ದೃಷ್ಟಿ ಸುಧಾರಣೆಯಿಂದ ಹೃದಯದ ಆರೋಗ್ಯದವರೆಗೆ: ಖಾಲಿ ಹೊಟ್ಟೆಯಲ್ಲಿ ಕ್ಯಾರೆಟ್ ಜ್ಯೂಸ್ ಸೇವಿಸುವುದರ ಪ್ರಯೋಜನಗಳಿವು-health drinking carrot juice on an empty stomach here are the 7 reasons why should drink carrot juice daily prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ದೃಷ್ಟಿ ಸುಧಾರಣೆಯಿಂದ ಹೃದಯದ ಆರೋಗ್ಯದವರೆಗೆ: ಖಾಲಿ ಹೊಟ್ಟೆಯಲ್ಲಿ ಕ್ಯಾರೆಟ್ ಜ್ಯೂಸ್ ಸೇವಿಸುವುದರ ಪ್ರಯೋಜನಗಳಿವು

ದೃಷ್ಟಿ ಸುಧಾರಣೆಯಿಂದ ಹೃದಯದ ಆರೋಗ್ಯದವರೆಗೆ: ಖಾಲಿ ಹೊಟ್ಟೆಯಲ್ಲಿ ಕ್ಯಾರೆಟ್ ಜ್ಯೂಸ್ ಸೇವಿಸುವುದರ ಪ್ರಯೋಜನಗಳಿವು

ಕ್ಯಾರೆಟ್ ಜ್ಯೂಸ್ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ಜೀವಸತ್ವಗಳು,ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳೊಂದಿಗೆ ಸಮೃದ್ಧವಾಗಿರುವ ಈ ಪಾನೀಯವು ಆರೋಗ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ. ಖಾಲಿ ಹೊಟ್ಟೆಯಲ್ಲಿ ಕ್ಯಾರೆಟ್ ಪಾನೀಯ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ:

ಖಾಲಿ ಹೊಟ್ಟೆಯಲ್ಲಿ ಕ್ಯಾರೆಟ್ ಪಾನೀಯ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ:
ಖಾಲಿ ಹೊಟ್ಟೆಯಲ್ಲಿ ಕ್ಯಾರೆಟ್ ಪಾನೀಯ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ: (Pixabay)

ಕ್ಯಾರೆಟ್ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ದೃಷ್ಟಿ ಸುಧಾರಣೆ, ತ್ವಚೆಯ ಹೊಳಪಿಗೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುವ ಅನೇಕ ಜೀವಸತ್ವಗಳನ್ನು ಕ್ಯಾರೆಟ್ ನೀಡುತ್ತವೆ. ಹೀಗಾಗಿ ಕ್ಯಾರೆಟ್ ಜ್ಯೂಸ್ ಮಾಡಿ ಸೇವಿಸುವುದರಿಂದ ಪೋಷಕಾಂಶಗಳನ್ನು ಸುಲಭವಾಗಿ ಪಡೆಯಬಹುದು. ಕ್ಯಾರೆಟ್ ರಸವು ಪೌಷ್ಟಿಕ ಪಾನೀಯವಾಗಿದ್ದು, ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತದೆ. ಇದು ವಿಶೇಷವಾಗಿ ಬೀಟಾ ಕ್ಯಾರೋಟಿನ್‌ನಲ್ಲಿ ಸಮೃದ್ಧವಾಗಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹ ಕ್ಯಾರೆಟ್ ಪ್ರಯೋಜನಕಾರಿಯಾಗಿದೆ. ಕ್ಯಾರೆಟ್ ರಸ ಮಾಡುವಾಗ ಅದಕ್ಕೆ ಸಕ್ಕರೆ ಅಥವಾ ಇನ್ನಿತರೆ ಕೃತಕ ಪದಾರ್ಥಗಳನ್ನು ಹಾಕದೇ ಹಾಗೆಯೇ ಸೇವಿಸುವುದರಿಂದ ಪ್ರಯೋಜನವನ್ನು ಪಡೆಯಬಹುದು. ಅದರಲ್ಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಇನ್ನೂ ಒಳ್ಳೆಯದು. ಕ್ಯಾರೆಟ್ ಜ್ಯೂಸ್ ಮಾಡುವ ಮುನ್ನ ತರಕಾರಿಯನ್ನು ಚೆನ್ನಾಗಿ ತೊಳೆದು ಬಳಿಕ ತಯಾರಿಸುವುದು ಉತ್ತಮ.

