Ganesh Chaturthi 2022: ಮಹಾಗಣಪನ ಎಂಟು ಅವತಾರಗಳಿವು…
Ganesh Chaturthi 2022: ಗಣೇಶನ ಹಬ್ಬ ಬಂದೇ ಬಿಟ್ಟಿದೆ. ಮಹಾಗಣಪನ ಎಂಟು ಅವತಾರಗಳ ಬಗ್ಗೆ ತಿಳಿದುಕೊಳ್ಳದಿದ್ದರೆ ಹೇಗೆ? ಧೂಮ್ರವಾಹನನಿಂದ ವಕ್ತತುಂಡನ ತನಕ ಎಂಟು ಅವತಾರ ಮಹಾಗಣಪನದ್ದು. ಈ ಅವತಾರಗಳನ್ನೊಮ್ಮೆ ಗಮನಿಸೋಣ.
Ganesh Chaturthi 2022: ವಿಶೇಷ ದಿನ ಬಂದೇ ಬಿಟ್ಟಿದೆ. ಪ್ರತಿ ವರ್ಷ ದೇಶದಾದ್ಯಂತ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕೈಲಾಸ ಪರ್ವತದಿಂದ ತನ್ನ ತಾಯಿ ಪಾರ್ವತಿಯೊಂದಿಗೆ ಭೂಮಿಗೆ ಗಣೇಶನ ಮೊದಲ ಆಗಮನದ ದಿನವನ್ನು ಸಂಭ್ರಮಿಸುವ ಆಚರಣೆ ಇದು.
ಈ ದಿನ, ಗಣೇಶನ ಬೃಹತ್ ಮೂರ್ತಿಗಳನ್ನು ಪೂಜಿಸಲಾಗುತ್ತದೆ. ಸಾರ್ವಜನಿಕ ಗಣೇಶೋತ್ಸವ ಆಚರಣೆ ಮೂಲಕ ಸಾಮುದಾಯಿಕ ಸಾಮರಸ್ಯ ಸಾರಲಾಗುತ್ತದೆ. ಗಣೇಶನ ಭಕ್ತರು ಹೊಸ ಉಡುಪು ತೊಟ್ಟು ಗಣೇಶ ಹಬ್ಬ ಆಚರಿಸುತ್ತ ಉಪವಾಸವನ್ನು ಕೂಡ ಮಾಡುತ್ತಾರೆ. ಭಗವಂತನನ್ನು ಪೂಜಿಸುತ್ತ ರುಚಿಕರ ಸಿಹಿ ಭಕ್ಷ್ಯಗಳನ್ನು ಸವಿಯುತ್ತಾರೆ.
ಈ ವರ್ಷ ಗಣೇಶ ಚತುರ್ಥಿಯನ್ನು ಆಗಸ್ಟ್ 31 ರಂದು ಅಂದರೆ ನಾಳೆಯೇ ಚೌತಿ ಆಚರಣೆ. ಈ ಸಂದರ್ಭದಲ್ಲಿ ಗಣೇಶನ ಎಲ್ಲ ಎಂಟು ಅವತಾರಗಳನ್ನು ನೋಡೋಣ ಮತ್ತು ಅವು ಏನನ್ನು ಸಂಕೇತಿಸುತ್ತವೆ ಎಂಬುದನ್ನು ತಿಳಿಯೋಣ.
ವಕ್ರತುಂಡ: ಭಗವಾನ್ ಗಣೇಶನ ಮೊದಲ ಅವತಾರ - ವಕ್ರತುಂಡ. ರಾಕ್ಷಸ ಮತ್ಸರವನ್ನು ನಿಗ್ರಹಿಸಲು, ಮೂರು ಲೋಕಗಳ ಮತ್ತು ದೇವತೆಗಳ ರಾಜ್ಯಗಳ ಕಳೆದುಹೋದ ವೈಭವವನ್ನು ಮರಳಿ ತಂದ ಅವತಾರವಾಗಿ ಹೆಸರುವಾಸಿ.
