Akki Payasa: ದೇವಸ್ಥಾನ ಶೈಲಿಯಲ್ಲಿ ಅಕ್ಕಿ ಪಾಯಸ ಮಾಡುವ ವಿಧಾನ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Akki Payasa: ದೇವಸ್ಥಾನ ಶೈಲಿಯಲ್ಲಿ ಅಕ್ಕಿ ಪಾಯಸ ಮಾಡುವ ವಿಧಾನ ಇಲ್ಲಿದೆ

Akki Payasa: ದೇವಸ್ಥಾನ ಶೈಲಿಯಲ್ಲಿ ಅಕ್ಕಿ ಪಾಯಸ ಮಾಡುವ ವಿಧಾನ ಇಲ್ಲಿದೆ

ದೇವಾಲಯಗಳಲ್ಲಿ ಮಾಡುವ ಅಕ್ಕಿ ಪಾಯಸವನ್ನ ತಿಂದಷ್ಟೂ ತಿನ್ನಬೇಕು ಎಂದೆನಿಸುತ್ತದೆ. ಹೆಣ್ಣುದೇವರ ಅಂದರೆ ದೇವಿಯ ದೇಗುಲಗಳಲ್ಲಿ ಹೆಚ್ಚಾಗಿ ಅಕ್ಕಿ ಪಾಯಸವನ್ನ ಮಾಡಲಾಗುತ್ತದೆ. ದೇವಸ್ಥಾನ ಶೈಲಿಯಲ್ಲಿ ಅಕ್ಕಿ ಪಾಯಸ ಮಾಡುವ ವಿಧಾನ ಕೂಡ ಸುಲಭ ಇದೆ. ನೀವೂ ಮನೆಯಲ್ಲಿ ಟ್ರೈ ಮಾಡಿ ನೋಡಿ.

 ಅಕ್ಕಿ ಪಾಯಸ (twitter)
ಅಕ್ಕಿ ಪಾಯಸ (twitter)

ಹಬ್ಬಹರಿದಿನ ಬಂತೆಂದರೆ ಮನೆಯಲ್ಲಿ ಪಾಯಸ ಮಾಡುವುದು ಫಿಕ್ಸ್. ಸಾವಿಗೆ ಪಾಯಸ, ರವೆ ಪಾಯಸ, ಹೆಸರು ಬೇಳೆ ಪಾಯಸ, ಹೆಸರು ಕಾಳು ಪಾಯಸ, ಗೋಧಿ ಪಾಯಸ, ಸಬ್ಬಕ್ಕಿ ಪಾಯಸ ಹೀಗೆ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿಯ ಪಾಯಸ ಮಾಡುತ್ತಾರೆ ಹಾಗೂ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪಾಯಸ ಇಷ್ಟ ಆಗುತ್ತದೆ. ಆದರೆ ದೇವಸ್ಥಾನಗಳಲ್ಲಿ ಊಟ ಮಾಡುವಾದ ಆಹಾ ಇಂಥಾ ಪಾಯಸ ನಮ್ಮ ಮನೆಯಲ್ಲೂ ಮಾಡಬಾರದೇ ಎಂದು ಮನಸ್ಸಿನಲ್ಲೇ ಅಂದುಕೊಳ್ಳುವುದುಂಟು.

ಅದರಲ್ಲಿಯೂ ದೇವಾಲಯಗಳಲ್ಲಿ ಮಾಡುವ ಅಕ್ಕಿ ಪಾಯಸವನ್ನ ತಿಂದಷ್ಟೂ ತಿನ್ನಬೇಕು ಎಂದೆನಿಸುತ್ತದೆ. ಹೆಣ್ಣುದೇವರ ಅಂದರೆ ದೇವಿಯ ದೇಗುಲಗಳಲ್ಲಿ ಹೆಚ್ಚಾಗಿ ಅಕ್ಕಿ ಪಾಯಸವನ್ನ ಮಾಡಲಾಗುತ್ತದೆ. ದೇವಸ್ಥಾನ ಶೈಲಿಯಲ್ಲಿ ಅಕ್ಕಿ ಪಾಯಸ ಮಾಡುವ ವಿಧಾನ ಕೂಡ ಸುಲಭ ಇದೆ. ನೀವೂ ಮನೆಯಲ್ಲಿ ಟ್ರೈ ಮಾಡಿ ನೋಡಿ.

