ನಿಮಗೆ ಉತ್ತಮ ಆರೋಗ್ಯ ನೀಡುವ ಬೀಜಗಳಿವು..ಇದರ ಪ್ರಯೋಜನಗಳೇನು ತಿಳಿದುಕೊಳ್ಳಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿಮಗೆ ಉತ್ತಮ ಆರೋಗ್ಯ ನೀಡುವ ಬೀಜಗಳಿವು..ಇದರ ಪ್ರಯೋಜನಗಳೇನು ತಿಳಿದುಕೊಳ್ಳಿ

ನಿಮಗೆ ಉತ್ತಮ ಆರೋಗ್ಯ ನೀಡುವ ಬೀಜಗಳಿವು..ಇದರ ಪ್ರಯೋಜನಗಳೇನು ತಿಳಿದುಕೊಳ್ಳಿ

  • ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವವರು, ಆರೋಗ್ಯ ವೃದ್ಧಿಸುವ ಆಹಾರ ಪದಾರ್ಥಗಳನ್ನೇ ಹೆಚ್ಚಾಗಿ ಸೇವಿಸುತ್ತಾರೆ. ಅದರಲ್ಲಿ ಚಿಯಾಸೀಡ್, ಫ್ಲಾಕ್ಸ್ ಸೀಡ್, ಎಳ್ಳು ಹಾಗೂ ಇನ್ನಿತರ ಪದಾರ್ಥಗಳು ನಿಮಗೆ ಬಹಳ ಆರೋಗ್ಯ ಲಾಭಗಳನ್ನು ನೀಡುತ್ತವೆ. ಇದರ ಬಗ್ಗೆ ನ್ಯೂಟ್ರಿಷಿಯನಿಸ್ಟ್ ಭಕ್ತಿ ಕಪೂರ್ ನಿಮಗೆ ತಿಳಿಸಿಕೊಡಲಿದ್ದಾರೆ.

ಈ ಬೀಜಗಳು ಅಧಿಕ ನಾರಿನ ಅಂಶವನ್ನು ಹೊಂದಿದೆ. ಜೊತೆಗೆ ಹೆಚ್ಚಿನ ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಕ್ಯಾಲ್ಸಿಯಂ, ಮ್ಯಾಂಗನೀಸ್​​, ಮೆಗ್ನೀಷಿಯಂ, ರಂಜಕ ಸೇರಿದಂತೆ ನಾನಾ ಪೋಷಕಾಂಶಗಳಿಂದ ಸಮೃದ್ಧಿಯಾಗಿವೆ. ಬನ್ನಿ ಈ ಬೀಜಗಳ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ.
icon

(1 / 6)

ಈ ಬೀಜಗಳು ಅಧಿಕ ನಾರಿನ ಅಂಶವನ್ನು ಹೊಂದಿದೆ. ಜೊತೆಗೆ ಹೆಚ್ಚಿನ ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಕ್ಯಾಲ್ಸಿಯಂ, ಮ್ಯಾಂಗನೀಸ್​​, ಮೆಗ್ನೀಷಿಯಂ, ರಂಜಕ ಸೇರಿದಂತೆ ನಾನಾ ಪೋಷಕಾಂಶಗಳಿಂದ ಸಮೃದ್ಧಿಯಾಗಿವೆ. ಬನ್ನಿ ಈ ಬೀಜಗಳ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ.(Pixabay)

ಚಿಯಾ ಸೀಡ್ಸ್​ಇವು ದೇಹದ ಕೊಬ್ಬನ್ನು ಕಡಿಮೆ ಮಾಡುವುದಲ್ಲದೆ, ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಚಿಯಾ ಸೀಡ್​​ ಒಮೆಗಾ -3 ಕೊಬ್ಬಿನಾಮ್ಲಗಳಿಂದ ತುಂಬಿದೆ. ಇದು ಹೃದ್ರೋಗ ಮತ್ತು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ.
icon

(2 / 6)

