ಮಕ್ಕಳ ಲಂಚ್ ಬಾಕ್ಸ್‌ಗೂ ಓಕೆ, ಉಪಾಹಾರಕ್ಕೂ ಬೆಸ್ಟ್: ಇಲ್ಲಿದೆ ಈರುಳ್ಳಿ ಪರೋಟ ರೆಸಿಪಿ ಮಾಡುವ ವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳ ಲಂಚ್ ಬಾಕ್ಸ್‌ಗೂ ಓಕೆ, ಉಪಾಹಾರಕ್ಕೂ ಬೆಸ್ಟ್: ಇಲ್ಲಿದೆ ಈರುಳ್ಳಿ ಪರೋಟ ರೆಸಿಪಿ ಮಾಡುವ ವಿಧಾನ

ಮಕ್ಕಳ ಲಂಚ್ ಬಾಕ್ಸ್‌ಗೂ ಓಕೆ, ಉಪಾಹಾರಕ್ಕೂ ಬೆಸ್ಟ್: ಇಲ್ಲಿದೆ ಈರುಳ್ಳಿ ಪರೋಟ ರೆಸಿಪಿ ಮಾಡುವ ವಿಧಾನ

ಪರೋಟ ಅಂದ್ರೆ ಬಹುತೇಕ ಜನ ಇಷ್ಟಪಡುತ್ತಾರೆ. ರುಚಿಕರವಾದ ಈರುಳ್ಳಿ ಪರೋಟವನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಮಕ್ಕಳ ಲಂಚ್ ಬಾಕ್ಸ್‌ಗೆ ಯಾವ ತಿಂಡಿ ಮಾಡುವುದು ಅನ್ನೋ ಚಿಂತೆಯಿದ್ದರೆ ಈ ರೆಸಿಪಿಯನ್ನು ಪ್ರಯತ್ನಿಸಬಹುದು. ಖಂಡಿತ ಮಕ್ಕಳಿಗೆ ಇಷ್ಟವಾಗುತ್ತದೆ. ಇಲ್ಲಿದೆ ರೆಸಿಪಿ ಮಾಡುವ ವಿಧಾನ.

ಮಕ್ಕಳ ಲಂಚ್ ಬಾಕ್ಸ್‌ಗೂ ಓಕೆ, ಉಪಾಹಾರಕ್ಕೂ ಬೆಸ್ಟ್: ಇಲ್ಲಿದೆ ಈರುಳ್ಳಿ ಪರೋಟ ರೆಸಿಪಿ ಮಾಡುವ ವಿಧಾನ
ಮಕ್ಕಳ ಲಂಚ್ ಬಾಕ್ಸ್‌ಗೂ ಓಕೆ, ಉಪಾಹಾರಕ್ಕೂ ಬೆಸ್ಟ್: ಇಲ್ಲಿದೆ ಈರುಳ್ಳಿ ಪರೋಟ ರೆಸಿಪಿ ಮಾಡುವ ವಿಧಾನ (Shutterstock)

ಚಳಿಗಾಲದಲ್ಲಿ ಬಿಸಿ ಬಿಸಿಯಾದ ತಿಂಡಿ ಅಥವಾ ಮಸಾಲೆಯುಕ್ತ ತಿನಿಸು ಏನನ್ನಾದರೂ ತಿನ್ನಬೇಕು ಎಂಬ ಬಯಕೆ ಉಂಟಾಗುವುದು ಸಹಜ. ಚಪಾತಿ ಅಂದ್ರೆ ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಮಕ್ಕಳಿಗೂವ ಚಪಾತಿ ಅಂದ್ರೆ ಅಚ್ಚುಮೆಚ್ಚು. ಚಪಾತಿ ಹಿಟ್ಟಿನಿಂದ ಬಗೆ-ಬಗೆಯ ಪರೋಟಗಳನ್ನು ಮಾಡುತ್ತಾರೆ. ಆಲೂ ಪರೋಟ, ಪನೀರ್ ಪರೋಟ, ಓಂಕಾಳು ಪರೋಟ, ಮೆಂತ್ಯ ಪರೋಟ ಸೇರಿದಂತೆ ವಿವಿಧ ಬಗೆಯ ಪರೋಟಗಳನ್ನು ಮಾಡುತ್ತಾರೆ. ಎಂದಾದರೂ ಈರುಳ್ಳಿ ಪರೋಟವನ್ನು ಪ್ರಯತ್ನಿಸಿದ್ದೀರಾ? ಇಲ್ಲವಾದಲ್ಲಿ ಇಂದೇ ಪ್ರಯತ್ನಿಸಿ. ಮಕ್ಕಳಿಗೂ ಇಷ್ಟವಾಗುತ್ತೆ. ಮಕ್ಕಳ ಲಂಚ್ ಬಾಕ್ಸ್‌ಗೆ ಏನು ಹಾಕುವುದು ಎಂಬ ಚಿಂತೆಯಿದ್ದರೆ ಈ ರೆಸಿಪಿಯನ್ನು ಪ್ರಯತ್ನಿಸಬಹುದು. ಇಲ್ಲಿದೆ ರೆಸಿಪಿ ಮಾಡುವ ವಿಧಾನ.

