ಮನೆಯಲ್ಲೇ ತಯಾರಿಸಿ ಕರಿಬೇವಿನ ಎಲೆಗಳ ಚಟ್ನಿಪುಡಿ, ಅನಾರೋಗ್ಯದಲ್ಲಿ ಗಂಜಿ ಜೊತೆ ತಿಂತಾ ಇದ್ರೆ ಊಟ ಸೇರೊಲ್ಲ ಎಂಬ ಮಾತೇ ಇಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  ಮನೆಯಲ್ಲೇ ತಯಾರಿಸಿ ಕರಿಬೇವಿನ ಎಲೆಗಳ ಚಟ್ನಿಪುಡಿ, ಅನಾರೋಗ್ಯದಲ್ಲಿ ಗಂಜಿ ಜೊತೆ ತಿಂತಾ ಇದ್ರೆ ಊಟ ಸೇರೊಲ್ಲ ಎಂಬ ಮಾತೇ ಇಲ್ಲ

ಮನೆಯಲ್ಲೇ ತಯಾರಿಸಿ ಕರಿಬೇವಿನ ಎಲೆಗಳ ಚಟ್ನಿಪುಡಿ, ಅನಾರೋಗ್ಯದಲ್ಲಿ ಗಂಜಿ ಜೊತೆ ತಿಂತಾ ಇದ್ರೆ ಊಟ ಸೇರೊಲ್ಲ ಎಂಬ ಮಾತೇ ಇಲ್ಲ

ಕರಿಬೇವಿನೆಲೆಯ ಚಟ್ನಿಪುಡಿ ರೆಸಿಪಿ: ನೀವು ತುಂಬಾ ಆರೋಕ್ಯಕರವಾದ ಮತ್ತು ತುಂಬಾ ಸರಳವಾಗಿ ಮಾಡಿಟ್ಟುಕೊಂಡು ಹಲವು ದಿನಗಳ ಕಾಲ ತಿನ್ನಬಹುದಾದ ಒಂದು ಕರಿಬೇವಿನೆಲೆಯ ಚಟ್ನಿ ಪುಡಿಯನ್ನು ಮಾಡುವ ವಿಧಾನವನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ. ನೀವೂ ಮನೆಯಲ್ಲಿ ಮಾಡಿಟ್ಟುಕೊಳ್ಳಿ.

ಕರಿಬೇವಿನೆಲೆಯ ಚಟ್ನಿಪುಡಿ
ಕರಿಬೇವಿನೆಲೆಯ ಚಟ್ನಿಪುಡಿ

ಕರಿಬೇವಿನ ಚಟ್ನಿ ಪುಡಿಯನ್ನು ಮಾಡಿ ಮನೆಯಲ್ಲಿ ಶೇಖರಣೆ ಮಾಡಿಟ್ಟು ಕೊಂಡರೆ ಹಲವು ದಿನಗಳ ಕಾಲ ಬಾಳಿಕೆಗೆ ಬರುತ್ತದೆ. ನೀವು ಇದನ್ನು ತುಂಬಾ ಸುಲಭವಾಗಿ ತಯಾರಿಸಲು ಸಾಧ್ಯವಿಲ್ಲ. ಆದರೆ ತಯಾರಿಸಿದ ನಂತರ ತುಂಬಾ ದಿನಗಳ ಕಾಲ ಸರಳವಾಗಿ ಇದೊಂದು ಇದ್ದರೆ ಯಾವುದೇ ಊಟವನ್ನು ಬೇಕಾದರೂ ಮಾಡಬಹುದು. ದೋಸೆ, ಇಡ್ಲಿ, ಅನ್ನದ ಜೊತೆ ನೀವು ಇದನ್ನು ತಿನ್ನಬಹುದು. ಇದನ್ನು ಮಾಡಲು ಸಾಕಷ್ಟು ಕರಿಬೇವಿನ ಎಲೆಗಳು ಬೇಕು ಅದು ನಿಮ್ಮ ಹತ್ತಿರ ಇದೆಯೇ ಎಂದು ಖಾತ್ರಿಪಡಿಸಿಕೊಳ್ಳಿ ನಂತರ ಇದನ್ನು ಮಾಡಲು ಆರಂಭಿಸಿ.