ಅಕ್ಕಿ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು

- ಅಕ್ಕಿ

- ತೆಂಗಿನ ಕಾಯಿ

- ಬೆಲ್ಲ

- ತುಪ್ಪ

- ಗೋಡಂಬಿ

- ಲವಂಗ

ಅಕ್ಕಿ ಪಾಯಸ ಮಾಡುವ ವಿಧಾನ

ಪಾತ್ರೆಯಲ್ಲಿ ಕುದಿಯುತ್ತಿರುವ ನೀರಿಗೆ 1 ಕಪ್​ ಗಂಧಸಾಲೆ ಅಕ್ಕಿಯನ್ನು ತೊಳೆದು ಹಾಕಬೇಕು. (ಗಂಧಸಾಲೆ ಅಕ್ಕಿ ಪರಿಮಳ ಭರಿತ ಅಕ್ಕಿ. ಇದು ಸಿಕ್ಕಿಲ್ಲವಾದರೆ ನೀವು ಯಾವುದೇ ಅಕ್ಕಿ ಬಳಸಬಹುದು.) ಅನ್ನ ಬೇಯುವುದರ ಒಳಗೆ ಕಾಯಿ ಹಾಲನ್ನು ಮಾಡಿಕೊಳ್ಳೋಣ.

ತೆಂಗಿನಕಾಯಿಯನ್ನು ತುರಿದು ರುಬ್ಬಿಕೊಳ್ಳಿ. ಅದನ್ನು ಒಂದು ಶುದ್ಧವಾದ ಬಟ್ಟೆಯಲ್ಲಿ ಹಾಕಿ ಕಾಯಿಯ ಹಾಲನ್ನು ಮಾತ್ರ ಹಿಂಡಿಕೊಳ್ಳಿ. ಬಳಿಕ ಬಟ್ಟೆಯಲ್ಲಿ ಉಳಿದ ಕಾಯಿಗೆ ಸ್ವಲ್ಪ ನೀರು ಹಾಕಿಕೊಂಡು ಮತ್ತೆ ಹಿಂಡಿ ಹಾಲು ತೆಗೆಯಿರಿ.

ಈಗ ಅನ್ನ ಬೆಂದಿದ್ಯಾ ನೋಡಿ. ಸಾಮಾನ್ಯವಾಗಿ ಅನ್ನ ಬೇಯಿಸುವುದಕ್ಕಿಂತ ಸ್ವಲ್ಪ ಜಾಸ್ತಿ ಬೇಯಿಸಬೇಕು. ಅನ್ನದ ಗಂಜಿಯನ್ನು ಬಸಿಯಬಾರದು. ಹಾಗೆ ಒಲೆ ಮೇಲೆಯೇ ಇಟ್ಟಿರಿ. ಅದಕ್ಕೆ 2ನೇ ಬಾರಿ ತೆಗೆದ ಕಾಯಿಹಾಲನ್ನು ಹಾಕಿ ಚೆನ್ನಾಗಿ ಕುದಿಸಿ. ಈಗ 2 ಕಪ್​ ತುರಿದ ಬೆಲ್ಲವನ್ನು ಹಾಕಬೇಕು. ಎಷ್ಟು ಅಕ್ಕಿ ತೆಗೆದುಕೊಂಡಿರುತ್ತೀರೋ ಅದಕ್ಕಿಂತ 2 ಪಟ್ಟು ಹೆಚ್ಚು ಬೆಲ್ಲವನ್ನು ಹಾಕಬೇಕು. ನಂತರ 10 ನಿಮಿಷ ಕುದಿಸಬೇಕು.

ಈಗ ಮೊದಲ ಬಾರಿ ತೆಗೆದ ಕಾಯಿ ಹಾಲನ್ನು ಹಾಕಿ ಕುದಿಸಬೇಕು. ಒಂದು ಕುದು/ಕುದಿ ಬಂದರೆ ಸಾಕು. ಈಗ ಇದಕ್ಕೆ ಒಂದು ಚಮಚ ತುಪ್ಪದಲ್ಲಿ ಗೋಡಂಬಿ ಮತ್ತು ಲವಂಗವನ್ನು ಹುರಿದುಕೊಂಡು ಹಾಕಿ ಕಲಕಿ. ಈಗ ಅಕ್ಕಿ ಪಾಯಸ ರೆಡಿ..

Whats_app_banner