ಚಿಯಾ ಸೀಡ್ಸ್​ಇವು ದೇಹದ ಕೊಬ್ಬನ್ನು ಕಡಿಮೆ ಮಾಡುವುದಲ್ಲದೆ, ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಚಿಯಾ ಸೀಡ್​​ ಒಮೆಗಾ -3 ಕೊಬ್ಬಿನಾಮ್ಲಗಳಿಂದ ತುಂಬಿದೆ. ಇದು ಹೃದ್ರೋಗ ಮತ್ತು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ.(Pixabay)

ಫ್ಲಾಕ್ಸ್ ಸೀಡ್ಸ್​​​​​​ ಫ್ಲಾಕ್ಸ್ ಸೀಡ್ಸನ್ನು ಕನ್ನಡದಲ್ಲಿ ಅಗಸೆ ಬೀಜ ಎಂದು ಕರೆಯಲಾಗುತ್ತದೆ. ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಇತರ ಖನಿಜಗಳು ಅಧಿಕವಾಗಿವೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ನಿಮ್ಮ ಪ್ರತಿದಿನದ ಆಹಾರದಲ್ಲಿ1/4 ಟೀ ಸ್ಪೂನ್​​​​​ನಷ್ಟು ಅಗಸೆ ಬೀಜಗಳನ್ನು ಸೇರಿಸಬಹುದು ಅಥವಾ ಮಿಲ್ಕ್​ ಶೇಕ್ , ಸಲಾಡ್​​ ಜೊತೆ ಬಳಸಬಹುದು.
icon

(3 / 6)

ಫ್ಲಾಕ್ಸ್ ಸೀಡ್ಸ್​​​​​​ ಫ್ಲಾಕ್ಸ್ ಸೀಡ್ಸನ್ನು ಕನ್ನಡದಲ್ಲಿ ಅಗಸೆ ಬೀಜ ಎಂದು ಕರೆಯಲಾಗುತ್ತದೆ. ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಇತರ ಖನಿಜಗಳು ಅಧಿಕವಾಗಿವೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ನಿಮ್ಮ ಪ್ರತಿದಿನದ ಆಹಾರದಲ್ಲಿ1/4 ಟೀ ಸ್ಪೂನ್​​​​​ನಷ್ಟು ಅಗಸೆ ಬೀಜಗಳನ್ನು ಸೇರಿಸಬಹುದು ಅಥವಾ ಮಿಲ್ಕ್​ ಶೇಕ್ , ಸಲಾಡ್​​ ಜೊತೆ ಬಳಸಬಹುದು.(Pixabay)

ಎಳ್ಳು ಇದರಲ್ಲಿ ಸತು, ಸೆಲೆನಿಯಮ್, ತಾಮ್ರ, ಕಬ್ಬಿಣ, ವಿಟಮಿನ್ ಬಿ 6 ಅಂಶ ಹಾಗೂ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಂತಹ ಹಲವಾರು ಪೋಷಕಾಂಶಗಳಿವೆ. ಸ್ವಲ್ಪ ಪ್ರಮಾಣದ ಎಳ್ಳನ್ನು ಪ್ರತಿದಿನ ಸೇವಿಸುವುದರಿಂದ ಟೈಪ್ 2 ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು. ಇದನ್ನು ಮಿಲ್ಕ್​ ಶೇಕ್, ಕೇಕ್, ಸಲಾಡ್​​​ ಕಟ್ಲೆಟ್, ರೊಟ್ಟಿ ಸೇರಿದಂತೆ ನಿಮ್ಮ ಪ್ರತಿದಿನದ ಆಹಾರದೊಂದಿಗೆ ತಿನ್ನಬಹುದು.
icon

(4 / 6)