ಈರುಳ್ಳಿ ಪರೋಟ ರೆಸಿಪಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ಗೋಧಿ ಹಿಟ್ಟು- ಎರಡು ಕಪ್, ಈರುಳ್ಳಿ- ಎರಡು, ಮೆಣಸಿನಕಾಯಿ- ಅರ್ಧ ಟೀ ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಒಂದು ಟೀ ಚಮಚ, ತುಪ್ಪ- ನಾಲ್ಕು ಟೀ ಚಮಚ, ಮೆಣಸಿನಕಾಯಿ- ಎರಡು, ಚಾಟ್ ಮಸಾಲೆ- ಒಂದು ಟೀ ಚಮಚ, ಕೊತ್ತಂಬರಿ ಪುಡಿ- ಒಂದು ಟೀ ಚಮಚ, ಉಪ್ಪು- ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಈರುಳ್ಳಿ ಪರೋಟ ಮಾಡಲು, ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟನ್ನು ತೆಗೆದುಕೊಳ್ಳಿ. ಹಿಟ್ಟಿಗೆ ಒಂದು ಚಮಚ ಎಣ್ಣೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ಬೆಚ್ಚಗಿನ ನೀರಿನಿಂದ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ಈ ಮಧ್ಯೆ, ಪರೋಟಾ ಸ್ಟಫಿಂಗ್ ತಯಾರಿಸಿ. ಪರೋಟ ಸ್ಟಫಿಂಗ್‌ಗಾಗಿ, ಈರುಳ್ಳಿಯನ್ನು ತೆಳುವಾಗಿ ಕತ್ತರಿಸಿ.

ಒಂದು ಪಾತ್ರೆಯಲ್ಲಿ ಈರುಳ್ಳಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈರುಳ್ಳಿಗೆ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಪುಡಿ, ಚಾಟ್ ಮಸಾಲೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಇನ್ನೊಂದೆಡೆ ಗೋಧಿ ಹಿಟ್ಟಿನಿಂದ ಸಣ್ಣ ಉಂಡೆಯನ್ನು ತೆಗೆದುಕೊಂಡು ಅದನ್ನು ಪೂರಿಯಂತೆ ಒತ್ತಿರಿ. ಈರುಳ್ಳಿ ಸ್ಟಫಿಂಗ್ ಅನ್ನು ಮಧ್ಯದಲ್ಲಿ ಹಾಕಿ ಮುಚ್ಚಿ. ಚಪಾತಿ ಲಟ್ಟಿಸುವಂತೆ ಪರೋಟವನ್ನು ನಿಧಾನಕ್ಕೆ ಒತ್ತಿರಿ. ಬಳಿಕ ಸ್ಟೌವ್ ಮೇಲೆ ತವಾ ಇಟ್ಟು, ಬಿಸಿಯಾದಾಗ ಪರೋಟವನ್ನು ಹಾಕಿ ಫ್ರೈ ಮಾಡಿ. ಎರಡೂ ಬದಿಗಳಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ನಂತರ ಅದರ ಮೇಲೆ ತುಪ್ಪ ಸವರಿದರೆ ರುಚಿಕರವಾದ ಈರುಳ್ಳಿ ಪರೋಟ ಸವಿಯಲು ಸಿದ್ಧ. ಇದನ್ನು ತಿನ್ನಲು ಚಟ್ನಿ ಬೇಕು ಎಂದಿಲ್ಲ. ಹಾಗೆಯೇ ತಿನ್ನಬಹುದು. ತುಪ್ಪ ಅಥವಾ ಬೆಣ್ಣೆ ಜತೆ ಸವಿಯಲು ಕೂಡ ರುಚಿಕರವಾಗಿರುತ್ತದೆ. ಈರುಳ್ಳಿ ಪರೋಟ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.

Whats_app_banner