ಮಲಗಿದ ಕೂಡಲೇ ಗಾಢ ನಿದ್ದೆಗೆ ಜಾರುವ ಕಂದಮ್ಮಗಳಿಗೂ ಕನಸು ಬೀಳುತ್ತಾ: ಮಗು ನಿದ್ದೆಯಿಂದ ಎಚ್ಚರಗೊಂಡು ಚಿಟಾರನೇ ಅಳಲು ಕಾರಣವಿದು-child care children sleep and dreams reasons for crying during sleep in kids small children experience dreams prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಲಗಿದ ಕೂಡಲೇ ಗಾಢ ನಿದ್ದೆಗೆ ಜಾರುವ ಕಂದಮ್ಮಗಳಿಗೂ ಕನಸು ಬೀಳುತ್ತಾ: ಮಗು ನಿದ್ದೆಯಿಂದ ಎಚ್ಚರಗೊಂಡು ಚಿಟಾರನೇ ಅಳಲು ಕಾರಣವಿದು

ಮಲಗಿದ ಕೂಡಲೇ ಗಾಢ ನಿದ್ದೆಗೆ ಜಾರುವ ಕಂದಮ್ಮಗಳಿಗೂ ಕನಸು ಬೀಳುತ್ತಾ: ಮಗು ನಿದ್ದೆಯಿಂದ ಎಚ್ಚರಗೊಂಡು ಚಿಟಾರನೇ ಅಳಲು ಕಾರಣವಿದು

ರಾತ್ರಿ ವೇಳೆ ಅಥವಾ ಹಗಲಿನಲ್ಲಿ ನಿದ್ದೆಗೆ ಜಾರುವಾಗ ಎಲ್ಲರಿಗೂ ಕನಸುಗಳು ಬೀಳುತ್ತವೆ. ದಿನನಿತ್ಯ ನಡೆಯುವ ಘಟನೆಗಳು ಅಥವಾ ಇನ್ನಿತರೆ ಯಾವುದೇ ಅಂಶಗಳು ಕನಸಿನಲ್ಲಿ ಬರಬಹುದು. ವಯಸ್ಕರಿಗೆ ಮಾತ್ರವಲ್ಲ ಪುಟ್ಟ ಕಂದಮ್ಮಗಳಿಗೂ ಕನಸುಗಳು ಬೀಳುತ್ತವೆ ಎಂಬುದು ಬಹುತೇಕರ ನಂಬಿಕೆ. ಇದು ನಿಜನಾ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಕಂದಮ್ಮಗಳಿಗೂ ಕನಸುಗಳು ಬೀಳುತ್ತವೆ ಎಂಬುದು ಬಹುತೇಕರ ನಂಬಿಕೆ. ಇದು ನಿಜನಾ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಕಂದಮ್ಮಗಳಿಗೂ ಕನಸುಗಳು ಬೀಳುತ್ತವೆ ಎಂಬುದು ಬಹುತೇಕರ ನಂಬಿಕೆ. ಇದು ನಿಜನಾ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಸ್ವಲ್ಪ ಹೊತ್ತು ನಿದ್ದೆಗೆ ಜಾರಿದರೆ ಸಾಕು ಕನಸುಗಳು ಶುರುವಾಗುತ್ತದೆ. ರಾತ್ರಿ ಅಂತಾ ಇಲ್ಲ ಹಗಲು ಅಂತಿಲ್ಲ, ಯಾವುದೇ ಸಮಯವಾದರೂ ಸರಿ ನಿದ್ದೆಗೆ ಜಾರಿದರೆ ಕನಸುಗಳು ಶುರುವಾಗಲು ಪ್ರಾರಂಭಿಸುತ್ತವೆ. ವಯಸ್ಕರು ಮಾತ್ರವಲ್ಲ ಕಂದಮ್ಮಗಳಿಗೂ ನಿದ್ದೆಯ ಸಮಯದಲ್ಲಿ ಕನಸುಗಳು ಬೀಳುತ್ತವೆಯಾ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ರಾತ್ರಿ ವೇಳೆ ಬೆಚ್ಚಿ ಬೀಳುವ ಮಕ್ಕಳು ಅಳುವುದಕ್ಕೆ ಶುರು ಮಾಡಿದರೆ, ದುಃಖದ ಕನಸು ಬಿದ್ದಿರಬಹುದು ಎಂದು ಸಾಮಾನ್ಯವಾಗಿ ಎಲ್ಲರೂ ಭಾವಿಸುತ್ತಾರೆ. ತಾವು ಅತ್ತಿದ್ದರ ಹಿಂದಿನ ಕಾರಣವನ್ನು ಹೇಳಲು ಮಕ್ಕಳಿಗೆ ಹೇಳಲು ಸಾಧ್ಯವಿಲ್ಲ. ಹೀಗಾಗಿ ದುಃಸ್ವಪ್ನಗಳು ಮತ್ತು ರಾತ್ರಿ ವೇಳೆಯ ಭಯವು ಪುಟ್ಟ ಮಕ್ಕಳಲ್ಲಿ ಸಾಮಾನ್ಯವಾಗಿದೆ ಎಂಬುದು ಬಹುತೇಕರ ನಂಬಿಕೆ.

