Benefits of Ghee Dates: ಖರ್ಜೂರವನ್ನು ತುಪ್ಪದಲ್ಲಿ ನೆನೆಸಿ ತಿನ್ನುವುದರ ಹಿಂದಿದೆ ನೂರೆಂಟು ಆರೋಗ್ಯ ಪ್ರಯೋಜನ
Healthy Food: ಆಯುರ್ವೇದದಲ್ಲಿ ಖರ್ಜೂರ ಹಾಗೂ ತುಪ್ಪಕ್ಕೆ ಸಾಕಷ್ಟು ಪ್ರಾಮುಖ್ಯತೆಯಿದೆ. ಇವುಗಳನ್ನು ಒಟ್ಟಾಗಿ ಸೇರಿಸಿ ಸೇವಿಸುವುದರಿಂದ ಎಷ್ಟೆಲ್ಲಾ ರೀತಿಯಲ್ಲಿ ಆರೋಗ್ಯ ಪ್ರಯೋಜನವಿದೆ ಎಂಬುದು ನಿಮಗೆ ತಿಳಿದಿದೆಯೇ ?
Healthy Food: ಖರ್ಜೂರ ಹಾಗೂ ತುಪ್ಪ ಶತ ಶತಮಾನಗಳಿಂದ ಬಳಕೆಯಲ್ಲಿರುವ ಎರಡು ಆಹಾರ ಪದಾರ್ಥವಾಗಿದೆ. ಈ ಎರಡರ ಮಿಶ್ರಣವು ಇದೀಗ ಆರೋಗ್ಯ ಲೋಕದಲ್ಲೊಂದು ಸೋಜಿಗವನ್ನೇ ಸೃಷ್ಟಿಸಿದೆ. ತುಪ್ಪದಲ್ಲಿ ನೆನೆಸಿದ ಖರ್ಜೂರ ಸೇವಿಸುವುದರಿಂದ ಆರ್ಯುವೇದದ ಪ್ರಕಾರ ಸಾಕಷ್ಟು ರೀತಿಯಲ್ಲಿ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅನೇಕ ಸಮಯದಿಂದ ಇದನ್ನು ಆರ್ಯುವೇದ ಚಿಕಿತ್ಸೆಯ ರೂಪದಲ್ಲಿ ಬಳಕೆ ಮಾಡಲಾಗುತ್ತಿದೆ. ಹಾಗಾದರೆ ತುಪ್ಪದಲ್ಲಿ ನೆನೆಸಿದ ಖರ್ಜೂರದಿಂದ ಯಾವೆಲ್ಲ ಆರೋಗ್ಯ ಪ್ರಯೋಜನವಿದೆ ನೋಡೋಣ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : ತುಪ್ಪದಲ್ಲಿ ನೆನೆಸಿದ ಖರ್ಜೂರವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇವುಗಳಲ್ಲಿ ಇರುವ ಆಂಟಿ ಆಕ್ಸಿಡಂಟ್ ಗುಣಗಳು ಹಾಗೂ ವಿಟಮಿನ್ ಎ ಹಾಗೂ ಸಿ ದೇಹಕ್ಕೆ ಉತ್ತಮ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇವು ಎರಡು ಒಟ್ಟಿಗೆ ಸೇರಿದಾಗ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತದೆ. ಇದರಿಂದ ವಿವಿಧ ಸೋಂಕುಗಳಿಂದ ದೇಹವು ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ.
ಹೃದಯದ ಆರೋಗ್ಯಕ್ಕೆ ಉತ್ತೇಜನ : ಖರ್ಜೂರ ಹಾಗೂ ತುಪ್ಪವನ್ನು ಪ್ರತ್ಯೇಕವಾಗಿ ಸೇವಿಸುವುದರಿಂದಲೂ ಹೃದಯದ ಆರೋಗ್ಯ ವೃದ್ಧಿಸುತ್ತದೆ. ಖರ್ಜೂರದಲ್ಲಿ ಪೊಟ್ಯಾಷಿಯಂ ಹಾಗೂ ಮೆಗ್ನಿಷಿಯಂ ಅಗಾಧ ಪ್ರಮಾಣದಲ್ಲಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಹಾಗೂ ಹೃದ್ರೋಗದ ಅಪಾಯಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ತುಪ್ಪದಲ್ಲಿ ಆರೋಗ್ಯಕರ ಕೊಬ್ಬು ಇರುತ್ತದೆ. ದೇಹದಲ್ಲಿ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುತ್ತದೆ. ತುಪ್ಪದಲ್ಲಿ ನೆನೆಸಿದ ಖರ್ಜೂರ ಕೂಡ ನಿಮ್ಮ ಹೃದಯದ ಆರೋಗ್ಯಕ್ಕೆ ಇನ್ನಷ್ಟು ಬಲ ನೀಡುತ್ತದೆ.
