ಮಂಗಳೂರು ಸ್ಟೈಲ್‌ ಫಿಶ್‌ ಕರಿ; ಈ ರೀತಿ ತಯಾರಿಸಿದ್ರೆ ಸ್ವಲ್ಪವೂ ಉಳಿಸದಂತೆ ತಿಂದು ಮುಗಿಸೋದು ಗ್ಯಾರಂಟಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಂಗಳೂರು ಸ್ಟೈಲ್‌ ಫಿಶ್‌ ಕರಿ; ಈ ರೀತಿ ತಯಾರಿಸಿದ್ರೆ ಸ್ವಲ್ಪವೂ ಉಳಿಸದಂತೆ ತಿಂದು ಮುಗಿಸೋದು ಗ್ಯಾರಂಟಿ

ಮಂಗಳೂರು ಸ್ಟೈಲ್‌ ಫಿಶ್‌ ಕರಿ; ಈ ರೀತಿ ತಯಾರಿಸಿದ್ರೆ ಸ್ವಲ್ಪವೂ ಉಳಿಸದಂತೆ ತಿಂದು ಮುಗಿಸೋದು ಗ್ಯಾರಂಟಿ

ಮೀನು ಆರೋಗ್ಯಕ್ಕೆ ಬಹಳ ಒಳ್ಳೆಯದು. ಮೀನಿನಲ್ಲಿ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳಿವೆ. ಇದು ಮಧುಮೇಹಿಗಳಿಗೂ ಒಳ್ಳೆಯದು. ತೂಕ ಇಳಿಸುವವರಿಗೂ ಇದು ಉತ್ತಮ ಆಯ್ಕೆಯಾಗಿದೆ. ನೀವು ಮುಂದಿನ ಬಾರಿ ಮನೆಗೆ ಮೀನು ತಂದರೆ ಹೊಸ ರೆಸಿಪಿ ಮಾಡಿ. ಮಂಗಳೂರು ಫಿಶ್‌ ಕರಿ ರೆಸಿಪಿ ಇಲ್ಲಿದೆ.

ಮಂಗಳೂರು ಸ್ಟೈಲ್‌ ಫಿಶ್‌ ಕರಿ; ಈ ರೀತಿ ತಯಾರಿಸಿದ್ರೆ ಸ್ವಲ್ಪವೂ ಉಳಿಸದಂತೆ ತಿಂದು ಮುಗಿಸೋದು ಗ್ಯಾರಂಟಿ
ಮಂಗಳೂರು ಸ್ಟೈಲ್‌ ಫಿಶ್‌ ಕರಿ; ಈ ರೀತಿ ತಯಾರಿಸಿದ್ರೆ ಸ್ವಲ್ಪವೂ ಉಳಿಸದಂತೆ ತಿಂದು ಮುಗಿಸೋದು ಗ್ಯಾರಂಟಿ

ಚಿಕನ್ ಮತ್ತು ಮಟನ್‌ಗೆ ಹೋಲಿಸಿದರೆ ಮೀನು ತುಂಬಾ ಆರೋಗ್ಯಕರ. ಇದರಲ್ಲಿ ದೇಹಕ್ಕೆ ಬೇಕಾದ ಸಾಕಷ್ಟು ಪೋಷಕಾಂಶಗಳಿವೆ. ಎಷ್ಟೇ ಮೀನು ತಿಂದರೂ ದೇಹದಲ್ಲಿ ಕೊಬ್ಬು ಶೇಖರಣೆ ಆಗುವುದಿಲ್ಲ. ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಒಮೆಗಾ 3 ಕೊಬ್ಬಿನಾಮ್ಲವಿದೆ, ಹೃದಯದ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು.

ಮೀನು ಮಾನಸಿಕ ಆರೋಗ್ಯಕ್ಕೂ ಸಹಾಯ ಮಾಡುತ್ತದೆ. ಮಧುಮೇಹಿಗಳಿಗೂ ಮೀನು ಬಹಳ ಒಳ್ಳೆಯದು, ತೂಕ ಇಳಿಸಲು ಪ್ರಯತ್ನಿಸುತ್ತಿರುವವರು ಕೂಡಾ ಮಟನ್‌, ಚಿಕನ್‌ ಬದಲಿಗೆ ಮೀನು ಸೇವಿಸಬಹುದು. ಮೀನಿನಲ್ಲಿ ಒಂದಾ ಎರಡಾ? ಸಾಕಷ್ಟು ವೆರೈಟಿಗಳಿವೆ. ಪ್ರತಿ ಬಾರಿ ನೀವು ಒಂದೇ ರೆಸಿಪಿ ತಯಾರಿಸುವ ಬದಲಿಗೆ ಸ್ವಲ್ಪ ವಿಭಿನ್ನವಾಗಿ ಏನಾದರೂ ಪ್ರಯತ್ನಿಸಿ. ಇಲ್ಲಿ ಮಂಗಳೂರು ಶೈಲಿಯ ಫಿಶ್‌ ಕರಿ ರೆಸಿಪಿಯನ್ನು ತಿಳಿಸಲಾಗಿದೆ. ಮುಂದಿನ ಬಾರಿ ಮನೆಗೆ ಮೀನು ತಂದಾಗ ತಪ್ಪದೆ ಈ ಹೊಸ ರೆಸಿಪಿ ಟ್ರೈ ಮಾಡಿ.