ಚಿಕ್ಕ ಮಕ್ಕಳು ಯಾವುದೋ ಭಯದಲ್ಲಿ ಅಥವಾ ಕನಸು ಕಂಡವರಂತೆ ಅಳುತ್ತಾ ನಿದ್ದೆಯಿಂದ ಏಳುತ್ತಾರೆ. ಯಾವುದೋ ದುಃಸ್ವಪ್ನದಿಂದ ಅವರು ಅಳುತ್ತಿರಬಹುದು. ಮಕ್ಕಳಿಗೆ ನಿಜವಾಗಿಯೂ ಕನಸು ಬೀಳುತ್ತವೆಯೇ? ಯಾವ ವಯಸ್ಸಿನಿಂದ ಕನಸುಗಳು ಬರಲು ಪ್ರಾರಂಭಿಸುತ್ತವೆ ಎಂಬುದನ್ನು ಇಲ್ಲಿ ವಿವರವಾಗಿ ತಿಳಿಯಿರಿ.

ಮಕ್ಕಳು ಬೇಗ ಗಾಢ ನಿದ್ದೆಗೆ ಜಾರುತ್ತಾರೆ: ಮಕ್ಕಳನ್ನು ಮಲಗಿಸಿದ ತಕ್ಷಣ ಅವರು ಗಾಢ ನಿದ್ದೆಗೆ ಜಾರುತ್ತಾರೆ. ಆದರೆ, ನಿದ್ದೆಯ ಮಧ್ಯದಲ್ಲಿ ಎಚ್ಚರಗೊಳ್ಳುವ ಅವರು ಜೋರಾಗಿ ಅಳುವುದಕ್ಕೆ ಶುರು ಮಾಡುತ್ತಾರೆ. ಏನೋ ಭಯಗೊಂಡು ಅಳುವಂತೆ ಕಾಣುತ್ತದೆ. ದುಃಸ್ವಪ್ನದಿಂದಾಗಿ ಭಯಪಟ್ಟು ಅಳುತ್ತಿದ್ದಾರೆ ಎಂದು ನಾವು ಭಾವಿಸುತ್ತೇವೆ. ವಯಸ್ಕರಿಗೆ ದುಸ್ವಪ್ನ ಬಿದ್ದರೆ ಎಚ್ಚರವಾದಾಗ ಮೈತುಂಬಾ ಬೆವರಿ, ಆತಂಕದಿಂದ ಎದ್ದೇಳುತ್ತೇವೆ. ಎದ್ದ ನಂತರ ಅದು ನಿಜವಲ್ಲ, ಕನಸೆಂದು ತಿಳಿದು ಸಮಾಧಾನವಾಗಿ ಮಲಗುತ್ತೇವೆ. ಆದರೆ, ಮಕ್ಕಳಿಗೆ ಹಾಗಲ್ಲ. ತಾವು ಯಾಕಾಗಿ ಅಳುತ್ತಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲದ್ದರಿಂದ ಕನಸಿರಬಹುದು ಎಂದು ಎಲ್ಲರೂ ನಂಬುತ್ತಾರೆ.

