ಉಪಹಾರಕ್ಕೆ ಬೆಸ್ಟ್ ಟೇಸ್ಟಿ, ಪೌಷ್ಟಿಕಾಂಶ ಭರಿತ ಓಟ್ಸ್ ಕಿಚಡಿ: ಮಕ್ಕಳು ಇಷ್ಟಪಟ್ಟು ತಿಂತಾರೆ, ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಉಪಹಾರಕ್ಕೆ ಬೆಸ್ಟ್ ಟೇಸ್ಟಿ, ಪೌಷ್ಟಿಕಾಂಶ ಭರಿತ ಓಟ್ಸ್ ಕಿಚಡಿ: ಮಕ್ಕಳು ಇಷ್ಟಪಟ್ಟು ತಿಂತಾರೆ, ಇಲ್ಲಿದೆ ರೆಸಿಪಿ

ಉಪಹಾರಕ್ಕೆ ಬೆಸ್ಟ್ ಟೇಸ್ಟಿ, ಪೌಷ್ಟಿಕಾಂಶ ಭರಿತ ಓಟ್ಸ್ ಕಿಚಡಿ: ಮಕ್ಕಳು ಇಷ್ಟಪಟ್ಟು ತಿಂತಾರೆ, ಇಲ್ಲಿದೆ ರೆಸಿಪಿ

ಬಹಳ ಸರಳವಾಗಿ, ಪೌಷ್ಟಿಕಾಂಶ ಭರಿತ ಆಹಾರ ಏನಾದರೂ ಮಾಡಬೇಕು ಎಂದು ಯೋಜಿಸುತ್ತಿದ್ದರೆ ಸಿಂಪಲ್ ಆಗಿ ಓಟ್ಸ್ ಕಿಚಿಡಿಯನ್ನು ಮಾಡಬಹುದು.ಬೆಳಗಿನ ಉಪಹಾರ ಮತ್ತು ಊಟಕ್ಕೆ ನೀವು ಯಾವಾಗ ಬೇಕಾದರೂ ಇದನ್ನು ಮಾಡಿ ತಿನ್ನಬಹುದು. ಮಕ್ಕಳಿಗೂ ಕೂಡ ತುಂಬಾ ಇಷ್ಟವಾಗುತ್ತದೆ. ಇಲ್ಲಿದೆ ರೆಸಿಪಿ ಮಾಡುವ ವಿಧಾನ.

ಉಪಾಹಾರಕ್ಕೆ ಬೆಸ್ಟ್ ಟೇಸ್ಟಿ, ಪೌಷ್ಟಿಕಾಂಶ ಭರಿತ ಓಟ್ಸ್ ಕಿಚಡಿ: ಮಕ್ಕಳು ಇಷ್ಟಪಟ್ಟು ತಿಂತಾರೆ, ಇಲ್ಲಿದೆ ರೆಸಿಪಿ
ಉಪಾಹಾರಕ್ಕೆ ಬೆಸ್ಟ್ ಟೇಸ್ಟಿ, ಪೌಷ್ಟಿಕಾಂಶ ಭರಿತ ಓಟ್ಸ್ ಕಿಚಡಿ: ಮಕ್ಕಳು ಇಷ್ಟಪಟ್ಟು ತಿಂತಾರೆ, ಇಲ್ಲಿದೆ ರೆಸಿಪಿ

ನೀವು ಸಿಂಪಲ್ ಆಗಿ ಏನಾದರೂ ಅಡುಗೆ ಮಾಡಲು ಬಯಸಿದರೆ ಈ ಓಟ್ಸ್ ಕಿಚಡಿಯನ್ನು ತಯಾರಿಸಬಹುದು. ಇದನ್ನು ತಯಾರಿಸಲು ನಿಮಗೆ ಹೆಚ್ಚು ಸಮಯ ಬೇಕೆಂದಿಲ್ಲ. ಅತ್ಯಂತ ಕಡಿಮೆ ಸಮಯದಲ್ಲಿ ಈ ರೆಸಿಪಿಯನ್ನು ತಯಾರಿಸಬಹುದು. ಮಕ್ಕಳಿಗೂ ಕೂಡ ಈ ರೆಸಿಪಿ ಖಂಡಿತ ಇಷ್ಟವಾಗುತ್ತದೆ. ರುಚಿಯೂ ಚೆನ್ನಾಗಿರುತ್ತದೆ. ಹೆಚ್ಚು ಪೋಷಕಾಂಶಗಳಿರುವ ಈ ಕಿಚಡಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇದು ಬಹಳ ಬೇಗನೆ ಜೀರ್ಣವಾಗುತ್ತದೆ. ಈ ಓಟ್ಸ್ ಕಿಚಿಡಿ ರೆಸಿಪಿಯನ್ನು ಹೇಗೆ ಮಾಡುವುದು ಎಂಬುದು ಇಲ್ಲಿದೆ.

