ನೀವು ಮಾಡಿರುವ ಸಾಂಬಾರ್‌ನಲ್ಲಿ ಹುಳಿ ಹೆಚ್ಚಾಗಿದ್ದರೆ ಚಿಂತೆ ಬೇಡ; ಗ್ರೇವಿಯ ರುಚಿ ಸಮತೋಲನಗೊಳಿಸಲು ಇಲ್ಲಿದೆ ಸಲಹೆ
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಮಾಡಿರುವ ಸಾಂಬಾರ್‌ನಲ್ಲಿ ಹುಳಿ ಹೆಚ್ಚಾಗಿದ್ದರೆ ಚಿಂತೆ ಬೇಡ; ಗ್ರೇವಿಯ ರುಚಿ ಸಮತೋಲನಗೊಳಿಸಲು ಇಲ್ಲಿದೆ ಸಲಹೆ

ನೀವು ಮಾಡಿರುವ ಸಾಂಬಾರ್‌ನಲ್ಲಿ ಹುಳಿ ಹೆಚ್ಚಾಗಿದ್ದರೆ ಚಿಂತೆ ಬೇಡ; ಗ್ರೇವಿಯ ರುಚಿ ಸಮತೋಲನಗೊಳಿಸಲು ಇಲ್ಲಿದೆ ಸಲಹೆ

ಸಾಂಬಾರ್ ಅಥವಾ ಗ್ರೇವಿ ತುಂಬಾ ಹುಳಿಯಾದರೆ ರುಚಿ ಚೆನ್ನಾಗಿರುವುದಿಲ್ಲ. ಸಾಂಬಾರ್ ಹುಳಿ ಹುಳಿಯಾದರೆ ಅದನ್ನು ತಿನ್ನಲು ಮನಸಾಗುವುದಿಲ್ಲ. ಅದರಲ್ಲೂ ತುಂಬಾ ಸಾಂಬಾರ್ ಮಾಡಿದ್ದರೆ ಅಥವಾ ಅತಿಥಿಗಳಿಗಾಗಿ ಮಾಡಿದ್ದರೆ ಈಗೇನು ಮಾಡುವುದು ಎಂಬ ಚಿಂತೆ ಕಾಡುವುದು ಸಹಜ. ಹೀಗಾಗಿ ಇಲ್ಲಿ ನೀಡಿರುವ ಸಲಹೆ ಅಥವಾ ಟಿಪ್ಸ್ ಅನುಸರಿಸಬಹುದು.

ಸಾಂಬಾರ್‌ನಲ್ಲಿ ಹುಳಿ ಹೆಚ್ಚಾಗಿದ್ದರೆ ಗ್ರೇವಿಯ ರುಚಿ ಸಮತೋಲನಗೊಳಿಸಲು ಇಲ್ಲಿದೆ ಸಲಹೆ
ಸಾಂಬಾರ್‌ನಲ್ಲಿ ಹುಳಿ ಹೆಚ್ಚಾಗಿದ್ದರೆ ಗ್ರೇವಿಯ ರುಚಿ ಸಮತೋಲನಗೊಳಿಸಲು ಇಲ್ಲಿದೆ ಸಲಹೆ

