ಕಡಿಮೆ ಫೀಸ್, ಕಡಿಮೆ ವೆಚ್ಚದೊಂದಿಗೆ ವಿದೇಶದಲ್ಲಿ ಇಂಜಿನಿಯರಿಂಗ್ ಓದ್ಬೇಕಾ? ಹಾಗಿದ್ದರೆ ಈ ಟಾಪ್​​-5 ದೇಶಗಳೇ ಬೆಸ್ಟ್!-education news cheapest country to study engineering for indian students germany france mexico norway poland prs ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕಡಿಮೆ ಫೀಸ್, ಕಡಿಮೆ ವೆಚ್ಚದೊಂದಿಗೆ ವಿದೇಶದಲ್ಲಿ ಇಂಜಿನಿಯರಿಂಗ್ ಓದ್ಬೇಕಾ? ಹಾಗಿದ್ದರೆ ಈ ಟಾಪ್​​-5 ದೇಶಗಳೇ ಬೆಸ್ಟ್!

ಕಡಿಮೆ ಫೀಸ್, ಕಡಿಮೆ ವೆಚ್ಚದೊಂದಿಗೆ ವಿದೇಶದಲ್ಲಿ ಇಂಜಿನಿಯರಿಂಗ್ ಓದ್ಬೇಕಾ? ಹಾಗಿದ್ದರೆ ಈ ಟಾಪ್​​-5 ದೇಶಗಳೇ ಬೆಸ್ಟ್!

ಕಡಿಮೆ ಫೀಸ್​, ಕಡಿಮೆ ಖರ್ಚಿನಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ಪಡೆದು ಇಂಜಿನಿಯರಿಂಗ್ ಆಗಬೇಕು ಎಂದುಕೊಂಡಿದ್ದೀರಾ? ಹಾಗಿದ್ದರೆ ಈ ಟಾಪ್​​-5 ದೇಶಗಳು ನಿಮಗೆ ಬೆಸ್ಟ್ ಎನಿಸಬಹುದು. ಒಮ್ಮೆ ಅಲ್ಲಿನ ಫೀಸ್, ಲಿವಿಂಗ್ ಕಾಸ್ಟ್ ಎಷ್ಟಿರಬಹುದು ಎಂಬುದನ್ನು ಓದಿ.

ವಿದೇಶದಲ್ಲಿ ಇಂಜಿನಿಯರಿಂಗ್
ವಿದೇಶದಲ್ಲಿ ಇಂಜಿನಿಯರಿಂಗ್

ಪ್ರತಿಯೊಬ್ಬ ವಿದ್ಯಾರ್ಥಿಗೂ ವಿದೇಶದಲ್ಲಿ ಶಿಕ್ಷಣ ಪಡೆಯಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ಹೆಚ್ಚಾಗಿ ಇಂಜಿನಿಯರಿಂಗ್ ಓದುವವರಿಗೆ ಇದು ತುಸು ಹೆಚ್ಚೇ ಇರುತ್ತದೆ ಎಂದರೂ ತಪ್ಪಾಗಲ್ಲ. ಆದರೆ ಹಣಕಾಸು ಸಮಸ್ಯೆ ಅವರ ಕನಸುಗಳಿಗೆ ಅಡ್ಡಿಯಾಗುತ್ತಿದೆ ಎಂಬುದು ಪ್ರಮುಖ ಕಾರಣಗಳಲ್ಲಿ ಒಂದು. ಇನ್ಮುಂದೆ ಆ ಚಿಂತೆ ಬಿಡಿ. ಏಕೆಂದರೆ ಈ ವರದಿಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಕಡಿಮೆ ಖರ್ಚು ಮತ್ತು ಕಡಿಮೆ ಫೀಸ್ ಇರುವ ದೇಶಗಳನ್ನು ಪಟ್ಟಿ ಮಾಡಿದ್ದೇವೆ. ಅಲ್ಲಿ ಕೆಲವೊಂದೆಡೆ ಉಚಿತ ಶಿಕ್ಷಣವೂ ಇದೆ. ಲಿವಿಂಗ್ ಕಾಸ್ಟ್​ ಕೂಡ ತುಂಬಾ ಕಡಿಮೆ. ಕಡಿಮೆ ಖರ್ಚು, ಗುಣಮಟ್ಟದ ಶಿಕ್ಷಣದೊಂದಿಗೆ ಇಂಜಿನಿಯರ್​​ ಆಗಬಯಸುವ ವಿದ್ಯಾರ್ಥಿಗಳು ಈ ವರದಿಯನ್ನು ತಪ್ಪದೇ ಓದಿ.

