ಅಡುಗೆ ಮನೆಯ ಕೆಲವು ಪಾತ್ರೆಗಳಿಗೆ ಯಾವಾಗಲೂ ಅರಶಿನದ ಕಲೆ ಅಂಟಿಕೊಳ್ಳುತ್ತಾ? ಹಾಗಾದ್ರೆ ಅದನ್ನು ಕ್ಲೀನ್ ಮಾಡಲು ಇಲ್ಲಿದೆ ಟಿಪ್ಸ್‌-do you always have mold stains on certain utensils in the kitchen so here are the tips to clean it smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅಡುಗೆ ಮನೆಯ ಕೆಲವು ಪಾತ್ರೆಗಳಿಗೆ ಯಾವಾಗಲೂ ಅರಶಿನದ ಕಲೆ ಅಂಟಿಕೊಳ್ಳುತ್ತಾ? ಹಾಗಾದ್ರೆ ಅದನ್ನು ಕ್ಲೀನ್ ಮಾಡಲು ಇಲ್ಲಿದೆ ಟಿಪ್ಸ್‌

ಅಡುಗೆ ಮನೆಯ ಕೆಲವು ಪಾತ್ರೆಗಳಿಗೆ ಯಾವಾಗಲೂ ಅರಶಿನದ ಕಲೆ ಅಂಟಿಕೊಳ್ಳುತ್ತಾ? ಹಾಗಾದ್ರೆ ಅದನ್ನು ಕ್ಲೀನ್ ಮಾಡಲು ಇಲ್ಲಿದೆ ಟಿಪ್ಸ್‌

ಕಿಚನ್ ಕ್ಲೀನಿಂಗ್ ಟಿಪ್ಸ್‌: ನಿಮ್ಮ ಅಡುಗೆ ಮನೆಯಲ್ಲಿರುವ ಎಷ್ಟೋ ಪಾತ್ರೆಗಳಿಗೆ ಅರಶಿನದ ಕಲೆ ಹಾಗೇ ಉಳಿದುಕೊಳ್ಳುತ್ತಾ? ಎಷ್ಟು ಉಜ್ಜಿದರೂ ಹಳದಿ ಕಲೆ ಮಾತ್ರ ಹಾಗೇ ಉಳಿಯುತ್ತೆ ಎನ್ನುವವರು ಈ ಟಿಪ್ಸ್‌ ಫಾಲೋ ಮಾಡಿ ನೋಡಿ. ಅರಶಿನದ ಕಲೆ ತೆಗೆಯಲು ಈ ಟಿಪ್ಸ್‌ಗಳನ್ನು ಬಳಸಿ.

ಪಾತ್ರೆಗಳ ಕಲೆ ತೆಗೆಯುವುದು ಹೇಗೆ
ಪಾತ್ರೆಗಳ ಕಲೆ ತೆಗೆಯುವುದು ಹೇಗೆ

ಪ್ರತಿಯೊಂದು ಪದಾರ್ಥಕ್ಕೂ ಸಾಮಾನ್ಯವಾಗಿ ಅರಶಿನ ಮತ್ತು ಎಣ್ಣೆಯನ್ನು ಬಳಸಿಯೇ ಬಳಸುತ್ತೇವೆ. ಹೀಗಾದಾಗ ಪಾತ್ರೆಗಳಿಗೆ ಅರಿಶಿನದ ಕಲೆ ಉಂಟಾಗುತ್ತದೆ. ಎಣ್ಣೆ ಹಾಗೂ ಅರಿಶಿನ ಮಿಕ್ಸ್ ಆದಾಗ ಎಷ್ಟು ತೊಳೆದರು ಆ ಕಲೆ ಹೋಗೋದಿಲ್ಲ. ಇಂತಹ ಸಂದರ್ಭದಲ್ಲಿ ಆ ಪಾತ್ರೆಗಳ ಕಲೆಯನ್ನು ತೆಗೆಯಲು ನೀವೇನು ಮಾಡಬಹುದು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ. ನೀವೂ ಸಹ ಈ ಟಿಪ್ಸ್‌ಗಳನ್ನು ಅನುಸರಿಸುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಪಾತ್ರೆಗಳ ಅಂದ ಕೆಡದಂತೆ ನೋಡಿಕೊಳ್ಳಬಹುದು.

ಈ ರೀತಿ ಕ್ಲೀನ್ ಮಾಡಿ
ಮುಖ್ಯವಾಗಿ ಹುಳಿ ಪದಾರ್ಥ ಬಳಸಿ
ಯಾವಾಗಲೂ ಬಿಸಿನೀರು ಬಳಸಿ ತೊಳೆಯಿರಿ
ಬ್ಲೀಚ್ ಬಳಕೆ ಮಾಡಿ
ಪೀತಾಂಬರಿ ಬಳಸಿ
ಹುಳಿ ಮಜ್ಜಿಗೆ ಬಳಕೆ ಮಾಡಿ

