Christmas 2023: ಶಾಂತಿ, ಸಂತೋಷದ ಸಂಕೇತ ಕ್ರಿಸ್‌ಮಸ್‌ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Christmas 2023: ಶಾಂತಿ, ಸಂತೋಷದ ಸಂಕೇತ ಕ್ರಿಸ್‌ಮಸ್‌ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ

Christmas 2023: ಶಾಂತಿ, ಸಂತೋಷದ ಸಂಕೇತ ಕ್ರಿಸ್‌ಮಸ್‌ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ

ಇಂದು ನಾಡಿನಾದ್ಯಂತ ಕ್ರಿಸ್‌ಮಸ್‌ ಆಚರಣೆಯ ಸಂಭ್ರಮ ಜೋರಾಗಿದೆ. ಯೇಸು ಜನಿಸಿದ ದಿನವನ್ನು ಪ್ರತಿ ವರ್ಷ ಕ್ರಿಸ್‌ಮಸ್‌ ಹಬ್ಬವಾಗಿ ಆಚರಿಸಲಾಗುತ್ತಿದೆ. ಸುಮಾರು 2 ಸಾವಿರ ವರ್ಷಗಳ ಹಿಂದೆ ಬೆತ್ಲಹೆಮ್‌ ನಗರದ, ಹಸುವಿನ ಕೊಟ್ಟಿಗೆಯಲ್ಲಿ ಯೇಸುವು ಮೇರಿ ಮಗನಾಗಿ ಜನಿಸಿದರು. ಇದು ಕ್ರೈಸ್ತರಿಗೆ ಅತ್ಯಂತ ಪವಿತ್ರವಾದ ಹಬ್ಬ. ಕ್ರಿಸ್‌ಮಸ್‌ ಆಚರಣೆಯ ಇತಿಹಾಸ, ಮಹತ್ವ ಹೀಗಿದೆ.

ಕ್ರಿಸ್‌ಮಸ್‌ ಆಚರಣೆಯ ಇತಿಹಾಸ , ಮಹತ್ವ
ಕ್ರಿಸ್‌ಮಸ್‌ ಆಚರಣೆಯ ಇತಿಹಾಸ , ಮಹತ್ವ

Christmas 2023: ನಾಡಿನಾದ್ಯಂತ ಕ್ರಿಸ್‌ಮಸ್‌ ಸಂಭ್ರಮ ಜೋರಾಗಿದೆ. ಕಳೆದ ರಾತ್ರಿಯಿಂದಲೇ ಚರ್ಚ್‌ಗಳಲ್ಲಿ ಹಬ್ಬದ ವಾತಾವರಣವಿದೆ. ಒಂದು ತಿಂಗಳಿಂದಲೇ ಕ್ರೈಸ್ತ ಬಾಂಧವರು ಕ್ರಿಸ್‌ಮಸ್‌ ಆಚರಣೆಗೆ ಎಲ್ಲಾ ತಯಾರಿ ನಡೆಸಿದ್ದಾರೆ. ಚರ್ಚ್‌ ಹಾಗೂ ಪ್ರತಿ ಕ್ರೈಸ್ತ ಸಮುದಾಯದವರ ಮನೆಗೆ ಹೋಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಕ್ರಿಸ್‌ಮಸ್‌ ಶಾಪಿಂಗ್‌ ಮಾಡಿದ್ದಾರೆ. ಇಷ್ಟೆಲ್ಲಾ ಸಂಭ್ರಮದ ನಡುವೆ ಕ್ರಿಸ್‌ ಮಸ್‌ ಆಚರಣೆಯ ಮಹತ್ವ ಹಾಗೂ ಇತಿಹಾಸದ ಬಗ್ಗೆ ತಿಳಿದುಕೊಳ್ಳೋಣ.

ಏಸು ಕ್ರಿಸ್ತನ ಜನ್ಮದಿನದಂದು ಕ್ರೈಸ್ತರು ಆಚರಿಸುವ ಹಬ್ಬವೇ ಕ್ರಿಸ್ಮಸ್. ಕ್ರೈಸ್ತರಿಗೆ ಇದು ಅತ್ಯಂತ ಪವಿತ್ರವಾದ ಹಬ್ಬ.