1. ಜರ್ಮನಿ

ಜರ್ಮನಿಯಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಅದಕ್ಕಾಗಿ ತುಂಬಾ ಹೆಸರುವಾಸಿ ಪಡೆದಿದೆ. ಸರ್ಕಾರಿ ಅನುದಾನಿತ ವಿಶ್ವವಿದ್ಯಾಲಯಗಳಲ್ಲಿ ಭಾರತೀಯರು ಸೇರಿದಂತೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ದೊರೆಯುತ್ತದೆ. ಆದರೆ ನೀವು ಸೆಮಿಸ್ಟರ್​​ಗೆ 150 ಯುರೊ ರಿಂದ 250 ಯುರೋ (14 ಸಾವಿರದಿಂದ 24 ಸಾವಿರದ ತನಕ) ಸೆಮಿಸ್ಟರ್ ಫೀಸ್ ಇರಬಹುದು. ಆದರೆ ಖಾಸಗಿ ಕಾಲೇಜುಗಳಲ್ಲಿ ವಾರ್ಷಿಕ 8 ಲಕ್ಷದಿಂದ 12 ಲಕ್ಷದ ತನಕ ಇರಲಿದೆ. ಲಿವಿಂಗ್ ಕಾಸ್ಟ್​ ತಿಂಗಳಿಗೆ 74 ಸಾವಿರದಿಂದ 95 ಸಾವಿರದ ತನಕ ಇರಬಹುದು. ಇದು ಬೇರೆ ದೇಶಗಳಿಗೆ ತೀರಾ ಕಡಿಮೆ ಇರಲಿದೆ.

2. ಫ್ರಾನ್ಸ್​

ವಿಶ್ವ ದರ್ಜೆಯ ಕಾಲೇಜುಗಳನ್ನು ಹೊಂದಿರುವ ಫ್ರಾನ್ಸ್​, ವಿದ್ಯಾರ್ಥಿಗಳಿಗೆ ಬೇಕಾದ ಕೋರ್ಸ್​​ಗಳು ಲಭ್ಯವಿವೆ. ಇಲ್ಲಿ ಫೀಸ್​ ಕೂಡ ತುಂಬಾ ಕಡಿಮೆ ಇರುತ್ತದೆ. ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಸಾಮಾನ್ಯವಾಗಿ ಕಡಿಮೆ ಫೀಸ್ ವಿಧಿಸುತ್ತವೆ. ವಾರ್ಷಿಕವಾಗಿ ಸುಮಾರು 2.5 ಲಕ್ಷದಿಂದ 3.5 ಲಕ್ಷ ಇರಬಹುದು. ಆದರೆ ಫ್ರಾನ್ಸ್​​ನಲ್ಲಿ ಖಾಸಗಿ ಕಾಲೇಜುಗಳಲ್ಲಿ ಓದುವವರಿಗೆ ಆರಂಭಿಕ ಶುಲ್ಕವೇ 2.5 ಲಕ್ಷ. ಅದು 17 ಲಕ್ಷದ ತನಕವೂ ಇರಲಿದೆ. ಇದು ವಾರ್ಷಿಕ. ಇಲ್ಲಿ ಲಿವಿಂಗ್ ಕಾಸ್ಟ್​ 38 ಸಾವಿರದಿಂದ 1.10 ಲಕ್ಷದ ತನಕ ಇರಲಿದೆ.