ಕೆಲವೊಮ್ಮೆ ಪದಾರ್ಥಗಳ ಅಳತೆಯಲ್ಲಿ ವ್ಯತ್ಯಾಸವಾದರೆ ಸಾಂಬಾರ್ ಅಥವಾ ಗ್ರೇವಿ ಹೆಚ್ಚು ಹುಳಿಯಾಗಿರುತ್ತದೆ. ಅದರಲ್ಲೂ ಟೊಮೆಟೊ, ಹುಣಸೆಹಣ್ಣು ಜಾಸ್ತಿ ಹಾಕಿದರೆ ಅಂತಹ ಸಾಂಬಾರ್ ಹುಳಿಯಾಗುತ್ತದೆ. ಹುಳಿ ಜಾಸ್ತಿಯಾದರೆ ಸಾಂಬಾರ್ ಅಥವಾ ಗ್ರೇವಿ ತಿನ್ನಲು ಅಷ್ಟು ರುಚಿಕರವಾಗಿರುವುದಿಲ್ಲ. ಅದರಲ್ಲೂ ತುಂಬಾ ಸಾಂಬಾರ್ ಮಾಡಿದ್ದರೆ ಅಥವಾ ಅತಿಥಿಗಳಿಗಾಗಿ ಮಾಡಿದ್ದರೆ ಈಗೇನು ಮಾಡುವುದು ಎಂಬ ಚಿಂತೆ ಕಾಡುವುದು ಸಹಜ. ಇಲ್ಲಿ ನೀಡಿರುವ ಕೆಲವು ಸಲಹೆಗಳನ್ನು ಅನುಸರಿಸಿದರೆ ಗ್ರೇವಿ ಹುಳಿಯಾಗಿರುವುದನ್ನು ಸ್ವಲ್ಪ ಕಡಿಮೆ ಮಾಡಬಹುದು. ಅದು ಹೇಗೆ ಅನ್ನೋದು ಇಲ್ಲಿದೆ.

ಸಾಂಬಾರ್‌ಗೆ ಹುಳಿ ಜಾಸ್ತಿಯಾಗಿದ್ದರೆ ಸಮತೋಲನಗೊಳಿಸಲು ಇಲ್ಲಿದೆ ಸಲಹೆ ಅಥವಾ ಟಿಪ್ಸ್

ಸಕ್ಕರೆ ಮತ್ತು ಬೆಲ್ಲವನ್ನು ಸೇರಿಸಿ: ಸಾಂಬಾರ್‌ ಹೆಚ್ಚು ಹುಳಿಯಾಗಿದ್ದರೆ ಅದಕ್ಕೆ ಸಿಹಿಯನ್ನು ಸೇರಿಸುವ ಮೂಲಕ ರುಚಿಯನ್ನು ಸಮತೋಲನಗೊಳಿಸಬಹುದು. ಗ್ರೇವಿಯ ಹುಳಿ ಕಡಿಮೆಯಾಗಲು ಸಕ್ಕರೆ ಅಥವಾ ಬೆಲ್ಲವನ್ನು ಹಾಕಬೇಕು. ಇದರಿಂದ ಹೆಚ್ಚುವರಿ ಹುಳಿಯು ಬಹುತೇಕ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಇದು ಉತ್ತಮ ರುಚಿಯನ್ನು ಹೊಂದಿರುತ್ತದೆ. ಬೇಕಿದ್ದರೆ ಜೇನುತುಪ್ಪವನ್ನು ಕೂಡ ಸೇರಿಸಬಹುದು.

ಮೊಸರು ಮತ್ತು ಹಾಲು ಮಿಶ್ರಣ ಮಾಡಿ: ಮೊಸರು ಸಾಂಬಾರ್‌ನಲ್ಲಿರುವ ಹುಳಿಯನ್ನು ಕಡಿಮೆ ಮಾಡುತ್ತದೆ. ಮೊಸರು ಹುಳಿ ಗುಣವನ್ನು ಹೊಂದಿದ್ದರೂ, ಇದು ಗ್ರೇವಿಯ ರುಚಿಯನ್ನು ಸಮತೋಲನಗೊಳಿಸುತ್ತದೆ. ಮೊಸರಿಗೆ ಸ್ವಲ್ಪ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ಸಾಂಬಾರ್ ಅಥವಾ ಗ್ರೇವಿಗೆ ಸೇರಿಸಿ, ನಿಧಾನವಾಗಿ ಬೇಯಿಸಿ. ಇದು ಹುಳಿ ರುಚಿಯನ್ನು ಕಡಿಮೆ ಮಾಡುತ್ತದೆ. ಸಾಂಬಾರಿನ ರುಚಿಯನ್ನು ಸಮತೋಲನಗೊಳಿಸುತ್ತದೆ. ಇದರ ಬದಲು ತಾಜಾ ಕ್ರೀಮ್ ಅನ್ನು ಸಹ ಬಳಸಬಹುದು.

ಈ ತರಕಾರಿಗಳನ್ನು ಹಾಕಬಹುದು: ಸಾಂಬಾರ್ ಹೆಚ್ಚು ಆಲೂಗಡ್ಡೆ ಅಥವಾ ಕ್ಯಾರೆಟ್ ಹಾಕಿ ಬೇಯಿಸಬಹುದು. ಇದರಿಂದ ಹುಳಿ ಕಡಿಮೆಯಾಗಿ ರುಚಿ ಸಮತೋಲಿತವಾಗಿರುತ್ತದೆ. ಆಲೂಗಡ್ಡೆಯು ಆಮ್ಲೀಯತೆಯನ್ನು ಕಡಿಮೆ ಮಾಡಲು ಉಪಯುಕ್ತವಾಗಿದೆ. ಇವುಗಳನ್ನು ಸೇರಿಸುವುದರಿಂದ ಸಾಂಬಾರಿಗೆ ಒಳ್ಳೆ ರುಚಿಯ ಜೊತೆಗೆ ಪೋಷಕಾಂಶಗಳೂ ಸಿಗುತ್ತವೆ.

ತೆಂಗಿನಕಾಯಿ ಅಥವಾ ಒಣಹಣ್ಣುಗಳ ಪೇಸ್ಟ್: ತೆಂಗಿನಕಾಯಿ ಪುಡಿ ಅಥವಾ ತುರಿದ ತೆಂಗಿನಕಾಯಿಯನ್ನು ಕೂಡ ಸೇರಿಸಬಹುದು. ಇದು ರುಚಿಯನ್ನು ಸಮತೋಲನಗೊಳಿಸುತ್ತದೆ. ಇಲ್ಲದಿದ್ದರೆ ತೆಂಗಿನಕಾಯಿಯನ್ನು ರುಬ್ಬಿಕೊಂಡು ಅದರ ಹಾಲನ್ನು ಸೇರಿಸಬಹುದು. ಬಾದಾಮಿ ಮತ್ತು ಗಸಗಸೆ ಪೇಸ್ಟ್ ಅನ್ನು ಸಹ ಹಾಕಬಹುದು. ಇವು ಗ್ರೇವಿಯ ಸ್ವಾದವನ್ನು ಸಮತೋಲನದಲ್ಲಿರಿಸಲು ಸಹಕಾರಿಯಾಗಿದೆ.

ಅಡುಗೆ ಸೋಡಾ: ಸಾಂಬಾರ್ ಹುಳಿಯಾಗಿದ್ದರೆ ಚಿಟಿಕೆ ಅಡುಗೆ ಸೋಡಾವನ್ನು ಸಹ ಬಳಸಬಹುದು. ಒಂದು ಪಿಂಚ್ ಅಡುಗೆ ಸೋಡಾವನ್ನು ಸೇರಿಸುವುದರಿಂದ ರುಚಿಯನ್ನು ಸಮತೋಲನಗೊಳಿಸುತ್ತದೆ. ಆದರೆ, ಹೆಚ್ಚು ಸೋಡಾ ಸೇರಿಸಿದರೆ ರುಚಿ ಬದಲಾಗುತ್ತದೆ. ಹೀಗಾಗಿ ಒಂದು ಚಿಟಿಕೆ ಸಾಕು. ಹುಳಿಯನ್ನು ಸ್ವಲ್ಪ ಕಡಿಮೆ ಮಾಡಲು ಇದು ಸಾಕಾಗುತ್ತದೆ.

ಈ ಮೇಲೆ ನೀಡಿರುವ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಮಾಡಿರುವ ಸಾಂಬಾರ್ ಹೆಚ್ಚು ಹುಳಿಯಾಗಿದ್ದರೆ, ಅದರ ಹುಳಿಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಆದರೆ, ಹುಳಿ ಕಡಿಮೆಯಾಗಲು ನೀವು ಮಾಡಿದ ಗ್ರೇವಿಯ ಪ್ರಮಾಣಕ್ಕೆ ಅನುಗುಣವಾಗಿ ಇವುಗಳನ್ನು ಸೇರಿಸಬೇಕು.

Whats_app_banner