Sringeri Tour: ಶೃಂಗೇರಿಗೆ ಭೇಟಿ ನೀಡಿದರೆ ಈ 10 ಸ್ಥಳಗಳನ್ನು ಮಿಸ್ ಮಾಡಬೇಡಿ; ಶಂಕರಾಚಾರ್ಯ ಪ್ರತಿಮೆ ದರ್ಶನವೂ ಪಡೆಯಿರಿ
10 best places to visit near Sringeri: ದೀಪಾವಳಿ ರಜೆಗೆ ಚಿಕ್ಕಮಗಳೂರು ಟ್ರಿಪ್ ಪ್ಲಾನ್ ಮಾಡಿದ್ರೆ ಶೃಂಗೇರಿಗೆ ಕೂಡ ಹೋಗಿಬನ್ನಿ. ಶೃಂಗೇರಿಗೆ ಭೇಟಿ ನೀಡಿದರೆ ಈ 10 ಸ್ಥಳಗಳನ್ನು ಮಿಸ್ ಮಾಡಬೇಡಿ..
ಹೆಚ್ಚಿನದಾಗಿ ಚಿಕ್ಕಮಗಳೂರು ಜಿಲ್ಲೆಯ ಸಹ್ಯಾದ್ರಿ ಶೃಂಗೇರಿ ತಾಲೂಕಿಗೆ ಭೇಟಿ ನೀಡುವ ಜನರು ಶಾರದಾಂಬೆ ದರ್ಶನ ಪಡೆಯಲು ಬಂದವರಾಗಿರುತ್ತಾರೆ. ಶಾರದಾಂಬೆ ದೇಗುಲದ ಜೊತೆ ಅದರ ಸುತ್ತಮುತ್ತಲು ಇರುವ ಇನ್ನೂ ಹಲವು ಪ್ರವಾಸಿ ತಾಣಗಳು, ದೇಗುಲಗಳ ಪಟ್ಟಿ ಇಲ್ಲಿದೆ.
1. ಶಾರದಾಂಬೆ ಸನ್ನಿಧಿ: ಚಿಕ್ಕಮಗಳೂರು ಜಿಲ್ಲೆಯ ಸಹ್ಯಾದ್ರಿ ತಪ್ಪಲಿನಲ್ಲಿರುವ ಶೃಂಗೇರಿ ಶಾರದಾಂಬೆ ದೇವಸ್ಥಾನ ಬಹಳ ಪ್ರಸಿದ್ಧಿ ಪಡೆದಿದೆ. ಶಂಕರಾಚಾರ್ಯರು ಸ್ಥಾಪಿಸಿದ ಮೊದಲ ಮಠ ಇದು.
2. ಶಂಕರಾಚಾರ್ಯರ ಪ್ರತಿಮೆ: ಶಾರದಾಂಬೆ ಕ್ಷೇತ್ರಕ್ಕೆ ಹೆಸರುವಾಸಿಯಾಗಿದ್ದ ಚಿಕ್ಕಮಗಳೂರಿನ ಶೃಂಗೇರಿ ಇದೀಗ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಶೃಂಗೇರಿಯ ಶಾರದಾ ಮಠದಿಂದ 2 ಕಿಲೋ ಮೀಟರ್ ದೂರದಲ್ಲಿರುವ ಮಾರುತಿ ಬೆಟ್ಟದಲ್ಲಿ ನಿರ್ಮಿಸಿರುವ ಆದಿ ಶಂಕರಾಚಾರ್ಯರ 32 ಅಡಿ ಎತ್ತರದ ಭವ್ಯ ಪ್ರತಿಮೆ ನವಂಬರ್ 10 ರಂದು ಅನಾವರಣಗೊಂಡಿದೆ.
3. ಅನ್ನಪೂರ್ಣೇಶ್ವರಿ ದೇವಸ್ಥಾನ: ಇದು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಕ್ಷೇತ್ರದಲ್ಲಿದೆ. ಶೃಂಗೇರಿಗೆ ಬಂದವರು ಹೆಚ್ಚಾಗಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
4. ವಿದ್ಯಾಶಂಕರ ದೇವಸ್ಥಾನ: ಸಾವಿರ ವರ್ಷದ ಇತಿಹಾಸ ಇರುವ ಈ ದೇವಸ್ಥಾನ ಶೃಂಗೇರಿಯಲ್ಲಿದ್ದು, ಹೊಯ್ಸಳ ಮತ್ತು ದ್ರಾವಿಡ ಶೈಲಿಯ ವಾಸ್ತುಶಿಲ್ಪ ಹೊಂದಿದೆ.
5. ಸಿರಿಮನೆ ಜಲಪಾತ: ಫಾಲ್ಸ್ ಇಷ್ಟಪಡುವವರು ಶೃಂಗೇರಿಗೆ ಬಂದು ಹಾಗೆಯೇ ವಾಪಾಸು ಹೋಗುವ ಅಗತ್ಯವಿಲ್ಲ. ನಿಮಗಾಗಿ ಸಿರಿಮನೆ ಜಲಪಾತವಿದೆ.
6. ಕಿಗ್ಗ ಋಷ್ಯಶೃಂಗೇಶ್ವರ ಸ್ವಾಮಿ ದೇವಸ್ಥಾನ: ಶೃಂಗೇರಿಯಿಂದ 10 ಕಿಮೀ ದೂರದಲ್ಲಿದೆ.
7. ಶ್ರೀ ಕೋದಂಡರಾಮಸ್ವಾಮಿ ದೇಗುಲ: ಇದು ಶೃಂಗೇರಿ ಶಾರದಾ ದೇವಸ್ಥಾನದ ಸಮೀಪವಿದೆ.
8. ಬಾಲಸುಬ್ರಹ್ಮಣ್ಯ ದೇವಸ್ಥಾನ: ಈ ದೇಗುಲವು ಶಾರದಾಂಬೆ ದೇವಸ್ಥಾನದ ಬಳಿ ತುಂಗಾ ನದಿ ತಟದಲ್ಲಿ ಇದೆ.
9. ಚಪ್ಪರ ಆಂಜನೇಯ ದೇಗುಲ: ಶಾರದಾಂಬೆ ದೇವಸ್ಥಾನ ಸಮೀಪವಿರುವ ಈ ದೇಗುಲದಲ್ಲಿ ನೀವು ಕಪ್ಪು ಶಿಲೆಯ ಹನುಮಾನ್ ಪ್ರತಿಮೆಯನ್ನು ನೋಡಬಹುದು.
10. ಉಳಿದಂತೆ ನೀವು ಚಿಟ್ಟೆಮಕ್ಕಿ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಮಲಹಾನಿಕರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಬಹುದು.