Deepavali 2023: ದೀಪಾವಳಿಯಂದು ನಿಮ್ಮ ಪ್ರೀತಿಪಾತ್ರರಿಗೆ ಕಳಿಸಬಹುದಾದ ಕಾರ್ಡ್, ಸೋಷಿಯಲ್ ಮೀಡಿಯಾ ಸಂದೇಶಗಳಿವು
Deepavali 2023 Wishes: ದೀಪಾವಳಿ, ಹೆಸರೇ ಸೂಚಿಸುವಂತೆ ದೀಪಗಳ ಹಬ್ಬ. ಈ ವಿಶೇಷ ದಿನದಂದು ನಿಮ್ಮ ಪೀತಿಪಾತ್ರರಿಗೆ ಈ ರೀತಿ ಸೋಷಿಯಲ್ ಮೀಡಿಯಾ ಸಂದೇಶಗಳನ್ನು ಕಳಿಸಿ ಹಬ್ಬದ ಶುಭಾಶಯ ಕೋರಿ.
Deepavali 2023 Wishes: ಹಬ್ಬ ಹರಿದಿನ, ವಿಶೇಷ ಸಂದರ್ಭಗಳಲ್ಲಿ ಆತ್ಮೀಯರಿಗೆ, ನಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ನೀಡುವುದು, ಅವರೊಂದಿಗೆ ಕಾಲ ಕಳೆಯುವುದು ಹೆಚ್ಚಿನ ಖುಷಿ ನೀಡುತ್ತದೆ. ಹಾಗೇ ಪ್ರತಿಯೊಂದು ಹಬ್ಬದಲ್ಲೂ ಆತ್ಮೀಯರಿಗೆ ಹಬ್ಬದ ಶುಭ ಕೋರುವುದು ಕೂಡಾ ವಾಡಿಕೆ. ದೀಪಾವಳಿ ಹತ್ತಿರ ಬಂತು. 5 ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ.
ದಕ್ಷಿಣ ಭಾರತದಲ್ಲಿ ದೀಪಾವಳಿ ಮೊದಲ ಹಬ್ಬವನ್ನು ನೀರು ತುಂಬುವ ಹಬ್ಬ ಎಂದು ಆಚರಿಸಿದರೆ, ಉತ್ತರ ಭಾರತದಲ್ಲಿ ಧನ್ ತೆರೆಸ್ ಹೆಸರಿನಲ್ಲಿ ಆಚರಿಸುತ್ತಾರೆ. ಹೀಗೆ ದೇಶದ ವಿವಿಧ ಭಾಗಗಳಲಲ್ಲಿ ವಿವಿಧ ಹೆಸರಿನಲ್ಲಿ ಆಚರಿಸಿದರೂ ಸಂಭ್ರಮ ಒಂದೇ. ಹಬ್ಬದ ದಿನ ಪ್ರೀತಿಪಾತ್ರರಿಗೆ ವಾಟ್ಸಾಪ್, ಫೇಸ್‌ಬುಕ್ ಸಂದೇಶ, ಕಾರ್ಡ್ ನೀಡಿ ಎಲ್ಲರೂ ಖುಷಿ ವ್ಯಕ್ತಪಡಿಸುತ್ತಾರೆ. ಈ ದೀಪಾವಳಿಯಂದು ನಿಮ್ಮವರಿಗೆ ನೀವು ಈ ಸಂದೇಶದ ಮೂಲಕ ವಿಶ್ ಮಾಡಬಹುದು.
1. ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು, ನಿಮ್ಮ ಬಾಳಿನಲ್ಲಿ ಕತ್ತಲೆ ಕಳೆದು ಬೆಳಕು ಮೂಡಲಿ ಎಂದು ಹಾರೈಸುತ್ತೇನೆ
2. ದೀಪವು ಮತ್ತೊಂದು ದೀಪವನ್ನು ಬೆಳಗುವಂತೆ, ಪ್ರೀತಿಯಿಂದ ಪ್ರೀತಿ ಹರಡಲಿ. ದ್ವೇಷ ಅಸೂಯೆ ಕೋಪ ನಶಿಸಿ ನಿಮ್ಮ ಬಾಳಲ್ಲಿ ಪ್ರೀತಿ ಪ್ರೇಮ ಚಿಗುರಲಿ ದೀಪಾವಳಿಯ ಶುಭಾಶಯಗಳು
3. ಬೆಳಕಿನ ಹಬ್ಬ ದೀಪಾವಳಿ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ ಐಶ್ವರ್ಯ ತರಲಿ ದೀಪಾವಳಿಯ ಶುಭಕಾಮನೆಗಳು
4. ಧನಲಕ್ಷ್ಮಿಯು ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಿ ನಿಮಗೆ ಸುಖ ಸಂತೋಷ ಸಕಲ ಸಮೃದ್ಧಿ ಕರುಣಿಸಲಿ. ದೀಪಾವಳಿ ಧನಲಕ್ಷ್ಮೀ ಹಬ್ಬದ ಶುಭಾಶಯಗಳು.