ಹದಿನೈದು ನಿಮಿಷ ಹಾಗೇ ಬಿಡಿ
ಎರಡು ಕಪ್ ನೀರಿಗೆ ಒಂದು ಕಪ್ ಪಾತ್ರೆ ತೊಳೆಯುವ ಲಿಕ್ವಿಡ್ ಮತ್ತು ಇನ್ನೊಂದು ಕಾಲು ಕಪ್ ಸೋಪ್ ಪೌಡರ್‌ ಸೇರಿಸಿ ಮಿಶ್ರಣ ಮಾಡಬೇಕು. ಅದರಲ್ಲಿ ಒಂದು ಬಟ್ಟೆಯನ್ನು ಅದ್ದಿ ಆ ಬಟ್ಟೆಯನ್ನ ಕಲೆ ಇರುವ ಜಾಗಕ್ಕೆ ಹಾಕಿ ಉಜ್ಜಬೇಕು ಹಾಗೆ ಕಾಲು ಗಂಟೆ ಆ ಪಾತ್ರೆಯನ್ನು ಬಿಡಬೇಕು. ನಂತರ ಆ ಹದಿನೈದು ನಿಮಿಷ ಕಳೆದ ಮೇಲೆ ಅದನ್ನು ಚೆನ್ನಾಗಿ ಉಜ್ಜಿ ನಂತರ ಕ್ಲೀನ್ ಮಾಡಬೇಕು.

ನಿಂಬೆರಸ ಟ್ರೈ ಮಾಡಿ

ಪಾತ್ರೆ ತೊಳೆಯುವ ಜಲ್ ನಿಂದ ಉಜ್ಜಿ ಉಜ್ಜಿ ಬಿಸಿ ನೀರಿನಿಂದ ತೊಳೆಯಬೇಕು. ಹೀಗೆ ಮಾಡಿದಾಗ ಕಲೆಯು ಬೇಗ ಹೋಗುತ್ತದೆ. ನಿಂಬೆ ಹಣ್ಣನ್ನು ಕೂಡ ಬಳಸಬಹುದು. ನಿಂಬೆಹಣ್ಣಿನಲ್ಲಿರುವ ಹುಳಿ ಅಂಶ ಕಲೆಯನ್ನು ತೆಗೆಯಲು ಸಹಾಯಮಾಡುತ್ತದೆ. ನಿಂಬೆ ರಸವನ್ನು ಮಿಶ್ರಣ ಮಾಡಿ 10, 15 ನಿಮಿಷ ಹಾಗೆ ಬಿಟ್ಟು ನಂತರ ನೀವು ಸ್ವಚ್ಛಗೊಳಿಸಿದಲ್ಲಿ ಎಲ್ಲ ರೀತಿಯ ಕಲೆಗಳು ಹೋಗುತ್ತದೆ. ಇನ್ನು ನಿಂಬೆರಸದ ಜೊತೆಗೆ ವಿನೆಗರ್ ಮಿಕ್ಸ್ ಮಾಡಿ. ಈ ರೀತಿ ಮಾಡಿದರು ಕೂಡ ಅಡುಗೆ ಪಾತ್ರೆಗಳಿಗೆ ಅಂಟಿಕೊಂಡ ಅಥವಾ ತಿಂದ ಪ್ಲೇಟ್ ಗಳಿಗೆ ಅಂಟಿಕೊಂಡ ಕಲೆಗಳು ಬಹುಬೇಗ ಹೋಗುತ್ತದೆ.

ಈ ರೀತಿ ಪೇಸ್ಟ್ ಮಾಡಿ

ಅಡುಗೆ ಸೋಡದಲ್ಲಿ ಸ್ವಲ್ಪ ನೀರನ್ನು ಸೇರಿಸಿ ಒಂದು ರೀತಿಯ ಪೇಸ್ಟ್ ಮಾಡಬೇಕು. ಅದನ್ನು ಹಳದಿ ಕಲೆಗಳಿಗೆ ಅಲ್ಲಲ್ಲಿ ಸವರಬೇಕು. ನಂತರ ಅರ್ಧ ಗಂಟೆ ಬಿಟ್ಟು ಸ್ಕ್ರಬ್ಬರ್ ನಿಂದ ಸ್ಕ್ರಬ್ ಮಾಡಿ. ಹೀಗೆ ಮಾಡಿದರೆ ಸಾಮಾನ್ಯ ಪಾತ್ರೆಯಂತೆ ಇದು ಮತ್ತೆ ಆಗುತ್ತದೆ.

ಟೂತ್‌ಪೇಸ್ಟ್‌

ಪಾತ್ರೆಯ ಮೇಲಿನ ಹಳದಿ ಕಲೆಗಳನ್ನ ತೆಗೆದುಹಾಕಲು ಟೂತ್‌ಪೇಸ್ಟ್‌ ಕೂಡ ಉತ್ತಮ. ಕಲೆಯಾದ ಜಾಗಕ್ಕೆ ದಪ್ಪವಾಗಿ ಇದನ್ನು ಅಪ್ಲೈ ಮಾಡಿ. ಅರ್ಧ ಗಂಟೆ ನಂತರ ಒಣ ಬಟ್ಟೆಯಿಂದ ಉಜ್ಜಿಕೊಳ್ಳಿ. ನಂತರ ಇದನ್ನು ತೊಳೆಯಿರಿ. ವಿನೆಗರ್ ಅಥವಾ ಬ್ಲೀಚ್ ಕೂಡ ಇದೇ ರೀತಿ ಬಳಸಬಹುದು. ಗಾಜು ಮತ್ತು ಸರಾಮಿಕ್ ಪಾತ್ರ ಗಳಿಗೂ ಇದು ಅನ್ವಯವಾಗುತ್ತದೆ.

mysore-dasara_Entry_Point