ಮೊಟ್ಟೆ ಇಷ್ಟವಾಗಲ್ಲ ಅಂದ್ರೆ ಈ ರೀತಿ ಗ್ರೇವಿ ಮಾಡಿ: ಬಾಯಿ ಚಪ್ಪರಿಸಿಕೊಂಡು ತಿಂತೀರಾ, ಇಲ್ಲಿದೆ ಕಡಲೆಕಾಳು-ಮೊಟ್ಟೆ ಕರಿ ಪಾಕವಿಧಾನ
ಮೊಟ್ಟೆ ಮತ್ತು ಕಡಲೆಕಾಳಿನೊಂದಿಗೆ ಬೇಯಿಸಿದ ಭಕ್ಷ್ಯವು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿದೆ. ಇವೆರಡನ್ನು ಸೇವಿಸುವುದರಿಂದ ದೇಹಕ್ಕೆ ಅನೇಕ ಪೋಷಕಾಂಶಗಳು ಸಿಗುತ್ತವೆ. ಇವೆರಡನ್ನು ಸಂಯೋಜಿಸಿ ಗ್ರೇವಿ ತಯಾರಿಸಬಹುದು. ಮಸಾಲೆಯುಕ್ತ ಕಡಲೆಕಾಳು-ಮೊಟ್ಟೆ ಪಾಕವಿಧಾನ ತುಂಬಾ ರುಚಿಕರವಾಗಿರುತ್ತದೆ. ಮೊಟ್ಟೆ-ಕಡಲೆಕಾಳು ರೆಸಿಪಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳಿಗೆ ಪ್ರತಿದಿನ 2 ಮೊಟ್ಟೆ ತಿನ್ನಲು ಕೊಡಿ ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಮಕ್ಕಳಿಗೆ ಮಾತ್ರವಲ್ಲ ದೊಡ್ಡವರು ಕೂಡ ಮೊಟ್ಟೆ ತಿಂದರೆ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಹಾಗೆಯೇ ಕಡಲೆಕಾಳು ಸೇವನೆಯು ದೇಹಕ್ಕೆ ಅನೇಕ ಪೋಷಕಾಂಶಗಳನ್ನು ನೀಡುತ್ತದೆ. ಇವೆರಡರ ಸಂಯೋಜನೆಯ ಖಾದ್ಯ ತಯಾರಿಸಿದರೆ ಎಷ್ಟು ರುಚಿಕರವಾಗಿರಬಹುದು ಅಲ್ವಾ? ಹೌದು, ಮಸಾಲೆಯುಕ್ತ ಕಡಲೆಕಾಳು-ಮೊಟ್ಟೆ ಪಾಕವಿಧಾನ ತುಂಬಾ ರುಚಿಕರವಾಗಿರುತ್ತದೆ. ಮೊಟ್ಟೆ-ಕಡಲೆಕಾಳು ರೆಸಿಪಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಮೊಟ್ಟೆ-ಕಡಲೆಕಾಳು ಮೊಟ್ಟೆ ಗ್ರೇವಿ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಕಡಲೆಕಾಳು- ಅರ್ಧ ಕಪ್, ಮೊಟ್ಟೆ- ನಾಲ್ಕು, ಈರುಳ್ಳಿ- ಎರಡು, ಮೆಣಸಿನಕಾಯಿ- ಐದು, ಕರಿಬೇವು- 10 ರಿಂದ 12 ಎಸಳು, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ, ಅರಿಶಿನ- ಅರ್ಧ ಟೀ ಚಮಚ, ಜೀರಿಗೆ- ಒಂದು ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಕೊತ್ತಂಬರಿ ಪುಡಿ- ಒಂದು ಚಮಚ.