ಕ್ರಿಸ್‌ಮಸ್‌ ಇತಿಹಾಸ

ಸುಮಾರು 2 ಸಾವಿರ ವರ್ಷಗಳ ಹಿಂದೆ ರೋಮನ್ ಸಾಮ್ರಾಜ್ಯವನ್ನು ಆಳಿದ ಅಗಸ್ಟಸ್ ಸೀಸರ್, ತನ್ನ ಸಾಮ್ರಾಜ್ಯದ ಜನಸಂಖ್ಯೆಯನ್ನು ಎಣಿಸುತ್ತಾನೆ. ಅಂಕಿಅಂಶಗಳನ್ನು ಸುಲಭವಾಗಿ ಸಂಗ್ರಹಿಸುವ ಉದ್ದೇಶದಿಂದ ಡಿಸೆಂಬರ್ 25 ರೊಳಗೆ ಎಲ್ಲಾ ಜನರು ತಮ್ಮ ತಮ್ಮ ಗ್ರಾಮಗಳನ್ನು ತಲುಪಲು ಆದೇಶಿಸುತ್ತಾನೆ. ಅದೇ ಸಮಯದಲ್ಲಿ ಜೋಸೆಫ್‌ಗೆ ಮೇರಿ ಎಂಬುವರೊಂದಿಗೆ ವಿವಾಹ ನಿಶ್ಚಯವಾಗುತ್ತದೆ. ಒಮ್ಮೆ ಗೇಬ್ರಿಯಲ್ ಎಂಬ ದೇವದೂತನು ಮೇರಿಗೆ ಕನಸಿನಲ್ಲಿ ಕಾಣಿಸಿಕೊಂಡು ನೀವು ದೇವರಿಂದ ಆಶೀರ್ವದಿಸಲ್ಪಟ್ಟಿದ್ದೀರಿ. ನೀವು ಕನ್ಯೆಯಾಗಿ ಗರ್ಭಧರಿಸಿ ಮಗನಿಗೆ ಜನ್ಮ ನೀಡುತ್ತೀರಿ. ಆ ಮಗುವಿಗೆ ಏಸು ಎಂದು ಹೆಸರಿಡಿ. ಅವರು ದೇವರ ಮಗ, ಯೇಸು ಎಂದರೆ ರಕ್ಷಕ ಎಂದರ್ಥ ಎಂದು ಹೇಳುತ್ತಾನೆ.

ದೇವದೂತನು ಕನಸಿನಲ್ಲಿ ಬಂದ ಕೆಲವು ದಿನಗಳಲ್ಲಿ ಮೇರಿ ಗರ್ಭ ಧರಿಸುತ್ತಾಳೆ. ಇದನ್ನು ತಿಳಿದ ಜೋಸೆಫ್, ಮೇರಿಯನ್ನು ಮದುವೆ ಆಗದಿರಲು ನಿರಾಕರಿಸುತ್ತಾನೆ. ಆದರೆ ಮತ್ತೆ ದೇವದೂತ, ಜೋಸೆಫ್‌ ಕನಸಿನಲ್ಲಿ ಬಂದು ಮೇರಿಯನ್ನು ಬಿಡಬೇಡ. ಆಕೆ ದೇವರ ಆಶೀರ್ವಾದದಿಂದ ಗರ್ಭವತಿ ಆಗಿದ್ದಾಳೆ. ಆಕೆಗೆ ಹುಟ್ಟುವ ಮಗು ದೇವರ ಮಗ. ತನ್ನನ್ನು ನಂಬುವ ಜನರನ್ನು ಆ ದೇವರ ಮಗ ಕಾಪಾಡುತ್ತಾನೆ ಎಂದು ಹೇಳುತ್ತಾನೆ. ಇದಾದ ನಂತರ ಜೋಸೆಫ್‌, ಮೇರಿ ಜೊತೆ ಬೆತ್ಲಹೆಮ್‌ ನಗರಕ್ಕೆ ಹೋಗುತ್ತಾರೆ. ಆದರೆ ಅಲ್ಲಿ ಅವರಿಗೆ ವಸತಿ ದೊರೆಯುವುದಿಲ್ಲ. ಕೊನೆಗೆ ಹೋಟೆಲ್‌ ಮಾಲೀಕರೊಬ್ಬರು ತಮ್ಮ ಗೋಶಾಲೆಯಲ್ಲಿ ಅವರಿಗೆ ಆಶ್ರಯ ನೀಡುತ್ತಾರೆ. ಮೇರಿ ಅಲ್ಲೇ ಯೇಸುವಿಗೆ ಜನ್ಮ ನೀಡುತ್ತಾರೆ. 2 ಸಾವಿರ ವರ್ಷಗಳ ಹಿಂದೆ ಡಿಸೆಂಬರ್ 24 ರಂದು ಮಧ್ಯರಾತ್ರಿ 12 ಗಂಟೆಯ ನಂತರ ಯೆಸುಕ್ರಿಸ್ತರು ಜನಿಸುತ್ತಾರೆ. ಮುಂದೆ ಈ ಮಗು, ದೇವದೂತ ಹೇಳಿದಂತೆ ಜನರ ರಕ್ಷಕನಾಗುತ್ತಾನೆ. ಆದ್ದರಿಂದ ಪ್ರತಿ ವರ್ಷ ಡಿಸೆಂಬರ್ 25 ರಂದು ಯೇಸು ಜನಿಸಿದ ದಿನವನ್ನು ಕ್ರಿಸ್‌ಮಸ್‌ ಆಗಿ ಆಚರಿಸಲಾಗುತ್ತದೆ.