ಕ್ಯಾರೆಟ್ ಜ್ಯೂಸ್ ಅನೇಕ ಪ್ರಯೋಜನಗಳನ್ನು ಒದಗಿಸುವ ಜೀವಸತ್ವಗಳು ಮತ್ತು ಪೋಷಕಾಂಶಗಳಿಂದ ತುಂಬಿದೆ. ಪ್ರತಿದಿನ ಒಂದು ಲೋಟ ಅಥವಾ ಎರಡು ಕ್ಯಾರೆಟ್ ಜ್ಯೂಸ್ ಅನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಕ್ಯಾರೆಟ್ ರಸ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದು ಇಲ್ಲಿದೆ.

ಕ್ಯಾರೆಟ್‌ ಜ್ಯೂಸ್‌ನ ಆರೋಗ್ಯ ಪ್ರಯೋಜನಗಳು

ದೃಷ್ಟಿಯನ್ನು ಸುಧಾರಿಸಲು ಸಹಕಾರಿ: ಕ್ಯಾರೆಟ್‌ನಲ್ಲಿ ವಿಟಮಿನ್ ಎ ಅಂಶ ಹೆಚ್ಚಿದ್ದು, ಇದು ನಿಮ್ಮ ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ. ಆಹಾರದಲ್ಲಿ ವಿಟಮಿನ್ ಎ ಕೊರತೆಯು ದೃಷ್ಟಿ ಕ್ಷೀಣಿಸಲು ಅಥವಾ ಮಸುಕಾಗಲು ಕಾರಣವಾಗಬಹುದು. ಹೀಗಾಗಿ ದೃಷ್ಟಿ ಸುಧಾರಿಸಲು ಕ್ಯಾರೆಟ್ ರಸವನ್ನು ಸೇವಿಸುವುದರಿಂದ ಪ್ರಯೋಜನವನ್ನು ಪಡೆಯಬಹುದು.

ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುತ್ತದೆ: ಕ್ಯಾರೆಟ್ ನೈಸರ್ಗಿಕ ಸಕ್ಕರೆ ಅಂಶವನ್ನು ಹೊಂದಿದ್ದರೂ, ಇತರ ರಸಗಳಿಗಿಂತ ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುತ್ತವೆ. ವಿಶೇಷವಾಗಿ ಸೇಬು ಅಥವಾ ಕಿತ್ತಳೆ ರಸದಂತಹ ಹಣ್ಣಿನ ರಸಗಳಿಗಿಂತ ಕಡಿಮೆ ಮಟ್ಟದ ಸಕ್ಕರೆ ಅಂಶವನ್ನು ಹೊಂದಿದೆ. ಶುದ್ಧ ಕ್ಯಾರೆಟ್ ರಸವು ಕನಿಷ್ಠ ಸಕ್ಕರೆಯನ್ನು ಹೊಂದಿರುತ್ತದೆ. ಮಧುಮೇಹಿಗಳು ಈ ಕ್ಯಾರೆಟ್ ರಸವನ್ನು ಸೇವಿಸುವ ಮುನ್ನ ತಜ್ಞ ವೈದ್ಯರ ಮಾರ್ಗದರ್ಶನ ಪಡೆಯುವುದು ಉತ್ತಮ.

ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಸಹಕಾರಿ: ಕ್ಯಾರೆಟ್ ರಸವು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ದೇಹದಲ್ಲಿನ ಸೋಂಕುಗಳ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳನ್ನು ಒಳಗೊಂಡಂತೆ ಜೀವಕೋಶದ ಆರೋಗ್ಯವನ್ನು ಸುಧಾರಿಸುತ್ತದೆ. ವಿಟಮಿನ್ ಸಿ ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಆರೋಗ್ಯಕರ ರಕ್ತವನ್ನು ಉತ್ಪಾದಿಸಲು ಅನುವು ಮಾಡಿಕೊಡುತ್ತದೆ. ಇದರ ಸೇವನೆಯು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ.

