿಯ ಜನರನ್ನು ಮನೆಗೆ ಆಹ್ವಾನಿಸಬೇಡಿ ಎಂದಿದ್ದಾರೆ ಆಚಾರ್ಯ ಚಾಣಕ್ಯ, ಇಂಥವರ ಸಹವಾಸ ಬೇಡ
Chanakya Niti: ಇಪ್ಪತ್ತನೇ ಶತಮಾನದ ಅತ್ಯಂತ ಪ್ರಬುದ್ಧ ವಿದ್ವಾಂಸರಲ್ಲಿ ಒಬ್ಬರೆಂದೇ ಖ್ಯಾತಿ ಪಡೆದಿರುವ ಆಚಾರ್ಯ ಚಾಣಕ್ಯರು ನಮ್ಮ ಮನೆಗೆ ಯಾವ ವ್ಯಕ್ತಿತ್ವದವರನ್ನು ಆಹ್ವಾನಿಸಬಾರದು ಎಂದು ತಿಳಿಸಿದ್ದಾರೆ. ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯರ ಪ್ರಕಾರ ಯಾರನ್ನು ಮನೆಗೆ ಆಹ್ವಾನಿಸಬಾರದು ಎಂದು ತಿಳಿಯೋಣ.
Chanakya Niti: ಮನೆಗೆ ನಾವು ಯಾರನ್ನು ಆಹ್ವಾನಿಸಬೇಕು? ಯಾರನ್ನು ಆಹ್ವಾನಿಸಬಾರದು? ಯಾರ ಸಹವಾಸ ಮಾಡಿದರೆ ಉತ್ತಮ, ಯಾರ ಸಹವಾಸ ಮಾಡಬಾರದು? ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ನಮ್ಮೆಲ್ಲರ ಜೀವನದಲ್ಲಿ ಹಲವು ಸಮಸ್ಯೆಗಳು ಪರಿಹಾರವಾಗುತ್ತವೆ. ಈ ಕುರಿತು ಆಚಾರ್ಯ ಚಾಣಕ್ಯರು ಸಾಕಷ್ಟು ವಿಚಾರಗಳನ್ನು ಸೊಗಸಾಗಿ ಹೇಳಿದ್ದಾರೆ. ಪ್ಪತ್ತನೇ ಶತಮಾನದ ಅತ್ಯಂತ ಪ್ರಬುದ್ಧ ವಿದ್ವಾಂಸರಲ್ಲಿ ಒಬ್ಬರೆಂದೇ ಖ್ಯಾತಿ ಪಡೆದಿರುವ ಆಚಾರ್ಯ ಚಾಣಕ್ಯರು ನಮ್ಮ ಮನೆಗೆ ಯಾವ ವ್ಯಕ್ತಿತ್ವದವರನ್ನು ಆಹ್ವಾನಿಸಬಾರದು ಎಂದು ತಿಳಿಸಿದ್ದಾರೆ. ಮೊದಲಿಗೆ ಚಾಣಕ್ಯ ಎಂದರೆ ಯಾರು ಎಂದು ತಿಳಿಯೋಣ. ಇವರ ನಿಜವಾದ ಹೆಸರು ವಿಷ್ಣುಗುಪ್ತ. ಚಣಕನ ಮಗನಾಗಿರುವ ಕಾರಣ ಇವರು ಚಾಣಕ್ಯ ಎಂದೇ ಜನಪ್ರಿಯತೆ ಪಡೆದರು. ಗಾಂಧಾರದ ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಹಿಂದೂಸ್ತಾನ್ ಟೈಮ್ಸ್ ಕನ್ನಡವು ಪ್ರತಿದಿನ ಚಾಣಕ್ಯ ನೀತಿಯಲ್ಲಿ ಹೇಳಲಾದ ಪ್ರಮುಖ ವಿಚಾರಗಳನ್ನು ಓದುಗರ ಜತೆ ಹಂಚಿಕೊಳ್ಳುತ್ತ ಬರುತ್ತಿದೆ. ಇಂದಿನ ಲೇಖನದಲ್ಲಿ ಯಾವ ಐದು ಬುದ್ಧಿಯ ವ್ಯಕ್ತಿಗಳನ್ನು ಮನೆಗೆ ಆಹ್ವಾನಿಸಬಾರದು ಎನ್ನುವ ಕುರಿತು ತಿಳಿದುಕೊಳ್ಳೋಣ.