ಮಂಗಳೂರು ಫಿಶ್ ಕರಿ ರೆಸಿಪಿಗೆ ಬೇಕಾಗುವ ಪದಾರ್ಥಗಳು

  • ಮೀನು - ಒಂದು ಕೆಜಿ
  • ತೆಂಗಿನ ಹಾಲು - 1 ಕಪ್
  • ಈರುಳ್ಳಿ - 2
  • ಮೆಣಸಿನಕಾಯಿ - 4
  • ಶುಂಠಿ - ಸಣ್ಣ ತುಂಡು
  • ಬೆಳ್ಳುಳ್ಳಿ ಎಸಳು - 1 ಹಿಡಿ
  • ಕರಿ ಮೆಣಸು - 8
  • ಕೊತ್ತಂಬರಿ - 1 ಸ್ಪೂನ್‌
  • ಜೀರ್ಗೆ - 1/2 ಚಮಚ
  • ಅರಿಶಿನ - 1/4 ಚಮಚ
  • ಹುಣಸೆಹಣ್ಣು - ನಿಂಬೆ ಹಣ್ಣಿನ ಗಾತ್ರ
  • ತೆಂಗಿನಕಾಯಿ ತುರಿ- ಅರ್ಧ ಕಪ್
  • ಉಪ್ಪು - ರುಚಿಗೆ
  • ಎಣ್ಣೆ - ಸಾಕಷ್ಟು

ಇದನ್ನೂ ಓದಿ: ಬೆಳ್ಳುಳ್ಳಿ ಕಬಾಬ್‌ ಅಲ್ಲ ಇದು ಬೆಳ್ಳುಳ್ಳಿ ಚಿಕನ್‌; ಗಾರ್ಲಿಕ್‌ ಚಿಕನ್‌ ತಯಾರಿಸುವ ವಿಧಾನ ಹೀಗಿದೆ

ಮಂಗಳೂರು ಫಿಶ್ ಕರಿ ರೆಸಿಪಿ ತಯಾರಿಸುವ ವಿಧಾನ

  1. ಮೀನನ್ನು ಶುಚಿಗೊಳಿಸಿ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ತೊಳೆದು ನೀರು ಸೋರಲು ಬಿಡಿ

2. ಹುಣಿಸೆ ಹಣ್ಣಿಗೆ ಸ್ವಲ್ಪ ನೀರು ಸೇರಿಸಿ ನೆನೆಯಲು ಬಿಡಿ

3. ಕರಿ ಮೆಣಸು, ಕೊತ್ತಂಬರಿ ಸೊಪ್ಪು, ಜೀರ್ಗೆ, ತೆಂಗಿನ ತುರಿ ಮತ್ತು ಅರಿಶಿನಕ್ಕೆ ಸ್ವಲ್ಪ ನೀರು ಸೇರಿಸಿ ಸಣ್ಣಗೆ ಗ್ರೈಂಡ್ ಮಾಡಿಕೊಳ್ಳಿ

4. ಒಂದು ಕಡಾಯಿಯನ್ನು ಸ್ಟೌವ್‌ ಮೇಲಿಟ್ಟು ಎಣ್ಣೆ ಬಿಸಿಯಾಗಲು ಬಿಡಿ

5. ಸಣ್ಣಗೆ ಹೆಚ್ಚಿದ ಈರುಳ್ಳಿ ತುಂಡುಗಳನ್ನು ಕತ್ತರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.

6. ಜೊತೆಗೆ ಉದ್ದಕ್ಕೆ ಕತ್ತರಿಸಿದ ಹಸಿ ಮೆಣಸಿನಕಾಯಿ ಸೇರಿಸಿ ಹುರಿಯಿರಿ

7. ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಕ್ರಶ್‌ ಮಾಡಿ ಅದನ್ನೂ ಎಣ್ಣೆಗೆ ಸೇರಿಸಿ ಫ್ರೈ ಮಾಡಿ

8. ಈ ಮಿಶ್ರಣಕ್ಕೆ ಮೊದಲೇ ಗ್ರೈಂಡ್‌ ಮಾಡಿಕೊಂಡ ಮಸಾಲಾ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ

9. ಕಡಿಮೆ ಉರಿಯಲ್ಲಿ ಇದನ್ನು ಬೇಯಿಸಿ ತೆಂಗಿನ ಹಾಲು ಮತ್ತು ಸ್ವಲ್ಪ ನೀರು ಸೇರಿಸಿ ಮತ್ತು ಬೇಯಲು ಬಿಡಿ

10. ಅಗತ್ಯಕ್ಕೆ ತಕ್ಕಂತೆ ನೀರು ಅಡ್ಜೆಸ್ಟ್‌ ಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ

11. ಸ್ವಲ್ಪ ಸಮಯದ ನಂತರ ಮೀನಿನ ತುಂಡುಗಳನ್ನು ಮಸಾಲೆಗೆ ಸೇರಿಸಿ

12. ಈ ಮೀನಿನ ತುಂಡುಗಳನ್ನು ದೋಸೆ ಹಲ್ಲೆ ಬಳಸಿ ನಿಧಾನವಾಗಿ ತಿರುಗಿಸಿ

13. ಕೊನೆಗೆ ಹುಣಿಸೆ ನೀರನ್ನು ಸೇರಿಸಿ ಮತ್ತೊಮ್ಮೆ ಮಿಕ್ಸ್‌ ಮಾಡಿ

14. ಸುಮಾರು 20 ನಿಮಿಷಗಳ ಕಾಲ ಮೀನು ಬೇಯುವರೆಗೂ ಕಡಿಮೆ ಉರಿಯಲ್ಲಿ ಕುಕ್‌ ಮಾಡಿ

ಬಿಸಿ ಅನ್ನಕ್ಕೆ ಈ ಕರಿ ಸೇರಿಸಿ ತಿಂದರೆ ಅದಕ್ಕಿಂತ ರುಚಿ ಮತ್ತೊಂದಿರುವುದಿಲ್ಲ.

Whats_app_banner