ಕ್ರಿಸ್‌ಮಸ್‌ ಆಚರಣೆಯ ಮಹತ್ವ

ಯೇಸು ಕ್ರಿಸ್ತ ಹಸುವಿನ ಕೊಟ್ಟಿಗೆಯಲ್ಲಿ ಹುಟ್ಟಿದ್ದರಿಂದ ಕ್ರೈಸ್ತರು ತಮ್ಮ ಮನೆಯಲ್ಲಿ ಪುಟ್ಟ ಕೊಟ್ಟಿಗೆ ಆಕಾರದ ಆಕೃತಿ ನಿರ್ಮಿಸಿ ಕ್ರೈಸ್ತ, ಮೇರಿ, ಜೋಸೆಫ್‌ ಸೇರಿದಂತೆ ಕೆಲವು ಗೊಂಬೆಯನ್ನು ಇಟ್ಟು ಪ್ರಾರ್ಥನೆ ಮಾಡುತ್ತಾರೆ. ಗ್ರೀಕ್‌ ಲಿಪಿಯಲ್ಲಿ ಯೇಸು ಕ್ರಿಸ್ತನ ಮೊದಲ ಅಕ್ಷರವು ಇಂಗ್ಲೀಷಿನಲ್ಲಿ X ನಂತೆ ಕಾಣುವುದರಿಂದ ಈ ಹಬ್ಬವನ್ನು ಕೆಲವರು ಕ್ರಿಸ್‌ಮಸ್‌ ಎಂದೂ ಇನ್ನೂ ಕೆಲವರು ಎಕ್ಸ್‌ ಮಸ್‌ ಎಂದೂ ಕರೆಯುತ್ತಾರೆ. ಭಾರತ, ಇಸ್ರೇಲ್‌, ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್‌, ಜಪಾನ್‌, ಚೈನಾ, ಈಜಿಪ್ಟ್‌, ರಷ್ಯಾ, ರೊಮೊನಿಯಾ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಪ್ರತಿವರ್ಷ ಕ್ರಿಸ್‌ಮಸ್‌ ಆಚರಿಸಲಾಗುತ್ತದೆ.

ಕ್ರಿಸ್‌ಮಸ್‌ ಹಿಂದಿನ ದಿನ, ಅಂದರೆ ಡಿಸೆಂಬರ್‌ 24ನ್ನು ಕ್ರಿಸ್‌ಮಸ್‌ ಈವ್‌, ನಂತರದ 12ನೇ ದಿನವನ್ನು ಎಪಿಫನಿ ಎಂದು ಆಚರಣೆ ಮಾಡಲಾಗುತ್ತದೆ. ಈ ಹಬ್ಬದಂದು ಕ್ರೈಸ್ತರು ಚರ್ಚ್‌ಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಾರೆ. ನಂತರ ತಮ್ಮ ಆತ್ಮೀಯರು, ನೆಂಟಿರಿಷ್ಟರನ್ನು ಮನೆಗೆ ಕರೆದು ಕೇಕ್‌ ಕಟ್‌ ಮಾಡಿ ಊಟ ಮಾಡುತ್ತಾರೆ. ಈ ದಿನ ಕೇಕ್‌, ರೋಸ್‌ ಕುಕೀಸ್‌, ಕುಲ್‌ ಕುಲ್ಸ್, ಚಿಕನ್‌ ಹಾಗೂ ಇನ್ನಿತರ ಆಹಾರಗಳನ್ನು ತಯಾರಿಸುತ್ತಾರೆ. ಪ್ರೀತಿಪಾತ್ರರಿಗೆ ಗಿಫ್ಟ್‌ ನೀಡುತ್ತಾರೆ. ಕೆಟ್ಟದರ ವಿರುದ್ಧವಾಗಿ ಒಳಿತಿನ ಸಂಕೇತವಾಗಿ, ಶಾಂತಿ ಹಾಗೂ ಸಂತೋಷದ ಸಂಕೇತವಾಗಿ ಪ್ರತಿ ವರ್ಷ ಕ್ರಿಸ್‌ಮಸ್‌ ಆಚರಿಸಲಾಗುತ್ತದೆ.

Whats_app_banner