3. ಮೆಕ್ಸಿಕೋ

ಮೆಕ್ಸಿಕೋದ ವಿಶ್ವವಿದ್ಯಾಲಯಗಳಲ್ಲಿ ಅತ್ಯಂತ ಶುಲ್ಕ ಇರಲಿದೆ. ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಇಂಜಿನಿಯರ್​ಗೆ ವಾರ್ಷಿಕ 32 ಸಾವಿರದಿಂದ 64 ಸಾವಿರ ಶುಲ್ಕ ಇರಬಹುದು. ಆದರೆ ಖಾಸಗಿ ಕಾಲೇಜುಗಳಲ್ಲಿ 1.50 ಲಕ್ಷದಿಂದ 14 ಲಕ್ಷದ ತನಕವೂ ಫೀಸ್​ ಇರಲಿದೆ. ಇಲ್ಲಿ ಲಿವಿಂಗ್​ ಕಾಸ್ಟ್​ ತಿಂಗಳಿಗೆ 80 ಸಾವಿರ ಆಗಬಹುದು. ಇದು ವಿದೇಶದಲ್ಲಿ ಇಂಜಿನಿಯರಿಂಗ್ ಓದಬೇಕೆಂದು ಬಯಸಿರುವವರಿಗೆ ಮೆಕ್ಸಿಕೋ ಕೂಡ ಒಂದು ಬೆಸ್ಟ್​ ಆಯ್ಕೆ.

4. ನಾರ್ವೆ

ನಾರ್ವೆಯಲ್ಲೂ ಇಂಜಿನಿಯರಿಂಗ್ ಓದುವ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕ ಇರಲಿದೆ. ಈ ಹಿಂದೆ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿತ್ತು. ಆದರೆ 2023ರಲ್ಲಿ ರದ್ದುಪಡಿಸಲಾಯಿತು. ಪ್ರಸ್ತುತ 50 ಸಾವಿರದಿಂದ 70 ಸಾವಿರದ ತನಕ ಶುಲ್ಕ ಇರಲಿದೆ. ಆದರೆ ಖಾಸಗಿ ಕಾಲೇಜುಗಳಲ್ಲಿ 1 ಲಕ್ಷದಿಂದ 15 ಲಕ್ಷದ ತನಕವೂ ಇದೆ. ಇನ್ನು ಲಿವಿಂಗ್ ಕಾಸ್ಟ್​ ತಿಂಗಳಿಗೆ 50 ಸಾವಿರದಿಂದ 70 ಸಾವಿರ ತನಕ ಆಗಲಿದೆ.

5. ಪೋಲೆಂಡ್

ಕಡಿಮೆ ವೆಚ್ಚದಲ್ಲಿ ಇಂಜಿನಿಯರಿಂಗ್ ಓದಬೇಕು ಎಂದುಕೊಂಡ ವಿದ್ಯಾರ್ಥಿಗಳಿಗೆ ಪೋಲೆಂಡ್ ಆಯ್ಕೆಯೂ ಉತ್ತಮ ಎಂದರೆ ತಪ್ಪಾಗಲ್ಲ. ಇಲ್ಲಿ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ 1.5 ಲಕ್ಷದಿಂದ 2.5 ಲಕ್ಷದವರೆಗೂ ಇರಲಿದೆ. ಆದರೆ ಲಿವಿಂಗ್ ಕಾಸ್ಟ್​ ತಿಂಗಳಿಗೆ 35 ಸಾವಿರ ಇದ್ದರೆ ಸಾಕು. ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ ಪೋಲೆಂಡ್​ನ ಖಾಸಗಿ ಕಾಲೇಜುಗಳಲ್ಲಿ 5 ರಿಂದ 20 ಲಕ್ಷದ ತನಕವೂ ಇದೆ. 

(ಗಮನಕ್ಕೆ: ಇಲ್ಲಿ ಉಲ್ಲೇಖಿಸಿರುವ ಅಂಕಿ-ಅಂಶಗಳು ಅಂದಾಜು ಎಂದು ಪರಿಗಣಿಸಬೇಕಾಗಿ ವಿನಂತಿ. ಏಕೆಂದರೆ ಇದು ವಿವಿಧ ವೆಬ್​ಸೈಟ್​ಗಳಿಂದ ಪಡೆದ ಮಾಹಿತಿಯಾಗಿದೆ)

mysore-dasara_Entry_Point