ಕರಿಬೇವಿನ ಚಟ್ನಿ ಪುಡಿ ಮಾಡಲು ಬೇಕಾಗುವ ಪದಾರ್ಥಗಳು:
ಕಡಲೇಬೇಳೆ,
ಉದ್ದಿನಬೇಳೆ,
ಬೆಳ್ಳುಳ್ಳಿ,
ಕರಿಬೇವು,
ಉಪ್ಪು,
ಬೆಲ್ಲ,
ಹುಣಸೆ ಹಣ್ಣು
ಒಣ ಮೆಣಸು

ಇದನ್ನೂ ಓದಿ: Corn Rice: ಜೋಳ ಅಂದ್ರೆ ತುಂಬಾ ಇಷ್ಟಾನಾ? ಸಿಂಪಲ್ ಆಗಿ ಕಡಿಮೆ ಸಮಯದಲ್ಲಿ ಈ ರೀತಿ ಕಾರ್ನ್‌ ರೈಸ್ ಮಾಡಿ ಸವಿಯಿರಿ

ಕರಿಬೇವಿನ ಚಟ್ನಿ ಪುಡಿ ಮಾಡುವ ವಿಧಾನ
ಮೊದಲಿಗೆ ನೀವು ಕಡಲೆ ಬೇಳೆ ಹಾಗೂ ಉದ್ದಿನಬೇಳೆಯನ್ನು ಎಣ್ಣೆ ಹಾಕದೆ ಒಂದು ಬಾಣಲೆಯಲ್ಲಿ ಹುರಿದುಕೊಳ್ಳಬೇಕು. ನಂತರ ಅದೇ ಬಾಣಲೆಗೆ ಬೆಳ್ಳುಳ್ಳಿ ಹಾಕಿ ಬೇಳೆಗಳ ಜೊತೆ ಚೆನ್ನಾಗಿ ಹುರಿದುಕೊಳ್ಳಿ. ಇದರ ಪರಿಮಳ ನಿಮಗೆ ಬರಬೇಕು ಆ ರೀತಿಯಾಗಿ ಹುರಿದುಕೊಳ್ಳಿ.

ನಂತರ ಕರಿಬೇವಿನ ಎಲೆಗಳನ್ನು ಬೇರೆ ಬಾಣಲೆಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ತುಂಬಾ ಸಮಯ ಇದನ್ನು ಹುರಿದುಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಕರಿಬೇವಿನ ಎಲೆಗಳು ಸೀದು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಸೀದು ಹೋದರೆ ಇದರ ರುಚಿ ಚೆನ್ನಾಗಿರುವುದಿಲ್ಲ. ಕಹಿಯಾಗಲು ಆರಂಭವಾಗುತ್ತದೆ. ಆದ್ದರಿಂದ ಕಹಿ ಆಗದ ರೀತಿಯಲ್ಲಿ ಬಣ್ಣ ಮಾತ್ರ ಬದಲಾಗುವ ಹಾಗೆ, ತುಂಬಾ ಸಣ್ಣ ಉರಿಯಲ್ಲಿ ಇದನ್ನು ಬಾಡಿಸಿಕೊಳ್ಳಿ. ಇದು ಗರಿಗರಿಯಾಗುತ್ತದೆ. ಅಥವಾ ನಿಮ್ಮ ಓವನ್ ಮನೆಯಲ್ಲಿದ್ದರೆ ಅದರಲ್ಲಿ ಕೂಡ ನೀವು ಇದನ್ನು ಬಿಸಿ ಮಾಡಿ ಗರಿಯಾಗಿಸಿಕೊಳ್ಳಬಹುದು.

ಈ ರೀತಿ ಎರಡನ್ನೂ ಬೇರೆ ಬೇರೆಯಾಗಿ ಹುರಿದಿಟ್ಟುಕೊಂಡು. ಹುಣಸೆ ಹಣ್ಣನ್ನು ಮತ್ತು ಉಪ್ಪನ್ನು ಇದಕ್ಕೆ ಸೇರಿಸಿಕೊಳ್ಳಿ. ಈಗ ಎಲ್ಲವನ್ನೂ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಚೆನ್ನಾಗಿ ನೀರು ಹಾಕದೇ ರುಬ್ಬಿಕೊಳ್ಳಿ. ಇದು ತುಂಬಾ ಹುಡಿಯಾಗಿ ಉದುರುದುರಾಗಿರುತ್ತದೆ. ಇದೇ ರೀತಿ ಇರಬೇಕು ಸಹ. ಹಾಗಾಗಿ ನೀವು ಇದಕ್ಕೆ ಎಣ್ಣೆ ಅಥವಾ ಯಾವುದೇ ನೀರನ್ನೂ ಹಾಕಬೇಡಿ. ಇಷ್ಟು ಮಾಡಿ ಪೌಡರ್ ಮಾಡಿಕೊಂಡರೆ. ಯಾವಾಗ ಬೇಕಾದರೂ ಇದನ್ನು ನೀವು ತಿನ್ನಬಹುದು.

ಆರೋಗ್ಯಕರ ಪ್ರಯೋಜನ

ಮುಖ್ಯವಾಗಿ ಇದು ನಿಮಗೆ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದರೆ ನೀವು ನಿತ್ಯ ಒಂದು ಚಮಚ ಇದನ್ನು ಸೇವನೆ ಮಾಡಬೇಕು. ಆಗ ತೂಕ ಕಡಿಮೆ ಮಾಡಿಕೊಳ್ಳಲು ಇದು ಸಹಕಾರಿಯಾಗುತ್ತದೆ.

Whats_app_banner