ಕನಸುಗಳು ನನಸಾಗುತ್ತವೆಯೇ?

ಕನಸಿನಲ್ಲಿ ಅನೇಕ ವಿಚಿತ್ರ ಘಟನೆಗಳು ನಡೆಯುತ್ತವೆ. ಕೆಲವೊಮ್ಮೆ ಕನಸುಗಳು ದೊಡ್ಡ ತಿರುವುಗಳೊಂದಿಗೆ ಸಿನಿಮಾದಂತೆ ಕಣ್ಮುಂದೆ ಬರುತ್ತದೆ. ಇಂಥ ಕನಸನ್ನೇ ಒಂದು ಸಿನಿಮಾ ಮಾಡಿದರೆ ಆ ಸಿನಿಮಾ ಸೂಪರ್ ಹಿಟ್ ಆಗುವುದರಲ್ಲಿ ಸಂಶಯವೇ ಇಲ್ಲ. ಯಾಕೆಂದರೆ ಅಷ್ಟು ಒಳ್ಳೆ-ಒಳ್ಳೆಯ ಕನಸುಗಳು ಬಿದ್ದಿರುತ್ತವೆ. ಆದರೆ, ಬಹುತೇಕ ಕನಸುಗಳು ಮರೆತು ಹೋಗುತ್ತವೆ. ನಮ್ಮಲ್ಲಿ ತುಂಬಾ ಆಲೋಚನಾ ಶಕ್ತಿ ಮತ್ತು ಪ್ರಬುದ್ಧತೆ ಇರುವುದರಿಂದ ಇಂತಹ ಕನಸುಗಳು ಬರುತ್ತವೆ. ಚಿಕ್ಕ ಮಕ್ಕಳಿಗೆ ಆ ಸಾಮರ್ಥ್ಯವಾಗಲಿ, ಕಲ್ಪನೆಯಾಗಲಿ ಇರುವುದಿಲ್ಲ. ಅವರ ಮೆದುಳಿಗೆ ನಿರ್ಣಾಯಕ ಸನ್ನಿವೇಶಗಳನ್ನು ಸೃಷ್ಟಿಸುವ ಶಕ್ತಿ ಇಲ್ಲದಿರುವುದರಿಂದ ಅವರಿಗೆ ಕನಸುಗಳು ಬೀಳುವುದಿಲ್ಲ. ನಮ್ಮ ಕನಸುಗಳು ನಮ್ಮ ಆಲೋಚನೆಗಳಿಂದ ಬರುತ್ತವೆ. ನಾವು ದಿನನಿತ್ಯ ಎದುರಿಸುವ ಒತ್ತಡ ಮತ್ತು ಸಮಸ್ಯೆಗಳು ನಮ್ಮ ಕನಸಿನ ಮೇಲೂ ಪರಿಣಾಮ ಬೀರುತ್ತವೆ. ವ್ಯಕ್ತಿಯ ವ್ಯಕ್ತಿತ್ವವನ್ನು ಅವಲಂಬಿಸಿ, ಅವರ ಕನಸುಗಳು ಬದಲಾಗುತ್ತವೆ. ಮಕ್ಕಳಿಗೆ ಇನ್ನೂ ತಮ್ಮದೇ ಆದ ವ್ಯಕ್ತಿತ್ವ ಇಲ್ಲದೇ ಇರುವುದರಿಂದ ಚಿಕ್ಕ ಮಕ್ಕಳಿಗೆ ಕನಸುಗಳು ಬೀಳುವುದಿಲ್ಲ.

ಮಗು (ಚಿಕ್ಕ ಮಕ್ಕಳು) ನಿದ್ದೆಯಿಂದ ಎದ್ದ ಕೂಡಲೇ ಯಾಕಾಗಿ ಅಳುವುದು?

