Chanakya Niti: ಚಾಣಕ್ಯರ ಪ್ರಕಾರ ಹೆಂಡತಿಯಲ್ಲಿ ಈ ಗುಣಗಳಿದ್ದರೆ ಗಂಡನ ಬದುಕು ಸ್ವರ್ಗದಂತಿರುತ್ತದೆ
ಆಚಾರ್ಯ ಚಾಣಕ್ಯರು ರಾಜಕೀಯ ಜೀವನ ಮಾತ್ರ ವೈಯಕ್ತಿಕ ಜೀವನದಲ್ಲಿಯೂ ಪರಿಣತರಾಗಿದ್ದರು. ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಪ್ರೇಮ ಮತ್ತು ದಾಂಪತ್ಯ ಜೀವನದಲ್ಲಿ ಹೇಗೆ ಉತ್ಕೃಷ್ಟತೆ ಹೊಂದಿರುವುದು ಬಹಳ ಮುಖ್ಯ ಎಂದಿದ್ದರು. ಅವರ ಪ್ರಕಾರ ಹೆಂಡತಿಯಲ್ಲಿ ಈ ಗುಣಗಳಿದ್ದರೆ ಗಂಡನ ಬದುಕು ಸ್ವರ್ಗದಂತೆ.
ಚಾಣಕ್ಯರು ಮಹಾನ್ ಶಿಕ್ಷಕ. ಅವರ ಮಾತುಗಳು ಜೀವನಕ್ಕೆ ತುಂಬಾ ಉಪಯುಕ್ತವಾಗಿವೆ. ಚಾಣಕ್ಯರು ರಾಜಕೀಯ, ಅರ್ಥಶಾಸ್ತ್ರ ಮತ್ತು ಜೀವನಶೈಲಿಯಂತಹ ಹಲವು ವಿಚಾರಗಳಲ್ಲಿ ಪರಿಣತರಾಗಿದ್ದರು. ಚಾಣಕ್ಯರ ಬುದ್ಧಿವಂತಿಕೆಗೆ ಸಾಟಿಯಿಲ್ಲ ಎನ್ನಬಹುದು. ಅವರ ವಿಚಾರಗಳೂ ಎಲ್ಲಾ ಕಾಲಕ್ಕೂ ಸಲ್ಲುವಂಥದ್ದು. ಚಾಣಕ್ಯರು ರಾಜಕೀಯ ಜೀವನ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲಿಯೂ ಪರಿಣತರಾಗಿದ್ದರು. ಯಶಸ್ವಿ ದಾಂಪತ್ಯ ಜೀವನಕ್ಕೆ ಪತಿ ಪತ್ನಿಯರು ಕೆಲವು ಅರ್ಹತೆಗಳನ್ನು ಹೊಂದಿರಬೇಕು ಎಂದು ಚಾಣಕ್ಯ ಹೇಳಿದ್ದರು. ಅವರ ಪ್ರಕಾರ ಸುಖ ಸಂಸಾರಕ್ಕೆ ಹೆಂಡತಿಯಲ್ಲಿ ಕೆಲವು ಗುಣಗಳಿರಬೇಕು, ಆ ಗುಣಗಳು ಹೆಂಡತಿಯಲ್ಲಿದ್ದರೆ ಗಂಡ ಸ್ವರ್ಗಕ್ಕೆ ಕಿಚ್ಚು ಹಚ್ಚೆನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾದರೆ ಚಾಣಕ್ಯರು ಹೇಳಿದ ಆ ಗುಣಗಳು ಯಾವುವು ನೋಡಿ.