ಹಾರ್ಮೋನ್ ಅಸಮತೋಲನ ನಿಯಂತ್ರಣ : ತುಪ್ಪದಲ್ಲಿ ನೆನೆಸಿದ ಖರ್ಜೂರವು ಪುರುಷರು ಹಾಗೂ ಮಹಿಳೆಯರಲ್ಲಿ ಹಾರ್ಮೋN ಅಸಮತೋಲನವನ್ನು ನಿಯಂತ್ರಿಸುತ್ತದೆ. ಖರ್ಜೂರದಲ್ಲಿರುವ ವಿಟಮಿನ್ ಅಂಶ ಕೂಡ ಹಾರ್ಮೋನ್ಗಳನ್ನು ಸರಿದೂಗಿಸುತ್ತದೆ. ತುಪ್ಪವು ದೇಹದಲ್ಲಿ ಹಾರ್ಮೋನ್‌ಗಳ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಋತುಬಂಧದ ಅವಧಿಯಲ್ಲಿರುವ ಮಹಿಳೆಯರು ಖರ್ಜೂರ ಹಾಗೂ ತುಪ್ಪವನ್ನು ಸೇವನೆ ಮಾಡುವುದು ಒಳ್ಳೆಯದು.
ಇದನ್ನೂ ಓದಿ: ಚಳಿಗಾಲದಲ್ಲಿ ಈ ಆಹಾರಗಳನ್ನು ಸೇವಿಸಬೇಕು; ಏಕೆಂದರೆ
ಶಕ್ತಿ ಹೆಚ್ಚಿಸುತ್ತದೆ : ಆಯುರ್ವೇದ ವೈದ್ಯರು ಶತ ಶತಮಾನಗಳಿಂದ ನೈಸರ್ಗಿಕವಾಗಿ ದೈಹಿಕ ಶಕ್ತಿಯನ್ನು ಹೆಚ್ಚಿಸಲು ಶಿಫಾರಸು ಮಾಡುತ್ತಲೇ ಬರುತ್ತಿದ್ದಾರೆ. ಖರ್ಜೂರಗಳು ನೈಸರ್ಗಿಕ ಸಕ್ಕರೆಯ ಮೂಲವಾಗಿದೆ. ಇವುಗಳು ದೇಹಕ್ಕೆ ಅಪಾರ ಶಕ್ತಿಯನ್ನು ನೀಡುತ್ತವೆ. ತುಪ್ಪವು ದೇಹದಲ್ಲಿ ಆರೋಗ್ಯಕರ ಕೊಬ್ಬನ್ನು ಒದಗಿಸುತ್ತದೆ. ಬ್ಯಟರಿಕ್ ಆಮ್ಲದ ಮೂಲವಾಗಿದೆ. ಇದು ದೇಹಕ್ಕೆ ನಿರಂತರ ಶಕ್ತಿಯನ್ನು ನೀಡುತ್ತದೆ.
ಇದನ್ನು ತಯಾರಿಸುವುದು ಹೇಗೆ ?
ತುಪ್ಪದಲ್ಲಿ ನೆನೆಸಿದ ಖರ್ಜೂರವನ್ನು ತಯಾರಿಸುವುದು ತುಂಬಾನೇ ಸುಲಭ. ಇದನ್ನು ಮನೆಯಲ್ಲಿಯೇ ನೀವು ತಯಾರಿಸಬೇಕು. ಇದನ್ನು ಮಾಡಲು ಬೇಕಾಗುವ ಸಾಮಗ್ರಿಗಳ ವಿವರ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು : ಬೀಜ ತೆಗೆದ ಖರ್ಜೂರ 10- 14, ತುಪ್ಪ 2 ಚಮಚ
ಮಾಡುವ ವಿಧಾನ : ಬೀಜ ತೆಗೆದ ಖರ್ಜೂರಗಳನ್ನು ಸುಮಾರು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಖರ್ಜೂರವನ್ನು ನೀರಿನಿಂದ ತೆಗೆದು ಒಣಗಲು ಬಿಡಿ. ಒಂದು ಪಾತ್ರೆಯನ್ನು ತೆಗೆದುಕೊಂಡು ಕಡಿಮೆ ಉರಿಯಲ್ಲಿ ತುಪ್ಪವನ್ನು ಬಿಸಿ ಮಾಡಿಕೊಳ್ಳಿ. ತುಪ್ಪ ಕರಗಿದ ಬಳಿಕ ಬಾಣಲೆಗೆ ಖರ್ಜೂರವನ್ನು ಸೇರಿಸಿ. ಎರಡರಿಂದ ಮೂರು ನಿಮಿಷಗಳ ಕಾಲ ಖರ್ಜೂರವನ್ನು ಹುರಿದುಕೊಳ್ಳಿ. ಖರ್ಜೂರ ತಣ್ಣಗಾದ ಬಳಿಕ ಅದನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಿ. ಪ್ರತಿ ದಿನ ಒಂದು ಅಥವಾ ಎರಡು ಖರ್ಜೂರವನ್ನು ಸೇವಿಸಿ.
ವಿಭಾಗ