Chana Masala Recipe: ಬಾಯಲ್ಲಿ ನೀರೂರಿಸುವ ರುಚಿಯಾದ ಚನಾ ಮಸಲಾವನ್ನು ಮನೆಯಲ್ಲೇ ತಯಾರಿಸಿ; ಇಲ್ಲಿದೆ ಸುಲಭ ವಿಧಾನ
ಪೂರಿ, ರೋಟಿ, ಇಡ್ಲಿ ಈ ಮೂರಕ್ಕೂ ಒಳ್ಳೆ ಕಾಂಬಿನೇಷನ್ ಆಗಿರುವ ಚನಾ ಮಸಾಲವನ್ನು ಮಾಡುವ ಸುಲಭ ವಿಧಾನವನ್ನು ಇಲ್ಲಿ ನೀಡಲಾಗಿದೆ. ರುಚಿಯಾದ ಈ ರೆಸಿಪಿಯನ್ನು ನೀವು ಒಮ್ಮೆ ಟ್ರೈ ಮಾಡಿ.
ಕಡಲೆಯನ್ನು ಬಳಸಿ ರುಚಿಕರವಾದ ಸಾಕಷ್ಟು ವೆರೈಟಿಗಳನ್ನು ತಯಾರಿಸಬಹುದು. ಕಡೆಯನ್ನು ಸಾಂಬರ್, ಪಲ್ಯವನ್ನು ಮಾಡಲಾಗುತ್ತದೆ. ಜೊತೆಗೆ ಬಾಯಲ್ಲಿ ನೀರೂರಿಸುವಂತ ರುಚಿಕರವಾದ ಚನಾ ಮಸಾಲವನ್ನು (Chana Masala Recipe) ಮಾಡಬಹುದು. ಭಾರತದಲ್ಲಿ ಈ ರೆಸಿಪಿಯನ್ನು ಇಷ್ಟುಪಡುವ ಬಹಳಷ್ಟು ಜನರಿದ್ದಾರೆ. ಪೂರಿ, ರೊಟ್ಟಿ, ಚಪಾತಿ ಹಾಗೂ ಇಡ್ಲಿಗೂ ಮಸಾಲ ಮಸ್ತ್ ಕಾಂಬಿನೇಷನ್ ಆಗಿರುತ್ತದೆ. ಬಿಸಿ ಬಿಸಿ ಚನಾ ಮಸಾಲ ಖಾದ್ಯವನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಿಕೊಳ್ಳಬಹುದು. ರೆಸಿಪಿಯನ್ನು ಮಾಡುವ ಸುಲಭ ವಿಧಾನವನ್ನು ನಾವು ತಿಳಿಸಿಕೊಡುತ್ತೇವೆ. ಮೊದಲಿಗೆ ರೆಸಿಪಿಗೆ ಬೇಕಾಗಿರುವ ಪದಾರ್ಥಗಳನ್ನು ತಿಳಿಯೋಣ.
ಚನಾ ಮಸಾಲ ತಯಾರಿಸಲು ಬೇಕಾಗಿರುವ ಪದಾರ್ಥಗಳ
- ಒಂದು ಕಪ್ ಕಡಲೆ
- ಶುಂಠಿ, ಬೆಳ್ಳುಳ್ಳಿ ಪೇಸ್ಟ್
- 2 ಈರುಳ್ಳಿ
- 2 ಟೊಮೆಟೊ
- 3 ಹಸಿ ಮೆಣಸಿನಕಾಯಿ
- ಅರ್ಧ ಚಮಚ ಅರಿಶಿನ ಪುಡಿ
- 2 ಟೇಬಲ್ ಸ್ಫೂನ್ ಕೆಂಪು ಮೆಣಸಿನ ಪುಡಿ
- 2 ಚಮಚ ಧನಿಯಾ ಪುಡಿ
- 1 ಚಮಚ ಜೀರಿಗೆ ಪುಡಿ
- 1 ಚಮಚ ಗರಂ ಮಸಾಲಾ
- ಅರ್ಧ ಚಮಚ ಒಣ ಮಾವಿನ ಪುಡಿ
- 1 ದಾಲ್ಚಿನ್ನಿ
- 1 ಲವಂಗದ ಎಲೆ
- 2 ಏಲಕ್ಕಿ
- 3 ಲವಂಗ
- ಅಗತ್ಯಕ್ಕೆ ತಕ್ಕಷ್ಟು ಎಣ್ಣೆ
- ಸ್ವಲ್ಪ ಕೊತ್ತಂಬರಿ ಸೊಪ್ಪು
- ರುಚಿಗೆ ತಕ್ಕಂತೆ ಉಪ್ಪು
ಚನಾ ಮಸಾಲ ಮಾಡುವ ವಿಧಾನ
ಚನಾ ಮಸಾಲವನ್ನು ಮಾಡುವ 8 ಗಂಟೆಗಳಿಗೂ ಮೊದಲು 1 ಕಪ್ ಕಡಲೆಯನ್ನು ನೀರಿನಲ್ಲಿ ನೆನೆಸಿಡಬೇಕು. ರೆಸಿಪಿಯನ್ನು ಮಾಡಲು ಆರಂಭಿಸಿದಾಗ ಕಡಲೆಗೆ ಸ್ವಲ್ಪ ನೀರು ಸೇರಿಸಿ ಕುಕ್ಕರ್‌ನಲ್ಲಿ ಬೇಯಿಸಬೇಕು. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಮಧ್ಯಮ ಗಾತ್ರದ ಉರಿಯಲ್ಲಿ ನಾಲ್ಕರಿಂದ 5 ವಿಸೀಲ್ ಬರುವವರೆಗೆ ಬೇಯಿಸಿ. ನಂತರ ಒಂದು ಬಾಂಡಲಿ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಅದು ಚೆನ್ನಾಗಿ ಬಿಸಿಯಾದಾಗ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಚೆನ್ನಾಗಿ ಹುರಿದ ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಇದಾದ ಬಳಿಕ ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲ ಮತ್ತು ಒಣ ಮಾವಿನ ಪುಡಿಯನ್ನ ಮಿಕ್ಸ್ ಮಾಡಿದ ನಂತರ ಚೆನ್ನಾಗಿ ಕಲಿಸಿ ಸ್ವಲ್ಪ ನೀರು ಹಾಕಿದ ನಂತರ ಬೇಯಲು ಬಿಡಿ.
ಟೊಮೆಟೊವನ್ನು ಮಸಾಲ ಮಿಶ್ರಣಕ್ಕೆ ಸೇರಿಸಿ 7 ನಿಮಿಷ ಬೇಯಿಸಿ. ಟೊಮೆಟೊ ಚೆನ್ನಾಗಿ ಬೇಯಿಸಿದ ನಂತರ ಬಾಂಡಲಿಯನ್ನು ಸ್ಟೌವ್ ಮೇಲಿಂದ ಇಳಿಸಿಕೊಂಡು ತಣ್ಣಗಾಗಲು ಬಿಡಿ. ಬಿಸಿ ಕಡಿಮೆಯಾದ ನಂತರ ಮಸಾಲವನ್ನು ಮಿಶ್ರಣ ಮಾಡಿ ಗ್ರೈಂಡರ್‌ನಲ್ಲಿ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ.
ಇನ್ನೊಂದು ಪ್ಯಾನ್ ತೆಗೆದುಕೊಂಡು ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ನಂತರ ಲವಂಗ ಎಲೆ, ಲವಂಗ, ಏಲಕ್ಕಿ, ಜೀರಿಗೆ, ಹಸಿ ಮೆಣಸಿನಕಾಯಿ ಮತ್ತು ಬೇಯಿಸಿಕೊಟ್ಟುಕೊಂಡಿರುವ ಕಡಲೆನ್ನು ಮಿಕ್ಸ್ ಮಾಡಿ ಐದು ನಿಮಿಷ ಬೇಯಿಸಿ. ಕಡಲೆಯನ್ನು ಚೆನ್ನಾಗಿ ಹಿಸುಕಿ ಅದರಲ್ಲಿ ಸೇರಿಸಿ. ಹೀಗೆ ಮಾಡಿದರೆ ಗ್ರೇವಿ ಮಂದವಾಗಿರುತ್ತದೆ. ಇದಾದ ಬಳಿಕ ಮೂರ್ನಾಲ್ಕು ನಿಮಿಷಗಳ ಕಾಲ ಬಿಡಿ. ಕೊನೆಗೆ ಸ್ವಲ್ಪ ಕೊತ್ತಂಬರಿ ಸೊಪ್ಪವನ್ನು ಸೇರಿಸಿದರೆ ಚನಾ ಮಸಾಲ ರೆಡಿ.
ವಿಭಾಗ