ಇನ್ನಷ್ಟು ಚಾಣಕ್ಯನೀತಿಗೆ ಇಲ್ಲಿ ಕ್ಲಿಕ್ ಮಾಡಿ
ಚಾಣಕ್ಯರ ಪ್ರಕಾರ, ಒಳ್ಳೆಯ ಹೆಂಡತಿಯ ಮೂಲ ಗುಣವೆಂದರೆ, ಹೆಂಡತಿಯು ತನ್ನ ಗಂಡನನ್ನು ಅವನ ತಾಯಿಯಂತೆ ನೋಡಿಕೊಳ್ಳಬೇಕು, ಸಹೋದರಿಯಂತೆ ಪ್ರೀತಿಸಬೇಕು. ಹಾಗಂತ ಚಾಣಕ್ಯ ನೀತಿಯು ಹೆಂಡತಿಯ ಅರ್ಹತೆಯನ್ನು ನಿರ್ಧರಿಸುವ ಪುಸ್ತಕವಲ್ಲ, ಮದುವೆಯನ್ನು ವಿವರಿಸುವ ಪುಸ್ತಕವೂ ಅಲ್ಲ, ಆದರೆ ಈ ಪುಸ್ತಕದಲ್ಲಿ ಮದುವೆ ಮತ್ತು ಸಂಸಾರದ ಕುರಿತ ಸಾಕಷ್ಟು ವಿಚಾರಗಳಿವೆ. ಹೆಂಡತಿಯೊಂದಿಗೆ ಯಶಸ್ವಿ ದಾಂಪತ್ಯ ಜೀವನ ನಡೆಸುವ ಪರುಷುನಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಕೂಡ ಸಿಗುತ್ತದೆ.
ಚಾಣಕ್ಯರು ತಮ್ಮ ಚಾಣಕ್ಯ ನೀತಿಯ ಹಲವು ಕಡೆ ಬುದ್ಧಿವಂತ ಹೆಂಡತಿಯ ಬಗ್ಗೆ ಉಲ್ಲೇಖಿಸಿದ್ದಾರೆ. ಮದುವೆಯಾಗುವ ಹುಡುಗಿ ಸುಂದರವಾಗಿಲ್ಲ ಎಂದರೂ ತೊಂದರೆಯಿಲ್ಲ ಆದರೆ ಒಳ್ಳೆಯ ಕುಟುಂಬದಿಂದ ಬಂದಿರಬೇಕು ಎಂದು ಚಾಣಕ್ಯ ಹೇಳುತ್ತಾರೆ. ಒಳ್ಳೆ ಮನೆತನದಿಂದ ಅಂದವಿಲ್ಲದ ಹುಡುಗಿ ಬಂದರೂ ಆರಾಮವಾಗಿ ಮದುವೆಯಾಗಬಹುದು ಎಂದು ಸಲಹೆ ನೀಡಿದ್ದಾರೆ. ಚಾಣಕ್ಯರ ಪ್ರಕಾರ ನಿಮ್ಮ ಕುಟುಂಬ ಹೊಂದುವ ಕುಟುಂಬದೊಂದಿಗೆ ಮಾತ್ರ ಸಂಬಂಧ ಬೆಳೆಸಬೇಕು ಎಂದು ಹೇಳಿದ್ದರು. ಹಾಗಿದ್ದಾಗ ಮಾತ್ರ ನಿಮ್ಮನ್ನು ಮದುವೆಯಾಗಿ ಬರುವ ಹುಡುಗಿ ಎಲ್ಲವನ್ನೂ ಸರಿಯಾಗಿ ಅರ್ಥಮಾಡಿಕೊಳ್ಳುತ್ತಾಳೆ ಎಂದು ಚಾಣಕ್ಯ ವಿವರಿಸಿದ್ದಾರೆ.
ಪತಿ-ಪತ್ನಿಯರ ನಡುವಿನ ಪ್ರೀತಿಯೇ ಯಶಸ್ವಿ ದಾಂಪತ್ಯ ಜೀವನಕ್ಕೆ ಆಧಾರ ಎಂದು ಚಾಣಕ್ಯ ಹೇಳಿದರು. ಹೆಂಡತಿಯ ನಿಜವಾದ ಸಂತೋಷವು ಪತಿಗೆ ಮಾಡುವ ಸೇವೆಯಲ್ಲಿ ಅಡಗಿದೆ ಮತ್ತು ಹೆಂಡತಿಯನ್ನು ಪ್ರೀತಿಸುವುದು ಗಂಡನ ಕರ್ತವ್ಯ ಎಂದು ಚಾಣಕ್ಯ ಹೇಳಿದರು. ಬುದ್ಧಿವಂತ, ಪ್ರಾಮಾಣಿಕ ಹೆಂಡತಿ ಯಾವಾಗಲೂ ಗಂಡನ ಯಶಸ್ಸಿನ ರಾಯಭಾರಿ ಎಂದು ಚಾಣಕ್ಯ ಹೇಳಿದ್ದಾರೆ.
ಹೆಂಡತಿಯು ತನ್ನ ಗಂಡನನ್ನು ಪ್ರೀತಿಸಬೇಕು ಮತ್ತು ಯಾವಾಗಲೂ ಸತ್ಯವನ್ನು ಮಾತನಾಡಬೇಕು. ಹೆಂಡತಿಯ ಇಂತಹ ನಡವಳಿಕೆಯು ಕುಟುಂಬದಲ್ಲಿ ಸಂತೋಷವನ್ನು ತರುತ್ತದೆ. ಹೆಂಡತಿ ತನ್ನ ಗಂಡನ ಒಪ್ಪಿಗೆಯೊಂದಿಗೆ ಮಾಡುವ ಪ್ರತಿಯೊಂದೂ ಅವರ ಜೀವನ ಮತ್ತು ಕುಟುಂಬಕ್ಕೆ ಪ್ರಯೋಜನಕಾರಿಯಾಗಬೇಕು.
ಒಳ್ಳೆಯ ಹೆಂಡತಿ ಎಂದಿಗೂ ಜಗಳವಾಡುವುದಿಲ್ಲ. ಹೆಂಡತಿ ತನ್ನ ಪತಿಯೊಂದಿಗೆ ವಿನಾಕಾರಣ ಜಗಳವಾಡಬಾರದು. ಪರಿಸ್ಥಿತಿಗೆ ಅನುಗುಣವಾಗಿ ಗಂಡನ ಸೇವೆ ಮಾಡುವ ಹೆಂಡತಿಯರು ಸುಂದರವಾಗಿಲ್ಲದಿದ್ದರೂ ಗಂಡನ ಪ್ರೀತಿಯನ್ನು ಸಂಪೂರ್ಣವಾಗಿ ಗಳಿಸುತ್ತಾರೆ ಎಂದು ಚಾಣಕ್ಯ ಹೇಳುತ್ತಾರೆ.
ಒಳ್ಳೆಯ ಹೆಂಡತಿ ಬುದ್ಧಿವಂತಳಾಗಿರಬೇಕು ಮತ್ತು ಪ್ರಾಮಾಣಿಕಳಾಗಿರಬೇಕು. ತುಂಬಾ ಪ್ರೀತಿಸುವ ಮತ್ತು ಪ್ರಾಮಾಣಿಕಳಾಗಿರುವ ಹೆಂಡತಿಯನ್ನು ಪಡೆಯುವ ಪತಿ ಅದೃಷ್ಟ ಮಾಡಿರುತ್ತಾರೆ. ಗಂಡನು ತನ್ನ ಹೆಂಡತಿಯನ್ನು ತಾಯಿಯಷ್ಟೇ ಪ್ರೀತಿಸಬೇಕು. ಹೆಂಡತಿಯ ಮೇಲೆ ಪರಿಶುದ್ಧ ಪ್ರೀತಿ ತೋರಬೇಕು. ಕೋಪ ಕಡಿಮೆಯಾದಷ್ಟೂ ಗಂಡ ಹೆಂಡಿತಿಯ ಜೊತೆ ಸುಖವಾಗಿರುತ್ತಾನೆ. ಹೆಂಡತಿಯೊಬ್ಬಳು ಗಂಡನೊಂದಿಗೆ ಹೊಂದಿಕೊಂಡಿದ್ದರೆ ಗಂಡ ಈ ಜಗತ್ತಿನಲ್ಲಿ ಏನನ್ನು ಬೇಕಾದರೂ ಸಾಧಿಸುತ್ತಾನೆ ಎಂದು ಚಾಣಕ್ಯ ಹೇಳುತ್ತಾರೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
ವಿಭಾಗ