ಮಕ್ಕಳು ನಿದ್ದೆಯ ಮಧ್ಯದಲ್ಲಿ ಎದ್ದು ಅಳುವುದಕ್ಕೆ ಹಲವು ಕಾರಣಗಳಿವೆ. ತಿಂಗಳ ಮತ್ತು ವರ್ಷದೊಳಗಿನ ಮಕ್ಕಳು ಹಸಿವು, ಒದ್ದೆಯಾದ ಬಟ್ಟೆ, ಅತಿಯಾದ ದಣಿವು ಅಥವಾ ಯಾವುದೇ ಇತರ ಅಸ್ವಸ್ಥತೆಯ ಕಾರಣದಿಂದಾಗಿ ಅಳಬಹುದು. ಅಥವಾ ಕೆಲವೊಮ್ಮೆ ಎಚ್ಚರಗೊಳ್ಳುವ ಮಗುವಿಗೆ ತಾನು ಮತ್ತೆ ನಿದ್ದೆ ಮಾಡುವುದು ಹೇಗೆ ಎಂದು ತಿಳಿಯುವುದಿಲ್ಲವಾದ್ದರಿಂದಲೂ ಅಳುತ್ತಾರೆ. ಇದಕ್ಕಾಗಿಯೇ ಮಕ್ಕಳನ್ನು ತೊಟ್ಟಿಲಿನಲ್ಲಿ ಮಲಗಿಸುವುದು. ತೊಟ್ಟಿಲನ್ನು ತೂಗಿದರೆ ಮಕ್ಕಳು ಮತ್ತೆ ನಿದ್ದೆಗೆ ಜಾರುತ್ತಾರೆ.

ಯಾವ ವಯಸ್ಸಿನಿಂದ ಕನಸುಗಳು ಬರುತ್ತವೆ?

ಸಾಮಾನ್ಯವಾಗಿ ಮೂರು ಅಥವಾ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕನಸುಗಳು ಬೀಳುವುದಿಲ್ಲ. ಅದಲ್ಲದೆ, ಕನಸುಗಳು ಮಕ್ಕಳನ್ನು ಹೆದರಿಸುವುದಿಲ್ಲ. ಯಾಕೆಂದರೆ ಪುಟ್ಟ ಕಂದಮ್ಮಗೆ ಹೆದರಿಕೆ ಅಂದರೆ ಏನೆಂಬುದು ತಿಳಿದಿರುವುದಿಲ್ಲ. ಉದಾಹರಣೆಗೆ ಕತ್ತಲೆ, ದೆವ್ವ, ಯಾವುದೇ ಅಪಾಯ, ಭಯಾನಕ ಪ್ರಾಣಿಗಳು ಇತ್ಯಾದಿ ಬಗ್ಗೆ ಕಂದಮ್ಮಗಳಿಗೆ ತಿಳಿದಿರುವುದಿಲ್ಲ. ಹೀಗಾಗಿ ಭಯಾನಕ ಕನಸುಗಳು ಬೀಳುವ ಸಾಧ್ಯತೆ ಇಲ್ಲ ಎಂದೇ ಹೇಳಬಹುದು. ಆದರೆ, ನಾಲ್ಕು ವರ್ಷಗಳ ನಂತರ ಮಕ್ಕಳ ಯೋಚನಾ ಶಕ್ತಿ ಹೆಚ್ಚುತ್ತದೆ. ಈ ವಯಸ್ಸಿನಲ್ಲಿ ದೊಡ್ಡ ದೃಶ್ಯಗಳಿರುವ ಕನಸುಗಳು ಬರುವುದಿಲ್ಲ. ಅವರು ನೋಡುವ ವಸ್ತುಗಳು ಅಥವಾ ಜನರನ್ನು ಫೋಟೋಗಳಂತೆ ಕನಸಿನಲ್ಲಿ ಕಾಣಬಹುದು. ಅಥವಾ ಮಕ್ಕಳ ಜೊತೆ ಆಟವಾಡುವಾಗ ಅವರೊಂದಿಗೆ ಆಡುವ ಜಗಳ, ನಗು ಇತ್ಯಾದಿ ಕನಸಿನಲ್ಲಿ ಬರಬಹುದು. ಆದರೆ, ಬೆಳೆಯುತ್ತಾ ಮಕ್ಕಳ ಕನಸುಗಳು ಮತ್ತು ಕನಸುಗಳ ಪ್ರಕಾರಗಳಲ್ಲಿ ಬದಲಾವಣೆ ಕಂಡುಬರುತ್ತದೆ.