5. ದೀಪಾವಳಿ ಕೇವಲ ಹಬ್ಬವಲ್ಲ, ನಮ್ಮ ಸಂಸ್ಕೃತಿಯ ಸಾರ, ಭಾರತೀಯರಿಗೆ ದೀಪಾವಳಿ ಖುಷಿಯಂದ ಕಲೆತು ಬೆರೆದು ಆಚರಿಸುವ ಹಣತೆಗಳ ಹಬ್ಬ, ಈ ದೀಪಾವಳಿಯನ್ನು ಸಂಭ್ರಮಿಸಿ, ಹಬ್ಬದ ಶುಭಾಶಯಗಳು.
6. ಮೂಡಲಿ ಖುಷಿಯ ಚಿತ್ತಾರ, ದೂರವಾಗಲಿ ಬದುಕಿನ ಅಂಧಕಾರ, ತುಂಬಲಿ ಮನೆ ಮನಗಳಲ್ಲಿ ಸಡಗರ, ಬಲಿಪಾಡ್ಯಮಿ ಶುಭಾಶಯಗಳು.
7. ಕತ್ತಲು ಕರಗುವಂತೆ ಕಷ್ಟ ಕರಗಲಿ, ದೀಪದ ಬೆಳಕಿನಂತೆ ಸಂತೋಷ ಬರಲಿ, ನಿಮ್ಮ ಜೀವನ ಎಂದೆಂದಿಗೂ ಸುಖ ಸಂತೋಷದಿಂದ ಕೂಡಿರಲಿ, ನರಕಚತುರ್ದಶಿಯ ಶುಭಾಶಯ.
8. ಈ ಬೆಳಕಿನ ಹಬ್ಬವು ನಿಮ್ಮ ಬಾಳಲ್ಲಿ ಭವಿಷ್ಯದ ಹೊಸ ಭರವಸೆ, ನಾಳೆಯ ಹೊಸ ಕನಸುಗಳನ್ನು ತುಂಬಲಿ, ಬೆಳಕಿನ ಹಬ್ಬ ನಿಮ್ಮ ಬಾಳಲ್ಲಿ ಬೆಳಕು ನೀಡಲಿ, ಹಬ್ಬದ ಶುಭಾಶಯಗಳು.
9. ನೀವು ಹಚ್ಚುವ ಹಣತೆಯ ಬೆಳಕು ನಿಮ್ಮ ಬಾಳಲ್ಲಿ ಸಂತೋಷದ ಹೊಳಪನ್ನು ತರಲಿ, ನಿಮ್ಮ ಮನೆ ಮನಗಳನ್ನು ಬೆಳಗಿಸಲಿ, ದೀಪಾವಳಿಯ ಶುಭಾಶಯಗಳು
10. ಭಗವಾನ್ ಶ್ರೀ ರಾಮನು ನಿಮಗೆ ಅತ್ಯುತ್ತಮ ಸದ್ಗುಣಗಳನ್ನು ಅನುಗ್ರಹಿಸಲಿ, ನಿಮಗೆ ಸದಾ ಯಶಸ್ಸನ್ನು ಕರುಣಿಸಲಿ ದೀಪಾವಳಿ 2023ರ ಶುಭಾಶಯಗಳು
11. ದೀಪಾವಳಿಯ ಶುಭಾಶಯಗಳು, ದೀಪಗಳ ಜ್ವಾಲೆಯು ನಿಮ್ಮ ಹೃದಯ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸಲಿ, ದೇವರು ನಿಮಗೆ ಅಷ್ಟೈಶ್ವರ್ಯ, ಸುಖ ಸಂತೋಷ ನೀಡಲಿ, ಹಬ್ಬದ ಸಂಭ್ರಮವನ್ನು ದುಪಟ್ಟುಗೊಳಿಸಲೆಂದು ಹಾರೈಸುತ್ತೇನೆ.
12. ಹಣತೆಗಳನ್ನು ಬೆಳಗಿಸಿ, ದು:ಖದ ಸರಪಳಿಯನ್ನು ಸ್ಫೋಟಿಸಿ, ಸಮೃದ್ಧಿಯ ರಾಕೆಟನ್ನು ಹಾರಿಸಿ, ಸುಖ ಸಂತೋಷದ ಹೂಕುಂಡವನ್ನು ಹರಡಿ, ಎಂದೆಂದಿಗೂ ನಿಮ್ಮ ಬದುಕಲ್ಲಿ ಬೆಳಕೇ ತುಂಬಿರಲಿ ನಿಮಗೂ ನಿಮ್ಮವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
ಈ ಸುಂದರವಾದ ವಾಕ್ಯಗಳ ಮೂಲಕ ನಿಮ್ಮ ಆತ್ಮೀಯರಿಗೆ ಸಂದೇಶ ಕಳಿಸಿ ಶುಭ ಕೋರಿ.