ಮಾಡುವ ವಿಧಾನ: ಕಡಲೆಕಾಳು ಜತೆ ಅಡುಗೆ ಮಾಡುವುದು ನಿಮಗೆ ಇಷ್ಟವಿಲ್ಲದಿದ್ದರೆ, ಕಾಬೂಲು ಕಡಲೆ ಅಥವಾ ಹಸಿರು ಬಟಾಣಿಗಳನ್ನು ಸಹ ಬಳಸಬಹುದು. ಆದರೆ, ಕಡಲೆಕಾಳುವನ್ನು ಬೆರೆಸುವುದರಿಂದ ಈ ಗ್ರೇವಿ ಬಹಳ ರುಚಿಕರವಾಗಿರುತ್ತದೆ. ಕಡಲೆಕಾಳನ್ನು ಒಂದೆರಡು ಗಂಟೆ ಮೊದಲು ನೆನೆಸಿಡಿ. ಆ ನಂತರ ಬಾಣಲೆಯನ್ನು ಸ್ಟೌವ್ ಮೇಲೆ ಇಟ್ಟು ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ ಹುರಿಯಿರಿ. ನಂತರ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಜತೆಗೆ ಹಸಿರು ಮೆಣಸಿನ ಪುಡಿ ಸೇರಿಸಿ. ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಆ ಮಿಶ್ರಣಕ್ಕೆ ಅರ್ಧ ಚಮಚ ಅರಿಶಿನ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮೊದಲೇ ನೆನೆಸಿದ ಕಡಲೆಕಾಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಮುಚ್ಚಳವನ್ನು ಇಟ್ಟು ಬೇಯಿಸಿ. ಕಡಲೆಕಾಳನ್ನು ಕುದಿಸಲು ಸಾಕಷ್ಟು ನೀರು ಸೇರಿಸಿ ಚೆನ್ನಾಗಿ ಬೇಯಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ಜತೆಗೆ ಕೊತ್ತಂಬರಿ ಪುಡಿ ಮತ್ತು ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಕಡಲೆಕಾಳು ಬೆಂದ ನಂತರ ಮೊಟ್ಟೆಯನ್ನು ಒಡೆದು ಅದರ ಮೇಲೆ ಹಾಕಿ. ಇದನ್ನು ಮಿಶ್ರಣ ಮಾಡದೆ ಹಾಗೆಯೇ ಮುಚ್ಚಿಡಿ. ಸ್ವಲ್ಪ ಸಮಯದ ನಂತರ ಮುಚ್ಚಳ ತೆಗೆದರೆ ಮೊಟ್ಟೆ ಗಟ್ಟಿಯಾಗುತ್ತದೆ. ನಂತರ ಅದನ್ನು ಇನ್ನೊಂದು ಬದಿಗೆ ತಿರುಗಿಸಿ, ಐದು ನಿಮಿಷ ಬೇಯಿಸಿ. ಮುಚ್ಚಳವನ್ನು ತೆಗೆದು, ಒಮ್ಮೆ ಮಿಶ್ರಣ ಮಾಡಿದರೆ ರುಚಿಯಾದ ಕಡಲೆಕಾಳು-ಮೊಟ್ಟೆ ಗ್ರೇವಿ ಸವಿಯಲು ಸಿದ್ಧವಾಗಿರುತ್ತದೆ. ದೋಸೆ, ಚಪಾತಿ, ಅನ್ನದ ಜತೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ.
ಮೊಟ್ಟೆ, ಕಡಲೆಕಾಳಿನ ಆರೋಗ್ಯ ಪ್ರಯೋಜನಗಳು
ಮೊಟ್ಟೆಯು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ವೈದ್ಯರು ಮತ್ತು ಪೌಷ್ಟಿಕತಜ್ಞರು ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನುವಂತೆ ಶಿಫಾರಸು ಮಾಡುತ್ತಾರೆ. ಇದು ಪೊಟ್ಯಾಸಿಯಮ್, ವಿಟಮಿನ್ ಇ, ಸತು ಮತ್ತು ಕಬ್ಬಿಣದಲ್ಲಿ ಸಮೃದ್ಧವಾಗಿದೆ. ಇದು ನಮಗೆ ಅಗತ್ಯವಿರುವ ಪ್ರೋಟೀನ್‌ನಿಂದ ಕೂಡಿದೆ. ಹಾಗೆಯೇ ಕಡಲೆಕಾಳು ತಿನ್ನುವುದರಿಂದಲೂ ಹಲವಾರು ಪ್ರಯೋಜನಗಳಿವೆ. ಕಡಲೆಕಾಳಿನಲ್ಲಿ ಫೈಬರ್ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗಿದೆ. ಕಡಲೆಕಾಳು ಆರೋಗ್ಯಕರ ಕೊಬ್ಬನ್ನು ಹೊಂದಿದ್ದು, ಇದು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಕಡಲೆಕಾಳಿನಲ್ಲಿ ಮೊನೊಸಾಚುರೇಟೆಡ್ ಕೊಬ್ಬುಗಳಿವೆ. ಒತ್ತಡವನ್ನು ಕಡಿಮೆ ಮಾಡಲು ಕಡಲೆಕಾಳು ತುಂಬಾ ಉಪಯುಕ್ತವಾಗಿದೆ.