ಎಳ್ಳು ಇದರಲ್ಲಿ ಸತು, ಸೆಲೆನಿಯಮ್, ತಾಮ್ರ, ಕಬ್ಬಿಣ, ವಿಟಮಿನ್ ಬಿ 6 ಅಂಶ ಹಾಗೂ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಂತಹ ಹಲವಾರು ಪೋಷಕಾಂಶಗಳಿವೆ. ಸ್ವಲ್ಪ ಪ್ರಮಾಣದ ಎಳ್ಳನ್ನು ಪ್ರತಿದಿನ ಸೇವಿಸುವುದರಿಂದ ಟೈಪ್ 2 ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು. ಇದನ್ನು ಮಿಲ್ಕ್​ ಶೇಕ್, ಕೇಕ್, ಸಲಾಡ್​​​ ಕಟ್ಲೆಟ್, ರೊಟ್ಟಿ ಸೇರಿದಂತೆ ನಿಮ್ಮ ಪ್ರತಿದಿನದ ಆಹಾರದೊಂದಿಗೆ ತಿನ್ನಬಹುದು.(Pixabay)

ಕುಂಬಳಕಾಯಿ ಬೀಜ ಇದರಲ್ಲಿ ಹೆಚ್ಚಿನ ಫಾಸ್ಫರಸ್, ಮೆಗ್ನೀಷಿಯಮ್ ಮತ್ತು ಹೃದಯಕ್ಕೆ ಬೇಕಾದ ಆರೋಗ್ಯಕರ ಕೊಬ್ಬುಗಳಿವೆ. ಇದನ್ನು ನೀವು ಹಾಗೇ ತಿನ್ನಬಹುದು ಅಥವಾ ನಿಮ್ಮ ಆಹಾರದೊಂದಿಗೆ ಸೇವಿಸಬಹುದು.
icon

(5 / 6)

ಕುಂಬಳಕಾಯಿ ಬೀಜ ಇದರಲ್ಲಿ ಹೆಚ್ಚಿನ ಫಾಸ್ಫರಸ್, ಮೆಗ್ನೀಷಿಯಮ್ ಮತ್ತು ಹೃದಯಕ್ಕೆ ಬೇಕಾದ ಆರೋಗ್ಯಕರ ಕೊಬ್ಬುಗಳಿವೆ. ಇದನ್ನು ನೀವು ಹಾಗೇ ತಿನ್ನಬಹುದು ಅಥವಾ ನಿಮ್ಮ ಆಹಾರದೊಂದಿಗೆ ಸೇವಿಸಬಹುದು.(Pixabay)

ಸೂರ್ಯಕಾಂತಿ ಬೀಜಇದರಲ್ಲಿ ಮೊನೊಸಾಚುರೇಟೆಡ್ ಕೊಬ್ಬುಗಳು, ವಿಟಮಿನ್ ಇ ಮತ್ತು ಪ್ರೊಟೀನ್​​​ಗಳು ಅಧಿಕವಾಗಿದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಸಿ-ರಿಯಾಕ್ಟಿವ್ ಪ್ರೋಟೀನ್ ಕಡಿಮೆಯಾಗುತ್ತದೆ. ಸೂರ್ಯಕಾಂತಿ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ತಿನ್ನಬಹುದು. ಮೊಸರು ಅಥವಾ ಸಲಾಡ್​​​ಗೆ ಸೇರಿಸಿ ಸೇವಿಸಬಹುದು. ಇದನ್ನು ಹುರಿದು ಕೂಡಾ ತಿನ್ನಬಹುದು.
icon

(6 / 6)

ಸೂರ್ಯಕಾಂತಿ ಬೀಜಇದರಲ್ಲಿ ಮೊನೊಸಾಚುರೇಟೆಡ್ ಕೊಬ್ಬುಗಳು, ವಿಟಮಿನ್ ಇ ಮತ್ತು ಪ್ರೊಟೀನ್​​​ಗಳು ಅಧಿಕವಾಗಿದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಸಿ-ರಿಯಾಕ್ಟಿವ್ ಪ್ರೋಟೀನ್ ಕಡಿಮೆಯಾಗುತ್ತದೆ. ಸೂರ್ಯಕಾಂತಿ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ತಿನ್ನಬಹುದು. ಮೊಸರು ಅಥವಾ ಸಲಾಡ್​​​ಗೆ ಸೇರಿಸಿ ಸೇವಿಸಬಹುದು. ಇದನ್ನು ಹುರಿದು ಕೂಡಾ ತಿನ್ನಬಹುದು.(Pixabay)


ಇತರ ಗ್ಯಾಲರಿಗಳು