ನೋವುಂಟು ಮಾಡುವವರನ್ನು ಮನೆಗೆ ಆಹ್ವಾನಿಸಬೇಡಿ
ಉದ್ದೇಶಪೂರ್ವಕವಾಗಿ ನೋವುಂಟು ಮಾಡುವವರನ್ನು ಮನೆಗೆ ಆಹ್ವಾನಿಸಬೇಡಿ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ನೋವು ಮಾಡಲು ಆಯುಧ ಬೇಕಾಗಿಲ್ಲ. ತಮ್ಮ ಮಾತು, ವರ್ತನೆಯಿಂದಲೇ ಸಾಕಷ್ಟು ಜನರು ಇತರರಿಗೆ ನೋವು ಉಂಟು ಮಾಡುತ್ತಾರೆ. ನಮ್ಮಿಂದ ಇತರರಿಗೆ ಗೊತ್ತಿಲ್ಲದೆ ಏನಾದರೂ ನೋವಾದರೆ ಅವರ ಕ್ಷಮೆ ಕೇಳಬಹುದು. ಆದರೆ, ಉದ್ದೇಶಪೂರ್ವಕವಾಗಿ ನೋವು ಉಂಟು ಮಾಡುವವರು ಇರುತ್ತಾರಲ್ವ? ಅವರು ತುಂಬಾ ಡೇಂಜರ್. ಪ್ರತಿನಿತ್ಯ ಇಂತಹ ಜನರನ್ನು ನಾವು ಭೇಟಿಯಾಗುತ್ತ ಇರುತ್ತೇವೆ. ಈ ರೀತಿ ಚುಚ್ಚಿ ಮಾತನಾಡುವವರಿಂದ ದೂರವಿದ್ದರೆ ಲೇಸು. "ಬನ್ನಿ ಚಹಾ ಕುಡಿದು ಹೋಗಿ" ಎಂದು ಈ ರೀತಿಯ ವ್ಯಕ್ತಿತ್ವದವರನ್ನು ಮನೆಗೆ ಕರೆಯದೆ ಇರುವುದು ಉತ್ತಮ.
ಅವಕಾಶವಾದಿಗಳಿಂದ ದೂರ ಇರಿ
ಈ ಜಗತ್ತು ಅವಕಾಶವಾದಿಗಳಿಂದ ತುಂಬಿ ಹೋಗಿದೆ ಎಂದರೆ ತಪ್ಪಾಗದು. ಇದು ಈಗಿನ ಸಮಸ್ಯೆಯಲ್ಲ. ಹಲವು ಶತಮಾನಗಳ ಹಿಂದೆಯೇ ಇತ್ತು. ಇದು ಇಂದಿನ, ಹಿಂದಿನ, ಮುಂದಿನ ಸಮಸ್ಯೆಯೂ ಹೌದು. ಆಚಾರ್ಯ ಕೌಟಿಲ್ಯರು ಇಪ್ಪತ್ತನೇ ಶತಮಾನದಲ್ಲಿಯೇ ಈ ಕುರಿತು ಕಿವಿ ಮಾತು ಹೇಳಿದ್ದರು. ಅವಕಾಶವಾದಿಗಳಿಂದ ದೂರ ಇರಿ ಎಂದಿದ್ದರು. ನಿಮ್ಮ ನಿಜವಾದ ಗೆಳೆಯರು ನಿಮ್ಮ ಕಷ್ಟ ಕಾಲದಲ್ಲಿ ನೆರವಾಗುತ್ತಾರೆ. ನಿಮ್ಮ ಸುಖದುಖಗಳಲ್ಲಿ ಭಾಗಿಯಾಗುತ್ತಾರೆ. ಆದರೆ, ನಿಮ್ಮ ಕಷ್ಟದ ಸಮಯದಲ್ಲಿ ಸಾಕಷ್ಟು ಜನರು ಹತ್ತಿರ ಬಾರದೆ ಇರಬಹುದು. "ಇವ ನನ್ನಲ್ಲಿ ಹಣ ಕೇಳಿದ್ರೆ ಕಷ್ಟ" ಎಂದು ದೂರವೇ ಇರುತ್ತಾರೆ. ಆದರೆ, ಆ ವ್ಯಕ್ತಿಗೆ ಎಂದಾದರೂ ಅಗತ್ಯಬಿದ್ದಾಗ, ಏನಾದರೂ ಕೆಲಸವಾಗಬೇಕಾದಗ ತುಂಬಾ ನೈಸ್ ಆಗಿ ಮಾತನಾಡುತ್ತ ಬರುತ್ತಾರೆ. ಇವರನ್ನೇ ಅವಕಾಶವಾದಿಗಳು ಎನ್ನುವುದು. ತಮ್ಮ ಕೆಲಸವಾದ ಬಳಿಕ ಮತ್ತೆ ದೂರ ಸರಿಯುತ್ತಾರೆ.
ಅಪರಾಧಿಗಳು
ದೋಷಿಗಳು, ಅಪರಾಧಿಗಳು, ತಪ್ಪಿತಸ್ಥರನ್ನು ಮನೆಗೆ ಆಹ್ವಾನಿಸಬೇಡಿ ಎಂದು ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರ ಪ್ರಕಾರ ಅಪರಾಧಿಗಳು ತಮ್ಮ ನಯವಾದ ಮಾತುಗಳಿಂದ ನಿಮ್ಮ ನಂಬಿಕೆ ಗಳಿಸಬಹುದು. ಕೊನೆಗೆ ನಿಮಗೆ ಹಾನಿ ಮಾಡಬಹುದು.
ನಕಲಿ ಜನರು
"ನಿಮ್ಮನ್ನು ಮುಂದೆ ಹೊಗಳುವವರು, ಹಿಂದೆ ತೆಗಳುವ ನಕಲಿ ವ್ಯಕ್ತಿಗಳಿಂದ ದೂರವಿರಿ" ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ನಿಮ್ಮ ಬಗ್ಗೆ ಕೆಲವರು ನಿಮ್ಮ ಹಿಂದೆ ಮಾತನಾಡುತ್ತಾರೆ. ಅದು ನಿಮಗೆ ಹೇಗೋ ತಿಳಿಯುತ್ತದೆ. ಅಂತಹ ವ್ಯಕ್ತಿಗಳಿಂದ ದೂರವಿರಿ.
ನಕಾರಾತ್ಮಕವಾಗಿ ಮಾತನಾಡುವವರು
"ಪ್ರತಿನಿತ್ಯ ನೆಗೆಟಿವ್ ಆಗಿ ಮಾತನಾಡುವ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳಿಂದ ದೂರವಿರಿ. ಇವರ ಜತೆ ಸೇರಿದರೆ ನೀವೂ ಅವರಂತೆ ಆಗುವಿರಿ. ಇಂತಹ ವ್ಯಕ್ತಿಗಳನ್ನು ನಿಮ್ಮ ಮನೆಗೆ, ನಿಮ್ಮ ಮನಸ್ಸಿಗೆ ಆಹ್ವಾನಿಸಬೇಡಿ" ಎಂದು ಚಾಣಕ್ಯರು ಹೇಳಿದ್ದಾರೆ.
ಡಿಸ್ಕ್ಲೈಮರ್/ ಹಕ್ಕುತ್ಯಾಗ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.