ಏಕದಂತ: ಏಕ ಎಂದರೆ ಮಾಯೆ ಮತ್ತು ದಂತವು ಸತ್ಯವನ್ನು ಸೂಚಿಸುತ್ತದೆ. ಏಕದಂತ ಎಂದು ಕರೆಯಲ್ಪಡುವ ಗಣೇಶನ ಎರಡನೇ ಅವತಾರವು ಪರಮ ಸತ್ಯವನ್ನು ಸಂಕೇತಿಸುತ್ತದೆ.
ಮಹೋದರ: ಮಹೋದರವು ಎಲ್ಲ ಪಾಪಗಳಿಗೆ ಕ್ಷಮೆಯನ್ನು ಸಂಕೇತಿಸುವ ಭಗವಾನ್ ಗಣೇಶನ ಮೂರನೇ ಅವತಾರ. ಪುರಾಣಗಳ ಪ್ರಕಾರ, ಮಹೋದರನು ಭ್ರಮೆಯ ರಾಕ್ಷಸ ಮೋಹಾಸುರನನ್ನು ಎದುರಿಸಿದನು. ಅವನ ಎಲ್ಲ ಪಾಪಗಳನ್ನು ಕ್ಷಮಿಸಿ ಅವನನ್ನು ಪಾತಾಳ ಲೋಕಕ್ಕೆ ಕಳುಹಿಸಿದ ಅವತಾರ.
ಗಜಾನನ: ಗಜಾನನ ಎಂದರೆ ಆನೆಯ ಮುಖವುಳ್ಳ ಅವತಾರ. ಲೋಕದಲ್ಲಿನ ದುರಾಶೆಯ ವಿರುದ್ಧ ಹೋರಾಡಲು ಮತ್ತು ಅದನ್ನು ಪಾಪಗಳಿಂದ ಮುಕ್ತಗೊಳಿಸಲು ಗಣೇಶ ಧರಿಸಿದ ಅವತಾರ ಇದು.
ಲಂಬೋದರ: ಕೋಪದ ರಾಕ್ಷಸ ಕ್ರೋಧಾಸುರನ ವಿರುದ್ಧ ಹೋರಾಡಲು ಗಣೇಶನು ಲಂಬೋದರನ ಅವತಾರ ತಾಳಿದ. ಗಣೇಶನ ಈ ಅವತಾರವು ಕೋಪವನ್ನು ಸಂಕೋಲೆ ಮತ್ತು ಜಗತ್ತನ್ನು ಅದರಿಂದ ಮುಕ್ತಗೊಳಿಸುತ್ತದೆ.
ವಿಕಟ: ವಿಷ್ಣುವಿನ ಬೀಜಗಳಿಂದ ಹುಟ್ಟಿದ ಆಸೆಯ ರಾಕ್ಷಸ ಕಂಸುರನಿಂದ ಎಲ್ಲ ದೇವತೆಗಳು ಪೀಡಿಸಲ್ಪಟ್ಟಾಗ ಅವರ ಪ್ರಾರ್ಥನೆಯ ಫಲವಾಗಿ ಕಾಣಿಸಿಕೊಂಡ ಗಣೇಶನ ಅವತಾರ ಇದು.
ವಿಘ್ನರಾಜ: ಭಗವಾನ್ ಗಣೇಶನ ಅತ್ಯಂತ ಜನಪ್ರಿಯ ಅವತಾರಗಳಲ್ಲಿ ಒಂದು. ವಿಘ್ನರಾಜನು ಎಲ್ಲ ಅಡೆತಡೆಗಳನ್ನು ನಿವಾರಿಸುವವನು. ಈ ಅವತಾರದಲ್ಲಿರುವ ಗಣೇಶನು ನಮ್ಮನ್ನು ಯಶಸ್ಸಿನ ಹಾದಿಗೆ ಕರೆದೊಯ್ಯುತ್ತಾನೆ ಎಂಬುದು ನಂಬಿಕೆ.
ಧೂಮ್ರಾವಣ: ಗಣೇಶನ ಈ ಅವತಾರವು ಸ್ವಯಂ ವ್ಯಾಮೋಹದ ರಾಕ್ಷಸ ಅಹಂಕಾರಸುರನನ್ನು ಸೋಲಿಸಿತು.
ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿ ಫಾಲೋಮಾಡಿ.