ಕ್ಯಾನ್ಸರ್‌ಗಳನ್ನು ತಡೆಗಟ್ಟಲು ಸಹಕಾರಿ: ಕ್ಯಾರೆಟ್ ರಸದಲ್ಲಿರುವ ಕೆಲವು ಸಂಯುಕ್ತಗಳು ಕ್ಯಾನ್ಸರ್ ತಡೆಗಟ್ಟಲು ಸಹ ಸಹಾಯ ಮಾಡುತ್ತದೆ. ಕ್ಯಾರೆಟ್ ರಸವನ್ನು ಸೇವಿಸುವುದರಿಂದ ಕ್ಯಾನ್ಸರ್‌ನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಕೆಲವೊಂದು ಅಧ್ಯಯನಗಳಿಂದ ತಿಳಿದು ಬಂದಿದೆ.

ತ್ವಚೆಯ ಕಾಳಜಿಗೆ ಸಹಕಾರಿ: ಕ್ಯಾರೆಟ್‌ನಲ್ಲಿ ಬೀಟಾ ಕ್ಯಾರೋಟಿನ್ ಇದ್ದು, ಇದು ತ್ವಚೆಯನ್ನು ಸೂರ್ಯನ ಬಿಸಿಲಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಬೀಟಾ ಕ್ಯಾರೋಟಿನ್ ಸೇವನೆಯು ಸನ್ಬರ್ನ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಒಟ್ಟಾರೆಯಾಗಿ ಜೀವಕೋಶದ ಆರೋಗ್ಯವನ್ನು ಸುಧಾರಿಸುತ್ತದೆ. ತ್ವಚೆಗೆ ಆರೋಗ್ಯಕರ ಹೊಳಪು ನೀಡುವಲ್ಲಿ ಸಹಾಯಕವಾಗಿದೆ.

ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ: ಹೃದಯದ ಆರೋಗ್ಯಕ್ಕೆ ಪೂರಕವಾದ ವಿಟಮಿನ್, ಪೊಟ್ಯಾಸಿಯಮ್ ಅನ್ನು ಕ್ಯಾರೆಟ್ ರಸವು ಒದಗಿಸುತ್ತದೆ. ಸಾಕಷ್ಟು ಪೊಟ್ಯಾಸಿಯಮ್ ಅನ್ನು ಪಡೆಯುವುದರಿಂದ ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.

ಹೈಡ್ರೇಟ್ ಮಾಡಲು ಸಹಕಾರಿ: ದೇಹವು ಹೈಡ್ರೇಟೆಡ್ ಆಗಿರುವುದು ಬಹಳ ಮುಖ್ಯ. ಕೇವಲ ನೀರು ಕುಡಿಯುವುದರಿಂದಲೇ ದೇಹ ಹೈಡ್ರೇಟ್ ಆಗಿರಬೇಕೆಂದಿಲ್ಲ. ದೇಹಕ್ಕೆ ಪ್ರಮುಖ ಪೋಷಕಾಂಶಗಳನ್ನು ಒದಗಿಸುವ ಹಣ್ಣು ಮತ್ತು ತರಕಾರಿ ರಸಗಳು ಹೈಡ್ರೀಕರಿಸಲು ಸಹಾಯ ಮಾಡುತ್ತದೆ. ಒಂದು ಕಪ್ ಕ್ಯಾರೆಟ್ ರಸದಲ್ಲಿ 7.4 ರಷ್ಟು ನೀರಿದ್ದು, 156 ಮಿಲಿಗ್ರಾಂ ಸೋಡಿಯಂ ಅನ್ನು ಹೊಂದಿರುತ್ತದೆ. ಹೀಗಾಗಿ ದೇಹವನ್ನು ಹೈಡ್ರೇಟ್ ಮಾಡುವಲ್ಲಿ ಕ್ಯಾರೆಟ್ ರಸವು ಬಹಳ ಪ್ರಯೋಜನಕಾರಿಯಾಗಿದೆ.

mysore-dasara_Entry_Point