ಓಟ್ಸ್ ಕಿಚಿಡಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಓಟ್ಸ್- ಅರ್ಧ ಕಪ್, ಹೆಸರು ಬೇಳೆ- ಕಾಲು ಕಪ್, ಕತ್ತರಿಸಿದ ತರಕಾರಿಗಳು (ಬೀನ್ಸ್, ಆಲೂಗಡ್ಡೆ ಮತ್ತು ಕ್ಯಾರೆಟ್)- 1/2 ಕಪ್, ಈರುಳ್ಳಿ- 1, ಹಸಿರು ಬಟಾಣಿ- ಸ್ವಲ್ಪ, ಜೀರಿಗೆ- ಅರ್ಧ ಟೀ ಚಮಚ, ಸಾಸಿವೆ- ಅರ್ಧ ಟೀ ಚಮಚ, ಹಸಿರು ಮೆಣಸಿನಕಾಯಿಗಳು (ಸಣ್ಣದಾಗಿ ಕೊಚ್ಚಿದ)- 2, ಶುಂಠಿ- ಒಂದು ಚಮಚ, ನೀರು- 2 ಕಪ್, ಎಣ್ಣೆ ಅಥವಾ ತುಪ್ಪ- ಒಂದು ಚಮಚ, ಉಪ್ಪು- ರುಚಿಗೆ ತಕ್ಕಷ್ಟು. ಕೊತ್ತಂಬರಿ ಸೊಪ್ಪು- ಸ್ವಲ್ಪ.

ಮಾಡುವ ವಿಧಾನ: ಮೊದಲಿಗೆ ಹೆಸರು ಬೇಳೆಯನ್ನು ಚೆನ್ನಾಗಿ ತೊಳೆಯಿರಿ. ನಂತರ, ಅದನ್ನು ಒಂದು ಪಾತ್ರೆಯಲ್ಲಿ ಚೆನ್ನಾಗಿ ಬೇಯಿಸಿ, ಪಕ್ಕಕ್ಕೆ ಇರಿಸಿ. ಸ್ಟೌವ್ ಮೇಲೆ ಬಾಣಲೆ ಇಟ್ಟು ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿ. ಮೊದಲು ಸಾಸಿವೆ ಮತ್ತು ಜೀರಿಗೆ ಸೇರಿಸಿ. ಸಾಸಿವೆ ಒಗ್ಗರಣೆ ಹಾಕಿದ ನಂತರ, ಕತ್ತರಿಸಿದ ಈರುಳ್ಳಿ, ಸಣ್ಣದಾಗಿ ಕೊಚ್ಚಿದ ಶುಂಠಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ ಹುರಿಯಿರಿ.

ಅದರ ನಂತರ ಕತ್ತರಿಸಿದ ತರಕಾರಿ ತುಂಡುಗಳು ಮತ್ತು ಹಸಿರು ಬಟಾಣಿಗಳನ್ನು ಸೇರಿಸಿ. ಸಾಕಷ್ಟು ಉಪ್ಪು ಮತ್ತು ಅರಿಶಿನ ಹಾಕಿ ಮುಚ್ಚಿ, 3 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಲು ಬಿಡಿ.

ಇದಕ್ಕೆ ಬೇಯಿಸಿದ ಹೆಸರುಬೇಳೆ ಮತ್ತು ಓಟ್ಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನೀರನ್ನು ಸುರಿಯಿರಿ. ಓಟ್ಸ್ ಮೃದುವಾಗುವವರೆಗೆ ಸುಮಾರು 6 ನಿಮಿಷಗಳ ಕಾಲ ಮುಚ್ಚಿ, ಬೇಯಿಸಿ. ಇದನ್ನು ನಡು ನಡುವೆ ಮಿಶ್ರಣ ಮಾಡಬೇಕು. ಚೆನ್ನಾಗಿ ಬೆಂದ ನಂತರ ಅದಕ್ಕೆ ಒಂದು ಚಮಚ ತುಪ್ಪ ಹಾಕಿ. ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿದರೆ ಟೇಸ್ಟಿ ಓಟ್ಸ್ ಕಿಚಿಡಿ ಸವಿಯಲು ಸಿದ್ಧ.

ಈ ಓಟ್ಸ್ ಕಿಚಿಡಿಯಲ್ಲಿ ಪೋಷಕಾಂಶಗಳು ಹೇರಳವಾಗಿವೆ. ವಿವಿಧ ತರಕಾರಿಗಳು, ಹೆಸರುಬೇಳೆ ಮತ್ತು ಓಟ್ಸ್ ಹಾಕುವುದರಿಂದ ಇದು ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಮೃದುವಾಗಿದ್ದು, ಜೀರ್ಣಿಸಿಕೊಳ್ಳಲು ಸುಲಭ. ಮಕ್ಕಳು ಸಹ ಇದನ್ನು ತಿನ್ನಲು ಇಷ್ಟಪಡುತ್ತಾರೆ. ಇದು ಮಕ್ಕಳಿಗೆ ಪೌಷ್ಟಿಕಾಂಶವನ್ನು ಒದಗಿಸುವ ಅತ್ಯುತ್ತಮ ಮಾರ್ಗವಾಗಿದೆ. ಈ ಖಾದ್ಯವನ್ನು ಬಹಳ ಬೇಗ ಸಿದ್ಧಪಡಿಸಬಹುದು.

Whats_app_banner